ಒನ್‌ಪ್ಲಸ್‌ನ ಜೆನ್‌ಮೋಡ್‌ ಈಗ ಎಲ್ಲರಿಗೂ ಲಭ್ಯ..! ಬಳಸುವುದು ಹೇಗೆ..?

By Gizbot Bureau
|

ಈಗ ಯಾವುದೇ ಇತರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಒನ್‌ಪ್ಲಸ್‌ 7 ಪ್ರೋ ಜೆನ್‌ಮೋಡ್‌ ಪಡೆಯಲು ಸುಲಭ ವಿಧಾನವೊಂದು ಲಭ್ಯವಿದೆ. ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೋ ಎರಡು ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ವಿಶಿಷ್ಟವಾದ ಫೀಚರ್ಸ್‌ ಹೊಂದಿದ್ದು, ಅದರಲ್ಲಿ ಜೆನ್‌ಮೋಡ್‌ ಕೂಡ ಒಂದು.

ಜೆನ್‌ಮೋಡ್‌

ಜೆನ್‌ಮೋಡ್‌ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೋಗಾಗಿ ಪ್ರತ್ಯೇಕವಾಗಿ ಬಿಡುಗಡೆಯಾಗಿದ್ದರೂ, ಒನ್‌ಪ್ಲಸ್‌ನ ಉಳಿದ ಸಾಧನಗಳಿಗೂ ಇದು ಅನ್ವಯಿಸುತ್ತದೆ. ಸ್ಮಾರ್ಟ್‌ಫೋನ್ ಬಳಕೆಯ ಟ್ರ್ಯಾಕ್ ಹೇಗೆ ಮಾಡಬಹುದು ಎಂಬುದನ್ನು ತಿಳಿಯಲು ಕೂಡ ಜೆನ್‌ಮೋಡ್‌ ಸಹಾಯ ಮಾಡುತ್ತದೆ. ಬಳಕೆಯ ಮಿತಿಯನ್ನು ಕೂಡ ಹೊಂದಿಸಬಹುದಾಗಿದ್ದು, ಯಾರಾದರೂ ನಿಗದಿಪಡಿಸಿದ ಮಿತಿಯನ್ನು ಮೀರಿದರೆ, ಸ್ಮಾರ್ಟ್‌ಫೋನ್ ಲಾಕ್ ಆಗುತ್ತದೆ. ಲಾಕ್‌ ಆದ ಸಂದರ್ಭದಲ್ಲಿ ಕಾಲ್‌ ಮತ್ತು ಫೋಟೋ ಕ್ಲಿಕ್ಕಿಸುವುದರ ಹೊರತಾಗಿ ಮತ್ತೇನನ್ನೂ ಮಾಡಲು ಸಾಧ್ಯವಿಲ್ಲ.

ಏಕಾಗ್ರತೆ ಹೆಚ್ಚಿಸಲು ಸಹಾಯಕ

ಏಕಾಗ್ರತೆ ಹೆಚ್ಚಿಸಲು ಸಹಾಯಕ

ಏಕಾಗ್ರತೆ ಹೆಚ್ಚಿಸಲು ಮತ್ತು ಫೋನ್ ಬಳಕೆ ನಿಯಂತ್ರಿಸಲು, ಜೆನ್‌ಮೋಡ್ ನಿಜವಾಗಿಯೂ ಸಹಾಯಕವಾಗಿದೆ, ನಿಗದಿಪಡಿಸಿದ ಮಿತಿ ಮೀರಿದರೆ ಸ್ಮಾರ್ಟ್‌ಫೋನ್‌ನ್ನು ಸುಮಾರು 20 ನಿಮಿಷಗಳ ಕಾಲ ಜೆನ್‌ಮೋಡ್‌ ಲಾಕ್ ಮಾಡುತ್ತದೆ. ಫೋನ್‌ನ್ನು ಮರುಪ್ರಾರಂಭಿಸಿದರು ಯಾವುದೇ ಪ್ರಯೋಜನವಿಲ್ಲ. ಇದು ಒನ್‌ಪ್ಲಸ್‌ಗೆ ತುಂಬಾ ಕಟ್ಟುನಿಟ್ಟಾದ ವೈಶಿಷ್ಟ್ಯವಾಗಿತ್ತು. ಆದರೆ, ಈಗ ಇದು ವಿವಿಧ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೂ ಲಭ್ಯವಿದೆ.

ಹೇಗೆ ಇನ್‌ಸ್ಟಾಲ್‌..?

ಹೇಗೆ ಇನ್‌ಸ್ಟಾಲ್‌..?

ಹಂತ 1: ಲಾಕ್‌ ಮೈ ಫೋನ್‌ ಫಾರ್‌ ಸ್ಟಡಿ ಆಪ್‌ನ್ನು ಡೌನ್‌ಲೋಡ್‌ ಮಾಡಿ. ಈ ಆಪ್‌ ಹೆಚ್ಚು ರೇಟಿಂಗ್‌ ಹೊಂದಿದ್ದು, ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದು.

ಹಂತ 2: ನಂತರ ಆಪ್‌ ತೆರೆದು, ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ. ಇದು ಸಾಧನ ನಿರ್ವಾಹಕರ ಸವಲತ್ತುಗಳನ್ನು ವಿನಂತಿಸುತ್ತದೆ.

ಹಂತ 3: ಮುಂದೆ, ಸ್ಥಳ ಮತ್ತು ಸಾಧನ ನಿರ್ವಹಣೆಗೆ ಎರಡು ಅನುಮತಿಗಳನ್ನು ನೀಡಬೇಕಾಗುತ್ತದೆ.

ಹಂತ 4: ನೀವು ನಂತರ ಮುಖ್ಯ ಇಂಟರ್‌ಫೇಸ್‌ಗೆ ಹೋಗುತ್ತೀರಿ. ಬಳಿಕ + ಬಟನ್ ಟ್ಯಾಪ್ ಮಾಡಿ ಮತ್ತು ಒಂದು ಬಾರಿ ಅದನ್ನು ಆಯ್ಕೆ ಮಾಡಿ.

ಹಂತ 5: ನೀವು ಸಮಯವನ್ನು ನಮೂದಿಸಬೇಕಾದ ಟೈಮರ್ ನೋಡಲಾಗುತ್ತದೆ. ಸಂಖ್ಯೆ 1ನ್ನು ನಮೂದಿಸಿ ಮತ್ತು ನಂತರ ಒಕೆ ಬಟನ್‌ ಒತ್ತಿರಿ.

ಹಂತ 6: ಪಾಪ್‌ಅಪ್ ವಿಂಡೋದಲ್ಲಿ ಹೊಸ ಜೆನ್‌ಮೋಡ್‌ನ್ನು ಸಕ್ರಿಯಗೊಳಿಸಿ. ಈ ಪ್ರಕ್ರಿಯೆಯ ನಂತರ, ನೀವು ತಕ್ಷಣ ಎಚ್ಚರಿಕೆ ಡೈಲಾಗ್‌ ಪಡೆಯುತ್ತೀರಿ. ಅದನ್ನು ಎಚ್ಚರಿಕೆಯಿಂದ ಓದಿ, ಬಳಿಕ ಹೌದು ಬಟನ್ ಒತ್ತಿರಿ.

ಹಂತ 7: ಮುಂದಿನ ಹಂತದಲ್ಲಿ, ಸಾಧನವನ್ನು ಲಾಕ್ ಮಾಡಿರಿ. ಲಾಕ್ ಪರದೆಯಲ್ಲಿ ಇನ್ನೂ ಎಷ್ಟು ಸಮಯ ಉಳಿದಿದೆ ಎಂಬುದು ತೋರಿಸುತ್ತದೆ.

ಅಡೆತಡೆ ಮುಕ್ತ ಫೀಚರ್‌

ಲಾಕ್ ಅವಧಿಗಳನ್ನು ಬಹಳ ಸುಲಭವಾಗಿ ರಚಿಸಬಹುದು. ಯಾವುದೇ ಆಂಡ್ರಾಯ್ಡ್ ಸಾಧನದಲ್ಲಿ ಒನ್‌ಪ್ಲಸ್ 7 ಪ್ರೊನ ಜೆನ್‌ಮೋಡ್ ಪಡೆಯಲು ಇದು ಸುಲಭ ಮಾರ್ಗವಾಗಿದ್ದು, ಯಾವುದೇ ಸ್ಮಾರ್ಟ್‌ಫೋನ್‌ ಹೊಂದಿರಬಹುದಾದ ಅಡತಡೆ-ಎರಡು ಅನುಮತಿಗಳನ್ನು ನೀಡಬೇಕಾಗುತ್ತದೆ-ಮುಕ್ತ ವೈಶಿಷ್ಟ್ಯವಾಗಿದೆ.

ಎಚ್ಚರವಿರಲಿ

ಸ್ಥಳ ಮತ್ತು ಸಮಯದ ಆಧಾರದ ಮೇಲೆ ನಿಮ್ಮ ಫೋನ್‌ನ ಬಳಕೆಯನ್ನು ನೀವು ತಡೆಯಲು ಸಾಧ್ಯವಾದರೆ, ಅದು ನಿಮ್ಮ ಏಕಾಗ್ರತೆ ಹೆಚ್ಚಿಸಲು ಸಹಾಯವಾಗುತ್ತದೆ. ಆದರೆ, ಎಚ್ಚರವಾಗಿರಿ. ಒಮ್ಮೆ ಅವಧಿ ನಿಗದಿಪಡಿಸಿದ ನಂತರ, ಅದನ್ನು ಮೀರಿ ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ಬಳಿಕ, ನಿಮ್ಮ ಫೋನ್ ಬಳಸದೆ ನೀವು ಕುಳಿತು ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದು ಗೂಗಲ್‌ನ ಡಿಜಿಟಲ್ ವೆಲ್‌ಬಿಹಿಂಗ್‌ಗಿಂತಲೂ ಹೆಚ್ಚು ಸುಧಾರಿತವಾಗಿದೆ.

Most Read Articles
Best Mobiles in India

Read more about:
English summary
How To Get OnePlus 7 Pro’s ZenMode On Any Android Smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X