ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್‌ ವಾಟ್ಸಾಪ್‌ ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ಇದರೊಂದಿಗೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದೆ. ಟೆಕ್ಸ್ಟ್‌ ಮೆಸೆಜ್‌ ಜೊತೆಗೆ ಮೀಡಿಯಾ ಫೈಲ್‌ ಸೆಮಡ್ ಮಾಡಲು ಅತ್ಯುತ್ತಮ ತಾಣವಾಗಿ ಗುರುತಿಸಿಕೊಂಡಿದ್ದು, ಕೆಲವೊಂದು ಆಕರ್ಷಕ ಆಯ್ಕೆಗಳನ್ನು ಒಳಗೊಂಡಿದೆ. ಆ ಪೈಕಿ ಬಳಕೆದಾರರು ಮೆಸೆಜ್ ರೀಡ್/ ಓದಿದ ಅರ್ಥ ಸೂಚಿಸುವ ಬ್ಲೂ ಟಿಕ್ ಗಮನ ಸೆಳೆದಿದೆ.

ಮಾರ್ಕ್

ಹೌದು, ವಾಟ್ಸಾಪ್‌ ಅತ್ಯುತ್ತಮ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್ ಆಗಿ ಬಿಂಬಿತವಾಗಿದೆ. ಈ ಆಪ್‌ನಲ್ಲಿ ಬ್ಲೂ ಟಿಕ್ ಆಯ್ಕೆ ಇದ್ದು, ಬಳಕೆದಾರರು ಮೆಸೆಜ್‌ ಓದಿದಾಗ ಮೆಸೆಜ್ ಕಳುಹಿಸಿದವರಿಗೆ ಬ್ಲೂ ಟಿಕ್ ಮಾರ್ಕ್ ಕಾಣಿಸಿಕೊಳ್ಳುತ್ತದೆ. ಆದರೆ ಮೆಸೆಜ್‌ ಓದಿದಾಗಲೂ, ಮೆಸೆಜ್ ಕಳುಹಿಸಿದವರಿಗೆ ಬ್ಲೂ ಟಿಕ್ ಕಾಣದಂತೆ ಸೆಟ್ ಮಾಡಲು ವಾಟ್ಸಾಪ್ ಅವಕಾಶ ಮಾಡಿಕೊಟ್ಟಿದೆ. ಅದೇ ರೀತಿ ಲಾಸ್ಟ್‌ ಸೀನ್ ಅನ್ನು ಸಹ ಕಾಣದಂತೆ ಸೆಟ್‌ ಮಾಡಲು ಆಯ್ಕೆ ಒದಗಿಸಿದೆ. ಹಾಗಾದರೇ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ:

ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್‌ ವಿಭಾಗದಲ್ಲಿ ಅವಕಾಶ ಇದೆ. ಆದರೆ ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ. ಮುಂದಿನ ಕ್ರಮಗಳನ್ನು ಫಾಲೋ ಮಾಡಿರಿ.

ಹಂತ 1: ಮೊದಲು ವಾಟ್ಸಾಪ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.

Receipts

ಹಂತ 2: ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 3: ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.

ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ಕಾಣಿಸದಂತೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ಕಾಣಿಸದಂತೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಲಾಸ್ಟ್‌ ಸೀನ್ ಅನ್ನು ಕಾಣಿಸದಂತೆ ಸೆಟ್ ಮಾಡಲು ನೀವು ಬಯಸಿದರೆ, ವಾಟ್ಸಾಪ್ ಆಪ್ ಅನ್ನು ತೆರೆಯಿರಿ ಮತ್ತು ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.

ಹಂತ 2: ನಂತರ ಖಾತೆ/Account ಸೆಕ್ಷೆನ್‌ಗೆ ಹೋಗಿ ಮತ್ತು Privacy/ಗೌಪ್ಯತೆಯನ್ನು ಟ್ಯಾಪ್ ಮಾಡಿ.
(ನೀವು ಸೇವ್ ಮಾಡುವ ಯಾವುದೇ ಸೆಟ್ಟಿಂಗ್‌ಗಳು ಮೆಸೇಜಿಂಗ್ ಆಪ್‌ನ ಮೊಬೈಲ್ ಮತ್ತು ವೆಬ್ ಆವೃತ್ತಿ ಎರಡಕ್ಕೂ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.)

ಹಂತ 4: ತದ ನಂತರ, ಲಾಸ್ಟ್‌ ಸೀನ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ ಮತ್ತು ಸೆಟ್ಟಿಂಗ್ ಅನ್ನು Nobody ಆಯ್ಕೆಗೆ ಬದಲಿಸಿರಿ.

ಗಮನಿಸಬೇಕಾದ ಪ್ರಮುಖ ಅಂಶ

ಗಮನಿಸಬೇಕಾದ ಪ್ರಮುಖ ಅಂಶ

* Everyone My Contacts ಮತ್ತು Nobody ಸೇರಿದಂತೆ ನೀವು ಮೂರು ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲನೆಯದು ಮೂಲತಃ ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಹೊಂದಿರುವ ಜನರು ಮಾತ್ರ ನಿಮ್ಮ ಲಾಸ್ಟ್‌ ಸೀನ್ ನೋಡಲು ಸಾಧ್ಯ.
* ಎರಡನೆಯ ಆಯ್ಕೆ ಎಂದರೆ ನಿಮ್ಮ ಸಂಪರ್ಕಗಳು ಮಾತ್ರ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ನೋಡಿದ್ದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.
* ನೀವು "ಯಾರೂ" ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ನಿಮ್ಮ ವಾಟ್ಸಾಪ್ ಲಾಸ್ಟ್‌ ಸೀನ್ ಯಾರೂ ನೋಡಲು ಸಾಧ್ಯವಾಗುವುದಿಲ್ಲ.
* ನೀವು ಯಾವಾಗ ಬೇಕಾದರೂ ಲಾಸ್ಟ್‌ ಸೀನ್ ಯಾವುದೇ ಆಯ್ಕೆಯನ್ನು ನೀವು ಆಯ್ಕೆ ಮಾಡಬಹುದು.

Best Mobiles in India

English summary
How To Off Last Seen And Blue Ticks On Whatsapp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X