ಕೋವಿಡ್ ವೆರಿಫೈಡ್ ಮೂಲಕ COVID-19 ಸಂಬಂಧಿತ ಟ್ವೀಟ್‌ಗಳನ್ನು ಪರಿಶೀಲಿಸುವುದು ಹೇಗೆ?

|

ಪ್ರಸ್ತುತ ಇಡೀ ದೇಶವೇ ಕೋವಿಡ್‌ ಎರಡನೇ ಅಲೆಯ ಆರ್ಭಟಕ್ಕೆ ನಲುಗಿ ಹೋಗ್ತಿದೆ. ಇದೇ ಕಾರಣಕ್ಕೆ ಅನೇಕ ರಾಜ್ಯಗಳು ಲಾಕ್‌ಡೌನ್‌ ಕೂಡ ಘೋಷಿಸಿವೆ. ಇದರ ನಡುವೆ ಸೋಶೀಯಲ್‌ ಮೀಡಿಯಾಗಳಲ್ಲಿ ಕೋವಿಡ್‌ ಕುರಿತು ಅನೇಕ ಮಾಹಿತಿಗಳು ಶೇರ್‌ ಆಗುತ್ತಿವೆ. ಇನ್ನು ಜನಪ್ರಿಯ ಸೊಶೀಯಲ್‌ ಮೀಡಿಯಾದಲ್ಲಿ ಒಂದಾದ ಟ್ವೀಟರ್‌ ನಲ್ಲಿ ಕೂಡ ಕೋವಿಡ್‌ ಕುರಿತ ಹಲವು ವಿಚಾರಗಳು ಶೇರ್‌ ಆಗುತ್ತಿವೆ.

ಟ್ವೀಟರ್‌

ಹೌದು, ಟ್ವೀಟರ್‌ನಲ್ಲಿಯೂ ಸಹ COVID-19 ಸಂಬಂಧಿತ ಮಾಹಿತಿಯನ್ನು ಅನೇಕರು ಟ್ವೀಟ್‌ ಮಾಡುತ್ತಿದ್ದಾರೆ. ಇದರಲ್ಲಿ ಆಕ್ಸಿಜನ್‌ ಪೂರೈಕೆ, ಔಷಧಿ, ಹಾಸ್ಪಿಟಲ್‌ ಬೆಡ್ಸ್‌ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಅದರಲ್ಲೂ COVID-19 ಗೆ ಬಂದಾಗ ಪರಿಶೀಲಿಸಿದ ಮಾಹಿತಿಯ ಅವಶ್ಯಕತೆಯಿದೆ. ಇದರಲ್ಲಿ ಕೋವಿಡ್‌ಗೆ ಸಂಬಂಧಿಸಿದ ಟ್ವೀಟ್‌ಗಳಲ್ಲಿ ಯಾವುದು ಅವಧಿ ಮೀರಿದೆ, ಇದರಲ್ಲಿ ಯಾವ ಮಾಹಿತಿ ಸಹಾಯವಾಗಲಿದೆ ಎಂಬುದನ್ನು ತಿಳಿಯುವುದಕ್ಕಾಗಿಯೇ ಟ್ವೀಟರ್‌ನಲ್ಲಿ CovidVerified ಕ್ರೌಡ್‌ ಸೋರ್ಸ್ಡ್‌ ಡಿವೈಸ್‌ ಉಪಯುಕ್ತವಾಗಲಿದೆ. ಹಾಗಾದ್ರೆ ಕೋವಿಡ್‌ ವೆರಿಫೈಡ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋವಿಡ್ ವೆರಿಫೈಡ್ ಎಂದರೇನು?

ಕೋವಿಡ್ ವೆರಿಫೈಡ್ ಎಂದರೇನು?

CovidVerified ಎನ್ನುವುದು ಹೊಸ ಕ್ರೌಡ್‌ಸೋರ್ಸ್ಡ್ ಡಿವೈಸ್‌ ಆಗಿದೆ. ಇದು COVID-19 ಸಂಬಂಧಿತ ಟ್ವೀಟ್‌ಗಳನ್ನು ಪರಿಶೀಲಿಸಲಿದೆ. ಇದರಲ್ಲಿ ಯಾವುದು ಅವಧಿ ಮೀರಿದೆ ಎಂದು ಗುರುತಿಸುತ್ತದೆ. ಈ ಡಿವೈಸ್‌ನ ಉಪಯುಕ್ತತೆಯ ಬಗ್ಗೆ ಶಿಖರ್ ಸಕ್ಸೇನಾ ಎಂಬುವವರು ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ಗಳ ಪರಿಶೀಲಿಸಿದ ಮಾಹಿತಿಗಾಗಿ ಬಹಳಷ್ಟು ಜನರು ಟ್ವಿಟ್ಟರ್ ಅನ್ನು ಕೇಳುತ್ತಿದ್ದಾರೆ. ಇದು ಅಂತರವನ್ನು ಪರಿಹರಿಸುವ ನಮ್ಮ ಪ್ರಯತ್ನ ಎಂದು ಸಕ್ಸೇನಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೋವಿಡ್ ವೆರಿಫೈಡ್ ಹೇಗೆ ಕೆಲಸ ಮಾಡುತ್ತದೆ?

ಕೋವಿಡ್ ವೆರಿಫೈಡ್ ಹೇಗೆ ಕೆಲಸ ಮಾಡುತ್ತದೆ?

ಪ್ರತಿ ಟ್ವೀಟ್ ಅನ್ನು ಅದರ ನಿಖರತೆ ಮತ್ತು ಟೈಮ್‌ಲೈನ್ ಬಗ್ಗೆ ಗುರುತಿಸುವುದು ಕಷ್ಟಕರವಾದ ಕೆಲಸ. ಆದಾಗ್ಯೂ, ಕೋವಿಡ್ ವೆರಿಫೈಡ್ ಡಿವೈಸ್‌ ಟ್ವೀಟ್‌ನ ನಿಖರತೆ ಮತ್ತು ಟೈಮ್‌ಲೈನ್‌ ಅವದಿಯ ಸಂಪೂರ್ಣ ಪ್ರಕ್ರಿಯೆಯನ್ನು ಸರಳೀಕರಿಸಿದೆ. ಕೋವಿಡ್ ವೆರಿಫೈಡ್ ಮೊದಲನೆಯದಾಗಿ, ಕೆಲವು ನಗರಗಳಿಗೆ ಕರೋನವೈರಸ್ ಮತ್ತು COVID-19 ಗೆ ಸಂಬಂಧಿಸಿದ ಕೀವರ್ಡ್‌ಗಳೊಂದಿಗೆ ಇತ್ತೀಚಿನ ಟ್ವೀಟ್‌ಗಳನ್ನು ಪಡೆಯಲು ಟ್ವಿಟರ್ API ಅನ್ನು ಬಳಸುತ್ತದೆ.

ವೆಬ್‌ಸೈಟ್‌

ಇದಲ್ಲದೆ ವೆಬ್‌ಸೈಟ್‌ನಿಂದ ನೇರವಾಗಿ ಪರಿಶೀಲಿಸಿದ ಅಥವಾ ಅವಧಿ ಮೀರಿದ ಯಾವುದೇ ಟ್ವೀಟ್‌ಗಳನ್ನು ಇದರ ಮೂಳಕ ಗುರುತಿಸಬಹುದು. ಈ ಡಿವೈಸ್‌ನ ಮೂಲಕ ಕಳೆದ 24 ಗಂಟೆಗಳ ಹೆಚ್ಚಿನ ಪರಿಶೀಲನೆಗಳನ್ನು ಹೊಂದಿರುವ ಟ್ವೀಟ್‌ಗಳು ಎಲ್ಲಾ ಸಮಯದಲ್ಲೂ ಮೇಲ್ಭಾಗದಲ್ಲಿ ತೋರಿಸುತ್ತವೆ. ಅವಧಿ ಮೀರಿದ ಟ್ವೀಟ್‌ಗಳನ್ನು ನೋಡಿ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ, ಸಂಬಂಧಿತ ಮತ್ತು ಪರಿಶೀಲಿಸಿದ ಮಾಹಿತಿಯ ಟ್ವೀಟ್‌ಗಳನ್ನು ನೋಡುವುದಕ್ಕೆ ಇದು ಜನರಿಗೆ ಸಹಾಯ ಮಾಡುತ್ತದೆ.

ಕೋವಿಡ್ ವೆರಿಫೈಡ್ ಅನ್ನು ನೀವು ಹೇಗೆ ಬಳಸಬಹುದು?

ಕೋವಿಡ್ ವೆರಿಫೈಡ್ ಅನ್ನು ನೀವು ಹೇಗೆ ಬಳಸಬಹುದು?

ಟ್ವಿಟರ್ ನಲ್ಲಿ ಕೋವಿಡ್‌ ಗೆ ಸಂಬಂಧಿಸಿದಂತೆ ಯಾರಾದರೂ ಸಹಾಯ ಕೇಳಿದರೆ ಅಥವಾ ನೀವು ಸಹಾಯ ಬಯಸಿದರೆ ಟ್ವೀಟರ್‌ನಲ್ಲಿ ಸಹಾಯವಾಗಲಿದೆ. ಕೋವಿಡ್‌ ವೆರಿಫೈಡ್‌ ಮೂಲಕ ತುರ್ತು ಮಾಹಿತಿ ಪಡದುಕೊಂಡು ಸಹಾಯ ಪಡೆದುಕೊಳ್ಳಬಹುದಾಗಿದೆ. ನೀವು ವಾಸಿಸುವ ನಗರದಲ್ಲಿ ಸಹಾಯ ಪಡೆದುಕೊಳ್ಳುವ ಟ್ವೀಟ್‌ಗಳನ್ನು ವಿಂಗಡಿಸಲು ಇದು ಸಾಕಷ್ಟು ಸಹಾಯಕವಾಗಲಿದೆ. ಹಾಗಾದ್ರೆ CovidVerified ಅನ್ನು ಬಳಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಹಂತ 1: covidverified.in ತೆರೆಯಿರಿ; ನಿಮ್ಮ ನಗರ ಮತ್ತು ಆಕ್ಸಿಜನ್‌, ಬೆಡ್‌ ಅಥವಾ ಪ್ಲಾಸ್ಮಾದಂತಹ ಸಂಪನ್ಮೂಲವನ್ನು ಆಯ್ಕೆಮಾಡಿ.
ಹಂತ 2: ಸರ್ಚ್‌ ಅನ್ನು ಆರಿಸಿ ಮತ್ತು ಹೆಚ್ಚು ಪ್ರಸ್ತುತವಾದ ಮತ್ತು ಪರಿಶೀಲಿಸಿದ ಟ್ವೀಟ್‌ಗಳ ಲಿಸ್ಟ್‌ ಚಾರ್ಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ.

ಇದಲ್ಲದೆ, ಕೋವಿಡ್ ವೆರಿಫೈಡ್ ಪರಿಶೀಲಿಸಿದ ಮತ್ತು ಅವಧಿ ಮೀರಿದ ಸಂಖ್ಯೆಗಳನ್ನು ಹೈಲೈಟ್ ಮಾಡುತ್ತದೆ. ಅಂತಿಮವಾಗಿ ಬಳಕೆದಾರರಿಗೆ ಅದರ ನಿಖರತೆಯ ಕಲ್ಪನೆಯನ್ನು ನೀಡುತ್ತದೆ. ಜೊತೆಗೆ, ಯಾರಾದರೂ ಇದನ್ನು ಪರಿಶೀಲಿಸಿದ ಅಥವಾ ಅವಧಿ ಮೀರಿದೆ ಎಂದು ಗುರುತಿಸಬಹುದು, ಇದು ಪರಿಶೀಲಿಸಿದ ಮಾಹಿತಿಯ ಎಳೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ.

Best Mobiles in India

English summary
how to identify verfied COVID-19 related tweets using Covidverified.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X