ಆಧಾರ್ PVC ಕಾರ್ಡ್‌ ಶುಲ್ಕ ಎಷ್ಟು?..ಆನ್‌ಲೈನ್‌ ಮೂಲಕ ಪಡೆಯುವುದು ಹೇಗೆ?

|

ಭಾರತೀಯ ನಾಗರೀಕರಿಗೆ ವೋಟರ್‌ ಐಡಿಯಂತೆ ಕಾರ್ಡ್‌ನಂತೆ ಆಧಾರ್‌ ಕಾರ್ಡ್‌ ಕೂಡಾ ಅವಶ್ಯ ದಾಖಲಾತಿಗಳಲ್ಲಿ ಒಂದಾಗಿದೆ. ಸರ್ಕಾರದ ಯಾವುದೇ ಸೌಲಭ್ಯ, ಸಬ್ಸಿಡಿ ಅಥವಾ ಪ್ರಯೋಜನ ಪಡೆಯುವುದು ಸೇರಿದಂತೆ ಹಲವು ಕೆಲಸಗಳಿಗೂ ಆಧಾರ್‌ ಕಾರ್ಡ್‌ ಪ್ರಮುಖ ಆಧಾರವಾಗಿದೆ. ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್‌ ಪ್ರತಿ ಅಗತ್ಯವಾಗಿರುತ್ತದೆ. ಕೆಲವರು ಹಾರ್ಡ್‌ ಕಾಪಿ ಬಳಕೆ ಮಾಡಿದರೇ, ಮತ್ತೆ ಕೆಲವರು ಡಿಜಿಟಲ್ ಆಧಾರ್ ಕಾರ್ಡ್ ಪ್ರತಿ ಬಳಕೆ ಮಾಡುತ್ತಾರೆ. ಸರ್ಕಾರ ಆಧಾರ್ PVC ಕಾರ್ಡ್‌ ಪರಿಚಯಿಸಿದ್ದು, ಅದನ್ನು ಸಹ ಆನ್‌ಲೈನ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

ಅಥಾರಿಟಿ

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಆಧಾರ್ PVC ಕಾರ್ಡ್‌ ಲಭ್ಯ ಮಾಡಿದ್ದು, ಪಿವಿಸಿ ಕಾರ್ಡ್‌ ಮೇಲೆ ಆಧಾರ್ ಮುದ್ರಿಸಿ ಕೊಡಲಿದೆ. ಬಳಕೆದಾರರರು ಆರ್ಡರ್ ಮಾಡುವ ಮೂಲಕ ತಮ್ಮ ಆಧಾರ್ PVC ಕಾರ್ಡ್‌ ಪಡೆಯಬಹುದಾಗಿದೆ. ಇದಕ್ಕೆ ನಿಗದಿತ ಶುಲ್ಕ ಪಡೆಯಲಾಗುತ್ತದೆ. ಹಾಗಾದರೇ ಆಧಾರ್ PVC ಕಾರ್ಡ್‌ ಆರ್ಡರ್ ಮಾಡಿ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏನಿದು ಆಧಾರ್ PVC ಕಾರ್ಡ್

ಏನಿದು ಆಧಾರ್ PVC ಕಾರ್ಡ್

ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ರೂಪದಲ್ಲಿ UIDAI ಆಧಾರ್ ಕಾರ್ಡುದಾರರಿಗೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ನಂತೆಯೇ, ನಿಮ್ಮ ಪರ್ಸ್‌ನಲ್ಲಿ ಪಿವಿಸಿ ಆಧಾರ್ ಕಾರ್ಡ್ ಅನ್ನು ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಈ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಮಾಡಿದ ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಘೋಸ್ಟ್ ಇಮೇಜ್, ಗಿಲ್ಲೋಚೆ ಪ್ಯಾಟರ್ನ್ ಇತ್ಯಾದಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಆಧಾರ್ PVC ಕಾರ್ಡ್ ಆರ್ಡರ್

ಆಧಾರ್ PVC ಕಾರ್ಡ್ ಆರ್ಡರ್

ಆರ್ಡರ್ ಆಧಾರ್ ಕಾರ್ಡ್ ಎಂಬುದು UIDAIನ ಸೇವೆ ಆಗಿದೆ. ಇದರ ಮೂಲಕವಾಗಿ ಆಧಾರ್ ದಾರರಿಗೆ ತಮ್ಮ ಆಧಾರ್ ಮಾಹಿತಿಯನ್ನು ಪಿವಿಸಿ ಕಾರ್ಡ್ ಮೇಲೆ ಮುದ್ರಿಸಿ ಕೊಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಅಲ್ಪ ಪ್ರಮಾಣದ ಶುಲ್ಕ ವಿಧಿಸಲಾಗುತ್ತದೆ. ಯಾರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿಲ್ಲವೂ ಅಂಥವರು ತಮ್ಮ ನೋಂದಣಿ ಆಗದ/ ಪರ್ಯಾಯ ಮೊಬೈಲ್ ನಂಬರ್ ಬಳಸಿ, ಆರ್ಡರ್ ಮಾಡಬಹುದು.

ಕಾರ್ಡ್

ಆಧಾರ್ ಪಿವಿಸಿ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ uidai.gov.in ಅಥವಾ Resident.uidai.gov.in ಮೂಲಕ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಆದೇಶಿಸಬಹುದು. ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ನಿವಾಸಿಗಳ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಆಧಾರ್ ಪಿವಿಸಿ ಕಾರ್ಡ್ ಬೆಲೆ ಎಷ್ಟು?

ಆಧಾರ್ ಪಿವಿಸಿ ಕಾರ್ಡ್ ಬೆಲೆ ಎಷ್ಟು?

ಬಳಕೆದಾರರು uidai.gov.in ಅಥವಾ Resident.uidai.gov.in ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಬಹುದು. ಆಧಾರ್ ಪಿವಿಸಿ ಕಾರ್ಡ್ ಗಾಗಿ 50 ರೂ. ಶುಲ್ಕವನ್ನು ಪಾವತಿಸಿಬೇಕು.

ಆಧಾರ್ ಪಿವಿಸಿ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:

ಆಧಾರ್ ಪಿವಿಸಿ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:

ಹಂತ 1: UIDAI ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - uidai.gov.in
ಹಂತ 2: ಆರ್ಡರ್ ಪಿವಿಸಿ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3: ಆಧಾರ್ ಕಾರ್ಡ್ ಆದೇಶಿಸಲು ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಗುರುತಿನ ಸಂಖ್ಯೆ ಅಥವಾ ಇಐಡಿ ನಮೂದಿಸಿ
ಹಂತ 4: ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: ನೋಂದಾಯಿತ ಮೊಬೈಲ್ ಬಳಕೆಯಲ್ಲಿ ಮಾತ್ರ ಆಧಾರ್ ಪೂರ್ವವೀಕ್ಷಣೆ ಲಭ್ಯವಿದೆ. ನೋಂದಾಯಿಸದ ಮೊಬೈಲ್ ಆಧಾರಿತ ಆದೇಶಕ್ಕಾಗಿ ಆಧಾರ್ ಕಾರ್ಡ್ ವಿವರಗಳ ಪೂರ್ವವೀಕ್ಷಣೆ ಲಭ್ಯವಿಲ್ಲ.
ಹಂತ 6: ಟೈಮ್ ಬೇಸ್ಡ್ ಒನ್ ಟೈಮ್ ಪಾಸ್‌ವರ್ಡ್‌ (ಟಿಒಟಿಪಿ) ಅನ್ನು M-ಆಧಾರ್ ಅಪ್ಲಿಕೇಶನ್ ಮೂಲಕವೂ ಬಳಸಬಹುದು.

Best Mobiles in India

English summary
How to Order Aadhaar PVC card Online? Fees and other Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X