ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್‌ ಪ್ರೂಫ್‌ ಆಗಬೇಕೆ..? ಹಾಗಿದ್ರೆ ಇಲ್ಲಿದೆ ಸಿಂಪಲ್‌ ಟಿಪ್ಸ್‌..!

By Gizbot Bureau
|

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೌಪ್ಯತೆ ಒಂದು ಐಷಾರಾಮಿ ಅಂಶದಂತೆ ಭಾಸವಾಗುತ್ತದೆ. ನೀವು ಆಂಡ್ರಾಯ್ಡ್‌ ಅಥವಾ ಐಫೋನ್ ಬಳಸುತ್ತಿದ್ದರೆ ನಿಮ್ಮನ್ನು ಟ್ರ್ಯಾಕ್ ಮಾಡುವುದು ಮತ್ತು ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂಬುದನ್ನು ತಿಳಿಯುವುದು ಸುಲಭ. ವಿಶೇಷವಾಗಿ, ನೀವು ಪ್ರಮುಖ ವ್ಯಕ್ತಿಯಾಗಿದ್ದರೆ, ಸರ್ಕಾರಿ ಸಂಸ್ಥೆಗಳು ನಿಮ್ಮ ಇರುವಿಕೆಯನ್ನು ತಿಳಿದುಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸುತ್ತವೆ. ಸ್ಮಾರ್ಟ್‌ಫೋನ್ ಬಳಸುವಾಗ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಹೇಗೆ ನಿರ್ವಹಿಸಬಹುದು ಎಂಬುದಕ್ಕೆ ಎಡ್ವರ್ಡ್‌ ಸ್ನೋಡೆನ್ ತಮ್ಮ ಟ್ವಿಟರ್‌ನಲ್ಲಿ ಒಂದಿಷ್ಟು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅವರ ಮಾತುಗಳನ್ನು ಕೇಳಿದರೆ, ಸ್ಮಾರ್ಟ್‌ಫೋನ್‌ ಬಿಟ್ಟು ಹಳೆಯ ನೋಕಿಯಾ ಫೀಚರ್ ಫೋನ್‌ಗೆ ನೀವು ಬದಲಾಗಬಹುದು.

ಗ್ರಾಫೆನ್‌ಒಎಸ್‌ ಸ್ಮಾರ್ಟ್‌ಫೋನ್‌ ಬಳಸಿ

ಗ್ರಾಫೆನ್‌ಒಎಸ್‌ ಸ್ಮಾರ್ಟ್‌ಫೋನ್‌ ಬಳಸಿ

ಐಒಎಸ್ ಮತ್ತು ಆಂಡ್ರಾಯ್ಡ್ ಎರಡು ಕೂಡ ದುರ್ಬಲವಾಗಿದ್ದು, ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವ ಐಒಎಸ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳು ಅಸಂಖ್ಯಾತ ಪ್ರೋಗ್ರಾಮಿಂಗ್ ನ್ಯೂನತೆಗಳನ್ನು ಹೊಂದಿವೆ. ಇದರರ್ಥ ಐಮೆಸೇಜ್ ಅಥವಾ ವೆಬ್ ಬ್ರೌಸರ್‌ಗಳಂತಹ ಸಾಮಾನ್ಯ ಆಪ್‌ಗಳು ಅಪಾಯಕಾರಿಯಾಗಿದ್ದು, ನಿಮ್ಮನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಇದನ್ನು ಸಂಪೂರ್ಣ ತಪ್ಪಿಸಲು, ಅವರು ಗ್ರಾಫೆನ್‌ಒಎಸ್‌ ಆಧಾರಿತ ಸ್ಮಾರ್ಟ್‌ಫೋನ್ ಬಳಸುವುದು ಉತ್ತಮ. ಒಪನ್‌ ಸೋರ್ಸ್‌ ಗೌಪ್ಯತೆ ಮತ್ತು ಭದ್ರತೆಯನ್ನೇ ಕೇಂದ್ರವಾಗಿಟ್ಟುಕೊಂಡಿರುವ ಗ್ರಾಫೆನ್‌ಒಎಸ್ ಆಂಡ್ರಾಯ್ಡ್ ಆಪ್‌ ಹೊಂದಾಣಿಕೆಯನ್ನು ಅಳವಡಿಸಿಕೊಂಡಿದೆ.

ಅಗತ್ಯವಿದ್ದರಷ್ಟೇ ಮೈಕ್ರೊಫೋನ್, ಬ್ಲೂಟೂತ್ ಬಳಸಿ

ಅಗತ್ಯವಿದ್ದರಷ್ಟೇ ಮೈಕ್ರೊಫೋನ್, ಬ್ಲೂಟೂತ್ ಬಳಸಿ

ಗುಪ್ತ ಆಪ್‌ ಮೂಲಕ ನಿಮ್ಮ ಸಂಭಾಷಣೆಗಳನ್ನು ಯಾರಾದರೂ ರಹಸ್ಯವಾಗಿ ಕೇಳುವುದನ್ನು ತಪ್ಪಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೊಫೋನ್‌ ಬಳಸುವುದನ್ನು ಕಡಿಮೆ ಮಾಡಿ. ಅಷ್ಟೇ ಅಲ್ಲದೇ, ಅಗತ್ಯವಿಲ್ಲದಿದ್ದಾಗ ವೈಫೈ ಮತ್ತು ಬ್ಲೂಟೂತ್ ಆಫ್ ಮಾಡಬೇಕು. ಗೌಪ್ಯತೆಗೆ ಹೆಸರಾಗಿರುವ ಟಾರ್‌ ಬ್ರೌಸರ್ ಬಳಸುವುದು ಉತ್ತಮ.

ಮನೆಯಲ್ಲಿ ವೈ-ಫೈ ಬಳಸಬೇಡಿ

ಮನೆಯಲ್ಲಿ ವೈ-ಫೈ ಬಳಸಬೇಡಿ

ಗೌಪ್ಯತೆ ಕಾಪಾಡಲು ಈ ಕ್ರಮ ಸ್ವಲ್ಪ ಹೆಚ್ಚು ಅನಿಸಬಹುದು. ಆದರೆ, ವಾಸ್ತವವಾಗಿ ಜನರು ಮನೆಯಲ್ಲಿ ವೈ-ಫೈ ಬಳಸಬಾರದು. ಅಂತರ್ಜಾಲಕ್ಕೆ ಸಂಪರ್ಕ ಸಾಧಿಸಲು ನಿಮ್ಮ ಸ್ಮಾರ್ಟ್‌ಫೋನ್‌ಗೆ ಈಥರ್ನೆಟ್ ಕೇಬಲ್ ಪ್ಲಗ್ ಮಾಡಿ. ಈ ಬಗ್ಗೆ ಟ್ವೀಟ್‌ ಮಾಡಿರುವ ಸ್ನೋಡೆನ್ "ನಾನು ಮನೆಯಲ್ಲಿ ವೈಫೈ ಬಳಸುವುದಿಲ್ಲ, ಏಕೆಂದರೆ ಪ್ರತಿ ವೈರ್‌ಲೆಸ್ ಅಕ್ಸೆಸ್‌ ಪಾಯಿಂಟ್‌ಗಳು ಜಾಗತಿಕ ನಕ್ಷೆಯಲ್ಲಿ ಯುನಿಕ್‌ ಐಡಿಗಳಾಗಿರುತ್ತವೆ. ನಾನು ಮನೆಯಲ್ಲಿ ಈಥರ್ನೆಟ್ ಬಳಸುತ್ತೇನೆ. ಫೈರ್‌ವಾಲ್‌ ಆಪ್‌ ಬಳಸಿ ಅಗತ್ಯವಿಲ್ಲದ ಯಾವುದೇ ಆಪ್‌ಗಳಿಗೆ ನೆಟ್‌ವರ್ಕ್ ಅನುಮತಿಗಳನ್ನು ನಿರಾಕರಿಸುತ್ತೇನೆ" ಎಂದಿದ್ದಾರೆ.

ಆಡ್‌ ಬ್ಲಾಕರ್‌, ಪಾಸವರ್ಡ್‌ ಮ್ಯಾನೇಜರ್‌ ಬಳಸಿ

ಆಡ್‌ ಬ್ಲಾಕರ್‌, ಪಾಸವರ್ಡ್‌ ಮ್ಯಾನೇಜರ್‌ ಬಳಸಿ

ಗೌಪ್ಯತೆ ಕಾಪಾಡಲು ಪ್ರತಿಯೊಬ್ಬರೂ ಆಡ್‌ ಬ್ಲಾಕರ್ ಮತ್ತು ಪಾಸ್‌ವರ್ಡ್ ಮ್ಯಾನೇಜರ್‌ ಬಳಸುವುದು ಅಗತ್ಯ. ಬ್ರೌಸರ್‌ನಲ್ಲಿ ಥರ್ಡ್‌ ಪಾರ್ಟಿ ಕುಕೀಗಳನ್ನು ನಿರ್ಬಂಧಿಸಬೇಕು. ಈ ಮೂರು ಹಂತಗಳನ್ನು ಪ್ರತಿಯೊಬ್ಬರೂ ಪರಿಗಣಿಸಬೇಕಾಗಿದೆ. ಏಕೆಂದರೆ ಇವು ಸರಳ, ವೆಚ್ಚರಹಿತವಾಗಿದ್ದು, ನಿಮ್ಮ ಫೋನ್‌ನ್ನು ವೇಗಗೊಳಿಸುವಾಗ ನಿಮ್ಮನ್ನು ರಕ್ಷಿಸುತ್ತವೆ.

ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಿ

ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬ್ರೌಸ್ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡದಿರುವುದು ಗೌಪ್ಯತೆ ಹೆಚ್ಚಿಸುವ ಮತ್ತು ಕಣ್ಗಾವಲು ತಪ್ಪಿಸುವುಲ್ಲಿ ಪ್ರಮುಖ ಹೆಜ್ಜೆಯಾಗಿದೆ. ತಮ್ಮ ಟ್ವೀಟ್‌ನಲ್ಲಿ ಸ್ನೋಡೆನ್ ವಿವರಿಸಿದಂತೆ, ನಾನು ಬ್ರೌಸರ್‌ನಲ್ಲಿ ಜಾವಾಸ್ಕ್ರಿಪ್ಟ್, ಟ್ರ್ಯಾಕಿಂಗ್ ಮತ್ತು ಫಿಂಗರ್‌ಪ್ರಿಂಟಿಂಗ್ ನಿಷ್ಕ್ರಿಯಗೊಳಿಸುತ್ತೇನೆ. ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡಲು ಕ್ಯೂಬ್ಸ್ ಓಎಸ್ ಬಳಸಲು ಸ್ನೋಡೆನ್‌ ಸಲಹೆ ನೀಡುತ್ತಾರೆ. ಇದು ಜಿಪಿಎಸ್ ಮತ್ತು ವೈಫೈ ಹೊಂದಿಲ್ಲ ಹಾಗೂ ವೊನಿಕ್ಸ್‌ನಿಂದ ಅಂತರ್‌ನಿರ್ಮಿತ ಹೊಂದಿದೆ ಎಂದು ಹೇಳಿದ್ದಾರೆ.

ಸಂವಹನಕ್ಕಾಗಿ ಇಮೇಲ್ ಬೇಡ

ಸಂವಹನಕ್ಕಾಗಿ ಇಮೇಲ್ ಬೇಡ

ಇಮೇಲ್ ನಂಬಬೇಡಿ ಎಂದು ಸ್ನೋಡೆನ್ ಹೇಳುತ್ತಾರೆ. ನೋಂದಣಿಯನ್ನು ಹೊರತುಪಡಿಸಿ ನಾನು ಇಮೇಲ್ ಬಳಸುವುದಿಲ್ಲ. ಇಮೇಲ್ ಮೂಲಭೂತವಾಗಿ ಅಸುರಕ್ಷಿತ ಪ್ರೋಟೋಕಾಲ್ ಆಗಿದ್ದು, 2019 ರಲ್ಲಿ ಯಾವುದೇ ಅರ್ಥಪೂರ್ಣ ಸಂವಹನದ ಉದ್ದೇಶಗಳಿಗಾಗಿ ಇಮೇಲ್‌ನ್ನು ಕೈಬಿಡಬಹುದು. ಇಮೇಲ್‌ಗೆ ಬದಲಾಗಿ ಸಿಗ್ನಲ್ ಅಥವಾ ವೈರ್‌ನ್ನು ಸುರಕ್ಷಿತ ಪರ್ಯಾಯವಾಗಿ ಬಳಸುತ್ತೇನೆ ಎಂದಿದ್ದಾರೆ.

Best Mobiles in India

English summary
How To Make Your Phone "Hack Proof" By Following These Procedures

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X