ಡೆಸ್ಕ್‌ಟಾಪ್‌ ವೆಬ್‌ಸೈಟ್‌ ಅನ್ನು ಮೊಬೈಲ್‌ನಲ್ಲಿ ಓಪನ್ ಮಾಡುವುದು ಹೇಗೆ?

By Suneel
|

ಎಲ್ಲಾ ವೆಬ್‌ಸೈಟ್‌ಗಳು ಡೆಸ್ಕ್‌ಟಾಪ್‌ನಲ್ಲಿ ಒಂದು ರೀತಿಯಲ್ಲಿ ಓಪನ್‌ ಆದರೆ, ಮೊಬೈಲ್‌ನಲ್ಲಿ ಇನ್ನೊಂದು ರೀತಿಯಲ್ಲಿ ಓಪನ್‌ ಆಗುತ್ತವೆ. ಅಂದರೆ ಮೊಬೈಲ್‌ನಲ್ಲಿ ವೆಬ್‌ಸೈಟ್‌ ಅನ್ನು ಆಪ್ಟಿಮೈಜ್‌ ಮಾಡಿ ನೀಡಲಾಗಿರುತ್ತದೆ. ಕೆಲವರಿಗೆ ಯಾವುದೇ ವೆಬ್‌ಸೈಟ್‌ ಅನ್ನು ಡೆಸ್ಕ್‌ಟಾಪ್‌ನಲ್ಲಿ ನೋಡುವ ರೀತಿಯಲ್ಲಿ ನೋಡಿದರೆ ಸಮಾಧಾನ. ಕಂಫರ್ಟ್‌ ಅನಿಸಲ್ಲ ನೋಡಿ.

ಉದಾಹರಣೆಗೆ Kannada.gizbot.com ವೆಬ್‌ಸೈಟ್‌ ಅನ್ನು ಡೆಸ್ಕ್‌ಟಾಪ್‌ನಲ್ಲಿ ಒಂದು ರೀತಿ ನೋಡಿದರೆ, ಮೊಬೈಲ್‌ನಲ್ಲಿ ಮಾತ್ರ ಸೈಟ್‌ ಪ್ರದರ್ಶನ ಆಪ್ಟಿಮೈಜ್ ಆಗಿ ಕಾಣುತ್ತದೆ. ಇದು ಕೆಲವರಿಗೆ ಕಂಫರ್ಟ್‌ ಅನಿಸುವುದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಯಾವುದೇ ವೆಬ್‌ಸೈಟ್‌ ಅನ್ನು ಮೊಬೈಲ್‌ನಲ್ಲಿ, ಡೆಸ್ಕ್‌ಟಾಪ್‌ ವರ್ಸನ್‌ ಅನ್ನು ಓಪನ್‌ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಮುಂದೆ ಓದಿರಿ.

'ಫ್ರೀಡಮ್ 251' ತಯಾರಕ 'ರಿಂಗಿಂಗ್ ಬೆಲ್ಸ್' ಕಂಪನಿ ಮುಚ್ಚುವ ವರದಿ ವಿರೋಧಿಸಿದೆ: ಹೇಳಿದ್ದೇನು?

ಹಂತ 1

ಹಂತ 1

ನಿಮ್ಮ ಮೊಬೈಲ್‌ನಲ್ಲಿ ನೀವು ಹೆಚ್ಚು ಬಳಸುವ ಇಂಟರ್ನೆಟ್ ಬ್ರೌಸರ್‌ ಅನ್ನು ಒಪನ್ ಮಾಡಿ. ಉದಾಹರಣೆಗೆ Kannada.gizbot.com ಎಂದು ಟೈಪಿಸಿ ಅಥವಾ ಯಾವುದೇ ವೆಬ್‌ಸೈಟ್ ವಿಳಾಸ ಟೈಪಿಸಿ.

ಹಂತ 2

ಹಂತ 2

ನಂತರ ಬ್ರೌಸರ್‌ನ ಬಲಭಾಗದಲ್ಲಿ ಕಸ್ಟಮೈಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಹಲವು ಆಪ್ಶನ್‌ಗಳು ತೆರೆದುಕೊಳ್ಳುತ್ತವೆ. ಈ ಮೇಲಿಲನ ಇಮೇಜ್‌ನಲ್ಲಿ ತೋರಿಸಿದಂತೆ "Request Desktop site' ಎಂಬುದರ ಮುಂದಿನ ಬಾಕ್ಸ್‌ ಮೇಲೆ ಟ್ಯಾಪ್‌ ಮಾಡಿ.

ಹಂತ 3

ಹಂತ 3

ಯಾವುದೇ ಇಂಟರ್ನೆಟ್ ಬ್ರೌಸರ್ ಬಳಸಿದರು ಸಹ "Request Desktop site' ಆಪ್ಸನ್‌ ಅನ್ನೇ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಮೇಲಿನ ಚಿತ್ರ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ ಆಗಿದೆ. ಅದರಲ್ಲಿ ಈ ರೀತಿಯಲ್ಲಿ ಆಪ್ಶನ್ ಪ್ರದರ್ಶನವಾಗುತ್ತದೆ.

ಹಂತ 4

ಹಂತ 4

UC ಬ್ರೌಸರ್ ಬಳಕೆದಾರರು ಡೆಸ್ಕ್‌ಟಾಪ್‌ ವೆಬ್‌ಸೈಟ್‌ ಅನ್ನು ಮೊಬೈಲ್‌ನಲ್ಲಿ ಸೆಟ್ಟಿಂಗ್‌ಗೆ ಹೋಗುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದು.

Settings -> Browser Settings -> Website Preferences ಗೆ ಹೋಗಿ. ನಂತರ ಅಲ್ಲಿ ಲೈಟ್ ವೀವ್, ಮೊಬೈಲ್ ವೀವ್ ಮತ್ತು ಡೆಸ್ಕ್‌ಟಾಪ್‌ ವೀವ್ ಎಂಬ ಆಯ್ಕೆಗಳಲ್ಲಿ ಯಾವುದು ಬೇಕು ಅದನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to open desktop websites on mobile [Android Guide]. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X