ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆಯೇ ಹೀಗೆ ಮಾಡಿ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಸ್ಟೋರೇಜ್ ಎಷ್ಟಿದ್ದರೂ ಒಮ್ಮೊಮ್ಮೆ ಸಾಲದಾಗುತ್ತದೆ. ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಡಿವೈಸ್‌ಗಳು ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡೇ ಬರುತ್ತಿದ್ದು ಇದರಿಂದಾಗಿ ಹೆಚ್ಚುವರಿ ಸ್ಥಳಾವಕಾಶವನ್ನು ಫೋನ್ ಕಂಪೆನಿಗಳು ಬಳಕೆದಾರರಿಗೆ ನೀಡುತ್ತಿವೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಆದರೆ ವಿಸ್ತರಣಾ ಸಾಮರ್ಥ್ಯ ಇರದೇ ಇದ್ದಲ್ಲಿ ಸ್ಥಳವನ್ನು ಖಾಲಿ ಮಾಡಿ ಅಲ್ಲಿ ಅಗತ್ಯವಾಗಿರುವ ಮಾಹಿತಿಯನ್ನು ಹೇಗೆ ಭರ್ತಿ ಮಾಡುವುದು ಎಂಬುದನ್ನು ಅರಿತುಕೊಳ್ಳೋಣ. ಕೆಳಗಿನ ಸ್ಲೈಡರ್‌ಗಳಲ್ಲಿ ಆ ಅಂಶಗಳನ್ನು ನಾವು ತಿಳಿಸುತ್ತಿದ್ದೇವೆ.

ಅಗತ್ಯವಿರದ ಅಪ್ಲಿಕೇಶನ್ ಅನ್ಇನ್‌ಸ್ಟಾಲ್ ಮಾಡಿ

ಅಗತ್ಯವಿರದ ಅಪ್ಲಿಕೇಶನ್ ಅನ್ಇನ್‌ಸ್ಟಾಲ್ ಮಾಡಿ

ಸೆಟ್ಟಿಂಗ್ಸ್ > ಅಪ್ಲಿಕೇಶನ್ ಮತ್ತು ನಿಮಗೆ ಬೇಡದೇ ಇರುವ ಸಾಫ್ಟ್‌ವೇರ್ ಅನ್‌ಇನ್‌ಸ್ಟಾಲ್ ಮಾಡಿ

ಚಿತ್ರಗಳನ್ನು ಮೂವ್ ಮಾಡಿ

ಚಿತ್ರಗಳನ್ನು ಮೂವ್ ಮಾಡಿ

ನಿಮ್ಮ ಫೋನ್‌ನಲ್ಲಿ ತೆಗೆದ ಚಿತ್ರಗಳನ್ನು ಬ್ಯಾಕಪ್ ಮಾಡಿಟ್ಟುಕೊಳ್ಳಿ. ಎಸ್‌ಡಿ ಕಾರ್ಡ್‌ನಿಂದ ಅದನ್ನು ವರ್ಗಾಯಿಸಿ ಡ್ರಾಪ್‌ಬಾಕ್ಸ್, ಫ್ಲಿಕ್ಕರ್, ಪಿಕಾಸಾದಲ್ಲಿ ಸೇವ್ ಮಾಡಿಟ್ಟುಕೊಳ್ಳಿ.

ವೀಡಿಯೊಗಳನ್ನು ತೆಗೆದು ಹಾಕಿ

ವೀಡಿಯೊಗಳನ್ನು ತೆಗೆದು ಹಾಕಿ

ನೀವು ತೆಗೆದಿರುವ ವೀಡಿಯೊಗಳು ಹೆಚ್ಚುವರಿ ಸ್ಥಳಗಳನ್ನು ಆಕ್ರಮಿಸಬಹುದು. ಇದನ್ನು ಕಂಪ್ಯೂಟರ್, ಕ್ಲೌಡ್‌ನಲ್ಲಿ ಸಂಗ್ರಹಿಸಿ.

ಮ್ಯೂಸಿಕ್ ಅಳಿಸಿ

ಮ್ಯೂಸಿಕ್ ಅಳಿಸಿ

ನಿಮ್ಮ ಡಿವೈಸ್‌ನಲ್ಲಿ ನೀವು ಕಾಪಿ ಮಾಡಿಟ್ಟುಕೊಂಡಿರುವ ಎಲ್ಲಾ ಎಮ್‌ಪಿ 3 ಗಳನ್ನು ಅಳಿಸಿ. ಇದಕ್ಕೆ ಬದಲಾಗಿ ಮ್ಯೂಸಿಕ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಡಿವೈಸ್‌ನಲ್ಲಿ ಅಳವಡಿಸಿಕೊಳ್ಳಿ.

ಡೌನ್‌ಲೋಡ್‌ಗಳನ್ನು ಅಳಿಸಿ

ಡೌನ್‌ಲೋಡ್‌ಗಳನ್ನು ಅಳಿಸಿ

ಯಾವುದಾದರೂ ದೊಡ್ಡ ಫೈಲ್‌ಗಳನ್ನು ನೀವು ಡೌನ್‌ಲೋಡ್ ಮಾಡಿದ್ದೀರಿ ಎಂದಾದಲ್ಲಿ ಅದನ್ನು ಡಿಲೀಟ್ ಮಾಡಿಟ್ಟುಕೊಳ್ಳಿ. ನಿಮಗೆ ಇದು ಬೇಡ ಎಂದಾದಲ್ಲಿ ಎಸ್‌ಡಿ ಕಾರ್ಡ್‌ನಿಂದ ಅದನ್ನು ಅಳಿಸಿರಿ.

ದೊಡ್ಡ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು  ಗಮನಿಸಿ

ದೊಡ್ಡ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಗಮನಿಸಿ

ಸೆಟ್ಟಿಂಗ್ಸ್ > ಅಪ್ಲಿಕೇಶನ್ > ಮ್ಯೂಸಿಕ್ ಇಲ್ಲಿ ನಿಮಗೆ ನಿಮ್ಮ ಅಪ್ಲಿಕೇಶನ್‌ ಮೂಲಕ ಸೇವ್ ಆಗಿರುವ ಫೈಲ್‌ಗಳನ್ನು ಕಾಣಬಹುದಾಗಿದೆ. ನಿಮ್ಮ ಹೆಚ್ಚುವರಿ ಸ್ಥಳವನ್ನು ಯಾವ ಫೈಲ ಅಥವಾ ಫೋಲ್ಡರ್ ಆಕ್ರಮಿಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಿ.

ಕ್ಯಾಶ್ ಕ್ಲಿಯರ್ ಮಾಡಿ

ಕ್ಯಾಶ್ ಕ್ಲಿಯರ್ ಮಾಡಿ

ನಿಮ್ಮ ಅಪ್ಲಿಕೇಶನ್ ಮ್ಯಾಪ್ ಮಾಹಿತಿ, ಗ್ರಾಫಿಕ್ಸ್, ಸೌಂಡ್ಸ್ ಹೀಗೆ ಮೊದಲಾದ ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದನ್ನು ಕ್ಯಾಶ್ ಎಂದು ಕರೆಯಲಾಗುತ್ತದೆ ಇದನ್ನು ನಿವಾರಿಸಿಕೊಳ್ಳಿ.

ಬ್ಲೋಟ್‌ವೇರ್ ರಿಮೂವ್ ಮಾಡಿ

ಬ್ಲೋಟ್‌ವೇರ್ ರಿಮೂವ್ ಮಾಡಿ

ನಿಮ್ಮ ಫೋನ್ ತಯಾರಕರು ಅಥವಾ ಕ್ಯಾರಿಯರ್ ಪೂರ್ವ ಇನ್‌ಸ್ಟಾಲ್ ಮಾಡಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಬ್ಲೋಟ್‌ವೇರ್ ಎಂದು ಕರೆಯಲಾಗುತ್ತದೆ. ಇದನ್ನು ನಿವಾರಿಸಿಕೊಳ್ಳಿ.

Best Mobiles in India

English summary
Storage space – our smartphones and tablets never seem to have enough of it. Sooner or later, it runs out completely, and a dreadful notification lets us know that it is time to do some mandatory housekeeping.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X