ಅನಗತ್ಯ ಇ-ಮೇಲ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವುದು ಹೇಗೆ?

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಜಿ-ಮೇಲ್‌ ಸೇವೆ ಕೂಡ ಒಂದಾಗಿದೆ. ಗೂಗಲ್‌ನ ಜಿ-ಮೇಲ್‌ ಮೂಲಕ ಅಗತ್ಯ ಮಾಹಿತಿ ದಾಖಲೆಗಳನ್ನು ರವಾನಿಸುವುದು ಸುಲಭವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಗೂಗಲ್‌ನ ಜಿ-ಮೇಲ್‌ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ಇಂದಿನ ಡಿಜಿಟಲ್‌ ಯುಗದಲ್ಲಿ ಅನೇಕ ಪ್ರಮೋಷನಲ್‌ ಇಮೇಲ್‌ಗಳು ಕೂಡ ನಿಮ್ಮ ಜಿ-ಮೇಲ್‌ ಇನ್‌‌ಬಾಕ್ಸ್‌ ಸೇರಿಬಿಡುತ್ತವೆ. ಇವುಗಳಿಂದ ನಿಮಗೆ ಕಿರಿಕಿರಿಯಾಗೋದು ಸಹಜ. ಇವುಗಳನ್ನು ಡಿಲೀಟ್‌ ಮಾಡುವುದು ಕೂಡ ನಿಮಗೆ ಕೆಲವೊಮ್ಮೆ ಸವಾಲಿನ ಕೆಲಸ ಎನಿಸಿಬಿಡುತ್ತದೆ.

ಜಿ-ಮೇಲ್‌

ಹೌದು, ಜಿ-ಮೇಲ್‌ನ ಇನ್‌ಬಾಕ್ಸ್‌ನಲ್ಲಿ ಅನಗತ್ಯ ಇಮೇಲ್‌ಗಳು ತುಂಬಿ ಹೋದರೆ ಬೇಸರವಾಗೋದು ಸಹಜ. ಆದರೆ ಈ ಅನಗತ್ಯ ಇ-ಮೇಲ್‌ಗಳನ್ನು ಒಂದೊಂದಾಗಿ ಡಿಲೀಟ್‌ ಮಾಡುವ ಬದಲು ಒಂದೇ ಬಾರಿಗೆ ಡಿಲೀಟ್‌ ಮಾಡುವ ಅವಕಾಶ ಕೂಡ ಇದೆ. ಅಷ್ಟೇ ಅಲ್ಲ ಅನಗತ್ಯ ಇ-ಮೇಲ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವುದಕ್ಕೂ ಕೂಡ ಅವಕಾಶವಿದೆ. ಹಾಗಾದ್ರೆ ನಿಮ್ಮ ಜಿ-ಮೇಲ್‌ನಲ್ಲಿ ಅನಗತ್ಯ ಎನಿಸುವ ಇ-ಮೇಲ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅನಗತ್ಯ ಇಮೇಲ್‌ಗಳನ್ನು ನೀವು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವುದು ಹೇಗೆ?

ಅನಗತ್ಯ ಇಮೇಲ್‌ಗಳನ್ನು ನೀವು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ, ನೀವು ಇಮೇಲ್ ಸ್ಟುಡಿಯೋ ಪ್ರೊನಿಂದ ನಿಮ್ಮ ಜಿ-ಮೇಲ್‌ ಖಾತೆಯಲ್ಲಿ 'ಇಮೇಲ್ ಸ್ಟುಡಿಯೋ' ಇನ್‌ಸ್ಟಾಲ್‌ ಮಾಡಿರಿ.
ಹಂತ:2 ಇದನ್ನು ಇನ್‌ಸ್ಟಾಲ್‌ ಮಾಡುವುದಕ್ಕೆ ಅಲ್ಲಿ ಉಲ್ಲೇಖಿಸಿರುವ ಹಂತಗಳನ್ನು ಅನುಸರಿಸಲು ಅನುಮತಿಸಬೇಕಾಗುತ್ತದೆ.
ಹಂತ:3 ನಂತರ ಜಿಮೇಲ್‌ ಖಾತೆಗೆ ಹೋಗಿ ಮತ್ತು ಇನ್‌ಬಾಕ್ಸ್‌ನಲ್ಲಿ ಯಾವುದೇ ಸಂದೇಶವನ್ನು ತೆರೆಯಿರಿ.
ಹಂತ:4 ಇದರಲ್ಲಿ ಬಲಭಾಗದಲ್ಲಿರುವ ಇಮೇಲ್ ಸ್ಟುಡಿಯೋ ಐಕಾನ್ ಮೇಲೆ ಕ್ಲಿಕ್ ಮಾಡಿ.

ಪಾಸ್‌ವರ್ಡ್‌

ಹಂತ:5 ನಂತರ ನಿಮ್ಮ Gmail ID ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
ಹಂತ:6 ಲಾಗಿನ್ ಆದ ನಂತರ, ಪಟ್ಟಿಯಲ್ಲಿ ನೀಡಿರುವ 'ಇಮೇಲ್ ಕ್ಲೀನಪ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:7 ಇದೀಗ ಜಿಮೇಲ್‌ ನಿಂದ ನೀವು ಮಾಡಲು ಬಯಸುವ ಕಾರ್ಯಕ್ಕಾಗಿ ಹೊಸ ನಿಯಮವನ್ನು ಸೇರಿಸಿ ಕ್ಲಿಕ್ ಮಾಡಿ.
ಹಂತ:8 ಇಲ್ಲಿ, ನೀವು ನಿರ್ದಿಷ್ಟ ಇಮೇಲ್ ಐಡಿಯನ್ನು ಹೊಸ ನಿಯಮವಾಗಿ ಗುರುತಿಸಬಹುದು.

ಇಮೇಲ್

ಹಂತ:9 ಇದೆಲ್ಲಾ ಮುಗಿದ ನಂತರ ಒಂದು ತಿಂಗಳು ಅಥವಾ ವಾರದೊಳಗೆ ನಿರ್ದಿಷ್ಟ ಇಮೇಲ್ ಐಡಿಯಿಂದ ಸ್ವೀಕರಿಸಿದ ಎಲ್ಲಾ ಇಮೇಲ್‌ಗಳನ್ನು ಶಾಶ್ವತವಾಗಿ ಅಳಿಸಲು ನೀವು ಜಿ-ಮೇಲ್‌ಗೆ ರೂಲ್ಸ್‌ ಸೆಟ್‌ ಮಾಡಬಹುದಾಗಿದೆ.
ಹಂತ:10 ನಂತರ, ಸೇವ್‌ ಬಟನ್ ಮೇಲೆ ಟ್ಯಾಪ್ ಮಾಡುವ ಮೂಲಕ, ಬ್ಯಾಕ್‌ಗ್ರೌಂಡ್‌ನಲ್ಲಿ ಇಮೇಲ್ ಸ್ಟುಡಿಯೊವನ್ನು ಪ್ರಾರಂಭಿಸಲಾಗುತ್ತದೆ.
ಹಂತ:11 ಇದಾದ ನಂತರ, ಜಿ-ಮೇಲ್‌ ಸ್ವಯಂಚಾಲಿತವಾಗಿ ನಿಮ್ಮ ಆಯ್ಕೆಮಾಡಿದ ಇಮೇಲ್ ವಿಳಾಸದಿಂದ ಸಂದೇಶಗಳನ್ನು ಅಳಿಸುತ್ತದೆ, ನೀವು ಸೆಟ್‌ ಮಾಡಿರುವ ನಿಯಮಗಳನ್ನು ಅನ್ವಯಿಸುತ್ತದೆ.

Best Mobiles in India

English summary
How to delete unnecessary emails in your inbox automatically.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X