Subscribe to Gizbot

ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್

Written By:

ಇಂಟರ್ನೆಟ್ ಯುಗದಲ್ಲಿ ಈ ಸೌಲಭ್ಯ ನಿಮಗೆ ಎಲ್ಲಾ ಕಡೆಯೂ ಲಭ್ಯವಾಗಿರಲಿ ಎಂಬ ಆಶಯವನ್ನು ನೀವು ಹೊಂದಿರುತ್ತೀರಿ ಅಲ್ಲವೇ? ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕೆಫೆ ಕ್ಯಾಫಿಟೇರಿಯಾ, ಗ್ರಂಥಾಲಯ ಹೀಗೆ ನೀವು ಹೋದ ಕಡೆಯಲ್ಲೆಲ್ಲಾ ವೈಫೈ ತಂತ್ರಜ್ಞಾನ ನಿಮಗೆ ದೊರೆಯಬೇಕೆಂಬ ಸದುದ್ದೇಶವನ್ನು ನೀವು ಹೊಂದಿರುತ್ತೀರಿ ಅಲ್ಲವೇ? ಅದಕ್ಕೆಂದೇ ಮನೆಗಳಲ್ಲೂ ಈ ಸೌಲಭ್ಯ ಈಗ ಹೆಚ್ಚು ಜನಜನಿತವಾಗುತ್ತಿದೆ. ಮನೆಯಲ್ಲಿ ಈ ವ್ಯವಸ್ಥೆ ಇದ್ದರೂ ನೀವು ಕೆಲವೊಮ್ಮೆ ಕೆಲವೊಂದು ಸಿಗ್ನಲ್‌ಗಳ ಸಮಸ್ಯೆಯನ್ನು ಎದುರಿಸುತ್ತಿದ್ದಿರಬಹುದು ಸುಧಾರಿಸಿ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಮನೆಯ ವೈಫೈ ವ್ಯವಸ್ಥೆಯನ್ನು ಸರಾಗಗೊಳಿಸುವ ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದು ಅವುಗಳ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐದು ಫೀಟ್ ಅಂತರ

#1

ನಿಮ್ಮ ವೈಫೈ ರೂಟರ್ ಐದು ಫೀಟ್ ಅಂತರದಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಂದರೆ ಟೇಬಲ್ ಅಥವಾ ಬುಕ್ ಶೆಲ್ಫ್ ಮೇಲೆ ಅದು ಇದೆ ಎಂಬುದನ್ನು ಗಮನಿಸಿಕೊಳ್ಳಿ.

ರೂಟರ್

#2

ನಿಮ್ಮ ಮನೆಯ ಮಧ್ಯಭಾಗದಲ್ಲಿ ರೂಟರ್ ಇರುವಂತೆ ನೋಡಿಕೊಳ್ಳಿ. ರೂಟರ್ ಎಲ್ಲಾ ದಿಕ್ಕುಗಳಿಗೂ ಸಿಗ್ನಲ್‌ಗಳನ್ನು ಕಳುಹಿಸುವುದರಿಂದ ಅದನ್ನು ಆದಷ್ಟು ಮಧ್ಯಭಾಗದಲ್ಲಿರಿಸಿಕೊಳ್ಳಿ.

ಹೆಚ್ಚು ಬಳಸುತ್ತಿರುವ ಕಡೆ

#3

ರೂಟರ್ ನೀವು ವೈಫೈ ಅನ್ನು ಹೆಚ್ಚು ಬಳಸುತ್ತಿರುವ ಸ್ಥಳದಲ್ಲಿ ವೈಫೈ ಅನ್ನು ಇರಿಸಿಕೊಳ್ಳಿ.

ತೆರೆದ ಸ್ಥಳ

#4

ರೂಟರ್ ಅನ್ನು ಆದಷ್ಟು ತೆರೆದ ಸ್ಥಳದಲ್ಲಿ ಇರಿಸಿಕೊಳ್ಳಿ. ಕರ್ಟನ್ಸ್, ಕಪ್ ಬೋರ್ಡ್ಸ್, ಅಥವಾ ಇತರ ಯಾವುದೇ ವಸ್ತುಗಳು ಅದಕ್ಕೆ ಅಡಚಣೆಯನ್ನುಂಟು ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇಲೆಕ್ಟ್ರಾನಿಕ್ ಡಿವೈಸ್‌

#5

ನಿಮ್ಮ ರೂಟರ್ ಸಿಗ್ನಲ್‌ಗಳಿಗೆ ಇತರ ಇಲೆಕ್ಟ್ರಾನಿಕ್ ಡಿವೈಸ್‌ಗಳು ಅಡಚಣೆಯನ್ನುಂಟು ಮಾಡಬಹುದು. ಆದ್ದರಿಂದ ಹೆಚ್ಚು ಕಾಳಜಿ ಇರಲಿ.

ಆಂಟೆನಾ ಪೊಸಿಶನ್

#6

ರೂಟರ್ ಆಂಟೆನಾವನ್ನು ವರ್ಟಿಕಲ್ ಮತ್ತೊಂದನ್ನು ಹಾರಿಜಾಂಟಲ್ ಪ್ರಕಾರವಾಗಿ ಇರಿಸುವುದು ಸಿಗ್ನಲ್‌ಗಳ ಹರಡುವಿಕೆಗೆ ಸಹಾಯ ಮಾಡಲಿದೆ.

ವೈಫೈ ಅನಾಲಿಟಿಕ್ಸ್ ಅಪ್ಲಿಕೇಶನ್‌

#7

ವೈಫೈ ಅನಾಲಿಟಿಕ್ಸ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವೈಫೈ ಸಿಗ್ನಲ್ ಬಲವನ್ನು ಅಳತೆ ಮಾಡಿಕೊಳ್ಳಿ. ಇದು ನಿಮ್ಮ ರೂಟರ್‌ನ ಉತ್ತಮ ಪೊಸಿಶನ್‌ಗೆ ಸಹಕಾರಿ ಎಂದೆನಿಸಲಿದೆ.

ಸ್ಪೀಡ್ ಟೆಸ್ಟ್

#8

ಇಂಟರ್ನೆಟ್ ಪ್ರೊವೈಡರ್ ಬಗ್ಗೆ ಹೆಚ್ಚುವರಿ ನಿಗಾ ಇರಿಸಿಕೊಳ್ಳಿ. ಸ್ಪೀಡ್ ಟೆಸ್ಟ್ ಅನ್ನು ಮಾಡಿ ಇದನ್ನು ಅರಿಯಿರಿ.

ಉತ್ತಮ ಭದ್ರತೆ

#9

ಉತ್ತಮ ಭದ್ರತೆಯನ್ನು ನಿಮ್ಮ ವೈಫೈ ಸಂಪರ್ಕಕ್ಕೆ ಇರಿಸಿಕೊಳ್ಳಿ. ನಿಮ್ಮ ವೈಫೈ ಕದಿಯುವವರ ಮೇಲೆ ಹೆಚ್ಚಿನ ನಿಗಾ ಇರಲಿ.

ಇಂಟರ್ನೆಟ್ ನಿಧಾನ

#10

ಟೊರೆಂಟ್ ಫೈಲ್ಸ್, ವೀಡಿಯೊ ಚಾಟ್, ಆನ್‌ಲೈನ್ ವೀಡಿಯೊ ಗೇಮ್ಸ್‌ಗಳನ್ನು ನೀವು ಹೆಚ್ಚು ಆಡುತ್ತಿದ್ದೀರಿ ಎಂದಾದಲ್ಲಿ ಇಂಟರ್ನೆಟ್ ನಿಧಾನಕ್ಕೆ ಇದು ಕಾರಣವಾಗಿರುತ್ತದೆ. ಕ್ಯುಒಎಸ್‌ನಂತಹ ಸೇವೆಗಳನ್ನು ಬಳಸಿಕೊಂಡು ಇವುಗಳ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಬಹುದಾಗಿದೆ.

ರೂಟರ್ ಸ್ವಿಚ್ ಆಫ್

#11

ದಿನಕ್ಕೆ ಒಂದು ಬಾರಿಯಾದರೂ ಸ್ವಯಂಚಾಲಿತವಾಗಿ ರೂಟರ್ ರೀಬೂಟ್ ಮಾಡಿಕೊಳ್ಳಿ. ನಿದ್ದೆ ಹೋಗುವ ಸಮಯದಲ್ಲಿ ರೂಟರ್ ಸ್ವಿಚ್ ಆಫ್ ಮಾಡಿಟ್ಟುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you how to tips on home wifi facility. These tips are helpful to each and every wifi user to improve their home wifi facility.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot