ಅತಿ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ವೀಡಿಯೋಗಳನ್ನು ಡೌನ್ಲೋಡ್ ಮಾಡುವುದು ಹೇಗೆ?

|

ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಯೂಟ್ಯೂಬ್‌ ಕೂಡ ಒಂದಾಗಿದೆ. ಇನ್ನು ಯೂಟ್ಯೂಬ್‌ ಅತ್ಯಂತ ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಆಪ್‌ಗಳಲ್ಲಿ ಒಂದಾಗಿದೆ. ಯೂಟ್ಯೂಬ್‌ ಮ್ಯೂಸಿಕ್‌ ಮತ್ತು ವೀಡಿಯೊ ಎರಡನ್ನೂ ಒಳಗೊಂಡಿರುವುದರಿಂದ ಬಳಕೆದಾರರಿಗೆ ಮನರಂಜನೆಯ ನೆಚ್ಚಿನ ತಾಣವಾಗಿದೆ. ಅಲ್ಲದೆ ಯೂಟ್ಯೂಬ್‌ನಲ್ಲಿ ನೀವು ಎಲ್ಲಾ ರೀತಿಯ ಮಾಹಿತಿ ತಿಳಿಯುವ ವೀಡಿಯೊಗಳು ಕೂಡ ಲಭ್ಯವಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಯೂಟ್ಯೂಬ್‌ ಸ್ಟ್ರೀಮ್‌ ಮಾಡುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ಯೂಟ್ಯೂಬ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಕೂಡ ಸುಲಭವಾಗಿದೆ. ವೀಡಿಯೊಗಳನ್ನು ಅಪ್ಲಿಕೇಶನ್‌ನಲ್ಲಿಯೇ ಡೌನ್‌ಲೋಡ್ ಮಾಡಲು ಮತ್ತು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶವಿದೆ. ಆದರೆ ನಿಮ್ಮ ಫೋನ್‌ನ ಲೋಕಲ್‌ ಸ್ಟೋರೇಜ್‌ನಲ್ಲಿ ವೀಡಿಯೊ ಡೌನ್‌ಲೋಡ್ ಮಾಡಲು ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯಲು ಈ ಲೇಖನವನ್ನು ಓದಿರಿ.

ಅತಿ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಅತಿ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

YouTube ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಎರಡು ವಿಧಾನಗಳನ್ನು ನೀಡುತ್ತದೆ. ಎರಡೂ ವಿಧಾನಗಳು ಸರಳವಾಗಿದೆ. ಇದಕ್ಕಾಗಿ ನೀವು ಯೂಟ್ಯೂಬ್‌ ಆಪ್ ಅನ್ನು ತೆರೆಯಬೇಕು ಮತ್ತು ಆಫ್‌ಲೈನ್ ವೀಕ್ಷಣೆಗಾಗಿ ಯಾವುದೇ ವೀಡಿಯೊವನ್ನು ಡೌನ್‌ಲೋಡ್ ಮಾಡಬೇಕು. ಆದರೆ ಫೋನ್‌ನ ಲೋಕಲ್‌ ಸ್ಟೋರೇಜ್‌ನಲ್ಲಿ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಅಪ್ಲಿಕೇಶನ್ ನಿಮಗೆ ಅವಕಾಶ ನೀಡುವುದಿಲ್ಲ ಇದಕ್ಕಾಗಿ, ನೀವು ಇತರ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಯೂಟ್ಯೂಬ್

ನೀವು ಯೂಟ್ಯೂಬ್ ಆಪ್‌ನಲ್ಲಿ, ನೀವು ಯಾವುದೇ ವಿಡಿಯೋವನ್ನು ತೆರೆದಾಗ, ಅದರ ಕೆಳಗೆ ಒಂದು ಡೌನ್‌ಲೋಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನೀವು ಆ ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ಡೌನ್‌ಲೋಡ್ ಪ್ರಾರಂಭವಾಗುತ್ತದೆ. ಯೂಟ್ಯೂಬ್‌ನ ಲೈಬ್ರರಿ ವಿಭಾಗದಲ್ಲಿ ಬಳಕೆದಾರರು ಡೌನ್‌ಲೋಡ್ ಮಾಡಿರುವ ಎಲ್ಲಾ ವೀಡಿಯೋಗಳನ್ನು ಪರಿಶೀಲಿಸಬಹುದು ಮತ್ತು ನೀವು ಇಂಟರ್ನೆಟ್ ಇಲ್ಲದೆ ಅವುಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಇದಲ್ಲದೆ ಯೂಟ್ಯೂಬ್‌ನಲ್ಲಿ ವೀಡಿಯೊ ರಿಸಲ್ಟ್‌ಗಳನ್ನು ತೋರಿಸಿದಾಗ, ನೀವು ಕೇವಲ ಮೂರು-ಡಾಟ್ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ, ಅದು ವೀಡಿಯೊದ ಬಲಭಾಗದಲ್ಲಿ ಗೋಚರಿಸುತ್ತದೆ. ಒಮ್ಮೆ ನೀವು ಅದನ್ನು ಟ್ಯಾಪ್ ಮಾಡಿದರೆ, ನೀವು ಡೌನ್‌ಲೋಡ್ ಆಯ್ಕೆಯನ್ನು ನೋಡಬಹುದಾಗಿರುತ್ತದೆ.

ಸ್ಟೋರೇಜ್‌

ಇದಲ್ಲದೆ ತಮ್ಮ ಫೋನ್‌ನ ಲೋಕಲ್‌ ಸ್ಟೋರೇಜ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಬಯಸುವವರು, ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇಂತಹ ಅಪ್ಲಿಕೇಶನ್‌ಗಳಲ್ಲಿ ಸ್ನಾಪ್ ಟ್ಯೂಬ್ ಕೂಡ ಒಂದಾಗಿದೆ. ಆದರೆ ಇದು ಇದು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿಲ್ಲ. ಆದ್ದರಿಂದ, ಬಳಕೆದಾರರು ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು ಮತ್ತು ನಂತರ ಆಪ್ ಅನ್ನು ಡೌನ್‌ಲೋಡ್ ಮಾಡಬಹುದು. ಈ ಆಪ್ ಸಹಾಯದಿಂದ, ನೀವು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇನ್ನಿತರ ಪ್ಲಾಟ್‌ಫಾರ್ಮ್‌ಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ಆಂಡ್ರಾಯ್ಡ್

ಆಂಡ್ರಾಯ್ಡ್ ಬಳಕೆದಾರರು ಕೇವಲ Snaptubeapp.com ಗೆ ಭೇಟಿ ನೀಡಿ ಮತ್ತು ಅದನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಬೇಕು. ಇದರ ನಂತರ, ನೀವು ಡೌನ್‌ಲೋಡ್ ಮಾಡಲು ಬಯಸುವ ಯೂಟ್ಯೂಬ್ ವೀಡಿಯೊವನ್ನು ನೀವು ಕಂಡುಕೊಳ್ಳಬೇಕು ಮತ್ತು ನಂತರ ಸ್ನ್ಯಾಪ್‌ಟ್ಯೂಬ್ ಅಪ್ಲಿಕೇಶನ್‌ನ ಸರ್ಚ್ ಬಾರ್‌ನಲ್ಲಿ URL ಅನ್ನು ಕಟ್‌ ಆಂಡ್‌ ಪೆಸ್ಟ್‌ ಮಾಡಬೇಕಾಗುತ್ತದೆ. ಲಿಂಕ್‌ ಕಾಪಿ ಮಾಡಿದ ನಂತರ ನಿಮ್ಮ ವೀಡಿಯೊವನ್ನು ತೋರಿಸುತ್ತದೆ ಮತ್ತು ಡೌನ್‌ಲೋಡ್ ಬಟನ್ ಅನ್ನು ಸಹ ಪ್ರದರ್ಶಿಸುತ್ತದೆ. ನೀವು ಯಾವುದೇ ರೆಸಲ್ಯೂಶನ್ ನಲ್ಲಿ ವೀಡಿಯೊವನ್ನು ಡೌನ್ಲೋಡ್ ಮಾಡಬಹುದು.

Best Mobiles in India

English summary
YouTube offers two methods to download videos on its platform. Both the methods are simple.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X