ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಸುರಕ್ಷಿತವಾಗಿರಿಸುವುದು ಹೇಗೆ ಗೊತ್ತಾ?

|

ವಿಶ್ವದ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್ ಕೂಡ ಒಂದಾಗಿದೆ. ಜಾಗತಿಕವಾಗಿ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಸೊಶೀಯಲ್‌ ಮಿಡಿಯಾ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಸುಮಾರು 1.73 ಬಿಲಿಯನ್ ಜನರು ಫೇಸ್‌ಬುಕ್‌ ಅನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ನಿಮಗೆಲ್ಲಾ ತಿಳಿದಿರುವ ಹಾಗೇ ಫೇಸ್‌ಬುಕ್‌ ಮೂಲಕ ನಿಮ್ಮ ಸ್ನೇಹಿತರು, ಪರಿಚಿತರು, ಹಾಗೂ ಇತರೆ ಸಾರ್ವಜನಿಕರ ಜೊತೆಗೆ ಸಂಪರ್ಕ ಸಾಧಿಸಬಹುದಾಗಿದೆ. ಇಷ್ಟೆಲ್ಲಾ ಇದ್ದರೂ ಸಹ ಫೇಸ್‌ಬುಕ್‌ನಲ್ಲಿಯೂ ಸಹ ಫ್ರೈವಸಿ ಅನ್ನೊದು ಬಹುಮುಖ್ಯವಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಕೂಡ ತನ್ನ ಬಳಕೆದಾರರಿಗೆ ಪ್ರೈವೆಸಿ ಕಾಪಾಡಲು ಹಲವು ಅವಕಾಶಗಳನ್ನ ನೀಡಿದೆ. ಹೊಸ ಜನರೊಂದಿಗೆ ಸಂವಹನ ನಡೆಸಲು ಅವಕಾಶವನ್ನ ನೀಡುವ ಪೇಸ್‌ಬುಕ್‌ ಮತ್ತೊಂದೆಡೆ ತ್ನನ ಬಳಕೆದಾರರ ಸುರಕ್ಷತೆಗೂ ಹೆಚ್ಚಿನ ಅದ್ಯತೆ ನೀಡುತ್ತಿದೆ. ಅದರಲ್ಲೂ ಕೆಲವರಿಗೆ ಪೇಸ್‌ಬುಕ್‌ನಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಸೇಪ್‌ ಮಾಡುವುದು ಹೇಗೆ ಅನ್ನೊದು ತಿಳಿದೆ ಇಲ್ಲ. ಅದರಲ್ಲೂ ತನ್ನ ಪ್ರೊಪೈಲ್‌ ಅನ್ನು ಹೇಗೆ ಸುರಕ್ಷಿತವಾಗಿಡಬೇಕೆಂಬ ಗೊಮದಲ ಇದೆ. ಆದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನಾವಿಂದು ಈ ಲೇಖನದಲ್ಲಿ ನಿಮ್‌ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಸುರಕ್ಷಿತವಾಗಿಡುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತಿವಿ ಓದಿರಿ.

Lock your Profile

Lock your Profile

ಸದ್ಯ ಫೇಸ್‌ಬುಕ್‌ನಲ್ಲಿ ಲಬ್ಯವಿರುವ ಈ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ಗಳನ್ನು ಲಾಕ್ ಮಾಡಲು ಮತ್ತು ಅವರ ಫೋಟೋಗಳು, ಟೈಮ್‌ಲೈನ್‌ಗಳು ಮತ್ತು ಪೋಸ್ಟ್‌ಗಳಿಗೆ ಇತರರ ಪ್ರವೇಶವನ್ನು ನಿರ್ಬಂಧಿಸಲು ಅನುಮತಿಸುತ್ತದೆ. ಜನರು ತಮ್ಮ ಫೇಸ್‌ಬುಕ್ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪೇಸ್‌ಬುಕ್‌ ಹೇಳಿದೆ.ಇದನ್ನ ನೀವು ನಿರ್ವಹಿಸುವುದು ಹೇಗೆ ಅಂದರೆ, ನಿಮ್ಮ ಪ್ರೊಫೈಲ್‌ನಿಂದ, tap More under your name> ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿ> ಖಚಿತಪಡಿಸಲು ನಿಮ್ಮ ಪ್ರೊಫೈಲ್ ಅನ್ನು ಮತ್ತೆ ಲಾಕ್ ಮಾಡಿ ಟ್ಯಾಪ್ ಮಾಡಿ. ಈ ಫೀಚರ್ಸ್‌ ಆಂಡ್ರಾಯ್ಡ್‌ ಡಿವೈಸ್‌ನಲ್ಲಿರುವ ಫೇಸ್‌ಬುಕ್‌ನಲ್ಲಿ ಮತ್ತು ಆಂಡ್ರಾಯ್ಡ್‌ ಡಿವೈಸ್‌ ಫೇಸ್‌ಬುಕ್ ಲೈಟ್‌ನಲ್ಲಿ ಮಾತ್ರ ಲಭ್ಯವಿದೆ.

Safety notices in Messenger

Safety notices in Messenger

ಇನ್ನು ಫೇಸ್‌ಬುಕ್ ಈ ವರ್ಷದ ಆರಂಭದಲ್ಲಿ ಮೆಸೆಂಜರ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿತ್ತು. ಇದು ಮೆಸೆಂಜರ್‌ ಚಾಟ್‌ಗಳಲ್ಲಿ ಸುರಕ್ಷತಾ ಪ್ರಕಟಣೆಗಳನ್ನು ಪ್ರಕಟಿಸುವ ಮೂಲಕ ಹಾನಿಕಾರಕ ಸಂದೇಶಗಳನ್ನು ತಪ್ಪಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಈ ಪಾಪ್ ಅಪ್‌ಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಲು ಬಳಕೆದಾರರಿಗೆ ಸಲಹೆಗಳನ್ನು ನೀಡುತ್ತವೆ.

Off Facebook Activity

Off Facebook Activity

ಇನ್ನು ಈ ಫೀಚರ್ಸ್ ಫೇಸ್‌ಬುಕ್‌ ಬಳಕೆದಾರರ ಸಂವಹನಗಳ ಬಗ್ಗೆ ಬ್ಯುಸಿನೆಸ್‌ ಮತ್ತು ಸಂಸ್ಥೆಗಳು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ಚಟುವಟಿಕೆಯ ಸಾರಾಂಶವನ್ನು ಬಳಕೆದಾರರಿಗೆ ನೀಡುತ್ತದೆ. ಈ ಮಾಹಿತಿಯನ್ನು ಬಳಕೆದಾರರಿಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು, ಹಾಗೂ ಅವರು ಆಸಕ್ತಿ ಹೊಂದಿರುವ ಗುಂಪುಗಳು ಮತ್ತು ಈವೆಂಟ್‌ಗಳನ್ನು ಸೂಚಿಸಲು ಬಳಸಲಾಗುತ್ತದೆ. ಇನ್ನು ಬಳಕೆದಾರರು ತಮ್ಮ ಆಫ್-ಫೇಸ್‌ಬುಕ್ ಚಟುವಟಿಕೆಯನ್ನು ಹೇಗೆ ನಿರ್ವಹಿಸಬಹುದು ಅಂದರೆ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ> ಸೆಟ್ಟಿಂಗ್‌ಗಳು> scroll down to Your Facebook Information and click on Off-Facebook Activity > click on Manage your off-Facebook Activity > enter your password > tap on Clear History option.

Manage your Activity

Manage your Activity

ಈ ಫೀಚರ್ಸ್‌ ಬಳಕೆದಾರರಿಗೆ ಹಳೆಯ ಪೋಸ್ಟ್‌ಗಳನ್ನು ಆರ್ಕೈವ್ ಮಾಡಲು ಅಥವಾ ಅನುಪಯುಕ್ತಗೊಳಿಸಲು ಅನುಮತಿಸುತ್ತದೆ. ಆರ್ಕೈವ್ ಮೂಲಕ ಹಳೆಯ ಪೋಸ್ಟ್‌ ಅನ್ನು ಯಾರು ನೋಡದಂತೆ ತಡೆಯಲು ಬಳಸಲಾಗುತ್ತದೆ.

Best Mobiles in India

English summary
Facebook's Lock your Profile feature is available only on Facebook for Android and Facebook Lite for Android. iPhone users can’t access this feature yet.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X