ಗೂಗಲ್ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು ರಿಕವರಿ ಮಾಡುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಡ್ರೈವ್‌ ಕೂಡ ಒಂದಾಗಿದೆ. ಗೂಗಲ್‌ ಡ್ರೈವ್‌ ತನ್ನ ಕ್ಲೌಡ್‌ನಲ್ಲಿ ನಿಮ್ಮ್ ಫೈಲ್‌ಗಳು, ಫೊಟೋಗಳನ್ನು ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ನಿಮ್ಮ ಫೈಲ್‌ಗಳನ್ನು ಯಾವಾಗ ಬೇಕಿದ್ದರೂ ಗೂಗಲ್‌ ಡ್ರೈವ್‌ನಲ್ಲಿ ಪ್ರವೇಶಿಸಬಹುದಾಗಿದೆ. ಒಂದು ವೇಳೆ ನೀವು ಗೂಗಲ್‌ ಡ್ರೈವ್‌ನಲ್ಲಿ ನಿಮ್ಮ ಫೈಲ್‌ ಅನ್ನು ಡಿಲೀಟ್‌ ಮಾಡಿದ್ದರು ಸಹ ರಿಕವರಿ ಮಾಡುವುದಕ್ಕೆ ಅವಕಾಶ ಇದೆ.

ಗೂಗಲ್‌ ಡ್ರೈವ್‌

ಹೌದು, ಗೂಗಲ್‌ ಡ್ರೈವ್‌ನಲ್ಲಿ ನೀವು ಶೇಖರಣೆ ಮಾಡಿದ ಫೈಲ್‌ಗಳನ್ನು ಡಿಲೀಟ್‌ ಮಾಡಿದ್ದರೂ ಸಹ ಅದನ್ನು ಮರಳಿ ಪಡೆಯಬಹುದಾಗಿದೆ. ಕೆಲವೊಮ್ಮೆ ಬಳಕೆದಾರರು ಯಾವುದೊ ಟೆನ್ಶನ್‌ನಲ್ಲಿ ಇನ್ಯಾವುದೋ ಫೈಲ್‌ಗಳನ್ನು ಡಿಲೀಟ್‌ ಮಾಡಿ ನಂತರ ಪರಿತಪಿಸುತ್ತಾರೆ. ಹಾಂತ ಬಳಕೆದಾರರು ಚಿಂತಿಸಬೇಕಾದ ಅಗತ್ಯವಿಲ್ಲ ಏಕೆಂದರೆ ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಿದ ಫೈಲ್‌ ಅನ್ನು 30 ದಿನಗಳ ಒಳಗೆ ಮತ್ತೆ ಪಡೆಯಬಹುದಾಗಿದೆ. ಹಾಗಾದ್ರೆ ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು ಮತ್ತೆ ರಿಕವರಿ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್‌ ಬಳಸುವ ಬಳಕೆದಾರರು ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು 30 ದಿನಗಳ ಒಳಗೆ ಮರಳಿ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌, ಐಫೋನ್‌, ಡೆಸ್ಕ್‌ಟಾಪ್‌ ಯಾವುದೇ ಆವೃತ್ತಿಯಿಂದ ಬೇಕಾದರೂ ಗೂಗಲ್‌ ಡ್ರೈವ್‌ನಲ್ಲಿ ಫೈಲ್‌ಗಳನ್ನು ರಿಕವರಿ ಮಾಡಬಹುದು. ಗೂಗಲ್‌ ಡ್ರೈವನಲ್ಲಿ ನೀವು ಡಿಲೀಟ್‌ ಮಾಡಿದ ಫೈಲ್‌ ಮೊದಲಿಗೆ ಟ್ರಾಶ್‌ ಫೋಲ್ಡರ್‌ ಸೇರುತ್ತದೆ. ಇದು ನೀವು ಡಿಲೀಟ್‌ ಮಾಡಿದ 30ದಿನಗಳ ತನಕ ಇದೇ ಫೋಲ್ಡರ್‌ನಲ್ಲಿ ನಿಮ್ಮ ಫೈಲ್‌ ಇರಲಿದೆ. ಒಂದು ವೇಳೆ ನೀವು ಡಿಲೀಟ್‌ ಮಾಡಿದ ಫೈಲ್‌ ರಿಕವರಿ ಮಾಡಬೇಕಾದರೆ ಟ್ರಾಶ್‌ ಫೋಲ್ಡರ್‌ನಿಂದ ರಿಕವರಿ ಮಾಡಬಹುದಾಗಿದೆ. ಗೂಗಲ್‌ ಡ್ರೈವ್‌ನಲ್ಲಿ ಡಿಲೀಟ್‌ ಮಾಡಿದ ಫೈಲ್‌ಗಳನ್ನು ರಿಕವರಿ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಗೂಗಲ್ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು ರಿಕವರಿ ಮಾಡುವುದು ಹೇಗೆ?

ಗೂಗಲ್ ಡ್ರೈವ್‌ನಲ್ಲಿ ಡಿಲೀಟ್‌ ಆದ ಫೈಲ್‌ಗಳನ್ನು ರಿಕವರಿ ಮಾಡುವುದು ಹೇಗೆ?

ಹಂತ:1 ನಿಮ್ಮ ಫೋನ್‌ನಲ್ಲಿ ಗೂಗಲ್‌ ಡ್ರೈವ್ ಆಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಟ್ರಾಶ್‌ ಫೋಲ್ಡರ್‌ ಮೇಲೆ ಕ್ಲಿಕ್‌ ಮಾಡಿ.
ಹಂತ:3 ಇಲ್ಲಿ ನೀವು ಡಿಲೀಟ್‌ ಮಾಡಿದ ಫೈಲ್‌ಗಳನ್ನು ದಿನಾಂಕದ ಆಧಾರದ ಮೇಲೆ ವಿಂಗಡಿಸಿ.
ಹಂತ:4 ಡಿಲೀಟ್‌ ಮಾಡಿದ ಫೈಲ್‌ಗಳನ್ನು ರಿಕವರಿ ಮಾಡಲು ಬಯಸುವ ಫೈಲ್‌ನ ಕೆಳಗಿನ ಮೂರು ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:5 ನಂತರ ರಿಸ್ಟೋರ್‌ ಮೇಲೆ ಕ್ಲಿಕ್ ಮಾಡಿ.
ಹಂತ:6 ನಿಮ್ಮ ಫೈಲ್ ಅನ್ನು ತೆಗೆದುಹಾಕಿದ ಅದೇ ಸ್ಥಳಕ್ಕೆ ರಿಸ್ಟೋರ್‌ ಮಾಡಬೇಕಾಗುತ್ತದೆ.

ಹೀಗೆ ಮಾಡುವ ಮೂಲಕ ನೀವು ಡಿಲೀಟ್‌ ಮಾಡಿದ ಫೈಲ್‌ ಅನ್ನು ರಿಕವರಿ ಮಾಡಬಹುದಾಗಿದೆ.

ಗೂಗಲ್ ಡ್ರೈವ್‌

ಇನ್ನು, ಗೂಗಲ್ ಡ್ರೈವ್‌ 15GB ಸ್ಟೋರೇಜ್‌ ಕ್ಲೌಡ್‌ ಅನ್ನು ಪ್ರೀಯಾಗಿ ನೀಡುತ್ತದೆ. ನಂತರ ಹೆಚ್ಚುವರಿ ಕ್ಲೌಡ್‌ ಸ್ಟೋರೇಜ್‌ ಬೇಕಾದರೆ ಬಳಕೆದಾರರು ಗೂಗಲ್ ಒನ್ ಪ್ಲಾನ್‌ ಮೂಲಕ ಪಾವತಿಸಿದ ಸಂಗ್ರಹಣೆಯನ್ನು ಖರೀದಿಸಬೇಕಾಗುತ್ತದೆ. ಬೇಸಿಕ್ ಪ್ಲಾನ್ 100GB ಕ್ಲೌಡ್ ಸ್ಟೋರೇಜ್ ಗೆ ತಿಂಗಳಿಗೆ 130 ರೂ. ನೀಡಿ ಖರೀದಿಸಬೇಕಾಗುತ್ತದೆ. ಇನ್ನು 200GB ಸ್ಟೋರೇಜ್ ನೀಡುವ ಸ್ಟಾಂಡರ್ಡ್ ಪ್ಲಾನ್ ಅನ್ನು ತಿಂಗಳಿಗೆ 210ರೂ ಗಳಿಗೆ ಖರೀದಿಸಬಹುದು. ಇನ್ನು ಪ್ರೀಮಿಯಂ ಪ್ಲಾನ್ 2TB ಕ್ಲೌಡ್ ಸ್ಟೋರೇಜ್ ಅನ್ನು ತಿಂಗಳಿಗೆ 650ರೂ ಗಳಿಗೆ ಖರೀದಿಸಬಹುದಾಗಿದೆ.

Best Mobiles in India

English summary
Users can recover files on Google Drive using an Android phone, iPhone, iPad, or the desktop browser.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X