ಯೂಟ್ಯೂಬ್ ಶಾರ್ಟ್‌ ವಿಡಿಯೋ ಗ್ಯಾಲರಿಗೆ ಡೌನ್‌ಲೋಡ್ ಮಾಡಲು ಹೀಗೆ ಮಾಡಿ!

|

2021 ರಲ್ಲಿ, ಯೂಟ್ಯೂಬ್ ಕಿರು ವಿಡಿಯೋ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡಿತು. ಯೂಟ್ಯೂಬ್‌ನ ಶಾರ್ಟ್ಸ್ ಆಯ್ಕೆ ಬಳಕೆದಾರರನ್ನು ಆಕರ್ಷಿಸಿದ್ದು, ಸದ್ಯ ಜನಪ್ರಿಯದಲ್ಲಿದೆ. ಒಂದು ನಿಮಿಷದಲ್ಲಿ ಕಿರು ವಿಡಿಯೋ ಮಾಡಲು ಈ ಆಯ್ಕೆಯು ಅನುಮತಿಸುತ್ತದೆ. ಬಳಕೆದಾರರು ಆ ವಿಡಿಯೋವನ್ನು ಪೋಸ್ಟ್‌ ಮಾಡುವ ಆಯ್ಕೆ ಸಹ ನೀಡಲಾಗಿದೆ. ತಂತ್ರಜ್ಞಾನ, ಹಾಸ್ಯ, ಜ್ಞಾನ, ನೃತ್ಯ ಮತ್ತು ಇತರೆ ವಿವಿಧ ವಿಭಾಗಗಳಲ್ಲಿ ಕ್ರಿಯೆಟರ್ಸ್‌ಗಳಿಗೆ ಅವರ ವಿಡಿಯೋ ಅಪ್‌ಲೋಡ್ ಮಾಡಲು ಒಂದು ವೇದಿಕೆ ಆಗಿದೆ.

ಶಾರ್ಟ್‌

ಯೂಟ್ಯೂಬ್ ಪರಿಚಯಿಸಿರುವ ಈ ಶಾರ್ಟ್‌ ಆಯ್ಕೆ ಹೆಚ್ಚು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಭಿನ್ನ ಬಗೆಯ ವಿಡಿಯೋ ವೀಕ್ಷಣ ಮಾಡಬಹುದಾಗಿದೆ. ಬಳಕೆದಾರರು ಕೆಲವೊಮ್ಮೆ ಶಾರ್ಟ್‌ ನಲ್ಲಿ ವೀಕ್ಷಣೆ ಮಾಡಿರುವ ವಿಡಿಯೋವನ್ನು ಡೌನ್‌ಲೋಡ್ ಮಾಡಲು ಬಯಸುತ್ತಾರೆ. ಆದರೆ ಅನೇಕರಿಗೆ ಶಾರ್ಟ್‌ ವಿಡಿಯೋ ಡೌನ್‌ಲೋಡ್ ಮಾಡುವ ಬಗ್ಗೆ ತಿಳಿದಿರುವುದಿಲ್ಲ. ಶಾರ್ಟ್‌ ವಿಡಿಯೋ ಡೌನ್ಲೋಡ್ ಮಾಡಲು ಅವಕಾಶ ಇದೆ. ಹಾಗಾದರೇ ಶಾರ್ಟ್‌ ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆನ್‌ಲೈನ್

ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಯುಟ್ಯೂಬ್ ಶಾರ್ಟ್ಸ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು 3 ಆನ್‌ಲೈನ್ ಪರಿಕರಗಳು ಇವೆ. ಅವುಗಳು ಕ್ರಮವಾಗಿ ವೆಬ್‌ಸೈಟ್ ಮೂಲಕ, ಮೊಬೈಲ್ ಆಪ್ ಮೂಲಕ ಮತ್ತು ಪಿಸಿ ಆಪ್‌ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.

ವೆಬ್‌ಸೈಟ್ ಮೂಲಕ ಶಾರ್ಟ್ಸ್ ವೀಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ವೆಬ್‌ಸೈಟ್ ಮೂಲಕ ಶಾರ್ಟ್ಸ್ ವೀಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ವಿಡಿಯೋ ಗಳನ್ನು .mp4 ಫಾರ್ಮ್ಯಾಟ್‌ನಲ್ಲಿ ಯೂಟ್ಯಬ್ ಶಾರ್ಟ್‌ ಅನ್ನು ಡೌನ್‌ಲೋಡ್ ಮಾಡುವ Shortsnoob, 8Downloader ಅಥವಾ Savetube ನಂತಹ ಸಾಕಷ್ಟು ಆನ್‌ಲೈನ್ ಪರಿಕರಗಳು ಮತ್ತು ಸಾಫ್ಟ್‌ವೇರ್‌ಗಳು ಲಭ್ಯವಿದೆ. ವೆಬ್‌ಸೈಟ್ ಮೂಲಕ ಯೂಟ್ಯಬ್ ಶಾರ್ಟ್‌ ಅನ್ನು ಡೌನ್‌ಲೋಡ್ ಮಾಡಲು ಹಂತಗಳನ್ನು ಅನುಸರಿಸಿ.

* ಯೂಟ್ಯಬ್ ಶಾರ್ಟ್‌ ತೆರೆಯಿರಿ ಮತ್ತು ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಅನ್ನು ಕಾಪಿ ಮಾಡಿ.
* ಈಗ, https://shortsnoob.com/ ಗೆ ಹೋಗಿ ಮತ್ತು ಯೂಟ್ಯಬ್ ಶಾರ್ಟ್‌ ಲಿಂಕ್ ಅನ್ನು ಪೇಸ್ಟ್‌ ಮಾಡಿ.
* ಸರ್ಚ್ ಬಟನ್ ಅನ್ನು ಒತ್ತಿರಿ ಮತ್ತು ಅದು ನಿಮಗೆ ಡೌನ್‌ಲೋಡ್ ಮಾಡಲು ವಿಭಿನ್ನ ಸ್ವರೂಪಗಳನ್ನು ತೋರಿಸುತ್ತದೆ.
* ಸ್ವರೂಪವನ್ನು ಆಯ್ಕೆಮಾಡಿ ಮತ್ತು ಅದು ಡೌನ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಸಾಧನದಲ್ಲಿ ವೀಡಿಯೊವನ್ನು ಡೌನ್‌ಲೋಡ್ ಮಾಡಲಾಗುತ್ತದೆ.

ಮೊಬೈಲ್ ಅಪ್ಲಿಕೇಶನ್ ಮೂಲಕ ಶಾರ್ಟ್ಸ್ ವೀಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ಮೊಬೈಲ್ ಅಪ್ಲಿಕೇಶನ್ ಮೂಲಕ ಶಾರ್ಟ್ಸ್ ವೀಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಬಹು ಯೂಟ್ಯೂಬ್ ಶಾರ್ಟ್‌ ಡೌನ್‌ಲೋಡ್ ಅಪ್ಲಿಕೇಶನ್‌ಗಳು ಲಭ್ಯವಿದೆ. Shorts Video Downloader ಅಪ್ಲಿಕೇಶನ್ ಅನ್ನು ಬಳಸುತ್ತೇವೆ. ಯೂಟ್ಯೂಬ್ ಶಾರ್ಟ್‌ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಸೂಚನೆಗಳನ್ನು ಅನುಸರಿಸಿ.

* ಯೂಟ್ಯೂಬ್ ಶಾರ್ಟ್‌ ತೆರೆಯಿರಿ ಮತ್ತು ಶೇರ್‌ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಅನ್ನು ಕಾಪಿ ಮಾಡಿ.
* ಈಗ, ಶಾರ್ಟ್ಸ್ ವೀಡಿಯೊ ಡೌನ್‌ಲೋಡ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಅಪ್ಲಿಕೇಶನ್‌ನ ಹುಡುಕಾಟ ಬಾರ್‌ನಲ್ಲಿ ಲಿಂಕ್ ಅನ್ನು ಪೇಸ್ಟ್‌ ಮಾಡಿ.
* ವೀಡಿಯೊ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ, ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ ಮತ್ತು ಅದು ಡೌನ್‌ಲೋಡ್ ಮಾಡಲು ಪ್ರಾರಂಭಿಸುತ್ತದೆ.
* ನಿಮ್ಮ ವೀಡಿಯೊವನ್ನು ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ನಿಮ್ಮ ಫೋನ್ ಗ್ಯಾಲರಿಯಲ್ಲಿ ಉಳಿಸಲಾಗುತ್ತದೆ.

ಪಿಸಿಯಲ್ಲಿ ಈ ಕ್ರಮ ಅನುಸರಿಸಿ:

ಪಿಸಿಯಲ್ಲಿ ಈ ಕ್ರಮ ಅನುಸರಿಸಿ:

ಪಿಸಿಯಲ್ಲಿ ಯೂಟ್ಯೂಬ್ ಶಾರ್ಟ್‌ ವೀಡಿಯೊವನ್ನು ಡೌನ್‌ಲೋಡ್ ಮಾಡಲು ನಾವು 4K ವೀಡಿಯೊ ಡೌನ್‌ಲೋಡರ್ ಸಾಫ್ಟ್‌ವೇರ್ ಅನ್ನು ಬಳಸುತ್ತೇವೆ. ಇದು ವಿಂಡೋಸ್, ಮ್ಯಾಕೋಸ್ ಮತ್ತು ಲಿನಕ್ಸ್‌ಗೆ ಲಭ್ಯವಿದೆ.
* ಮೊದಲು, ಯೂಟ್ಯೂಬ್ ಶಾರ್ಟ್‌ ಗೆ ಹೋಗಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊಗೆ ಲಿಂಕ್ ಅನ್ನು ಕಾಪಿ.
* ಈಗ, 4K ವೀಡಿಯೊ ಡೌನ್‌ಲೋಡರ್ ಅನ್ನು ಪ್ರಾರಂಭಿಸಿ ಮತ್ತು ಲಿಂಕ್ ಅನ್ನು ಪೇಸ್ಟ್‌.
* ನೀವು ವೀಡಿಯೊವನ್ನು ಡೌನ್‌ಲೋಡ್ ಮಾಡಲು ಬಯಸುವ ಸ್ವರೂಪವನ್ನು ಆಯ್ಕೆಮಾಡಿ.
* ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ ಮತ್ತು ವೀಡಿಯೊವನ್ನು ನಿಮ್ಮ PC ಯಲ್ಲಿ ಉಳಿಸಲಾಗುತ್ತದೆ.

Most Read Articles
Best Mobiles in India

English summary
How to Download YouTube Shorts Videos Online 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X