ನಿಮ್ಮ ಐಫೋನ್ ನ್ನು “ಫಾಸ್ಟ್-ಚಾರ್ಜ್” ಮಾಡುವುದು ಹೇಗೆ?

By Gizbot Bureau
|

ಐಫೋನ್ ಬಳಕೆದಾರರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ನಿಧಾನಗತಿಯಲ್ಲಿ ಐಫೋನ್ ಗಳು ಚಾರ್ಜ್ ಆಗುವುದು. ಐಫೋನ್ ಎಕ್ಸ್, ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಬಿಡುಗಡೆಗೊಳ್ಳುವ ಮುನ್ನ ಬಳಸುತ್ತಿದ್ದ ಐಫೋನ್ ಡಿವೈಸ್ ಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಇದ್ದೇ ಇರುತ್ತದೆ ಮತ್ತು ಬಳಕೆದಾರರು ಇದರ ಬಗ್ಗೆ ಹೇಳುತ್ತಲೇ ಇರುತ್ತಾರೆ.

ಇನ್ನೊಂದು ಆಪಲ್ ಡಿವೈಸ್ ಖರೀದಿ:

ಇನ್ನೊಂದು ಆಪಲ್ ಡಿವೈಸ್ ಖರೀದಿ:

ಐಫೋನ್ ಗಳ ಫಾಸ್ಟ್ ಚಾರ್ಜಿಂಗ್ ಕೂಡ ಸಾಧ್ಯವಿದೆ. ಇದಕ್ಕಾಗಿ ಮತ್ತೊಂದು ಆಪಲ್ ಪ್ರೊಡಕ್ಟ್ ನ್ನು ಖರೀದಿಸುವ ಅವಶ್ಯಕತೆ ಇದೆ ಉದಾಹರಣೆಗೆ ಆಪಲ್ ಯುಎಸ್ ಬಿ-ಸಿ ಯಿಂದ ಲೈಟನಿಂಗ್ ಕೇಬಲ್ ಅಥವಾ 18W, 29W, 30W, 61W, ಅಥವಾ 87W USB-C ನ ಪವರ್ ಅಡಾಪ್ಟರ್ ಗಳ ಅಗತ್ಯವಿದೆ.

ಆಪಲ್ ಡಿವೈಸ್ ಇಲ್ಲದೆಯೇ ವೇಗದ ಚಾರ್ಜಿಂಗ್:

ಆಪಲ್ ಡಿವೈಸ್ ಇಲ್ಲದೆಯೇ ವೇಗದ ಚಾರ್ಜಿಂಗ್:

ಆದರೆ ಇನ್ನೊಂದಿಷ್ಟು ಕೆಲಸವನ್ನು ಮಾಡುವುದರಿಂದ ಕೂಡ ನಿಮ್ಮ ಐಫೋನ್ ನ್ನು ಇನ್ನಷ್ಟು ವೇಗವಾಗಿ ಚಾರ್ಜ್ ಆಗುವಂತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ವಿಧಾನವು ಮತ್ತೊಂದು ಆಪಲ್ ಡಿವೈಸ್ ನ್ನು ನಿಮ್ಮ ಆಪಲ್ ಐಫೋನ್ ನ್ನು ವೇಗವಾಗಿ ಚಾರ್ಜ್ ಮಾಡುವುದಕ್ಕಾಗಿ ಬೇಡುವುದಿಲ್ಲ.

2ಎ ಪವರ್ ಬ್ಯಾಂಕ್ ಗಳನ್ನು ಬಳಸಿ:

2ಎ ಪವರ್ ಬ್ಯಾಂಕ್ ಗಳನ್ನು ಬಳಸಿ:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಪವರ್ ಬ್ಯಾಂಕ್ ಗಳು ಮಲ್ಟಿಪಲ್ ಯುಎಸ್ ಬಿ ಪೋರ್ಟ್ ಗಳನ್ನು ಹೊಂದಿರುತ್ತದೆ. ಅದರಲ್ಲಿ ಕೆಲವು 1A ಪವರ್ ಔಟ್ ಪುಟ್ ನದ್ದಾಗಿದ್ದರೆ ಇನ್ನೂ ಕೆಲವು 2ಎ ಪವರ್ ಔಟ್ ಪುಟ್ ನ್ನು ಹೊಂದಿರುತ್ತದೆ. ನಿಮ್ಮ ಐಫೋನ್ ನ್ನು ಚಾರ್ಜ್ ಮಾಡುವುದಕ್ಕೆ 2ಎ ಪವರ್ ಬ್ಯಾಂಕ್ ಗಳನ್ನು ಬಳಸುವುದರಿಂದಾಗಿ ಸ್ವಲ್ಪ ಮಟ್ಟಿಗೆ ಐಫೋನ್ ವೇಗವಾಗಿ ಚಾರ್ಜ್ ಆಗುವಂತೆ ಮಾಡಲು ಸಾಧ್ಯವಾಗುತ್ತದೆ

ಆಪಲ್ ಐಪ್ಯಾಡ್ ಚಾರ್ಜರ್ ಬಳಸಿ:

ಆಪಲ್ ಐಪ್ಯಾಡ್ ಚಾರ್ಜರ್ ಬಳಸಿ:

ಆಪಲ್ ಐಪ್ಯಾಡ್ ಚಾರ್ಜರ್ ಗಳು ಆಪಲ್ ಐಫೋನ್ ಚಾರ್ಜರ್ ಗಳಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ವೋಲ್ಟೇಜ್ ರೇಟಿಂಗ್ ನ್ನು ಹೊಂದಿರುತ್ತದೆ. ಹಾಗಾಗಿ ನಿಮ್ಮ ಪ್ಯಾಡ್ ಗೆ ನೀಡಲಾಗಿರುವ ಚಾರ್ಜರ್ ನ್ನು ಐಫೋನ್ ಚಾರ್ಜಿಂಗ್ ಗೆ ಬಳಕೆ ಮಾಡುವುದರಿಂದಾಗಿ ಸ್ವಲ್ಪ ಮಟ್ಟಿಗೆ ಫಾಸ್ಟ್ ಆಗಿ ನಿಮ್ಮ ಐಫೋನ್ ಚಾರ್ಜ್ ಆಗುವಂತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ನೂತನ ಐಫ್ಯಾಡ್ ಪ್ರೋ(2018) ಯುಎಸ್ ಬಿ ಟೈಪ್ ಸಿ ಪೋರ್ಟ್ ನ್ನು ಹೊಂದಿರುತ್ತದೆ ಹಾಗಾಗಿ ಇದನ್ನು ನೀವು ನಿಮ್ಮ ಐಫೋನ್ ಚಾರ್ಜಿಂಗ್ ಬಳಸಲು ಸಾಧ್ಯವಾಗುವುದಿಲ್ಲ.

ಯಾವುದೇ ಆಂಡ್ರಾಯ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಬಳಸಿ:

ಯಾವುದೇ ಆಂಡ್ರಾಯ್ಡ್ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಬಳಸಿ:

ಹೆಚ್ಚಿನ ಆಂಡ್ರಾಯ್ಡ್ ಫೋನ್ ಗಳು ಇತ್ತೀಚಿನ ದಿನಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.ಅದರ ಚಾರ್ಜಿಂಗ್ ಕೇಬಲ್ ಗಳು ಐಫೋನ್ ಬಳಕೆಗೆ ಯೋಗ್ಯವಾಗಿಲ್ಲದೇ ಇರಬಹುದು ಆದರೆ ಅದರ ಅಡಾಪ್ಟರ್ ಗಳು ಖಂಡಿತ ಬಳಕೆಗೆ ಯೋಗ್ಯವಾಗಿರುತ್ತದೆ. ಹಾಗಾಗಿ ಐಫೋನ್ ಗಳನ್ನು ವೇಗವಾಗಿ ಚಾರ್ಜ್ ಮಾಡುವುದಕ್ಕಾಗಿ ಆಂಡ್ರಾಯ್ಡ್ ಅಡಾಪ್ಟರ್ ಗಳನ್ನು ಬಳಕೆ ಮಾಡಬಹುದು.

ನೆನಪಿಡಿ:

ಆದರೆ ಪ್ರತಿಯೊಬ್ಬ ಐಫೋನ್ ಬಳಕೆದಾರರು ನೆನಪಿಡಬೇಕಾಗಿರುವ ಅಂಶವೇನೆಂದರೆ ಐಫೋನ್ ಎಕ್ಸ್, ಐಫೋನ್ ಎಕ್ಸ್ಎಸ್ ಮತ್ತು ಎಕ್ಸ್ಎಸ್ ಮ್ಯಾಕ್ಸ್ ಗಳು ಫಾಸ್ಟ್ ಚಾರ್ಜಿಂಗ್ ಗೆ ಡೀಫಾಲ್ಟ್ ಆಗಿ ಬೆಂಬಲ ನೀಡುತ್ತದೆ ಮತ್ತು ಮೇಲಿನ ಯಾವುದೇ ಮೆಥೆಡ್ ನ್ನು ಚಾರ್ಜಿಂಗ್ ಗಾಗಿ ಬಳಕೆ ಮಾಡುವ ಅಗತ್ಯತೆ ಇರುವುದಿಲ್ಲ.

ಅಷ್ಟೇ ಅಲ್ಲ ಯಾವಾಗಲೂ ಇದೇ ಮೆಥೆಡ್ ಬಳಕೆ ಮಾಡುವುದು ಫೋನಿನ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ತೀರಾ ಅಗತ್ಯವೆನಿಸಿದಾಗ, ನೀವು ಯಾವುದೇ ಕೆಲಸಕ್ಕಾಗಿ ಫೋನಿನ ಗಡಿಬಿಡಿಯಲ್ಲಿದ್ದು ಫೋನ್ ಚಾರ್ಜ್ ಇಲ್ಲದೆ ಇದ್ದಾಗ ಅಪರೂಪಕ್ಕೆ ಒಮ್ಮೊಮ್ಮೆ ಬಳಕೆ ಮಾಡುವುದಕ್ಕಾಗಿ ಮಾತ್ರ ಉಪಯೋಗಕಾರಿ ಅನ್ನುವುದು ನಿಮ್ಮ ಗಮನದಲ್ಲಿ ಇರಲಿ.

Best Mobiles in India

English summary
How to 'fast-charge' your iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X