ಫೇಸ್‌ಬುಕ್‌ನಲ್ಲಿ ನಿಮಗೆ ಬಂದಿರುವ ಲೈಕ್ಸ್‌ ನಂಬರ್‌ ಯಾರಿಗೂ ಕಾಣದಂತೆ ಮಾಡುವುದು ಹೇಗೆ?

|

ಪ್ರಸ್ತುತದ ದಿನಗಳಲ್ಲಿ ಏನೆ ನಡೆದರೂ ಅದನ್ನು ಸೊಶೀಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡಿಂಗ್‌ ಆಗಿದೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ನಲ್ಲಿ ಯಾವಾಗಲೂ ಆಕ್ಟಿವ್‌ ಇರುವವರು ತಾವು ಹಂಚಿಕೊಳ್ಳುವ ಫೋಟೋಗಳಗೆ, ವೀಡಿಯೊಗಳಿಗೆ ನಿರೀಕ್ಷಿತ ಲೈಕ್ಸ್‌ ಪಡೆಯದಿದ್ದರೆ ಬೇಸರಿಸಿಕೊಳ್ಳುವುದು ಉಂಟೂ. ಇನ್ನು ಕೆಲವರು ತಮ್ಮ ಪೋಸ್ಟ್‌ಗಳಿಗೆ ಬರುವ ಲೈಕ್ಸ್‌ ಮತ್ತು ಕಾಮೆಂಟ್‌ ಅನ್ನು ಯಾರಿಗೂ ಕಾಣದಂತೆ ಹೈಡ್‌ ಮಾಡುವುದಕ್ಕೆ ಬಯಸುತ್ತಾರೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಪೋಸ್ಟ್‌ಮಾಡಿದ ಫೋಟೋ ಅಥವಾ ವೀಡಿಯೋಗಳಿಗೆ ಬರುವ ಲೈಕ್ಸ್‌ಗಳನ್ನು ಬೇರೆಯವರು ನೋಡದಂತೆ ಮರೆಮಾಡುವುದಕ್ಕೆ ಅವಕಾಶವಿದೆ. ಕೆಲವೊಮ್ಮೆ ಲೈಕ್ಸ್‌ ಬಾರದೇ ಹೋದರೆ ಕೆಲವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದೇ ಕಾರಣಕ್ಕೆ ಲೈಕ್ಸ್‌ ಹೈಡ್‌ ಮಾಡುವ ಅವಕಾಶವಿದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ. ನಕರಾತ್ಮಕ ಯೋಚನೆಗಳನ್ನು ನಿಲ್ಲಿಸಬಹುದಾಗಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಮತ್ತು ಪೇಸ್‌ಬುಕ್‌ನಲ್ಲಿ ಲೈಕ್ಸ್‌ಗಳನ್ನು ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌ನಲ್ಲಿ ಲೈಕ್ಸ್‌ಗಳನ್ನು ಮರೆಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಲೈಕ್ಸ್‌ಗಳನ್ನು ಮರೆಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ, ನಿಮ್ಮ ಪೋಸ್ಟ್‌ಗೆ ಬಂದಿರುವ ಲೈಕ್ಸ್‌ ನಂಬರ್‌ ಅನ್ನು ಮರೆಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ಫೇಸ್‌ಬುಕ್ ಆಪ್‌ಗೆ ಹೋಗಿ.

ಹಂತ 2: ಕೆಳಭಾಗದಲ್ಲಿರುವ ಹ್ಯಾಂಬರ್ಗರ್ ಮೆನು ಆಯ್ಕೆಯನ್ನು ಆರಿಸಿ.

ಹಂತ 3: ಈಗ, ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಆಯ್ಕೆಯನ್ನು ನೋಡಲು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಆಯ್ಕೆ ಮಾಡಿ.

ಹಂತ 4: ನಂತರ, ಸೆಟ್ಟಿಂಗ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 5: ಈಗ, ನ್ಯೂಸ್ ಫೀಡ್ ಪ್ರಾಶಸ್ತ್ಯದ ಅಡಿಯಲ್ಲಿ ರಿಯಾಕ್ಷನ್ ಪ್ರಾಶಸ್ತ್ಯಗಳ ಆಯ್ಕೆಯನ್ನು ನೀವು ಕಂಡುಕೊಳ್ಳುವವರೆಗೆ ಸ್ಕ್ರಾಲ್ ಮಾಡಿ.

ಹಂತ 6: ಇಲ್ಲಿ ನೀವು ಎರಡು ಆಯ್ಕೆಗಳನ್ನು ಕಾಣಬಹುದು: ಇತರರ ಲೈಕ್ಸ್‌ಗಳನ್ನು ಮರೆಮಾಡುವ ಆಯ್ಕೆ ಮತ್ತು ನಿಮ್ಮ ಪೋಸ್ಟ್‌ಗಳಲ್ಲಿ ಲೈಕ್ಸ್‌ಗಳನ್ನು ಮರೆಮಾಡುವ ಆಯ್ಕೆ. ನಿಮಗೆ ಬೇಕಾದುದನ್ನು ಆರಿಸಬಹುದಾಗಿದೆ.

ಇದರಿಂದ ನೀವು ಎಲ್ಲಾ ರೀತಿಯ ಸೊಶೀಯಲ್‌ ಮೀಡಿಯಾ ಒತ್ತಡದಿಂದ ನೀವು ಹಗುರವಾಗಿರುವ ಸಾಧ್ಯತೆಯಿದೆ. ಇದು ಲೈಕ್ಸ್‌ ನಂಬರ್‌ಗಳು ಬಂದಿಲ್ಲ ಎಂದು ಚಿಂತಿಸುವುದನ್ನು ಮರೆ ಮಾಡಲಿದೆ. ಲೈಕ್ಸ್‌ಗಳು ಬಂದಿಲ್ಲ ಎಂದು ನಕರಾತ್ಮಕವಾಗಿ ಚಿಂತಿಸುವವರು ಈ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Instagram ನಲ್ಲಿ ಲೈಕ್ಸ್‌ಗಳನ್ನು ಮರೆಮಾಡುವುದು ಹೇಗೆ?

Instagram ನಲ್ಲಿ ಲೈಕ್ಸ್‌ಗಳನ್ನು ಮರೆಮಾಡುವುದು ಹೇಗೆ?

ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿಯೂ ಕೂಡ ಹೆಚ್ಚಿನ ಜನರು ಲೈಕ್ಸ್‌ ಮತ್ತು ಕಾಮೆಂಟ್‌ಗಳನ್ನು ಆಗಾ ಚೆಕ್‌ ಮಾಡುತ್ತಾರೆ. ಹೆಚ್ಚಿನ ಲೈಕ್ಸ್‌ ಮಾಡದೇ ಇದ್ದಾಗ, ಕಾಮೆಂಟ್‌ ಮಾಡದೇ ಇದ್ದಾಗ ಬಹುವಾಗಿ ಚಿಂತಿಸವವರು ಕೂಡ ಇದ್ದಾರೆ. ಹಾಗೊಂದು ವೇಳೆ ನಿಮಗೆ ಬರುವ ಲೈಕ್ಸ್‌ ಮತ್ತು ಕಾಮೆಂಟ್‌ ನಂಬರ್ ಕಡಿಮೆ ಎನಿಸಿದರೆ ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಲೈಕ್ಸ್‌ ಕೌಂಟ್‌ ಅನ್ನು ಹೈಡ್‌ ಮಾಡಿರಿ.ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: Instagram ಅಪ್ಲಿಕೇಶನ್ ತೆರೆಯಿರಿ.

ಹಂತ 2: ನಿಮ್ಮ ಪ್ರೊಫೈಲ್ ವಿಭಾಗಕ್ಕೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನುವನ್ನು ಟ್ಯಾಪ್ ಮಾಡಿ.

ಹಂತ 3: ಸೆಟ್ಟಿಂಗ್ಸ್ ಆಯ್ಕೆಯನ್ನು ಆರಿಸಿ ಮತ್ತು ನಂತರ ಪ್ರೈವೆಸಿ ಆಯ್ಕೆಯನ್ನು ಆರಿಸಿ.

ಹಂತ 4: ಇಲ್ಲಿ ನೀವು ಪೋಸ್ಟ್‌ಗಳ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಟ್ಯಾಪ್ ಮಾಡಿ

ಹಂತ 5: 'ಲೈಕ್ ಮತ್ತು ವೀಕ್ಷಣೆ ಸಂಖ್ಯೆಗಳನ್ನು ಮರೆಮಾಡಿ

ಹಳೆಯ ಪೋಸ್ಟ್‌ನಿಂದ ಲೈಕ್ಸ್‌ಗಳನ್ನು ಮರೆಮಾಡಲು ಏನು ಮಾಡಬೇಕು?

ಹಳೆಯ ಪೋಸ್ಟ್‌ನಿಂದ ಲೈಕ್ಸ್‌ಗಳನ್ನು ಮರೆಮಾಡಲು ಏನು ಮಾಡಬೇಕು?

ಹಂತ 1: ಒಂದು ಪೋಸ್ಟ್‌ನಲ್ಲಿ ಮೂರು ಚುಕ್ಕೆಗಳ ಆಯ್ಕೆಯನ್ನು ಆರಿಸಿ.

ಹಂತ 2: ಈಗ, ನೀವು ಲೈಕ್ ಕೌಂಟ್ ಆಯ್ಕೆಯನ್ನು ಮರೆಮಾಡಿ. ಅದರ ಮೇಲೆ ಟ್ಯಾಪ್ ಮಾಡಿ. ಹೈಡ್‌ ಲೈಕ್ಸ್‌ಗಳನ್ನು ಮತ್ತೆ ನೋಡಲು ಅನ್‌ಹೈಡ್ ಲೈಕ್ ಕೌಂಟ್ ಆಯ್ಕೆಯನ್ನು ಆರಿಸಿ.

Best Mobiles in India

English summary
Worrying about like counts quite often? You can now easily hide them on Facebook and Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X