ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಪ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ಮರ್ಜ್‌ ಮಾಡುವುದು ಹೇಗೆ?

|

ಇದು ಸ್ಮಾರ್ಟ್‌ಫೋನ್‌ ಜಮಾನ. ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ಕೊಡ್ತಿದ್ದ ಹಾಗೇ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್ಡೇಟ್‌ ಆಗುವ ಸಾಕಷ್ಟು ಮಂದಿಯಿದ್ದಾರೆ. ಹಳೆಯ ಸ್ಮಾರ್ಟ್‌ಫೋನ್‌ ಬದಲಾಯಿಸಿ ಹೊಸ ಸ್ಮಾರ್ಟ್‌ಫೋನ್‌ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಹಳೆಯ ಸ್ಮಾರ್ಟ್‌ಫೋನ್‌ ಬದಲಾಯಿಸಿ ಹೊಸ ಸ್ಮಾರ್ಟ್‌ಫೋನ್‌ಗೆ ಬದಲಾಗುವಾಗ ನಿಮ್ಮ ಡೇಟಾವನ್ನು ವರ್ಗಾಯಿಸಿಕೊಳ್ಳುವುದು ಕೂಡ ಮುಖ್ಯವಾಗಲಿದೆ.

ಆಂಡ್ರಾಯ್ಡ್

ಹೌದು, ಒಂದು ಸ್ಮಾರ್ಟ್‌ಫೋನ್‌ನಿಂದ ಹೊಸ ಸ್ಮಾರ್ಟ್‌ಫೋನ್‌ಗೆ ಬದಲಾಯಿಸುವಾಗ ನಿಮ್ಮ ಡೇಟಾವನ್ನು ವರ್ಗಾಯಿಸಿಕೊಳ್ಳುವುದು ಅಗತ್ಯವಾಗಲಿದೆ. ಅದರಲ್ಲೂ ಆಂಡ್ರಾಯ್ಡ್ ಫೋನ್‌ಗಳನ್ನು ಬದಲಾಯಿಸುವಾಗ ಬಳಕೆದಾರರು ಸಾಮಾನ್ಯವಾಗಿ ಡುಪ್ಲಿಕೇಟ್‌ ಸಂಪರ್ಕಗಳ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ. ಆದರಿಂದ ನೀವು ಯಾವುದೇ ಕಂಟ್ಯಾಕ್ಟ್‌ಗಳನ್ನು ಡುಪ್ಲಿಕೇಟ್‌ ಮಾಡದ ರೀತಿಯಲ್ಲಿ, ನಿಮ್ಮ ಫೋನ್‌ಗೆ ಸಂಪರ್ಕಗಳನ್ನು ಸಿಂಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ ನಲ್ಲಿ ಡ್ಯುಪ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ಮರ್ಜ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ಡ್ಯುಪ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ಮರ್ಜ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಸಂಪರ್ಕಗಳ ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನುವಿನಲ್ಲಿ ಟ್ಯಾಪ್ ಮಾಡಿ
ಹಂತ:2 ಸೆಟ್ಟಿಂಗ್ಸ್‌> ಕಂಟ್ಯಾಕ್ಟ್ಸ ಮ್ಯಾನೇಜರ್‌ >ಮರ್ಜ್‌ ಕಂಟ್ಯಾಕ್ಟ್‌ಗಳನ್ನು ವಿಲೀನಗೊಳಿಸಿ
ಹಂತ:3 ಇದರಲ್ಲಿ "ಮರ್ಜ್‌" ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನಿರ್ದಿಷ್ಟ ಸಂಪರ್ಕಗಳನ್ನು ಮರ್ಜ್‌ ಮಾಡಲು ನೀವು ಆಯ್ಕೆ ಮಾಡಬಹುದು
ಹಂತ:4 ಇದೀಗ "ಕ್ವಿಕ್‌ ಮರ್ಜ್‌" ಆಯ್ಕೆ ಮಾಡುವ ಮೂಲಕ ಒಂದೇ ರೀತಿಯ ಡ್ಯುಪ್ಲಿಕೇಟ್‌ ಸಂಪರ್ಕಗಳನ್ನು ವಿಲೀನಗೊಳಿಸಲು ನೀವು ಆಯ್ಕೆ ಮಾಡಬಹುದು.

ಆಂಡ್ರಾಯ್ಡ್‌ನಲ್ಲಿ ಡ್ಯುಪ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ತೆಗೆದುಹಾಕಲು ಜಿ ಮೇಲ್‌ ಬಳಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಡ್ಯುಪ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ತೆಗೆದುಹಾಕಲು ಜಿ ಮೇಲ್‌ ಬಳಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಜಿ-ಮೇಲ್‌ ಅಕೌಂಟ್‌ ಅನ್ನು ತೆರೆಯಿರಿ.
ಹಂತ:2 ಮೇಲಿನ ಎಡ ಮೂಲೆಯಲ್ಲಿರುವ ಮೆನುಗೆ ಹೋಗಿ ಮತ್ತು ಡ್ರಾಪ್ ಡೌನ್ ಪಟ್ಟಿಯಿಂದ "ಕಂಟ್ಯಾಕ್ಟ್‌ಗಳನ್ನು" ಆಯ್ಕೆಮಾಡಿ
ಹಂತ:3 ನಂತರ ನಿಮ್ಮ ಎಲ್ಲಾ ಸಂಪರ್ಕಗಳನ್ನು ನೀವು ನೋಡುತ್ತೀರಿ. ಸ್ಕ್ರೀನ್‌ ಮೇಲ್ಭಾಗದಲ್ಲಿರುವ "ಮೋರ್‌" ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಡ್ಯುಒ್ಲಿಕೇಟ್‌ ಕಂಟ್ಯಾಕ್ಟ್‌ಗಳನ್ನು ಸರ್ಚ್‌ ಮಾಡಿ ಮತ್ತು ಮರ್ಜ್‌ ಆಯ್ಕೆಮಾಡಿ
ಹಂತ:4 ಇದರಲ್ಲಿ ನೀವು ಮರ್ಜ್‌ ಕಂಟ್ಯಾಕ್ಟ್‌ಗಳ ಲಿಸ್ಟ್‌ ಅನ್ನು ಕಾಣಬಹುದು. ಇಲ್ಲಿ ನೀವು ಮರ್ಜ್‌ ಮಾಡಲು ಬಯಸದ ಸಂಪರ್ಕಗಳನ್ನು ನೀವು ಅನ್ಚೆಕ್ ಮಾಡಬಹುದು
ಹಂತ:5 ನಂತರ "ಮರ್ಜ್‌" ಆಯ್ಕೆಮಾಡಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ಕಂಟ್ಯಾಕ್ಟ್‌ ಅನ್ನು ಮ್ಯೂಟ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಕಂಟ್ಯಾಕ್ಟ್‌ ಅನ್ನು ಮ್ಯೂಟ್ ಮಾಡುವುದು ಹೇಗೆ?

ನೀವು ನಿಮ್ಮ ಸ್ನೇಹಿತರು ಅಥವಾ ಕಿರಿಕಿರಿಗೊಳಿಸುವ ಯಾವುದೇ ಸಂಪರ್ಕವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮ್ಯೂಟ್ ಮಾಡಲು ಬಯಸಿದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕವನ್ನು ಹೇಗೆ ಮ್ಯೂಟ್ ಮಾಡುವುದು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Instagram ಅಪ್ಲಿಕೇಶನ್ ತೆರೆಯಿರಿ.

ಹಂತ 2: ಆಪ್‌ನ ಸರ್ಚ್ ಬಾರ್‌ನಲ್ಲಿ ಹುಡುಕುವ ಮೂಲಕ ಅಥವಾ ಅವರ ಪೋಸ್ಟ್‌ನಲ್ಲಿರುವ ಅವರ ಸಂಪರ್ಕದ ಪ್ರೊಫೈಲ್ ಹೆಸರಿನ ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ.

ಹಂತ 3: ಕೆಳಗಿನ ಬಟನ್ ಮೇಲೆ ಟ್ಯಾಪ್ ಮಾಡಿ. ಹೀಗೆ ಮಾಡುವುದರಿಂದ ಮೂರು ಆಯ್ಕೆಗಳನ್ನು ಹೊಂದಿರುವ ವಿಂಡೋ ತೆರೆಯುತ್ತದೆ - ಮ್ಯೂಟ್, ನಿರ್ಬಂಧಿಸಿ ಮತ್ತು ಅನುಸರಿಸಬೇಡಿ.

ಹಂತ 4: ಮ್ಯೂಟ್ ಬಟನ್ ಮೇಲೆ ಟ್ಯಾಪ್ ಮಾಡಿ.

ಹಂತ 5: ಈಗ, ಆಯ್ದ ಸಂಪರ್ಕದಿಂದ ಎಲ್ಲಾ ಪೋಸ್ಟ್‌ಗಳನ್ನು ಮ್ಯೂಟ್ ಮಾಡಲು ಪೋಸ್ಟ್ ಬಟನ್ ಅನ್ನು ಟಾಗಲ್ ಮಾಡಿ.

ಹಂತ 6: ಮುಂದೆ, ಸಂಪರ್ಕದಿಂದ ಎಲ್ಲಾ ಕಥೆಗಳನ್ನು ಮ್ಯೂಟ್ ಮಾಡಲು ಕಥೆಗಳ ಆಯ್ಕೆಯನ್ನು ಟಾಗಲ್ ಮಾಡಿ.

Best Mobiles in India

English summary
How to delete duplicate contacts from your Android smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X