ಒನ್‌ಪ್ಲಸ್‌ 7, 7 ಪ್ರೋ ಮೇಲೆ ಭಾರೀ ಡಿಸ್ಕೌಂಟ್‌..! ಪಡೆಯುವುದು ಹೇಗೆ..?

By Gizbot Bureau
|

ಒನ್‌ಪ್ಲಸ್‌, ಅಲ್ಪಾವಧಿಯಲ್ಲಿಯೇ ಜಾಗತಿಕ ಮನ್ನಣೆ ಗಳಿಸಿದ ಕಂಪನಿ. ತನ್ನ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಿಂದ ಆಪಲ್‌ ಕಂಪನಿಯ ನಿದ್ದೆಗೆಡಿಸಿರುವ ಒನ್‌ಪ್ಲಸ್‌ ಇತ್ತೀಚೆಗಷ್ಟೇ ಒನ್‌ಪ್ಲಸ್‌ 7 ಮತ್ತು 7 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿತ್ತು. ಈಗ, ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಉತ್ತಮ ಸಮಯ ಬಂದಿದ್ದು, ಚೀನಾ ಕಂಪನಿ 2,000 ರೂ.ವರೆಗೂ ತ್ವರಿತ ರಿಯಾಯಿತಿಯನ್ನು ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡುತ್ತಿದೆ. ಈ ರಿಯಾಯಿತಿ ಪಡೆಯಲು ಐಸಿಐಸಿಐ ಅಥವಾ ಸಿಟಿಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರಬೇಕು.

ಆಫರ್‌ ಏನು..? ಎಲ್ಲಿ ದೊರೆಯುತ್ತೆ..?

ಆಫರ್‌ ಏನು..? ಎಲ್ಲಿ ದೊರೆಯುತ್ತೆ..?

ಬಳಕೆದಾರರು ಒನ್‌ಪ್ಲಸ್‌ 7 ಪ್ರೋ ಮೇಲೆ 2,000 ರೂ.ವರೆಗೆ ಮತ್ತು ಒನ್‌ಪ್ಲಸ್ 7 ಮೇಲೆ 1,500 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಆಫರ್‌ ಅಮೆಜಾನ್‌ ಇಂಡಿಯಾ, ಒನ್‌ಪ್ಲಸ್‌ ಡಾಟ್‌ ಇನ್‌, ಒನ್‌ಪ್ಲಸ್‌ ಅನಭವ ಕೇಂದ್ರಗಳು ಮತ್ತು ಆಫ್‌ಲೈನ್‌ ಸ್ಟೋರ್‌ಗಳಲ್ಲಿ ದೊರೆಯುತ್ತದೆ.

ವ್ಯಾಲಿಡಿಟಿ ಎಷ್ಟು..?

ವ್ಯಾಲಿಡಿಟಿ ಎಷ್ಟು..?

ಒಂದು ಕ್ರೆಡಿಟ್‌ ಕಾರ್ಡ್‌ಗೆ ಒಂದು ಹ್ಯಾಂಡ್‌ಸೆಟ್‌ ಮಾತ್ರ ಎಂಬಂತೆ ಈ ಆಫರ್‌ ಜುಲೈ 31ರವರೆಗೂ ಲಭ್ಯವಿದೆ. ಇದಲ್ಲದೇ ಎಕ್ಸ್‌ಚೆಂಜ್‌ ಅಥವಾ ನೋ-ಕಾಸ್ಟ್ ಇಎಂಐಗೂ ಈ ಆಫರ್‌ ದೊರೆಯುತ್ತದೆ. ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ನಲ್ಲಿ ಕನಿಷ್ಟ 20,000 ರೂ. ಮತ್ತು ಸಿಟಿಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ ಕನಿಷ್ಟ 25,000 ರೂ. ವರ್ಗಾವವಣೆ ಮಾಡಿದರೆ ರಿಯಾಯಿತಿ ಸಿಗುವುದರಿಂದ ಆಫರ್‌ ಸೃಷ್ಟಿಯಾಗಿದೆ, ಅಮೆಜಾನ್‌ ಪೇ ಮೂಲಕವೂ ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ, ಬುಕ್‌ ಮೈ ಶೋ ಮತ್ತು ಜೊಮ್ಯಾಟೋ ವೋಚರ್‌ಗಳನ್ನು ಸಹ ಅಮೆಜಾನ್‌ ಈ ಆಫರ್‌ನಲ್ಲಿ ಸೇರಿಸಿದೆ.

ಒನ್‌ಪ್ಲಸ್‌ 7 ದರ

ಒನ್‌ಪ್ಲಸ್‌ 7 ದರ

ಒನ್‌ಪ್ಲಸ್‌ 7ನಲ್ಲಿ ಎರಡು ಆವೃತ್ತಿಗಳನ್ನು ನಾವು ನೋಡಬಹುದಾಗಿದೆ. 6GB RAM ಮತ್ತು 128GB ಮೆಮೊರಿಯ ಆವೃತ್ತಿ 32,999 ರೂ.ಗೆ ಮಿರರ್ ಗ್ರೇ ಮತ್ತು ಮಿರರ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು, 8GB RAM ಮತ್ತು 128GB ಮೆಮೊರಿಯ ಆವೃತ್ತಿ 37,999 ರೂ.ಗೆ ಮಿರರ್ ಗ್ರೇ ಮತ್ತು ಕೆಂಪು ಬಣ್ಣದಲ್ಲಿ ದೊರೆಯುತ್ತದೆ.

ಒನ್‌ಪ್ಲಸ್‌ 7 ಪ್ರೋ ದರ

ಒನ್‌ಪ್ಲಸ್‌ 7 ಪ್ರೋ ದರ

ಒನ್‌ಪ್ಲಸ್‌ 7 ಪ್ರೋನಲ್ಲಿ ಮೂರು ಆವೃತ್ತಿಗಳು ನಮಗೆ ಕಾಣಸಿಗುತ್ತವೆ. ಆರಂಭಿಕ ಬೆಲೆ 48,999 ರೂ. ಆಗಿದ್ದು, 6GB RAM ಮತ್ತು 128GB ಮೆಮೊರಿಯ ಆವೃತ್ತಿ ಇದಾಗಿದ್ದು, ಮಿರರ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಇನ್ನು, 8GB RAM ಮತ್ತು 256GB ಮೆಮೊರಿಯ ಆವೃತ್ತಿ 52,999 ರೂ.ಗೆ ಮಿರರ್ ಗ್ರೇ ಮತ್ತು ನೆಬುಲಾ ಬ್ಲೂ ಮತ್ತು ಆಲ್ಮಂಡ್‌ ಬಣ್ಣಗಳಲ್ಲಿ ದೊರೆಯುತ್ತದೆ. ಕೊನೆಯದಾಗಿ 12GB RAM ಮತ್ತು 256GB ಮೆಮೊರಿಯ ಸ್ಮಾರ್ಟ್‌ಫೋನ್‌ 57,999 ರೂ.ಗೆ ಲಭ್ಯವಿದ್ದು, ನೆಬುಲಾ ಬ್ಲೂ ವರ್ಣದ ಆಯ್ಕೆಯನ್ನು ಹೊಂದಿದೆ.

Best Mobiles in India

English summary
How to Get Rs. 2000 Instant Discount On The OnePlus 7, and the OnePlus 7 Pro

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X