ಇಮೇಲ್ ನೋಟಿಫಿಕೇಶನ್ ನಿಲ್ಲಿಸಲು ಐಡಿಯಾ

By Varun
|
ಇಮೇಲ್ ನೋಟಿಫಿಕೇಶನ್ ನಿಲ್ಲಿಸಲು ಐಡಿಯಾ

ನೀವು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದರೂ ಕೂಡ, ಅವುಗಳಿಂದ ನಿಮ್ಮ ಇಮೇಲ್ ಗೆ ಪ್ರಕಟಣೆ (notification) ಬರುತ್ತದೆ. ಅದು ಫೇಸ್ ಬುಕ್ ಇರಬಹುದು, ಯೂಟ್ಯೂಬ್ ಇರಬಹುದು, ಲಿಂಕ್ಡ್ ಇನ್, ಗೂಗಲ್+, ಟ್ವಿಟರ್, ಯಾವುದೇ ಇರಬಹುದು.

ನೀವು ಈ ಖಾತೆಗಳಲ್ಲಿ ಏನೇ ಚಟುವಟಿಕೆ ಮಾಡಿದರೂ, ಬೇರೆಯವರು ಏನೇ ಚಟುವಟಿಕೆ ಮಾಡಿ ನಿಮ್ಮ ಹೆಸರು ಉಲ್ಲೇಖ ಮಾಡಿದರೂ, ಅದೆಲ್ಲ ವಿವರ ನಿಮ್ಮ ಇಮೇಲ್ ಖಾತೆಗೆ ಬರುತ್ತದೆ. ಈ ರೀತಿಯ ನೊಟಿಫಿಕೇಶನ್ ಫೀಚರ್ ಉಪಯುಕ್ತವಾದರೂ ಕೂಡ, ನಿಮ್ಮ ಚಟುವಟಿಕೆ ಜಾಸ್ತಿಯಾದಷ್ಟೂ ಇನ್ ಬಾಕ್ಸ್ ನಲ್ಲಿ ದಿನಂಪ್ರತಿ ಮೇಲುಗಳು ಜಾಸ್ತಿಯಾಗಿ ಕಿರಿಕಿರಿ ಮಾಡುತ್ತವೆ.

ಹಾಗಾಗಿ ಈ ಕಾಟದಿಂದ ತಪ್ಪಿಸಿಕೊಳ್ಳಲು ನೊಟಿಫಿಕೇಶನ್ ಅನ್ನು ಡಿಸೇಬಲ್ (disable) ಮಾಡಬೇಕು. ಇದಕ್ಕಾಗಿ ನೀವು ಖಾತೆ ಇರುವ ಪ್ರತಿಯೊಂದು ಜಾಲತಾಣಕ್ಕೆ ಹೋಗಿ ಡಿಸೇಬಲ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಇದಕ್ಕಾಗಿಯೇ ಒಂದು ವೆಬ್ಸೈಟ್ ಇದೆ. ಅದರಲ್ಲಿ ಹೋಗಿ ನಿಮಗೆ ಯಾವ ವೆಬ್ಸೈಟ್ ನ ನೊಟಿಫಿಕೇಶನ್ ಅನ್ನು ಡಿಸೇಬಲ್ ಮಾಡಬೇಕೋ ಆ ಐಕಾನ್ ಅನ್ನು ಕಿಲ್ಕ್ ಮಾಡಿದರೆ ಸಾಕು. ಅದು ಡಿಸೇಬಲ್ ಆಗುತ್ತದೆ.

ಫೇಸ್ ಬುಕ್, ಯೂಟ್ಯೂಬ್, ಲಿಂಕ್ಡ್ ಇನ್, ಗೂಗಲ್+, ಟ್ವಿಟರ್, ಹೀಗೆ ಹಲವಾರು ವೆಬ್ಸೈಟುಗಳ ನೊಟಿಫಿಕೇಶನ್ ಗಳನ್ನು ಇದರ ಮೂಲಕ ಡಿಸೇಬಲ್ ಮಾಡಬಹುದು.

ಅಂದ ಹಾಗೆ ಇಲ್ಲಿದೆ ಅದರ ಲಿಂಕ್- www.notificationcontrol.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X