ಜಿಯೋ ಫೋನ್‌ನಲ್ಲಿ ಶೇರ್‌ಚಾಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

|

ದೇಶದ ಟೆಲಿಕಾಂ ವಲಯದಲ್ಲಿ ದೈತ್ಯ ಎನಿಸಿಕೊಂಡಿರುವ ರಿಲಾಯನ್ಸ್‌ ಜಿಯೋ. ತನ್ನ ಜಿಯೋ ಫೋನ್‌ ಮೂಲಕವೂ ಪ್ರಸಿದ್ದಿಯನ್ನ ಪಡೆದುಕೊಂಡಿತ್ತು. ಸದ್ಯ ಜಿಯೋ ಫೋನ್ ದೇಶದ ಅತ್ಯಂತ ಜನಪ್ರಿಯ ಫೀಚರ್ ಫೋನ್‌ಗಳಲ್ಲಿ ಒಂದಾಗಿದೆ. ವೈ-ಫೈ ಬೆಂಬಲ, VoLTE ತಂತ್ರಜ್ಞಾನ ಮತ್ತು ಗೂಗಲ್ ಅಸಿಸ್ಟೆಂಟ್‌ನ ಬೆಂಬಲದೊಂದಿಗೆ ಫೀಚರ್ ಫೋನ್ ಇತರ ಡಿವೈಸ್‌ಗಳಿಗಿಂತ ಸಾಕಷ್ಟು ಭಿನ್ನವಾಗಿ ಗುರುತಿಸಿಕೊಂಡಿದೆ. ಸದ್ಯ ಇಲ್ಲಿಯವರೆಗೆ, ಜಿಯೋ ಕಂಪನಿಯು ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಫೀಚರ್‌ ಫೋನ್‌ನಲ್ಲಿ ವಿಶೇಷ ಫೀಚರ್ಸ್‌ಗಳಿವೆಯಾದರೂ ಕೆಲವು ಅಪ್ಲಿಕೇಶನ್‌ಗಳನ್ನ ಬಳಸಬೇಕಾದರೆ ವಿಶೇಷ ಹಂತಗಳನ್ನ ಅನುಸರಿಸಬೇಕಾಗಿದೆ.

ಜಿಯೋ ಫೋನ್

ಹೌದು, ಸಾಮಾನ್ಯ ಫೀಚರ್‌ ಫೋನ್‌ ಹೊಂದಿರದ ಕೆಲವು ವಿಶೇಷತೆಗಳನ್ನ ಜಿಯೋ ಫೋನ್‌ ಹೊಂದಿದೆ. ಅದರಲ್ಲಿ ವೈಫೈ ಕನೆಕ್ಟಿವಿಟಿ, VOLTE ಟೆಕ್ನಾಲಜಿ ಕೂಡ ಸೇರಿದೆ. ಇದು ಯೂಟ್ಯೂಬ್ ಮತ್ತು ವಾಟ್ಸಾಪ್ ನಂತಹ ಅಪ್ಲಿಕೇಶನ್‌ಗಳನ್ನು ಸಹ ಹೊಂದಿದೆ. ಇನ್ನು ಈ ಡಿವೈಸ್‌ ಕೈಯೋಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರಿಂದ ಈ ಫೋನ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳನ್ನ ನೇರವಾಗಿ ಡೌನ್‌ಲೋಡ್‌ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನು ಕೆಲವು ಅಪ್ಲಿಕೇಶನ್‌ಗಳನ್ನ ಡೌನ್‌ಲೋಡ್‌ ಮಾಡಬೇಕಾದರೆ ವೆಬ್‌ ಬ್ರೌಸರ್‌ ಮಾಡಬೇಕಾಗುತ್ತದೆ. ಇದರಲ್ಲಿ ಶೇರ್‌ಚಾಟ್‌ ಅಪ್ಲಿಕೇಶನ್‌ ಸಹ ಒಂದಾಗಿದೆ. ಹಾಗಾದ್ರೆ ಜಿಯೋ ಫೋನ್‌ನಲ್ಲಿ ಜನಪ್ರಿಯ ಶೇರ್‌ಚಾಟ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫೋನ್

ಜಿಯೋ ಫೋನ್‌ಗಳು ಸಾಕಷ್ಟು ಪ್ರಸಿದ್ಧವಾಗಿದ್ದು, ಜಿಯೋ ಫೀಚರ್ ಫೋನ್‌ಗಳು ವಾಟ್ಸಾಪ್, ಫೇಸ್‌ಬುಕ್ ಮತ್ತು ಯುಟ್ಯೂಬ್‌ನಂತಹ ಹಲವಾರು ಅಪ್ಲಿಕೇಶನ್‌ಗಳೊಂದಿಗೆ ಬರುತ್ತವೆ. ಆದರೆ ಈ ಮಾದರಿಯ ಅಪ್ಲಿಕೇಶನ್‌ಗಳು ಇತರೆ ಫೀಚರ್ ಫೋನ್‌ಗಳಲ್ಲಿ ನಿಮಗೆ ಕಂಡುಬರುವುದಿಲ್ಲ. ಇದೇ ಕಾರಣಕ್ಕೆ ಜಿಯೋ ಫೀಚರ್‌ ಫೊನ್‌ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಆದರೂ ಶೇರ್‌ಚಾಟ್‌ ನಂತಹ ಅಪ್ಲಿಕೇಶನ್‌ಗಳನ್ನು ಜಿಯೋ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಲು ಬಳಕೆದಾರರು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಶೇರ್‌ಚಾಟ್ ಅಪ್ಲಿಕೇಶನ್ ಎಂದರೇನು?

ಶೇರ್‌ಚಾಟ್ ಅಪ್ಲಿಕೇಶನ್ ಎಂದರೇನು?

ಶೇರ್‌ಚಾಟ್ ಅಪ್ಲಿಕೇಶನ್ ಮೂಲತಃ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿದ್ದು, ಇದು 15 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವೀಡಿಯೊಗಳು, ಜೋಕ್‌ಗಳು, ಹಾಡುಗಳು, ಟ್ಯಾಗಿಂಗ್ ಮತ್ತು ಇನ್ನೂ ಹೆಚ್ಚಿನದನ್ನು ಶೇರ್‌ ಮಾಡಿಕೊಳ್ಳುವುದಕ್ಕೆ ಈ ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡಲಿದೆ. ಪ್ರಸ್ತುತ, ಅಪ್ಲಿಕೇಶನ್ 130 ಮಿಲಿಯನ್ ಸಕ್ರಿಯ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಸದ್ಯ ಈ ಫೋನ್‌ ಅನ್ನು ಜಿಯೋ ಫೋನ್‌ನಲ್ಲಿಯೂ ಸಹ ಬಳಸಬಹುದಾಗಿದೆ.

ಜಿಯೋ ಫೋನ್‌ನಲ್ಲಿ ಶೇರ್‌ಚಾಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಜಿಯೋ ಫೋನ್‌ನಲ್ಲಿ ಶೇರ್‌ಚಾಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಮೊದಲಿಗೆ, ನಿಮ್ಮ ಜಿಯೋ ಫೋನ್‌ನ ಡೇಟಾವನ್ನು ನೀವು ಬದಲಾಯಿಸಬೇಕಾಗಿದೆ, ನಂತರ ನೀವು ಹೋಗಿ ಬ್ರೌಸರ್ ಅನ್ನು ಪರಿಶೀಲಿಸಬೇಕು. ನಂತರ, ನೀವು ಶೇರ್‌ಚಾಟ್ ಎಂದು ಟೈಪ್‌ ಮಾಡಿ ಬ್ರೌಸರ್‌ನಲ್ಲಿ ಸರ್ಚ್‌ ಮಾಡಲು ಪ್ರಾರಂಭಿಸಿ. ನಂತರ, ನೀವು ಡೌನ್‌ಲೋಡ್ ಆಯ್ಕೆಯನ್ನು ಕಾಣಬಹುದಾಗಿದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ, ನೀವು ಕಾರ್ಯನಿರ್ವಹಿಸಲು ಅಥವಾ ಬಳಸಲು ಬಯಸುವ ಭಾಷೆಯನ್ನು ನೀವು ಆರಿಸಬೇಕಾಗುತ್ತದೆ. ನಂತರ ನೀವು ಶೇರ್‌ಚಾಟ್‌ ಅಪ್ಲಿಕೇಶನ್‌ ಅನ್ನು ಜಿಯೋ ಫೋನ್‌ನಲ್ಲಿ ಬಳಸಬಹುದಾಗಿದೆ.

Most Read Articles
Best Mobiles in India

Read more about:
English summary
First, you need to switch on the data of your Jio Phone, then you need to go and check the browser.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X