ATMನಲ್ಲಿ ಜಿಯೋ ನಂಬರ್ ರೀಚಾರ್ಜ್ ಮಾಡುವುದು ಹೇಗೆ ಗೊತ್ತಾ?

|

ಕೊರೊನಾ ವೈರಸ್ ಹರಡುವುದನ್ನು ತಡೆಯುವ ಕಾರಣದಿಂದಾಗಿ ಏಪ್ರಿಲ್ 15 ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮೊಬೈಲ್ ರೀಚಾರ್ಜ್ ಅಂಗಡಿಗಳು ಮುಚ್ಚಿರುವುದರಿಂದ ಬಹುತೇಕರು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದರೆ ಆನ್‌ಲೈನ್‌ ರೀಚಾರ್ಜ್ ಸೌಲಭ್ಯ ಬಳಸದವರಿಗೆ ಸಮಸ್ಯೆ ಅನಿಸುತ್ತದೆ. ಈ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅನುಕೂಲವಾಗಲೆಂದು ಹೊಸದೊಂದು ಸೇವೆಯನ್ನು ನೀಡಿದೆ.

ಹೌದು, ಜಿಯೋ ಸಂಸ್ಥೆಯು ಚಂದಾದಾರರ ಅನುಕೂಲಕ್ಕಾಗಿ ಬ್ಯಾಂಕ್ ATM ಸೆಂಟರ್‌ಗಳಿಂದಲೇ ಜಿಯೋ ನಂಬರ್ ರೀಚಾರ್ಜ್ ಮಾಡಿಕೊಳ್ಳುವ ಹೊಸದೊಂದು ಸೌಲಭ್ಯವನ್ನು ಪರಿಚಯಿಸಿದೆ. ಲಾಕ್‌ಡೌನ್ ಸಮಯದಲ್ಲಿ ಈ ಸೇವೆಯು ಗ್ರಾಹಕರಿಗೆ ಉಪಯುಕ್ತ ಅನಿಸಲಿದೆ. ಆದರೆ ಕೆಲವು ಆಯ್ದ ಬ್ಯಾಂಕ್‌ ATMಗಳು ಮಾತ್ರ ಈ ಸೇವೆಯನ್ನು ಬೆಂಬಲಿಸುತ್ತವೆ ಎಂಬುದನ್ನು ಗ್ರಾಹಕರಿಗೆ ತಿಳಿದಿರಲಿ.

ಆಕ್ಸಿಸ್ ಬ್ಯಾಂಕ್

ಪ್ರಸ್ತುತ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಯುಎಫ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಸಿಟಿಬ್ಯಾಂಕ್, ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕುಗಳು ಜಿಯೋದ ಈ ಹೊಸ ರೀಚಾರ್ಜ್ ಸೌಲಭ್ಯವನ್ನು ಬೆಂಬಲಿಸುತ್ತವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‌ಗಳನ್ನು ಈ ಸೌಲಭ್ಯಯನ್ನು ಬೆಂಬಲಿಸಲಿವೆಯೇ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗಾದರೇ ಎಟಿಎಂ ಕಾರ್ಡ್‌ ಬಳಸಿ ಜಿಯೋ ಸಂಖ್ಯೆಯನ್ನು ರೀಚಾರ್ಜ್ ಮಾಡುವುದು ಹೇಗೆ? ರೀಚಾರ್ಜ್‌ ಮಾಡುವಾಗ ಯಾವೆಲ್ಲ ಹಂತಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬ್ಯಾಂಕ್ ATMನಿಂದ ಜಿಯೋ ನಂಬರ್ ರೀಚಾರ್ಜ್ ಮಾಡುವಾಗ ಈ ಹಂತ ಅನುಸರಿಸಿ

ಬ್ಯಾಂಕ್ ATMನಿಂದ ಜಿಯೋ ನಂಬರ್ ರೀಚಾರ್ಜ್ ಮಾಡುವಾಗ ಈ ಹಂತ ಅನುಸರಿಸಿ

* ATM ಮಶಿನ್‌ನಲ್ಲಿ ಡೆಬಿಟ್ ಕಾರ್ಡ್ ಸೇರಿಸಿ
* ರೀಚಾರ್ಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
* ಜಿಯೋ ನಂಬರ್ ನಮೂದಿಸಿ
* ATM ಪಿನ್ ಎಂಟ್ರಿ ಮಾಡಿ
* ರೀಚಾರ್ಜ್ ಮೊತ್ತ ಆಯ್ಕೆ ಮಾಡಿ.
* ರೀಚಾರ್ಜ್ ಖಚಿತಪಡಿಸಲು Enter ಒತ್ತಿರಿ.
* ನೆನಪಿರಲಿ- ಕೆಲವು ಆಯ್ದ ATMಗಳು ಮಾತ್ರ ಈ ಸೇವೆ ಬೆಂಬಲಿಸಲಿವೆ.

ಕೊನೆಯ ಮಾತು

ಕೊನೆಯ ಮಾತು

ಜಿಯೋ ಟೆಲಿಕಾಂ ಬ್ಯಾಂಕ್ ಎಟಿಎಂಗಳ ಮೂಲಕ ಮೊಬೈಲ್ ರೀಚಾರ್ಜ್ ಮಾಡಲು ಅವಕಾಶ ಪರಿಚಯಿಸಿರುವುದು ಆಸಕ್ತಿಕರ ಕ್ರಮವಾಗಿದೆ. ಆದರೆ ಈ ಸೇವೆಯು ಕೆಲವು ಆಯ್ದ ಬ್ಯಾಂಕ್‌ ಎಟಿಎಮ್‌ಗಳು ಮಾತ್ರ ಈ ಸೌಲಭ್ಯವನ್ನು ಪಡೆದಿವೆ. ಆದರೆ ಈ ಸೇವೆ ಪಡೆಯಲು ಗ್ರಾಹಕರು ಮನೆಯಿಂದ ಎಟಿಎಮ್‌ ಸೆಂಟರ್‌ಗೆ ಹೋಗಲೇಬೇಕು ಹೀಗಾಗಿ ಆನ್‌ಲೈನ್‌ ರೀಚಾರ್ಜ್‌ ಉತ್ತಮ ಅನಿಸುತ್ತದೆ. ಸದ್ಯ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಯುಪಿಐ/ಡಿಜಿಟಲ್ ಪೇಮೆಂಟ್‌ ಆಪ್ಸ್‌ಗಳು ಸುಲಭವಾಗಿ ರೀಚಾರ್ಜ್ ಆಯ್ಕೆ ನೀಡಿವೆ.

Best Mobiles in India

English summary
To recharge your Jio number via an ATM, you should follow the below-mentioned steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X