ಜಿಯೋ ಫೋನ್‌ನಲ್ಲಿ ಮೊಜ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

|

ಭಾರತದಲ್ಲಿ ಚೀನಾ ಮೂಲದ ಜನಪ್ರಿಯ ಟಿಕ್‌ಟಾಕ್‌ ಆಪ್‌ ಬ್ಯಾನ್ ಆಗಿದ್ದೆ ತಡ, ಇತರೆ ಶಾರ್ಟ್‌ ವಿಡಿಯೋ ಫ್ಲಾಟ್‌ಫಾರ್ಮ್‌ಗಲಿಗೆ ಬೇಡಿಕೆ ಹೆಚ್ಚಿದೆ. ಇದರಲ್ಲಿ ಮೊಜ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಮೊಜ್ ಅಪ್ಲಿಕೇಶನ್ ಭಾರತೀಯ ಟಿಕ್‌ಟಾಕ್ ಪರ್ಯಾಯ ಅಪ್ಲಿಕೇಶನ್ ಆಗಿದ್ದು ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್ ಅಭಿವೃದ್ಧಿಪಡಿಸಿದೆ. ಚೀನಾದ ಜನಪ್ರಿಯ ಅಪ್ಲಿಕೇಶನ್ ಟಿಕ್‌ಟಾಕ್ ನಿಷೇಧದ ನಂತರ, ಭಾರತದ ಈ ಕಿರು ವಿಡಿಯೋ ಅಪ್ಲಿಕೇಶನ್‌ಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.

ಟಿಕ್‌ಟಾಕ್‌

ಹೌದು, ಟಿಕ್‌ಟಾಕ್‌ ಭಾರತದಲ್ಲಿ ಅಭಿವೃದ್ದಿಪಡಿಸಿರುವ ಅಪ್ಲಿಕೇಶನ್‌ಗಳಲ್ಲಿ ಮೊಜ್ ಅಪ್ಲಿಕೇಶನ್ ಕೂಡ ಒಂದಾಗಿದೆ. ಇದು ಇಂಗ್ಲಿಷ್ ಹೊರತುಪಡಿಸಿ 15 ಭಾಷೆಗಳನ್ನು ಬೆಂಬಲಿಸುತ್ತದೆ. ಇನ್ನು ಈ ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವುದು ಸುಲಭ. ಆದರೆ ನಿಮ್ಮ ಜಿಯೋ ಫೋನ್‌ನಲ್ಲಿ ಮೊಜ್ ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಅನ್ನೊದು ತಿಳಿದೆ ಇಲ್ಲ. ಹಾಗಂತ ಚಿಂತಿಸಬೇಕಾದ ಅಗತ್ಯವಿಲ್ಲ. ಜಿಯೋ ಫೋನ್‌ನಲ್ಲಿ ಮೊಜ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಜ್ ಅಪ್ಲಿಕೇಶನ್ ಎಂದರೇನು?

ಮೊಜ್ ಅಪ್ಲಿಕೇಶನ್ ಎಂದರೇನು?

ಮೊಜ್ ಅಪ್ಲಿಕೇಶನ್ ಒಂದು ಶಾರ್ಟ್‌-ವೀಡಿಯೊ ಕ್ರಿಯೆಟ್‌ ಅಪ್ಲಿಕೇಶನ್ ಆಗಿದ್ದು ಇದು ನಿಮಗೆ 15 ಸೆಕೆಂಡುಗಳ ವೀಡಿಯೊವನ್ನು ಮಾಡಲು ಅನುಮತಿಸುತ್ತದೆ. ಇದಲ್ಲದೆ, ಈ ಅಪ್ಲಿಕೇಶನ್‌ನಲ್ಲಿ ಹಲವು ವೈವಿಧ್ಯಮಯ ಫಿಲ್ಟರ್‌ಗಳನ್ನು ಸಹ ನಿಡಲಾಗಿದೆ. ಈ ಫಿಲ್ಟರ್‌ಗಳ ಮೂಲಕ ಹಲವು ವಿಧವಿಧವಾದ ವೀಡಿಯೊಗಳನ್ನು ಸಹ ಎಡಿಟ್‌ ಮಾಡಬಹುದಾಗಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಇದಲ್ಲದೆ ಈ ಅಪ್ಲಿಕೇಶನ್‌ಲ್ಲಿ ಲಿಪ್‌-ಸಿಂಕ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ.

ಜಿಯೋ ಫೋನ್‌ನಲ್ಲಿ ಮೊಜ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಜಿಯೋ ಫೋನ್‌ನಲ್ಲಿ ಮೊಜ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ನಿವು ನಿಮ್ಮ ಜಿಯೋ ಫೋನ್‌ನಲ್ಲಿ ನೇರವಾಗಿ ಮೊಜ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ನಿಮ್ಮ ಜಿಯೋ ಫೋನ್‌ನಲ್ಲಿ ಮೊಜ್‌ ಅಪ್ಲಿಕೇಶನ್ ಬಳಸಲು, ನಿಮಗೆ ಓಮ್ನಿಸ್ಡ್ ಅಪ್ಲಿಕೇಶನ್ ಅಗತ್ಯವಿದೆ. ಓಮ್ನಿಸ್ಡ್ ಅಪ್ಲಿಕೇಶನ್‌ನ ಸಹಾಯದ ಮೂಲಕ ನೀವು ಮೊಜ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಓಮ್ನಿಸ್ಡ್ ಅಪ್ಲಿಕೇಶನ್ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಆಗಿದ್ದು ಅದು ಜಿಯೋ ಸ್ಟೋರ್‌ನಲ್ಲಿ ಲಭ್ಯವಿಲ್ಲದ ವಿವಿಧ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಹಾಯ ಮಾಡುತ್ತದೆ.

ಮೊಜ್ ಅಪ್ಲಿಕೇಶನ್

ಮೊಜ್ ಅಪ್ಲಿಕೇಶನ್ 24MB ಗಾತ್ರದ್ದಾಗಿದೆ, ಅಲ್ಲದೆ ವೈವಿಧ್ಯಮಯ ವಿಡಿಯೋಗಳನ್ನ ಕ್ರಿಯೆಟ್‌ ಮಾಡಲು ಅವಕಾಶ ನೀಡುವ ಅಪ್ಲಿಕೇಶನ್‌ ಆಗಿರುವುದರಿಂದ ಜಿಯೋ ಫೊನ್‌ನಲ್ಲಿ ಇದೀಗ ಶಾರ್ಟ್‌ ವಿಡಿಯೋ ಅನುಭವವನ್ನು ಪಡೆಯಲು ಸಾದ್ಯವಾಗಲಿದೆ. ಆದರೆ ಇದು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಜಿಯೋ ಬಳಕೆದಾರರು ಇದನ್ನು ಬಳಸುವಾಗ ಹ್ಯಾಂಗಿಂಗ್‌ ತೊಂದರೆಯನ್ನು ಅನುಭವಿಸುವ ಸಾದ್ಯತೆ ಇದೆ. ಇನ್ನು ಮೊಜ್ ಅಪ್ಲಿಕೇಶನ್‌ನ ಹೊರತಾಗಿ, ಚಿಂಗಾರಿ, ಮಿಟ್ರಾನ್, ಮತ್ತು ರೊಪೊಸೊ ಸೇರಿದಂತೆ ಹಲವು ಭಾರತೀಯ ಕಿರು ವಿಡಿಯೋ ತಯಾರಿಕೆ ಅಪ್ಲಿಕೇಶನ್‌ಗಳು ಕೂಡ ಇಂದು ಲಭ್ಯವಿವೆ

Best Mobiles in India

Read more about:
English summary
Moj app is an Indian TikTok alternative app that is developed by social media platform ShareChat.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X