ನಿಮ್ಮ ಫೋನಿನಲ್ಲಿರುವ ಆಪ್ಸ್‌ ಇತರರಿಗೆ ಕಾಣಿಸದಂತೆ ಮರೆಮಾಡುವುದು ಹೇಗೆ ಗೊತ್ತಾ?

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯ ಸಾಧನ ಆಗಿದೆ. ಬಹುತೇಕ ಪ್ರಮುಖ ಕೆಲಸಗಳು ಫೋನ್‌ ಮೂಲಕವೇ ನಡೆಯುತ್ತವೆ. ಅನೇಕರು ಖಾಸಗಿ ಮಾಹಿತಿ, ಅಗತ್ಯ ದಾಖಲೆಗಳ ಮಾಹಿತಿಯನ್ನು ಫೋನ್‌ನಲ್ಲಿ ಫೋಟೊ ಅಥವಾ ಪಿಡಿಎಫ್‌ ಮಾದರಿಯಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಹಾಗೆಯೇ ಕೆಲವೊಂದು ಆಪ್‌ಗಳನ್ನು ಡೌನ್‌ಲೋಡ್ ಮಾಡುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಫೋನ್ ಬೇರೆಯವರ ಕೈ ಸೇರಿದಾಗ ಮಾಹಿತಿ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು.

ಬೇರೆಯವರ

ಹೌದು, ಫೋನ್‌ ಅನ್ನು ಬೇರೆಯವರ ಕೈಗೆ ನೀಡುವ ಸನ್ನಿವೇಶಗಳಿರುತ್ತವೆ. ಅಂತ ಸಂದರ್ಭಗಳಲ್ಲಿ ನಿಮ್ಮ ಫೋನಿನಲ್ಲಿರುವ ಕೆಲವು ಆಪ್‌ ಮತ್ತು ಫೋಟೊಗಳನ್ನು ಮರೆ ಮಾಡುವುದು ಅಗತ್ಯ ಇರುತ್ತದೆ. ಏಕೆಂದರೆ ಬಳಕೆದಾರರು ತಮ್ಮ ವೈಯಕ್ತಿಕ ಫೋನ್‌ಗಳಲ್ಲಿ ಬ್ಯಾಂಕ್ ಡಾಕ್ಯುಮೆಂಟ್‌ಗಳು ಅಥವಾ ಪಾಸ್‌ವರ್ಡ್‌ಗಳ ಬ್ಯಾಕಪ್‌ನಂತಹ ಸೂಕ್ಷ್ಮ ವಿವರಗಳನ್ನು ಇಟ್ಟುಕೊಳ್ಳುತ್ತಾರೆ. ಇವುಗಳ ರಕ್ಷಣೆಗೆ ಹೈಡ್/ ಮರೆ ಮಾರೆಮಾಡುವುದು ಅಗತ್ಯ ಇರುತ್ತದೆ. ಹಾಗಾದರೇ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಅಥವಾ ಫೋಟೋಗಳನ್ನು ಮರೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬ್ರಾಂಡ್‌ಗಳು

ಬಹುತೇಕ ಮೊಬೈಲ್‌ ಬ್ರಾಂಡ್‌ಗಳು ಅಪ್ಲಿಕೇಶನ್‌ಗಳನ್ನು ಮರೆಮಾಡಲು ಆಯ್ಕೆಯನ್ನು ಬಿಲ್ಟ್‌ಇನ್ ನೀಡಿರುತ್ತವೆ. ಆದ್ದರಿಂದ, ಆಪ್‌ ಮರೆ ಮಾಡಲು ಬಳಕೆದಾರರು ಇತರೆ ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡುವ ಅಥವಾ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬೇರೆ ಬೇರೆ ಕಂಪನಿಯ ಫೋನ್‌ಗಳಲ್ಲಿ ಭಿನ್ನವಾಗಿರುತ್ತದೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಫೋನಿನಲ್ಲಿ:

ಸ್ಯಾಮ್‌ಸಂಗ್ ಫೋನಿನಲ್ಲಿ:

ಸ್ಯಾಮ್‌ಸಂಗ್ ಫೋನಿನಲ್ಲಿ ಅಧಿಕ ಆಯ್ಕೆಗಳನ್ನು ಪ್ರವೇಶಿಸಲು ಬಳಕೆದಾರರು ಹೋಮ್ ಸ್ಕ್ರೀನ್‌ನಲ್ಲಿ ದೀರ್ಘಕಾಲ ಒತ್ತಿದರೆ ಸಾಕು. ಈಗ, 'ಹೋಮ್ ಸ್ಕ್ರೀನ್ ಸೆಟ್ಟಿಂಗ್‌ಗಳು' > ಅಪ್ಲಿಕೇಶನ್‌ಗಳನ್ನು ಮರೆಮಾಡಿ/ ಹೈಡ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ಅಪ್ಲಿಕೇಶನ್‌ಗಳ ಟ್ರೇ ಮತ್ತು ಮೇನ್ ಸ್ಕ್ರೀನ್‌ನಿಂದ ನೀವು ಮರೆಮಾಡಲು ಬಯಸುವ ಅಪ್ಲಿಕೇಶನ್‌ಗಳನ್ನು ಈಗ ನೀವು ಆಯ್ಕೆ ಮಾಡಬಹುದು. ನಿಮ್ಮ ಹಿಡನ್ ಅಪ್ಲಿಕೇಶನ್‌ಗಳ ಪಟ್ಟಿಯಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕಲು ನೀವು ಬಯಸಿದರೆ, ನಿರ್ದಿಷ್ಟ ಅಪ್ಲಿಕೇಶನ್ ಜೊತೆಗೆ ಮೈನಸ್ (-) ಐಕಾನ್ ಅನ್ನು ಟ್ಯಾಪ್ ಮಾಡಿ.

ಒನ್‌ಪ್ಲಸ್‌ ಫೋನಿನಲ್ಲಿ:

ಒನ್‌ಪ್ಲಸ್‌ ಫೋನಿನಲ್ಲಿ:

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಹೊಂದಿರುವವರು ಹಿಡನ್ ಸ್ಪೇಸ್‌ಗೆ ಪ್ರವೇಶಿಸಲು ಬಲಕ್ಕೆ ಸ್ಲೈಡ್ ಮಾಡಬೇಕಾಗುತ್ತದೆ. ಅಥವಾ ಹೋಮ್ ಸ್ಕ್ರೀನ್‌ನಲ್ಲಿ ಎರಡು ಬೆರಳುಗಳಿಂದ ಹೊರಕ್ಕೆ ಸ್ಲೈಡ್ ಮಾಡಿ. ಒಮ್ಮೆ ನೀವು ಅದನ್ನು ಮಾಡಿದರೆ, ಪ್ಲಸ್ (+) ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಕಾಣಿಸುತ್ತವೆ. ನಂತರ ನೀವು ಮರೆಮಾಡಲು ಬಯಸುವ ಆಪ್‌ ಅನ್ನು ಆಯ್ಕೆ ಮಾಡಬಹುದು ಮತ್ತು ಟಿಕ್ ಮಾರ್ಕ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಶಿಯೋಮಿ, ಮಿ, ರೆಡ್ಮಿ ಮತ್ತು ಪೊಕೊ ಫೋನ್‌ಗಳಲ್ಲಿ:

ಶಿಯೋಮಿ, ಮಿ, ರೆಡ್ಮಿ ಮತ್ತು ಪೊಕೊ ಫೋನ್‌ಗಳಲ್ಲಿ:

ಶಿಯೋಮಿ ಫೋನ್‌ ಬಳಕೆದಾರರು ಆಪ್ ಮರೆ ಮಾಡಲು ಫೋನ್ ಸೆಟ್ಟಿಂಗ್‌ ಅನ್ನು ಸ್ವಲ್ಪ ಜಾಲಾಡಬೇಕಿದೆ. ಆಂಡ್ರಾಯ್ಡ್‌ ಫೋನ್‌ನಲ್ಲಿ ಸೆಟ್ಟಿಂಗ್‌ ಗಳ ವಿಭಾಗಕ್ಕೆ ಭೇಟಿ ನೀಡಿ ಮತ್ತು ಅಪ್ಲಿಕೇಶನ್‌ಗಳು > ಅಪ್ಲಿಕೇಶನ್ ಲಾಕ್ ಅನ್ನು ಟ್ಯಾಪ್ ಮಾಡಿ. ಇಲ್ಲಿ, ನೀವು ಹಿಡನ್ ಅಪ್ಲಿಕೇಶನ್‌ಗಳ ಟ್ಯಾಬ್ ಅನ್ನು ಕಾಣಬಹುದು. ನೀವು ಮರೆಮಾಡಲು ಬಯಸುವ ಅಪ್ಲಿಕೇಶನ್‌ಗಳ ಮೇಲೆ ಟ್ಯಾಪ್ ಮಾಡಿದರೆ ಸಾಕು. ಇದಕ್ಕಾಗಿ ನೀವು ಪಾಸ್‌ವರ್ಡ್ ಅನ್ನು ಸಹ ಹೊಂದಿಸಬಹುದು. ನೀವು ಅಪ್ಲಿಕೇಶನ್ ಅನ್ನು ಮರೆಮಾಡಲು ಬಯಸದಿದ್ದರೆ, ಅದೇ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಅದನ್ನು ಪಾಸ್‌ವರ್ಡ್‌ನೊಂದಿಗೆ ಲಾಕ್ ಮಾಡಬಹುದು.

Best Mobiles in India

English summary
How to Hide Application On Android Smartphones: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X