ರೈಲಿನಲ್ಲಿ ಪ್ರಯಾಣ ಮಾಡುವಾಗ ಫುಡ್‌ ಆರ್ಡರ್‌ ಮಾಡಲು ಹೀಗೆ ಮಾಡಿ!

|

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಭಾರತೀಯ ರೈಲ್ವೇ ತನ್ನದೇ ಛಾಪು ಮೂಡಿಸಿದ್ದು, ಪ್ರಮುಖ ಸಾರಿಗೆ ಸೇವೆಯಾಗಿ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಜನರು ದೂರದ ಪ್ರಯಾಣಕ್ಕೆ ರೈಲ್ವೆ ಅನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಜೊತೆಗೆ ರೈಲಿನಲ್ಲಿ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ ಸಾಧ್ಯವಾಗುತ್ತದೆ. ಆದಾಗ್ಯೂ, ಪ್ರಯಾಣಿಕರ ಅನುಕೂಲಕ್ಕಾಗಿ, ಭಾರತೀಯ ರೈಲ್ವೇಯು ರಾಜಧಾನಿಯಂತಹ ಕೆಲವು ರೈಲುಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆಹಾರವನ್ನು ನೀಡುತ್ತವೆ.

ಮಾಡುವಾಗ

ಹೌದು, ರೈಲಿನಲ್ಲಿ ದೂರದ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಆಹಾರ/ ಊಟದ ಸಮಸ್ಯೆ ಆಗಬಾರದು ಎಂದು IRCTC ಯ ಇ-ಕೇಟರಿಂಗ್ ಸೇವೆ ಇದೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಫುಡ್‌/ ಊಟ ಮಾಡಲು ಬಯಸಿದರೇ, IRCTC ಯ ಇ-ಕೇಟರಿಂಗ್ ಸೇವೆಯ ಮೂಲಕ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಆಯ್ಕೆ ಲಭ್ಯವಿದೆ. ಆರ್ಡರ್‌ ಮಾಡಿರುವ ಆಹಾರ/ ಫುಡ್‌ ಪ್ರಯಾಣಿಕರ ಸೀಟ್/ ಬರ್ತ್‌ಗೆ ತಲುಪಿಸಲಾಗುತ್ತದೆ. ಹಾಗಾದರೇ ರೈಲಿನಲ್ಲಿ ಪ್ರಯಾಣಿಸುವಾಗ IRCTC ಯ ಇ-ಕೇಟರಿಂಗ್ ಆಹಾರ ಆರ್ಡರ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

IRCTC ಯ ಇ-ಕೇಟರಿಂಗ್ ಸೇವೆ ಬಳಸುವ ಮೊದಲು ಈ ಸಂಗತಿಗಳನ್ನು ನೀವು ತಿಳಿದುಕೊಳ್ಳಬೇಕು

IRCTC ಯ ಇ-ಕೇಟರಿಂಗ್ ಸೇವೆ ಬಳಸುವ ಮೊದಲು ಈ ಸಂಗತಿಗಳನ್ನು ನೀವು ತಿಳಿದುಕೊಳ್ಳಬೇಕು

* ಆಹಾರವನ್ನು ಆರ್ಡರ್ ಮಾಡುವಾಗ ನೀವು PNR ಮತ್ತು ರೈಲು ವಿವರಗಳನ್ನು ನಮೂದಿಸಬೇಕಾಗಿರುವುದರಿಂದ ಊಟವನ್ನು ಕಾಯ್ದಿರಿಸಲು ನಿಮಗೆ ದೃಢೀಕೃತ ಟಿಕೆಟ್ ಅಥವಾ ವೇಟಿಂಗ್ ಟಿಕೆಟ್ ಅಗತ್ಯವಿದೆ.
* ಇ-ಕೇಟರಿಂಗ್ ಸೇವೆಯು ಆನ್‌ಲೈನ್‌ನಲ್ಲಿ ಮತ್ತು ಕ್ಯಾಶ್ ಆನ್ ಡೆಲಿವರಿ ಎರಡನ್ನೂ ಪಾವತಿಸುವ ಆಯ್ಕೆಯನ್ನು ನೀಡುತ್ತದೆ.
* ಪ್ರಸ್ತುತ, ಇ-ಕೇಟರಿಂಗ್ ಸೇವೆಯು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ.
* ರೈಲು ವಿಳಂಬವಾದರೆ ಮತ್ತು ಆಹಾರವನ್ನು ತಲುಪಿಸದಿದ್ದರೆ, ಬಳಕೆದಾರರಿಗೆ ಸಂಪೂರ್ಣ ಮರುಪಾವತಿಯನ್ನು ಒದಗಿಸಲಾಗುತ್ತದೆ.

ರೈಲು ಪ್ರಯಾಣದಲ್ಲಿ ಆಹಾರವನ್ನು ಬುಕ್ ಮಾಡುವುದು ಹೇಗೆ?

ರೈಲು ಪ್ರಯಾಣದಲ್ಲಿ ಆಹಾರವನ್ನು ಬುಕ್ ಮಾಡುವುದು ಹೇಗೆ?

ಪ್ರಸ್ತುತ, ರೈಲು ಪ್ರಯಾಣದಲ್ಲಿ ಆಹಾರವನ್ನು ಆರ್ಡರ್ ಮಾಡಲು ಮೂರು ಮಾರ್ಗಗಳಿವೆ. ಇ-ಕೇಟರಿಂಗ್ ವೆಬ್‌ಸೈಟ್ ಬಳಸಿ, ಫುಡ್‌ ಆನ್‌ ಟ್ರ್ಯಾಕ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತ್ತು 1323 ಗೆ ಕರೆ ಮಾಡುವ ಮೂಲಕ ಮಾಡಬಹುದು.

IRCTC ಇ-ಕೇಟರಿಂಗ್ ವೆಬ್‌ಸೈಟ್ ಬಳಸಿ ಆಹಾರವನ್ನು ಬುಕ್ ಮಾಡಲು ಈ ಕ್ರಮ ಫಾಲೋ ಮಾಡಿ:

IRCTC ಇ-ಕೇಟರಿಂಗ್ ವೆಬ್‌ಸೈಟ್ ಬಳಸಿ ಆಹಾರವನ್ನು ಬುಕ್ ಮಾಡಲು ಈ ಕ್ರಮ ಫಾಲೋ ಮಾಡಿ:

ಹಂತ 1. www.ecatering.irctc.co.in ಗೆ ಭೇಟಿ ನೀಡಿ ಮತ್ತು PNR ಸಂಖ್ಯೆಯನ್ನು ನಮೂದಿಸಿ.
ಹಂತ 2. ಡ್ರಾಪ್ ಡೌನ್ ಮೆನುವಿನಿಂದ ನಿಲ್ದಾಣವನ್ನು ಆಯ್ಕೆಮಾಡಿ.
ಹಂತ 3. ಇದರ ನಂತರ, ಎಲ್ಲಾ ರೆಸ್ಟೋರೆಂಟ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ, ನೀವು ಆಹಾರವನ್ನು ಆರ್ಡರ್ ಮಾಡಲು ಬಯಸುವದನ್ನು ಆರಿಸಿ.
ಹಂತ 4. ನಿಮ್ಮ ಕಾರ್ಟ್‌ನಲ್ಲಿ ಆಹಾರವನ್ನು ಸೇರಿಸಿ ಮತ್ತು ಪಾವತಿಯೊಂದಿಗೆ ಮುಂದುವರಿಯಿರಿ.
ಹಂತ 5. ಡೆಲಿವರಿ ಕೋಡ್ ಅನ್ನು ಒದಗಿಸಲಾಗುತ್ತದೆ, ಅದನ್ನು ನೀವು ವಿತರಣೆಯ ಸಮಯದಲ್ಲಿ ಹಂಚಿಕೊಳ್ಳಬೇಕಾಗುತ್ತದೆ.

ಅಪ್ಲಿಕೇಶನ್ ಬಳಸಿ ಆಹಾರವನ್ನು ಬುಕ್ ಮಾಡಲು ಹೀಗೆ ಮಾಡಿ:

ಅಪ್ಲಿಕೇಶನ್ ಬಳಸಿ ಆಹಾರವನ್ನು ಬುಕ್ ಮಾಡಲು ಹೀಗೆ ಮಾಡಿ:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫುಡ್‌ ಆನ್‌ ಟ್ರ್ಯಾಕ್ ಮೊಬೈಲ್ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿ (ಆಂಡ್ರಾಯ್ಡ್‌ ಮತ್ತು ಐಫೋನ್‌ ಎರಡರಲ್ಲೂ ಲಭ್ಯವಿದೆ) ಇದರ ನಂತರ PNR ವಿವರಗಳನ್ನು ನಮೂದಿಸಿ, ರೆಸ್ಟೋರೆಂಟ್ ಮತ್ತು ಆಹಾರವನ್ನು ಆಯ್ಕೆಮಾಡಿ, ಪಾವತಿ ಮಾಡಿ.

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಬುಕ್‌ ಮಾಡಲು ಈ ಆಪ್ಸ್‌ಗಳು ಸೂಕ್ತ:

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಬುಕ್‌ ಮಾಡಲು ಈ ಆಪ್ಸ್‌ಗಳು ಸೂಕ್ತ:

IRCTC ರೈಲ್ ಕನೆಕ್ಟ್ (IRCTC Rail Connect)
IRCTC ಆಪ್‌ ಇಲಾಖೆಯ ಅಧಿಕೃತ ರೈಲು ಬುಕಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಅಪ್ಲಿಕೇಶನ್ ಸರಳ ವಿನ್ಯಾಸ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್ ಅನ್ನು ಹೊಂದಿದೆ. ಸೀಟ್ ಲಭ್ಯತೆ, ತತ್ಕಾಲ್ ರೈಲು ಟಿಕೆಟ್, PNR ಸ್ಟೇಟಸ್‌ ಮತ್ತು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಈ ಅಪ್ಲಿಕೇಶನ್ ಉತ್ತಮ ಅನಿಸುತ್ತದೆ.

Ixigo ಟ್ರೈನ್ಸ್

Ixigo ಟ್ರೈನ್ಸ್

ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಅಪ್ಲಿಕೇಶನ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್‌ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್‌ ಸಹ ಪರಿಶೀಲಿಸಬಹುದಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.

ರೈಲು ಯಾತ್ರಾ (RailYatra)

ರೈಲು ಯಾತ್ರಾ (RailYatra)

ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTCಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

ಮೇಕ್ ಮೈ ಟ್ರಿಪ್- (MakeMyTrip)

ಮೇಕ್ ಮೈ ಟ್ರಿಪ್- (MakeMyTrip)

ಒಂದೇ ಆಪ್‌ನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್‌ ಮೈ ಟ್ರಿಪ್ ಆಪ್‌ ಒಂದು ಉತ್ತಮ ನಿಲುಗಡೆ. ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್‌ ಲೈವ್ ರನ್ನಿಂಗ್ ಸ್ಟೇಟಸ್‌ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್‌ ಸಹ ಚೆಕ್ ಮಾಡಬಹುದಾಗಿದೆ.

Best Mobiles in India

English summary
How to Order Food Online on Train Journey: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X