ನಿಮ್ಮ ವಾಟ್ಸ್‌ಆಪ್‌ ಹ್ಯಾಕ್‌ ಆಗುತ್ತಿದೆ ಎಂಬ ಭಯವೇ..? ಹ್ಯಾಕರ್‌ಗಳಿಂದ ತಪ್ಪಿಸಿಕೊಳ್ಳಲು ಈ ಸುಲಭ ವಿಧಾನಗಳನ್ನು ಅನುಸರಿಸಿ

By Gizbot Bureau
|

ಸಾವಿಲ್ಲದ ಮನೆಯಂತೆ, ಈಗ ವಾಟ್ಸ್‌ಆಪ್‌ ಇಲ್ಲದ ಸ್ಮಾರ್ಟ್‌ಫೋನ್‌ ಕೂಡ ಇಲ್ಲದಂತಾಗಿದೆ. ಹೌದು, ಆಧುನಿಕ ಜೀವನದಲ್ಲಿ ವಾಟ್ಸ್‌ಆಪ್‌ ಅಷ್ಟೊಂದು ಪ್ರಮುಖವಾಗಿದೆ. ಏನೇ ಕೆಲಸ ಇದ್ದರೂ ಈಗ ವಾಟ್ಸ್‌ಆಪ್‌.. ವಾಟ್ಸ್‌ಆಪ್‌.. ವಾಟ್ಸ್‌ಆಪ್‌ ಮಾತ್ರ.. ಈ ಹಿನ್ನೆಲೆ ವಾಟ್ಸ್‌ಆಪ್‌ ಖಾತೆಗೆ ಮತ್ತಷ್ಟು ಭದ್ರತೆ ನೀಡಲು ಹಾಗೂ ಹ್ಯಾಕ್ ಆಗದಂತೆ ನೋಡಿಕೊಳ್ಳಲು ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಕಂಪನಿ ನೀಡಿದೆ. ಇವುಗಳು ಎನ್‌ಕ್ರಿಪ್ಟ್ ಮಾಡಲಾದ ಬ್ಯಾಕ್‌ಅಪ್ ವೈಶಿಷ್ಟ್ಯದಲ್ಲೂ ಕಾರ್ಯನಿರ್ವಹಿಸುತ್ತಿವೆ.

ವಾಟ್ಸ್‌ಆಪ್

ಈಗ ವಾಟ್ಸ್‌ಆಪ್‌ ವೆಬ್‌ಗೆ ಲಾಗಿನ್‌ ಆಗಲು ಹೆಚ್ಚುವರಿ ಸುರಕ್ಷತೆ ಆಯ್ಕೆಯನ್ನು ನೀಡಿದೆ. ಮೊದಲೆಲ್ಲಾ ಕೇವಲ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಸಾಕಾಗಿತ್ತು. ಈಗ ಫೇಸ್‌ ಅನ್‌ಲಾಕ್‌ ಅಥವಾ ಫಿಂಗರ್‌ ಅನ್‌ಲಾಕ್‌ ಮಾಡಬೇಕಾಗಿದೆ. ಇದರ ಜೊತೆ ಅನೇಕ ಸುರಕ್ಷತಾ ಫೀಚರ್‌ಗಳನ್ನು ನೀಡಿದ್ದು, ಅದರಲ್ಲಿ ಪ್ರಮುಖವಾದವುಗಳನ್ನು ಈ ಕೆಳಗೆ ನೀಡಲಾಗಿದೆ.

ಡಿಸ್‌ಅಪಿಯರಿಂಗ್‌ ಮೆಸೇಜ್‌

ಡಿಸ್‌ಅಪಿಯರಿಂಗ್‌ ಮೆಸೇಜ್‌

ವಾಟ್ಸ್‌ಆಪ್ ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಸಂದೇಶಗಳ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೀವು ಈ ಫೀಚರ್‌ನ್ನು ಸಕ್ರಿಯಗೊಳಿಸಿದರ, ಹೊಸ ಸಂದೇಶಗಳು 7 ದಿನಗಳ ನಂತರ ಡಿಲೀಟ್‌ ಆಗುತ್ತವೆ. ಈ ಫೀಚರ್‌ನ್ನು ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

* ವಾಟ್ಸ್‌ಆಪ್‌ ಒಪನ್‌ ಮಾಡಿ.

* ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್‌ ಅನ್ವಯಿಸಬೇಕಾದ ಸಂಪರ್ಕ ಸಂಖ್ಯೆಯನ್ನು ಆಯ್ಕೆ ಮಾಡಿ.

* ಬಳಿಕ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

* ವೀವ್‌ ಕಾಂಟ್ಯಾಕ್ಟ್‌ ಎಂಬ ಆಯ್ಕೆ ಕ್ಲಿಕ್‌ ಮಾಡಿದ ಬಳಿಕ, ಅಲ್ಲಿ ಕಾಣುವ ಡಿಸ್‌ಅಪಿಯರಿಂಗ್‌ ಮೆಸೇಜ್‌ನ ಆನ್‌ ಆಯ್ಕೆಯನ್ನು ಟ್ಯಾಪ್‌ ಮಾಡಿದರೆ, ಕಣ್ಮರೆಯಾಗುವ ಸಂದೇಶ ಫೀಚರ್‌ ನಿಮ್ಮ ವಾಟ್ಸ್‌ಆಪ್‌ನಲ್ಲಿ ಲಭ್ಯವಾದಂತೆ.

ಟೂ ಸ್ಟೆಪ್‌ ವೆರಿಫಿಕೇಷನ್‌

ಟೂ ಸ್ಟೆಪ್‌ ವೆರಿಫಿಕೇಷನ್‌

ಟೂ ಸ್ಟೆಪ್‌ ವೆರಿಫಿಕೇಷನ್‌ ಅಥವಾ ಎರಡು ಹಂತದ ದೃಢೀಕರಣ ನಿಮ್ಮ ವಾಟ್ಸ್‌ಆಪ್‌ಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಇಲ್ಲಿ ನೀವು 6 ಸಂಖ್ಯೆಯ ಪಿನ್‌ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇಲ್ಲಿ ಕೇವಲ ಮೊಬೈಲ್‌ ಸಂಖ್ಯೆ ಮಾತ್ರವಲ್ಲದೇ ಇಮೇಲ್‌ನ್ನು ನಮೂದಿಸಿ ಕೂಡ 6 ಸಂಖ್ಯೆಯ ಕೋಡ್‌ ಬಳಸಬಹುದು. ಟೂ ಸ್ಟೆಪ್‌ ವೆರಿಫಿಕೇಷನ್‌ ಫೀಚರ್‌ ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

* ವಾಟ್ಸ್‌ಆಪ್‌ನ್ನು ಒಪನ್‌ ಮಾಡಿ.

* ಬಳಿಕ ವಾಟ್ಸ್‌ಆಪ್‌ ಸೆಟ್ಟಿಂಗ್ಸ್‌ಗೆ ಹೋಗಿ.

* ಅಲ್ಲಿ ಅಕೌಂಟ್‌ಗೆ ಕ್ಲಿಕ್‌ ಮಾಡಿ, ಟೂ ಸ್ಟೆಪ್‌ ವೆರಿಫಿಕೇಷನ್‌ > ಎನೆಬೆಲ್‌ ಆಯ್ಕೆ ಟ್ಯಾಪ್‌ ಮಾಡಿ.

* ಬಳಿಕ ನಿಮ್ಮ ಆಯ್ಕೆಯ 6 ಸಂಖ್ಯೆಯ ಪಿನ್‌ ನಮೂದಿಸಿ, ದೃಢಪಡಿಸಿದರೆ ಈ ಫೀಚರ್‌ ಕೂಡ ಸಕ್ರಿಯ.

ಟಚ್‌ ಐಡಿ, ಫೇಸ್‌ ಐಡಿಯೊಂದಿಗೆ ವಾಟ್ಸ್‌ಆಪ್‌ ಲಾಕ್‌ ಮಾಡಿ

ಟಚ್‌ ಐಡಿ, ಫೇಸ್‌ ಐಡಿಯೊಂದಿಗೆ ವಾಟ್ಸ್‌ಆಪ್‌ ಲಾಕ್‌ ಮಾಡಿ

ವಾಟ್ಸ್‌ಆಪ್‌ ಬಳಕೆದಾರರು ತಮ್ಮ ಐಫೋನ್‌ನಲ್ಲಿ ಟಚ್‌ ಐಡಿ, ಫೇಸ್‌ ಐಡಿ ಹಾಗೂ ಆಂಡ್ರಾಯ್ಡ್‌ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್‌ ಲಾಕ್‌ ಫೀಚರ್‌ ಸಕ್ರಿಯಗೊಳಿಸಿ ಮತ್ತೊಂದು ಹಂತದ ಭದ್ರತೆಯನ್ನು ನೀಡಬಹುದು. ಇದಕ್ಕೆ ನೀವು ವಾಟ್ಸ್‌ಆಪ್‌ ಸೆಟ್ಟಿಂಗ್ಸ್‌ಗೆ ಹೋಗಿ, ಅಕೌಂಟ್‌ನಲ್ಲಿನ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್‌ ಮಾಡಿ, ಸ್ಕ್ರೀನ್‌ ಲಾಕ್‌ನ್ನು ಬಳಸಬಹುದು.

ಬ್ಲಾಕ್‌ ಅಥವಾ ಸ್ಪ್ಯಾಮ್‌ ರಿಪೋರ್ಟ್‌

ಬ್ಲಾಕ್‌ ಅಥವಾ ಸ್ಪ್ಯಾಮ್‌ ರಿಪೋರ್ಟ್‌

ಯಾವುದಾದರೂ ಕಾಂಟ್ಯಾಕ್ಟ್‌ನಿಂದ ನಿಮಗೆ ಅಭದ್ರತೆ ಕಂಡುಬಂದರೆ ಆ ಸಂಖ್ಯೆಯನ್ನು ವಾಟ್ಸ್‌ಆಪ್‌ನಲ್ಲಿ ಬ್ಲಾಕ್‌ ಮಾಡಬಹುದು. ಅಥವಾ ಸ್ಪ್ಯಾಮ್‌ ಆಗಿ ರಿಪೋರ್ಟ್‌ ಮಾಡಬಹುದು. ಇದರಿಂದ ನಿಮಗೆ ಆ ಸಂಖ್ಯೆಯಿಂದ ಮೆಸೇಜ್‌ ಅಥವಾ ಕಾಲ್‌ ಬರಲ್ಲ.

ಗ್ರೂಪ್‌ ಸೆಟ್ಟಿಂಗ್ಸ್‌

ಗ್ರೂಪ್‌ ಸೆಟ್ಟಿಂಗ್ಸ್‌

ವಾಟ್ಸ್‌ಆಪ್‌ನಲ್ಲಿ ಗ್ರೂಪ್‌ಗಳ ಸಾಮ್ರಾಜ್ಯವೇ ಇರುತ್ತದೆ. ಅವಶ್ಯಕತೆ ಇಲ್ಲದ ಅನೇಕ ಗ್ರೂಪ್‌ಗಳಲ್ಲಿ ಗೊತ್ತಿದ್ದು, ಗೊತ್ತಿಲ್ಲದೆಯೋ ಸೇರಿಬಿಟ್ಟಿರುತ್ತೇವೆ. ಆದ್ದರಿಂದ ಗ್ರೂಪ್‌ಗೆ ಸೇರುವ ಮುನ್ನ ನಮ್ಮ ಅನುಮತಿ ಪಡೆಯುವ ಫೀಚರ್‌ ಕೂಡ ಇದೆ. ಅದಕ್ಕಾಗಿ ನೀವು ವಾಟ್ಸ್‌ಆಪ್‌ನ್ನು ಒಪನ್‌ ಮಾಡಿ, ಸೆಟ್ಟಿಂಗ್ಸ್‌ಗೆ ಹೋಗಿ. ಬಳಿಕ ಅಕೌಂಟ್‌ ಮೇಲೆ ಕ್ಲಿಕ್‌ ಮಾಡಿ, ಅಲ್ಲಿ ಕಾಣುವ ಪ್ರೈವೆಸಿ ಟ್ಯಾಬ್‌ನಲ್ಲಿ ಗ್ರೂಪ್ಸ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ, ನಿಮಗೆ ಬೇಕಾದ ಆಯ್ಕೆಯನ್ನು ಚೂಸ್‌ ಮಾಡಿಕೊಳ್ಳಬಹುದು.

Most Read Articles
Best Mobiles in India

English summary
How To Protect Your WhatsApp Account From Getting Hacked

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X