ಗೂಗಲ್‌ ಮ್ಯಾಪ್‌ನಲ್ಲಿ ತಪ್ಪಾದ ವಿಳಾಸವನ್ನು ಸರಿಪಡಿಸುವುದು ಹೇಗೆ ಗೊತ್ತೆ?

|

ಟೆಕ್ ದಿಗ್ಗಜ ಗೂಗಲ್ ಹಲವು ಸೇವೆಗಳನ್ನು ಪರಿಚಯಿಸಿದೆ. ಆ ಪೈಕಿ ಗೂಗಲ್ ಮ್ಯಾಪ್‌ (ನಕ್ಷೆಗಳು) ಆಪ್ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ನ್ಯಾವಿಗೇಷನ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪ್ರತಿ ನಿತ್ಯ ಅನೇಕ ಬಳಕೆದಾರರು ಗೂಗಲ್ ಮ್ಯಾಪ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಗೂಗಲ್ ಮ್ಯಾಪ್‌ ಅಪ್ಲಿಕೇಶನ್ ಬಳಕೆದಾರರಿಗೆ ಅತ್ಯುತ್ತಮ ಮಾರ್ಗದರ್ಶಿ ಆಗಿದ್ದು, ಸರಳ ದಾರಿಯನ್ನು ತಿಳಿಸುತ್ತದೆ. ಹಾಗೆಯೇ ಗೂಗಲ್ ಮ್ಯಾಪ್‌ನಲ್ಲಿರುವ ಕೆಲವು ವಿಶೇಷ ಫೀಚರ್‌ಗಳು ಬಳಕೆದಾರರ ಹಾದಿಯನ್ನು ಇನ್ನಷ್ಟು ಸುಗಮವಾಗಿಸುತ್ತವೆ. ಒಂದು ವೇಳೆ ಗೂಗಲ್ ನಲ್ಲಿ ವಿಳಾಸ ತಪ್ಪಾಗಿ ನಮೂದಾಗಿದ್ದರೆ ಸರಿ ಮಾಡುವ ಆಯ್ಕೆ ಇದೆ.

ಅನುಮತಿಸುತ್ತದೆ

ಹೌದು, ಗೂಗಲ್‌ ಮ್ಯಾಪ್‌ ನಲ್ಲಿ ತಪ್ಪು ವಿಳಾಸವನ್ನು ಸರಿಪಡಿಸಲು ಅವಾಕಶ ಇದೆ. ಗೂಗಲ್ ತನ್ನ ಬಳಕೆದಾರರಿಗೆ ಮ್ಯಾಪ್‌ ಗಳ ವಿಳಾಸಗಳನ್ನು ಸಾರ್ವಜನಿಕವಾಗಿ ಸೇರಿಸಲು ಅಥವಾ ಸಂಪಾದಿಸಲು ಅನುಮತಿಸುತ್ತದೆ. ನೀವು ಮಾಡಿದ ಎಡಿಟ ಸಹಾಯಕವಾಗಿದೆಯೆಂದು ಕಂಡುಬಂದರೆ ಮತ್ತು ಅನುಮೋದಿಸಿದರೆ, ಅದು ಗೂಗಲ್‌ ಮ್ಯಾಪ್‌ (Google Maps) ನಲ್ಲಿನ ವಿಳಾಸದಲ್ಲಿ ಪ್ರತಿಫಲಿಸುತ್ತದೆ. ಹಾಗಾದರೇ ಗೂಗಲ್‌ ಮ್ಯಾಪ್‌ನಲ್ಲಿನ ತಪ್ಪು ವಿಳಾಸವನ್ನು ಸರಿಪಡಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿರಿ.

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ವೆಬ್ ಬ್ರೌಸರ್‌ನಲ್ಲಿ ಈ ಕ್ರಮ ಅನುಸರಿಸಿ:

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ವೆಬ್ ಬ್ರೌಸರ್‌ನಲ್ಲಿ ಈ ಕ್ರಮ ಅನುಸರಿಸಿ:

ಹಂತ 1 : ವೆಬ್ ಬ್ರೌಸರ್‌ನಲ್ಲಿ ಗೂಗಲ್ ನಕ್ಷೆಗಳನ್ನು ತೆರೆಯಿರಿ.

ಹಂತ 2 : ವೆಬ್‌ಸೈಟ್‌ನ ಮೇಲಿನ ಎಡ ಭಾಗದ ಮೂಲೆಯಲ್ಲಿರುವ ಹುಡುಕಾಟ ಪಟ್ಟಿಯಿಂದ ವಿಳಾಸವನ್ನು ಹುಡುಕಿ.

ಹಂತ 3 : ಪುಟದ ಎಡಭಾಗದಲ್ಲಿರುವ ಸ್ಥಳ ವಿಭಾಗದಲ್ಲಿ, ಎಡಿಟ್ ಅನ್ನು ಸೂಚಿಸಿ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿ.

ಹಂತ 4 : ನೀವು ಎರಡು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5 : ವಿಳಾಸದಲ್ಲಿ ಬಯಸಿದ ವಿವರಗಳನ್ನು ಎಡಿಟ್ ಮಾಡಿ.

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ಐಫೋನ್ ಅಥವಾ ಆಂಡ್ರಾಯ್ಡ್‌ ಫೋನ್‌ ನಲ್ಲಿ ಈ ಕ್ರಮ ಫಾಲೋ ಮಾಡಿ:

ಗೂಗಲ್ ಮ್ಯಾಪ್‌ನಲ್ಲಿನ ತಪ್ಪು ವಿಳಾಸ ಸರಿಪಡಿಸಲು ಐಫೋನ್ ಅಥವಾ ಆಂಡ್ರಾಯ್ಡ್‌ ಫೋನ್‌ ನಲ್ಲಿ ಈ ಕ್ರಮ ಫಾಲೋ ಮಾಡಿ:

ಹಂತ 1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ನಕ್ಷೆಗಳ ಅಪ್ಲಿಕೇಶನ್ ತೆರೆಯಿರಿ.

ಹಂತ 2. ಸ್ಥಳದ ಹೆಸರಿನ ಮೇಲೆ ಟ್ಯಾಪ್ ಮಾಡಿ ಮತ್ತು ಮೇಲಕ್ಕೆ ಸ್ವೈಪ್ ಮಾಡಿ.

ಹಂತ 3. ಎಡಿಟ್ ಅನ್ನು ಸೂಚಿಸು ಆಯ್ಕೆ ಟ್ಯಾಪ್ ಮಾಡಿ.

ಹಂತ 4. ಆಯ್ಕೆಗಳಿಂದ, ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ.

ಹಂತ 5. ಸ್ಥಳದ ವಿಳಾಸದಲ್ಲಿ ಬಯಸಿದ ಬದಲಾವಣೆಗಳನ್ನು ಮಾಡಿ.

ಹಾಗೆಯೇ ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡಬಹುದು!.ಅದಕ್ಕಾಗಿ ಹೀಗೆ ಮಾಡಿ:

ಹಾಗೆಯೇ ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡಬಹುದು!.ಅದಕ್ಕಾಗಿ ಹೀಗೆ ಮಾಡಿ:

ಹಂತ:1 ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್ ಮ್ಯಾಪ್‌ಅನ್ನು ಪ್ರಾರಂಭಿಸಿ
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್‌ ಎಡಿಟ್‌ ಅನ್ನು ಆಯ್ಕೆಮಾಡಿ.

ಹುಡುಕಬಹುದು

ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್‌ ವರ್ಕ್‌ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ. ನೀವು ಮ್ಯಾಪ್‌ನಲ್ಲಿ ಹುಡುಕಬಹುದು ಅಥವಾ ಸರಳವಾಗಿ ಆಯ್ಕೆ ಮಾಡಬಹುದು.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಡಿಲೀಟ್‌ ಮಾಡಬಹುದು. ನಿಮಗೆ ಬೇಕಾಗಿರುವುದು ಮನೆಗಾಗಿ ತೆಗೆದುಹಾಕಿ ಆಯ್ಕೆಯನ್ನು ಆರಿಸಿ ಅಥವಾ ಉಳಿಸಿದ > ಲೇಬಲ್ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ.

Best Mobiles in India

English summary
How to Fix Wrong Address On Google Maps: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X