ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿಯುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಫೇಸ್‌ಬುಕ್ ಕೂಡ ಒಂದಾಗಿದೆ. ಫೇಸ್‌ಬುಕ್‌ನಲ್ಲಿ ಹೆಚ್ಚಿನ ಜನರು ತಮ್ಮ ಭಾವನೆಗಳು, ಸಾಮಾಜಿಕ ವಿಚಾರ, ಸಿನಿಮಾ ವಿಚಾರ, ಫೋಟೋ, ಹಾಗೂ ಇತರೆ ಶುಭಾಶಯ ವಿನಿಮಯ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಸೊಶೀಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವುದಕ್ಕೆ ಹೆಚ್ಚಿನ ಜನರು ಬಯಸುತ್ತಾರೆ. ಇನ್ನು ಫೇಸ್‌ಬುಕ್‌ ಕೂಡ ಬಳಕೆದಾರರಿಗೆ ಹಲವು ಫಿಚರ್ಸ್‌ಗಳನ್ನ ಪರಿಚಯಿಸಿದ್ದು, ಗೌಪ್ಯತೆಯ ವಿಚಾರದಲ್ಲೂ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ.

ಹೌದು, ಫೇಸ್‌ಬುಕ್‌ ಅತ್ಯಂತ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿದೆ. ಇನ್ನು ಫೇಸ್‌ಬುಕ್‌ನಲ್ಲಿ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆಂದು ಕೂಡ ನೀವು ತಿಳಿಯಬಹುದು. ಆದರೆ ಇದಕ್ಕಾಗಿ ಕೆಲವು ಮಾರ್ಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆಂದು ತಿಳಿಯುವುದು ಹೇಗೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆಂದು ತಿಳಿಯುವುದು ಹೇಗೆ?

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆಂದು ತಿಳಿಯುವುದು ಹೇಗೆ?

ಹಂತ 1: ಫೇಸ್‌ಬುಕ್.ಕಾಂ ಗೆ ಭೇಟಿ ನೀಡುವ ಮೂಲಕ ವೆಬ್‌ನಲ್ಲಿ ನಿಮ್ಮ ಫೇಸ್‌ಬುಕ್ ಖಾತೆಯನ್ನು ತೆರೆಯಿರಿ.

ಹಂತ 2: ಒಮ್ಮೆ ನೀವು ನಿಮ್ಮ ಫೇಸ್‌ಬುಕ್ ಪುಟ ಅಥವಾ ಟೈಮ್‌ಲೈನ್‌ನಲ್ಲಿದ್ದರೆ, ಎಲ್ಲಿಯಾದರೂ ರೈಟ್‌ ಕ್ಲಿಕ್ ಮಾಡಿ.

ಹಂತ 3: ಈಗ, ನಿಮ್ಮ ಫೇಸ್‌ಬುಕ್‌ನ ಮೂಲವನ್ನು ವೀಕ್ಷಿಸಲು ‘View Page Source' ಆಯ್ಕೆಯನ್ನು ಆರಿಸಿ.

ಹುಡುಕಲು

ಹಂತ 4: View Page Source ತೆರೆದ ನಂತರ, ವಿಷಯವನ್ನು ಹುಡುಕಲು ಬಳಸುವ ಹುಡುಕಾಟ ಪಟ್ಟಿಯನ್ನು ತರಲು ‘CTRL + F' ಟ್ಯಾಪ್ ಮಾಡಿ.

ಹಂತ 5: ಈಗ, ಹುಡುಕಾಟ ಪಟ್ಟಿಯಲ್ಲಿ ‘BUDDY_ID' ಎಂದು ಟೈಪ್ ಮಾಡಿ ಮತ್ತು ಎಂಟರ್ ಟ್ಯಾಪ್ ಮಾಡಿ.

ಹಂತ 6: ಇದನ್ನು ಮಾಡಿದ ನಂತರ, ನಿಮಗೆ 'BUDDY_ID' ಪಕ್ಕದಲ್ಲಿ ಹಲವಾರು ಫೇಸ್‌ಬುಕ್ ಪ್ರೊಫೈಲ್ ಐಡಿಗಳನ್ನು ನೀಡಲಾಗುವುದು. ನೀವು ಮಾಡಬೇಕಾಗಿರುವುದು ಯಾವುದೇ ಒಂದು ಐಡಿಗಳನ್ನು ನಕಲಿಸಿ, ಹೊಸ ಟ್ಯಾಬ್ ತೆರೆಯಿರಿ, 'Facebook.com/ 15-ಅಂಕಿಯ ID ಸರ್ಚ್‌ ಮಾಡಿದರೆ 'ಮತ್ತು ನಿಮ್ಮ ಪ್ರೊಫೈಲ್ ಅನ್ನು ವೀಕ್ಷಿಸಿದ ವ್ಯಕ್ತಿಯ ಪ್ರೊಫೈಲ್ ಕಾಣಿಸಿಕೊಳ್ಳುತ್ತದೆ. ಈ ಮೂಲಕ ನಮ್ಮನ್ನು ಯಾರು ನೋಡಲು ಬಯಸಿದ್ದಾರೆ ಎಂದು ತಿಳಿಯಬಹುದಾಗಿದೆ.

ಫೇಸ್‌ಬುಕ್‌

ಇದಲ್ಲದೆ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಫೇಸ್‌ಬುಕ್‌ ಪ್ರೋಫೈಲ್‌ ನೋಡಿದವರನ್ನು ತಿಳಿದುಕೊಳ್ಳಬಹುದಾಗಿದೆ. ಇದು ಕೂಡ ಸ್ವಲ್ಪ ಹೆಚ್ಚು ಸುರಕ್ಷಿತವಾಗಿದೆ ಮತ್ತು ಆದ್ದರಿಂದ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದರು ಎಂಬುದನ್ನು ಕಂಡುಹಿಡಿಯಲು ಯಾವುದೇ ಐಒಎಸ್ ಅಪ್ಲಿಕೇಶನ್ ಇಲ್ಲ. ಆದಾಗ್ಯೂ, ಇದನ್ನು ಕಂಡುಹಿಡಿಯಲು ಐಒಎಸ್ ಬಳಕೆದಾರರು ಯಾವಾಗಲೂ ಹ್ಯಾಕ್ ಸಂಖ್ಯೆ 1 ಅನ್ನು ಅನುಸರಿಸಬಹುದಾಗಿದೆ

Best Mobiles in India

English summary
How to know who viewed your Facebook profile.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X