ಸ್ಮಾರ್ಟ್‌ಫೋನ್ಸ್‌ ವೈರಸ್‌ ದಾಳಿಗೆ ಸಿಲುಕದಂತೆ ತಡೆಯುವುದು ಹೇಗೆ?

Posted By: Staff
ಸ್ಮಾರ್ಟ್‌ಫೋನ್ಸ್‌ ವೈರಸ್‌ ದಾಳಿಗೆ ಸಿಲುಕದಂತೆ ತಡೆಯುವುದು ಹೇಗೆ?

ದಿನದಿಂದ ದಿನಕ್ಕೆ ಹೇಗೆ ತಂತ್ರಜ್ಞಾನ ಬೆಳೆಯುತ್ತಿದೆಯೋ ಅದರಂತೆ ವೈರಸ್‌ ದಾಳಿಯೂ ಕೂಡಾ ಹೆಚ್ಚಾಗುತ್ತದೆ. ಅಂದಹಾಗೆ ಆಂಡ್ರಾಯ್ಡ್‌ ಫೋನ್‌ಗಳನ್ನೇ ತೆಗೆದುಕೊಳ್ಳಿ ಇನ್ನು ಮಾರುಕಟ್ಟೆಗೆ ಬಂದು ಹೆಚ್ಚು ದಿನಗಳೇ ಕಳೆದಿಲ್ಲಾ ಆಗಲೇ ಇದರಲ್ಲೀಯೂ ಕೂಡಾ ವೈರಸ್‌ ದಾಳಿ ಶುರುವಾಗಿದೆ.

ಅಂದಹಾಗೆ ನೀವೂ ಕೂಡಾ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದೀರ ನಿಮ್ಮ ಮೊಬೈಲ್‌ ಫೋನ್‌ ವೈರಸ್‌ದಾಳಿಗೆ ಒಳಗಾಗದಂತೆ ನೋಡಿಕೊಳ್ಳ ಬೇಕೆಂದಿದ್ದೀರ ಹಾಗೀದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಸ್ಮಾರ್ಟ್‌ಫೋನ್‌ಗಳನ್ನು ವೈರಸ್‌ ದಾಳಿಯಿಂದ ಹೇಗೆ ರಕ್ಷಿಸುವುದು ಎಂಬ ಮಾಹಿತಿ ತಂದಿದೆ ಓದಿ ನಂತರ ಅದರಂತೆಯೇ ಪಾಲಿಸಿ ನಿಮ್ಮ ಸ್ಮಾರ್ಟ್‌ಫೋನ್‌ ವೈರಸ್‌ದಾಳಿಗೆ ಓಳಗಾಗದಂತೆ ಕಾಪಾಡಿಕೊಳ್ಳಿ.

1- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೇಲ್‌ ಓಪನ್‌ ಮಾಡಿದ ಕೂಡಲೇ ಮೊದಲಿಗೆ ಅದರಲ್ಲಿನ ಅಟ್ಯಾಚ್‌ಮೆಂಟ್‌ಗಳನ್ನು ಗಮನಿಸಿ. ಏಕೆಂದರೆ ಕೆಲ ಅನಾಮಧೇಯ ಮೇಲ್‌ಗಳಲ್ಲಿ ಇರುವಂತಹ ಅಟ್ಯಾಚ್‌ಮೆಂಟ್‌ಗಳಲ್ಲಿ ವೈರಸ್‌ಗಳಿರುತ್ತವೆ. ಇಂತಹಾ ವೈರಸ್‌ಗಳು ನಿಮ್ಮಾ ಮೊಬೈಲ್‌ನಲ್ಲಿನ ಎಲ್ಲಾ ಮಾಹಿತಿಯನ್ನು ಮೇಲ್‌ ಮೂಲಕ ಎಲ್ಲಿಗೆ ಬೇಕಾದರೂ ಅಲ್ಲಿಗೆ ಕಳಿಸಿಬಿಡುತ್ತದೆ. ಆದ್ದರಿಂದ ಇಂತಹ ಅಟ್ಯಾಚ್‌ಮೆಂಟ್‌ ಇರುವಂತಹ ಮೇಲ್‌ಗಳನ್ನು ಓಪನ್‌ ಮಾಡಬೇಡಿ.

2- ಮೊಬೈಲ್‌ಫೋನ್‌ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿದ್ದಲ್ಲಿ ಮೊದಲಿಗೆ ಕಂಪ್ಯೂಟರ್‌ನಲ್ಲಿನ ಆಂಟಿ ವೈರಸ್‌ ರನ್‌ ಮಾಡಿ ಇದರಿಂದ ಮೊಬೈಲ್‌ ಫೋನ್‌ನಲ್ಲಿ ಈಗಾಗಲೇ ಇರುವಂತಹ ವೈರಸ್‌ಗಳನ್ನು ಆಂಟಿವೈರಸ್‌ ಡಿಲೀಟ್‌ ಮಾಡಿಬಿಡುತ್ತದೆ. ಅಂದಹಾಗೆ ಹೆಚ್ಚಿನ ಮೊಬೈಲ್‌ ಫೋನ್‌ವೈರಸ್‌ಗಳು ಕಂಪ್ಯೂಟರ್‌ಗೆ ದಾಳಿ ಮಾಡುವ ಸಾಧ್ಯತೆ ಕಡಿಮೆ ಯಾವುದಕ್ಕೂ ಎಚ್ಚರ ವಹಿಸುವುದು ಒಳ್ಳೆಯದು.

3- ನೀವು ಯಾವುದೇ ಅಪ್ಲಿಕೇಶನ್‌ ಡೌನ್ಲೋಡ್‌ ಮಾಡಿಕೊಳ್ಳ ಬೇಕೆಂದಿದ್ದಲ್ಲಿ ಅದನ್ನು ಆಪ್‌ ಸ್ಟೋರ್‌ ಮೂಲಕವೇ ಡೌನ್ಲೋಡ್‌ ಮಾಡಿಕೊಳ್ಳಿ. ಏಕೆಂದರೆ ಈ ಅಪ್ಲಿಕೇಷನ್‌ಗಳನ್ನು ಬೇರೆ ಬೇರೆ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುತ್ತಾರೆ. ಕೆಲವೊಂದು ಅಪ್ಲಿಕೇಶನ್‌ಗಳಲ್ಲಿ ವೈರಸ್‌ ಅಡಗಿರುವ ಸಾಧ್ಯತೆಗಳಿರುತ್ತದೆ, ಆದ್ದರಿಂದ ನಂಬಿಕಾರ್ಹ ವಾಗಿರುವ ಆಪ್‌ ಸ್ಟೋರ್‌ ಮೂಲಕವೇ ಆಪ್ಸ್‌ ಡೌನ್ಲೋಡ್‌ ಮಾಡಿಕೊಳ್ಳಿ.

4-ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಬ್ಲೂಟೂತ್‌ ಆಪ್ಷನ್ಸ್‌ ಯಾವಾಗಲೂ ಅನ್‌ಡಿಟೆಕ್ಟೆಡ್‌ ಅಥವಾ ಹಿಡನ್‌ ಮೋಡ್‌ನಲ್ಲಿ ಇಡಿ. ಇದರಿಂದ ಜನ ಭರಿತ ಪ್ರದೇಶಗಳಲ್ಲಿ ನಿಮ್ಮ ಮೊಬೈಲ್‌ಗೆ ಯಾರಾದರು ವೈರಸ್‌ ಕಳುಹಿಸ ಬಹುದಾದ ಸಾಧ್ಯತೆಗಳಿಂದ ಪಾರಾಗ ಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot