ವಾಟ್ಸಾಪ್‌ ಕರೆ ರೆಕಾರ್ಡ್‌ ಮಾಡಬಹುದೇ?..ರೆಕಾರ್ಡ್‌ ಮಾಡುವುದು ಹೇಗೆ?

|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಮೆಸೆಂಜರ್ ಆಪ್ ಕೇವಲ ಮೆಸೆಜ್‌ ಕಳುಹಿಸುವಿಕೆಗಾಗಿ ಮಾತ್ರವಲ್ಲದೆ, ಒಂದು ಅತ್ಯುತ್ತಮ ಶೇರಿಂಗ್‌ ಪ್ಲಾಟ್‌ಫಾರ್ಮ್ ಆಗಿದೆ. ವಾಟ್ಸಾಪ್‌ನಲ್ಲಿ ಫೋಟೊ, ವಿಡಿಯೋ ಶೇರ್ ಮಾಡಬಹುದಾಗಿದೆ. ಜೊತೆಗೆ ಡಾಕ್ಯುಮೆಂಟ್‌ ಫೈಲ್‌ಗಳನ್ನು ಸಹ ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಅಲ್ಲದೇ ಸುಲಭವಾಗಿ ವಾಯಿಸ್‌ ಕರೆ ಮತ್ತು ವಿಡಿಯೋ ಕರೆಗಳನ್ನು ಮಾಡಬಹುದಾಗಿದೆ.

ವೀಡಿಯೊ

ಹೌದು, ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವುದಕ್ಕೆ ಅವಕಾಶ ನೀಡಿದೆ, ಆದರೆ ವಾಯಿಸ್‌ ಕರೆಗಳು ಅಥವಾ ವೀಡಿಯೊ ಕರೆಗಳನ್ನು ರೆಕಾರ್ಡ್ ಮಾಡಲು ಇದು ಅನುಮತಿಸುವುದಿಲ್ಲ. ಅದಾಗ್ಯೂ, ಆದರೆ ವಾಯಿಸ್‌ ಕರೆಗಳು ಅಥವಾ ವೀಡಿಯೊ ಕರೆಗಳನ್ನು ರೆಕಾರ್ಡ್ ಪರ್ಯಾಯ ಮಾರ್ಗಗಳಿವೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನಗಳಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳು ಅಥವಾ ವೀಡಿಯೊ ಕರೆಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

 ಕ್ಯೂಬ್ ಕಾಲ್ ಅಪ್ಲಿಕೇಶನ್‌

ಕ್ಯೂಬ್ ಕಾಲ್ ಅಪ್ಲಿಕೇಶನ್‌

* ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಕ್ಯೂಬ್ ಕಾಲ್ ಅಪ್ಲಿಕೇಶನ್‌ಗಾಗಿ ಹುಡುಕಿ.
* ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಕ್ಯೂಬ್ ಕಾಲ್ ಆಪ್‌ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ.
* ಕ್ಯೂಬ್ ಕಾಲ್ ವಾಯ್ಸ್ ಕಾಲ್ ರೆಕಾರ್ಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ವಾಟ್ಸಾಪ್‌ ಗೆ ಬದಲಿಸಿ.
* ಕ್ಯೂಬ್ ಕಾಲ್ ವಾಯಿಸ್‌ ಕರೆಯನ್ನು ತೆಗೆದುಕೊಳ್ಳುವಾಗ ಕ್ಯೂಬ್ ಕಾಲ್ ವಿಜೆಟ್ ಇರುತ್ತದೆ.
* ಇಲ್ಲದಿದ್ದರೆ, ಕ್ಯೂಬ್ ಕಾಲ್ ರೆಕಾರ್ಡರ್ ಸೆಟ್ಟಿಂಗ್‌ಗಳನ್ನು ತೆರೆಯಿರಿ ಮತ್ತು ಫೋರ್ಸ್ VoIP ಕರೆಯನ್ನು ಧ್ವನಿ ಕರೆಯಾಗಿ ಆಯ್ಕೆಮಾಡಿ.
* ಮತ್ತೆ ಕರೆ ಮಾಡಿ ಮತ್ತು ವಿಜೆಟ್ ಕಾಣಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿ. ಅದು ನಿಮಗೆ ಇನ್ನೂ ದೋಷವನ್ನು ನೀಡಿದರೆ, ನಿಮ್ಮ ಫೋನ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸದೇ ಇರಬಹುದು ಎಂದರ್ಥ.

ಐಫೋನ್‌ನಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಹೀಗೆ ಮಾಡಿ:

ಐಫೋನ್‌ನಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಹೀಗೆ ಮಾಡಿ:

ಐಫೋನ್‌ನಲ್ಲಿ ವಾಟ್ಸಾಪ್‌ ಧ್ವನಿ ಕರೆಯನ್ನು ರೆಕಾರ್ಡ್ ಮಾಡುವುದು ಒಂದು ಟ್ರಿಕಿ ಕೆಲಸ. ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ಸುಲಭವಾಗಿ ರೆಕಾರ್ಡ್ ಮಾಡಲು ಯಾವುದೇ ನಿರ್ದಿಷ್ಟ ಅಪ್ಲಿಕೇಶನ್ ಇಲ್ಲ. ಆದಾಗ್ಯೂ, ಒಂದು ಪರಿಹಾರವಿದೆ, ಇದಕ್ಕೆ ಮ್ಯಾಕ್ ಮತ್ತು ಐಫೋನ್ ಅಗತ್ಯವಿರುತ್ತದೆ. ಮುಂದಿನ ಹಂತ ಗಮನಿಸಿ.

ಐಫೋನ್

* ಲೈಟಿಂಗ್ ಕೇಬಲ್ ಬಳಸಿ ನಿಮ್ಮ ಐಫೋನ್ ಅನ್ನು ಮ್ಯಾಕ್‌ಗೆ ಸಂಪರ್ಕಿಸಿ. ನಿಮ್ಮ ಐಫೋನ್‌ನಲ್ಲಿ 'Trust this computer' ಆಯ್ಕೆಯನ್ನು ಆರಿಸಿ.
* ಮ್ಯಾಕ್‌ ಡಿವೈಸ್‌ನಲ್ಲಿ QuickTime ಅಪ್ಲಿಕೇಶನ್ ತೆರೆಯಿರಿ. ಫೈಲ್ ಆಯ್ಕೆಗೆ ಹೋಗಿ ಮತ್ತು ಹೊಸ ಆಡಿಯೊ ರೆಕಾರ್ಡಿಂಗ್ ಆಯ್ಕೆ ಮಾಡಿ.
* ಐಫೋನ್ ಅನ್ನು ಆಯ್ಕೆಯಾಗಿ ಆರಿಸಿ ಮತ್ತು ಕ್ವಿಕ್‌ಟೈಮ್‌ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ.
* ಈಗ, ಐಫೋನ್‌ ನಿಂದ ನಿಮ್ಮ ಫೋನ್‌ಗೆ ವಾಟ್ಸಾಪ್‌ ಕರೆ ಮಾಡಿ. ನೀವು ಸಂಪರ್ಕಗೊಂಡ ನಂತರ ಬಳಕೆದಾರರನ್ನು ಸೇರಿಸು ಐಕಾನ್ ಅನ್ನು ಕ್ಲಿಕ್ ಮಾಡಿ.
* ಈಗ, ನೀವು ಆಡಿಯೊವನ್ನು ರೆಕಾರ್ಡ್ ಮಾಡಲು ಬಯಸುವ ವ್ಯಕ್ತಿಗೆ ಕರೆ ಮಾಡಿ ಮತ್ತು ನಿಮ್ಮ ಸಂಭಾಷಣೆಯನ್ನು ಪ್ರಾರಂಭಿಸಿ. ನಂತರ, ಕರೆಯನ್ನು ಕಡಿತಗೊಳಿಸಿ ಮತ್ತು ಕ್ವಿಕ್‌ಟೈಮ್‌ನಲ್ಲಿ ರೆಕಾರ್ಡಿಂಗ್ ಅನ್ನು ನಿಲ್ಲಿಸಿ. ಮ್ಯಾಕ್‌ ನಲ್ಲಿ ಫೈಲ್ ಅನ್ನು ಸೇವ್ ಮಾಡಿ ಮತ್ತು ನಿಮ್ಮ ವಾಟ್ಸಾಪ್‌ ವಾಯಿಸ್‌ ಕರೆ ರೆಕಾರ್ಡ್ ಆಗುತ್ತದೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಹೀಗೆ ಮಾಡಿ:

ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ವಾಯಿಸ್‌ ಕರೆಗಳನ್ನು ರೆಕಾರ್ಡ್ ಮಾಡಲು ಹೀಗೆ ಮಾಡಿ:

* ಗೂಗಲ್ ಪ್ಲೇ ಸ್ಟೋರ್ ಆಪ್‌ ಹೋಗಿ ಮತ್ತು AZ ಸ್ಕ್ರೀನ್ ರೆಕಾರ್ಡರ್ ಅಪ್ಲಿಕೇಶನ್‌ಗಾಗಿ ಸರ್ಚ್‌ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌.
* ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್ ನಿಮ್ಮ ಅಧಿಸೂಚನೆ ಫಲಕದಲ್ಲಿ ಪಾಪ್-ಅಪ್ ವಿಜೆಟ್ ಅನ್ನು ರಚಿಸುತ್ತದೆ. ಕರೆಯನ್ನು ರೆಕಾರ್ಡ್ ಮಾಡುವ ಮೊದಲು ನೀವು 'ಆಡಿಯೊ ರೆಕಾರ್ಡಿಂಗ್ ಸಕ್ರಿಯಗೊಳಿಸಿ' ಅನ್ನು ಟಾಗಲ್ ಮಾಡಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ರೆಕಾರ್ಡರ್

* ಈಗ ವಾಟ್ಸಾಪ್‌ ಆಪ್‌ ಅನ್ನು ತೆರೆಯಿರಿ ಮತ್ತು ನೀವು ಕರೆಯನ್ನು ರೆಕಾರ್ಡ್ ಮಾಡಲು ಬಯಸುವ ವ್ಯಕ್ತಿಗೆ ಕರೆ ಮಾಡಿ.
* ಕರೆ ಪ್ರಾರಂಭವಾದ ನಂತರ, AZ ಸ್ಕ್ರೀನ್ ರೆಕಾರ್ಡರ್ ವಿಜೆಟ್‌ನಲ್ಲಿರುವ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ. ನೀವು ಮಾಡಿದ ನಂತರ, ರೆಕಾರ್ಡಿಂಗ್ ಅನ್ನು ನಿಲ್ಲಿಸಿ ಮತ್ತು ನಿಮ್ಮ ವಾಟ್ಸಾಪ್‌ ವೀಡಿಯೊ ಕರೆಯನ್ನು ಅಪ್ಲಿಕೇಶನ್‌ನಲ್ಲಿ ಉಳಿಸಲಾಗುತ್ತದೆ.

Best Mobiles in India

English summary
How to Record WhatsApp Voice and Video Calls with Audio on Android and iOS Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X