ಪಾಸ್‌ವರ್ಡ್‌ಗಳನ್ನು ಹೆಚ್ಚು ಸುರಕ್ಷಿತವಾಗಿಸುವುದು ಹೇಗೆ..? ಗೂಗಲ್‌ನಿಂದ ಹೊಸ ಫೀಚರ್‌..!

By Gizbot Bureau
|

ಈ ವರ್ಷಾರಂಭದಲ್ಲಿ, ಗೂಗಲ್ ಕ್ರೋಮ್ ಬ್ರೌಸರ್‌ಗಾಗಿ ಗೂಗಲ್ ಹೊಸ ಎಕ್ಸ್‌ಟೆನ್ಷ್‌ನ್ನು ತಂದಿತ್ತು. ಈ ಎಕ್ಸ್‌ಟೆನ್ಷನ್‌ನಿಂದ ಬಳಕೆದಾರರು ತಮ್ಮ ಖಾತೆಗೆ ಧಕ್ಕೆಯುಂಟಾಗಿದೆಯೆ ಎಂದು ಗುರುತಿಸಬಹುದಾಗಿದ್ದು, ಖಾತೆಯ ಪಾಸ್‌ವರ್ಡ್ ಬದಲಾಯಿಸಲು ಬಳಕೆದಾರರನ್ನು ಪ್ರೇರೇಪಿಸುತ್ತದೆ. ಗೂಗಲ್ ಒಡೆತನದ ಸೇವೆಗಳಲ್ಲಿ ಪಾಸ್‌ವರ್ಡ್ ಸುರಕ್ಷತೆ ಸೇರಿ ಉತ್ಪನ್ನಗಳ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

ಗೂಗಲ್ ಪಾಸ್‌ವರ್ಡ್ ಪರಿಶೀಲನೆ ಫೀಚರ್‌ನ್ನು ಗೂಗಲ್ ಅಕೌಂಟ್‌ಗೆ ಸೇರಿಸಿದ್ದು, ಇದು ಸೇವ್‌ ಮಾಡಿದ ಎಲ್ಲಾ ಪಾಸ್‌ವರ್ಡ್‌ಗಳನ್ನು ಸ್ಕ್ಯಾನ್ ಮಾಡುವುದಲ್ಲದೇ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಕ್ರೋಮ್‌ ಸಿಂಕ್‌ ಸಕ್ರಿಯವಾಗಿದ್ದು, ಈ ಫೀಚರ್‌ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಾಗೂ ಇಂಟರ್‌ನೆಟ್‌ ಸಂಪರ್ಕ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಅಕೌಂಟ್‌ ಒಪನ್‌ ಮಾಡಿ

ಗೂಗಲ್‌ ಅಕೌಂಟ್‌ ಒಪನ್‌ ಮಾಡಿ

ನಿಮ್ಮ ಬ್ರೌಸರ್‌ನಲ್ಲಿ https://myaccount.google.com ಲಿಂಕ್‌ ಒಪನ್‌ ಮಾಡಿ. ನಂತರ ಗೂಗಲ್‌ ಅಕೌಂಟ್‌ಗೆ ಸೈನ್‌ ಇನ್ ಆಗಿಲ್ಲ ಎಂದರೆ, ಗೂಗಲ್‌ ಅಕೌಂಟ್‌ಗೆ ಸೈನ್‌ ಇನ್‌ ಆಗಿ.

ಸೆಕ್ಯೂರಿಟಿ ಸೆಕ್ಷನ್‌ಗೆ ನ್ಯಾವಿಗೇಟ್‌

ಸೆಕ್ಯೂರಿಟಿ ಸೆಕ್ಷನ್‌ಗೆ ನ್ಯಾವಿಗೇಟ್‌

ಗೂಗಲ್‌ ಅಕೌಂಟ್‌ಗೆ ಸೈನ್‌ ಇನ್‌ ಆದ ನಂತರ ಸೆಕ್ಯೂರಿಟಿ ಸೆಕ್ಷನ್‌ ನ್ಯಾವಿಗೇಟ್‌ ಮಾಡಿ, ನಂತರ ಸ್ಕ್ರಾಲ್‌ ಡೌನ್‌ ಮಾಡಿ, ಅಲ್ಲಿ ಕೆಳಗಡೆ ಇರುವ "ಸೈನಿಂಗ್‌ ಇನ್‌ ಟೂ ಅಥರ್‌ ಸೈಟ್ಸ್‌" ಆಯ್ಕೆಯನ್ನು ಆಯ್ದುಕೊಳ್ಳಿ.

ಪಾಸ್‌ವರ್ಡ್‌ ಮ್ಯಾನೇಜರ್‌ ಆಯ್ಕೆ

ಪಾಸ್‌ವರ್ಡ್‌ ಮ್ಯಾನೇಜರ್‌ ಆಯ್ಕೆ

ನಂತರ ಪಾಸ್‌ವರ್ಡ್‌ ಮ್ಯಾನೇಜರ್‌ ಆಯ್ಕೆ ಮಾಡಿಕೊಳ್ಳಿ, ಬಳಿಕ ಮುಂದಿನ ಪೇಜ್‌ನಲ್ಲಿರುವ ಗೆಟ್‌ ಸ್ಟಾರ್ಟೆಡ್‌ ಬಟನ್‌ನ್ನು ಕ್ಲಿಕ್‌ ಮಾಡಿ ಈ ಸೇವೆಯನ್ನು ಸಕ್ರಿಯಗೊಳಿಸಿ. ಇಲ್ಲಿ ನಿಮ್ಮ ಎಲ್ಲಾ ಸೇವ್‌ ಆಗಿರುವ ಪಾಸ್‌ವರ್ಡ್‌ಗಳನ್ನು ನಿಮಗೆ ಗೂಗಲ್‌ ತೋರಿಸುತ್ತದೆ.

ಪಾಸ್‌ವರ್ಡ್‌ ಪರಿಶೀಲಿಸಿ

ಪಾಸ್‌ವರ್ಡ್‌ ಪರಿಶೀಲಿಸಿ

ಬಳಿಕ ಪಾಸ್‌ವರ್ಡ್‌ ಪರಿಶೀಲಿಸಿ ಲಿಂಕ್‌ ಕ್ಲಿಕ್‌ ಮಾಡಿ, ಆ ಲಿಂಕ್‌ ಮತ್ತೊಂದು ಪೇಜ್‌ಗೆ ರಿಡೈರೆಕ್ಟ್‌ ಆಗಿ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ ಎಂಬ ಆಯ್ಕೆಯನ್ನು ನೀಡುತ್ತದೆ. ಅದನ್ನು ಕ್ಲಿಕ್‌ ಮಾಡಿ. ನಂತರ ಪರಿಶೀಲನೆಗಾಗಿ ಮತ್ತೆ ಪಾಸ್‌ವರ್ಡ್‌ನ್ನು ನಮೂದಿಸಬೇಕಾಗುತ್ತದೆ.

ಪಾಸ್‌ವರ್ಡ್‌ ವಿಶ್ಲೇಷಣೆ

ಪಾಸ್‌ವರ್ಡ್‌ ವಿಶ್ಲೇಷಣೆ

ಪಾಸ್‌ವರ್ಡ್‌ ಪರಿಶೀಲನೆಯಾದ ನಂತರ, ಗೂಗಲ್‌ ನಿಮ್ಮ ಸೇವಡ್‌ ಪಾಸ್‌ವರ್ಡ್‌ಗಳನ್ನು ವಿಶ್ಲೇಷಿಸಿ, ಪಾಸ್‌ವರ್ಡ್‌ಗಳನ್ನು ಮೂರು ರೀತಿಯಾಗಿ ವರ್ಗಿಕರಿಸುತ್ತಾರೆ. ಅವುಗಳೆಂದರೆ ಹೊಂದಾಣಿಕೆ, ಮರುಬಳಕೆ ಮತ್ತು ದುರ್ಬಲ ಎಂದು ವರ್ಗಿಕರಿಸಲಾಗುತ್ತದೆ. ಅದಲ್ಲದೇ ಚೆಕಪ್‌ ಟೂಲ್‌ ನಿಮ್ಮ ಪಾಸ್‌ವರ್ಡ್‌ಗೆ ಸಾಮ್ಯತೆಯಿರುವ ಅಕೌಂಟ್‌ಗಳನ್ನು ಗೂಗಲ್‌ ತೋರಿಸುತ್ತದೆ.

ಪಾಸ್‌ವರ್ಡ್‌ ಚೆಂಜ್‌ ಮಾಡಿ

ಪಾಸ್‌ವರ್ಡ್‌ ಚೆಂಜ್‌ ಮಾಡಿ

ಅಲ್ಲಿರುವ ಬಾಣದ ಗುರುತಿನ ಬಟನ್‌ ಕ್ಲಿಕ್‌ ಮಾಡಿ, ಅದು ಪಾಸ್‌ವರ್ಡ್‌ ಬದಲಾಯಿಸಬೇಕಾದ ಅಕೌಂಟ್‌ಗಳನ್ನು ನಿಮ್ಮ ಮುಂದಿರಿಸುತ್ತದೆ. ಅಗತ್ಯವಿದ್ದರೆ ಪಾಸ್‌ವರ್ಡ್‌ ಬದಲಾಯಿಸಿ.

Best Mobiles in India

Read more about:
English summary
How To Keep Your Passwords Secure With The Help Of Google

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X