ವೆಬ್‌ ಬ್ರೌಸರ್‌ನಲ್ಲಿ ಮ್ಯೂಸಿಕ್‌ ಮ್ಯೂಟ್‌ ಮಾಡೋದು ಹೇಗೆ..?

By Gizbot Bureau
|

ನಿಮ್ಮ ಬ್ರೌಸರ್‌ ಯಾವುದಾದರೂ ವೆಬ್‌ಪುಟದಿಂದ ಸ್ವಯಂಚಾಲಿತವಾಗಿ ಮ್ಯೂಸಿಕ್‌ ಪ್ಲೇ ಮಾಡಲು ಪ್ರಾರಂಭಿಸಿದಾಗ ನಿಮಗೆ ಮುಜುಗರ ಆಗುವುದಂತೂ ಖಂಡಿತ. ಅದಕ್ಕಾಗಿಯೇ, ಹೆಚ್ಚಿನ ಆಧುನಿಕ ಬ್ರೌಸರ್‌ಗಳು ಬಳಕೆದಾರರಿಗೆ ಪ್ರತಿ ಟ್ಯಾಬ್ ಅನ್ನು ಪ್ರತ್ಯೇಕವಾಗಿ ಮ್ಯೂಟ್ ಮಾಡಲು ಅನುಮತಿಸುತ್ತದೆ. ನಿಮ್ಮ ಸಾಧನದಲ್ಲಿ ನೀವು ಈಗಾಗಲೇ ಏನನ್ನಾದರೂ ಕೇಳುತ್ತಿರುವಾಗ ಅಥವಾ ವೀಕ್ಷಿಸುತ್ತಿರುವಾಗ, ಇದ್ದಕ್ಕಿದ್ದಂತೆ ಯಾವುದೋ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಪ್ಲೇ ಮಾಡಲು ಪ್ರಾರಂಭಿಸುತ್ತವೆ. ಆದ್ದರಿಂದ, ಅಂತಹ ವೆಬ್ ಪುಟದ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಮೇಲೆ ನೀವು ಸಿಟ್ಟಾಗಿದ್ದರೆ, ನೀವು ಅವುಗಳನ್ನು ಪ್ರತ್ಯೇಕವಾಗಿ ಮ್ಯೂಟ್ ಮಾಡಬಹುದು. ಯಾವ್ಯಾವ ವೆಬ್‌ ಬ್ರೌಸರ್‌ಗಳಲ್ಲಿ ಹೇಗೆ ಮ್ಯೂಟ್‌ ಮಾಡಬಹುದು ಎಂಬುದನ್ನು ಮುಂದೆ ನೋಡಿ.

ಗೂಗಲ್ ಕ್ರೋಮ್

ಗೂಗಲ್ ಕ್ರೋಮ್

ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಆಡಿಯೋ ಪ್ಲೇ ಆಗುತ್ತಿರುವ ಟ್ಯಾಬ್‌ನಲ್ಲಿ ಸ್ಪೀಕರ್ ಐಕಾನ್ ಮೂಲಕ ಆಡಿಯೊ ಪ್ಲೇಬ್ಯಾಕ್ ಅನ್ನು ಸೂಚಿಸುತ್ತದೆ. ಅದನ್ನು ಮ್ಯೂಟ್ ಮಾಡಲು, ಟ್ಯಾಬ್ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಪಾಪ್ಅಪ್ ಮೆನುವಿನಿಂದ ಮ್ಯೂಟ್ ಆಯ್ಕೆಯನ್ನು ಆರಿಸಿ. ಪರ್ಯಾಯವಾಗಿ, ಮ್ಯೂಟ್ ಮಾಡಲು ನೀವು ನೇರವಾಗಿ ಸ್ಪೀಕರ್ ಐಕಾನ್ ಕ್ಲಿಕ್ ಮಾಡಬಹುದು.

ಆಪಲ್ ಸಫಾರಿ

ಆಪಲ್ ಸಫಾರಿ

ಸಫಾರಿ ಬ್ರೌಸರ್‌ನಲ್ಲಿ ಟ್ಯಾಬ್‌ನ್ನು ಮ್ಯೂಟ್ ಮಾಡಲು, ಧ್ವನಿ ಪ್ಲೇ ಆಗುತ್ತಿರುವ ಟ್ಯಾಬ್‌ನ ಅಡ್ರೆಸ್‌ ಬಾರ್‌ನಲ್ಲಿ ಸ್ಪೀಕರ್ ಐಕಾನ್ ನೋಡಿ. ಧ್ವನಿಯನ್ನು ಆನ್ / ಆಫ್ ಟಾಗಲ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.

ಮೊಜಿಲ್ಲಾ ಫೈರ್‌ಫಾಕ್ಸ್

ಮೊಜಿಲ್ಲಾ ಫೈರ್‌ಫಾಕ್ಸ್

ಗೂಗಲ್ ಕ್ರೋಮ್‌ನಂತೆಯೇ, ಬಳಕೆದಾರರು ಸ್ಪೀಕರ್ ಐಕಾನ್‌ನೊಂದಿಗೆ ಟ್ಯಾಬ್‌ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಮ್ಯೂಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಮೈಕ್ರೋಸಾಫ್ಟ್ ಎಡ್ಜ್

ಮೈಕ್ರೋಸಾಫ್ಟ್ ಎಡ್ಜ್

ಮೈಕ್ರೋಸಾಫ್ಟ್ ಎಡ್ಜ್ ಕೂಡ ಮ್ಯೂಸಿಕ್‌ ಪ್ಲೇ ಆಗುವಾಗ ಟ್ಯಾಬ್‌ನಲ್ಲಿ ಸ್ಪೀಕರ್ ಐಕಾನ್‌ನ್ನು ತೋರಿಸುತ್ತದೆ. ಆದರೆ, ಅದು ಸಂವಾದಾತ್ಮಕವಾಗಿರುವುದಿಲ್ಲ. ಎಡ್ಜ್ ಬ್ರೌಸರ್‌ನಲ್ಲಿ ಯಾವುದೇ ಸಂಗೀತ ಮ್ಯೂಟ್ ಮಾಡಲು, ನೀವು ವಿಂಡೋಸ್ ಟಾಸ್ಕ್ ಬಾರ್‌ನಿಂದ ಸ್ಪೀಕರ್ ಐಕಾನ್ ಮೇಲೆ ರೈಡ್‌ ಕ್ಲಿಕ್ ಮಾಡಿ ಮತ್ತು ಸ್ಪೀಕರ್ ಐಕಾನ್ ಅನ್ನು ಮ್ಯಾನ್ಯುವಲ್‌ ಆಗಿ ಮ್ಯೂಟ್ ಮಾಡಬೇಕಾಗುತ್ತದೆ.

Best Mobiles in India

Read more about:
English summary
How To Mute Individual Tabs On Google Chrome

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X