ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ

Written By:

  148 ವರ್ಷಗಳ ದಾಖಲೆ ಮುರಿದ ಬೆಂಗಳೂರಿನ ಉಷ್ಣಾಂಶ ಈ ವರ್ಷ 40 ಡಿಗ್ರಿ ಸೆಲ್ಸಿಯಸ್‌ ಅನ್ನು ಮೀರಿದೆ. ಬೆಂಗಳೂರು ವಾಸಿಗಳು ಎಲ್ಲಿ ನಿಂತರೂ ಹಬ್ಬಬ್ಬಾ ಎಷ್ಟೊಂದು ಬಿಸಿಲು ಎಂದು ಹೇಳುವುದು ತಪ್ಪಿಲ್ಲ. ವಿಶೇಷ ಏನಂದ್ರೆ ಯಾವುದೇ ಪಾತ್ರೆಯಲ್ಲಿಟ್ಟರು ನೀರು ತಣ್ಣಗಾಗದೆ ವಾಟರ್‌ ಬಾಟೆಲ್‌ಗಳಿಗೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಗಳನ್ನು ಸುತ್ತಿ ನೀರು ತಣ್ಣಗೆ ಮಾಡಿ ಕುಡಿಯುವಂತಾಗಿದೆ. ಈ ಬಿಸಿಲ ಬೇಗೆಯ ಸಮಸ್ಯೆ ಬೆಂಗಳೂರು ಮತ್ತು ಕರ್ನಾಟಕದ ಜನತೆಗೆ ಮಾತ್ರವಲ್ಲ ಎಂಬುದನ್ನ ಮರೆಯೋ ಹಾಗಿಲ್ಲ.

  ಹಣವಂತರು ಸೆಕೆ ನಿವಾರಿಸಿಕೊಳ್ಳಲು "ಎಸಿ" ಯನ್ನ ಯಾವಾಗ ಬೇಕಂದ್ರೆ ಅವಾಗ ವ್ಯವಸ್ಥೆ ಮಾಡಿಕೊಳ್ಳಬಹುದು. ಮಧ್ಯಮ ವರ್ಗದವರು ಸಹ ಯಾವ ರೀತಿಯ ಫ್ಯಾನ್‌ ಬೇಕಾದ್ರೆ ಖರೀದಿಸಬಹುದು. ಆದ್ರೆ ಅತಿ ಕೆಳವರ್ಗದವರು, ಟೇಬಲ್‌ ಫ್ಯಾನ್‌ ಸಹ ಖರೀದಿ ಮಾಡಲು ಸಾಧ್ಯವಾಗದವರು ಸೆಕೆ ನಿವಾರಿಸಿಕೊಳ್ಳಲು ಏನ್‌ ತಾನೆ ಮಾಡಬಹುದು. ಇತ್ತ ಗಾಳಿ ಬೀಸುತ್ತೆ ಅಂತ ನಂಬಲು ಮರ ಗಿಡಗಳೇ ಇಲ್ಲದ ಪ್ರದೇಶದಲ್ಲಿರುವವರೇ ಹೆಚ್ಚು. ಇಂತಹ ಪ್ರಶ್ನೆಗಳನ್ನ ಬಹುಸಂಖ್ಯಾತರು ಅದರಲ್ಲೂ ಫ್ಯಾನ್‌ ಖರೀದಿಸಲು ಆಗದವರು ಹೆಚ್ಚು ತಮ್ಮಲ್ಲೇ ಕೇಳಿಕೊಂಡು ಸುಮ್ಮನಾಗಿರುತ್ತಾರೆ. ಆದ್ರೆ ಅಂತಹವರು ತಮ್ಮ ಸೆಕೆ ನಿವಾರಿಸಿಕೊಳ್ಳಲು ಒಂದು ಉತ್ತಮ ಫ್ಯಾನ್‌ ಅನ್ನು ಅವರೇ ತಯಾರಿಸಿಕೊಳ್ಳಬಹುದಾಗಿದೆ.

  ಅಂದಹಾಗೆ ಹೆಚ್ಚು ಹಣ ವೆಚ್ಚ ಮಾಡುವ ಅವಶ್ಯಕತೆಯೇ ಇಲ್ಲಾ. ಕೇವಲ ಒಂದು ವಾಟರ್‌ಕ್ಯಾನ್‌ (Watercan)ನಿಂದ ಮನೆಯಲ್ಲೇ ಅತಿ ಸುಲಭವಾಗಿ ಕಡಿಮೆ ಅವಧಿಯಲ್ಲಿ ಟೇಬಲ್‌ ಫ್ಯಾನ್‌ ತಯಾರಿಸಿಕೊಳ್ಳಬಹುದು. ಅದು ಹೇಗೆ ಅಂತಿರಾ? ಲೇಖನದ ಸ್ಲೈಡರ್‌ ಓದಿ ವಾಟರ್‌ಕ್ಯಾನ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಲು ಬೇಕಾಗುವ ವಸ್ತುಗಳು ಏನೇನು? ಫ್ಯಾನ್‌ ತಯಾರಿ ಮಾಡುವುದು ಹೇಗೆ ಎಂದು ತಿಳಿಯಿರಿ? ಲೇಖನದ ಕೊನೆಯ ಸ್ಲೈಡ್‌ನಲ್ಲಿ ವೀಡಿಯೋ ಸಹ ನೋಡಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ವಾಟರ್‌ಕ್ಯಾನ್‌ನಿಂದ ಟೇಬಲ್‌ ಫ್ಯಾನ್‌ ತಯಾರಿ

  ಅಂದಹಾಗೆ ಟೇಬಲ್‌ ಫ್ಯಾನ್‌ ತಯಾರಿಸಲು ಯಾವುದೇ ರೀತಿಯ ಪ್ಲಾಸ್ಟಿಕ್‌ ಬಾಟೆಲ್‌ ಒಂದು ಬೇಕು.
  * ನೀವು ಕುಡಿದ ಸ್ಪ್ರೈಟ್‌ ಅಥವಾ ವಾಟರ್‌ ಬಾಟೆಲ್‌ * 6- 9 ವೋಲ್ಟ್‌ನ ಒಂದು ಡಿಸಿ
  * ವಿದ್ಯುತ್‌ಗಾಗಿ ಒಂದು ಬ್ಯಾಟರಿ ಅಥವಾ 5 ವೋಲ್ಟ್‌ ಎಲೆಕ್ಟ್ರಿಕ್‌ ಪವರ್‌ ನೀಡುವ ಹಳೆಯ ಮೊಬೈಲ್‌ನ ಚಾರ್ಚರ್
  * ಟಿಸ್ಯೂ ಪೇಪರ್‌ ಅಥವಾ ಸಣ್ಣ ಪಿವಿಸಿ ಪೈಪ್‌ ಅಥವಾ ಕಾರ್ಡ್‌ ಬೋರ್ಡ್‌ ಸ್ಟ್ಯಾಂಡ್‌ಗಾಗಿ ಬೇಕು. ಅಥವಾ ಸ್ಟ್ಯಾಂಡ್‌ಗಾಗಿ ಇತರೆ ಮನೆಯ ವಸ್ತುಗಳನ್ನು ಸಹ ಬಳಸಬಹುದು.
  * ಒಂದು ಸ್ವಿಚ್‌

  ಫ್ಯಾನ್‌ ತಯಾರಿ ಹೇಗೆ?

  ಮೊದಲು ವಾಟರ್‌ ಕ್ಯಾನ್‌ ಅನ್ನು ಮಧ್ಯಕ್ಕೆ ಸರಿಯಾಗಿ ಎರಡು ಭಾಗವಾಗಿ ಕತ್ತರಿಸಿ. ನಂತರ ಕ್ಯಾಪ್‌ ಹೊಂದಿರುವ ಬಾಟೆಲ್‌ ಭಾಗವನ್ನು ಉಪಯೋಗಿಸಿ ಬಾಟೆಲ್‌ಅನ್ನು ಮೂರು ರೆಕ್ಕೆಗಳಾಗಿ ಕತ್ತರಿಸಿಕೊಳ್ಳಿ. ವೀಡಿಯೋ ನೋಡಿದರೆ ಹೇಗೆ ಎಂದು ತಿಳಿಯುತ್ತದೆ.

  ಫ್ಯಾನ್‌ ತಯಾರಿ ಹೇಗೆ?

  ವಾಟರ್‌ ಬಾಟೆಲ್‌ನಲ್ಲಿ ಫ್ಯಾನ್‌ಗಾಗಿ ರೆಕ್ಕೆಗಳನ್ನು ಕತ್ತರಿಸಿದ ನಂತರ ರೆಕ್ಕೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಮೇಣದ ವತ್ತಿ ಹಚ್ಚಿ ಕಾಯಿಸಿ. ನಂತರ ವಾಟರ್‌ ಬಾಟೆಲ್‌ ಕ್ಯಾಪ್‌ನ ಮಧ್ಯೆ ಒಂದು ಸಣ್ಣ ಹೋಲ್ ಮಾಡಿರಿ.

  ಫ್ಯಾನ್‌ ತಯಾರಿ ಹೇಗೆ?

  ಈ ಹಂತದಲ್ಲಿ ಕ್ಯಾಪ್‌ಗೆ ಡಿಸಿ ಮೋಟಾರು ಅನ್ನು ಸೇರಿಸಿ. ಮುಂದಿನ ಹಂತಕ್ಕೆ ಮುಂದಿನ ಸ್ಲೈಡ್ ಓದಿರಿ

  ಫ್ಯಾನ್‌ ತಯಾರಿ ಹೇಗೆ?

  ಕ್ಯಾಪ್‌ಗೆ ಡಿಸಿ ಮೋಟಾರ್‌ ಸೇರಿದ ನಂತರ ಫ್ಯಾನ್‌ ಟೇಬಲ್‌ಗೆ ವ್ಯವಸ್ಥೆ ಮಾಡಲಾದ ಕಾರ್ಟ್‌ಬೋರ್ಡ್‌ ಬಳಸಿಕೊಂಡು ಡಿಸಿ ಮೋಟಾರ್‌ ಸೇರಿಸದ ಕ್ಯಾಪ್‌ಗೆ ವಾಟರ್‌ಬಾಟೆಲ್‌ನ ರೆಕ್ಕೆಗಳನ್ನು ಸೇರಿಸಿ. ನಂತರ ಕಾರ್ಟ್ ಬೋರ್ಡ್‌ನ ಪಕ್ಕದಲ್ಲೇ ಬ್ಯಾಟರಿ ಮತ್ತು ಸ್ವಿಚ್‌ ಇಟ್ಟು ಬ್ಯಾಟರಿಗೆ ಡಿಸಿ ಮೋಟಾರ್‌ ವೈರ್‌ ಅನ್ನು ಮತ್ತು ಸ್ವಿಚ್‌ ಅನ್ನು ಕನೆಕ್ಟ್‌ ಮಾಡಿ. ನಂತರ ಸ್ವಿಚ್‌ ಆನ್‌ ಮಾಡಿ. ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಯಲ್ಲೇ ಟೇಬಲ್‌ ಫ್ಯಾನ್‌ ಅನ್ನು ಈ ಸುಲಭ ಮಾರ್ಗದಿಂದ ತಯಾರಿಸಿಕೊಳ್ಳಿ. ಅಂದಹಾಗೆ ಫ್ಯಾನ್‌ ತಯಾರಿಕೆ ಬಗ್ಗೆ ವೀಡಿಯೋ ನೋಡಲು ಮುಂದಿನ ಸ್ಲೈಡ್‌ ನೋಡಿ.

  ವಾಟರ್‌ ಬಾಟಲ್‌ನಿಂದ ಫ್ಯಾನ್‌ ತಯಾರಿಗೆ ಹೇಗೆ?

  ವೀಡಿಯೋ ನೋಡಿ. ಹಾಗೆ ಪವರ್ ಕನೆಕ್ಟ್‌ ಮಾಡುವಲ್ಲಿ ಹೆಚ್ಚು ಎಚ್ಚರ ವಹಿಸಿ. ಹಾಗೂ ಬಾಟಲ್‌ ಕತ್ತರಿಸ ಬೇಕಾದರೆ ಎಚ್ಚರ ವಹಿಸಿ.
  ವೀಡಿಯೋ ಕೃಪೆ:Navin Khambhala # crazyNK

  ಗಿಜ್‌ಬಾಟ್

  "ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ
  ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್

  ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

  ಗಿಜ್‌ಬಾಟ್

  ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ
  ಕನ್ನಡ.ಗಿಜ್‌ಬಾಟ್‌.ಕಾಂ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

  English summary
  How to Make an Electric Table Fan using Water Bottle. Read more about this in kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more