ಫೋನ್‌ನಲ್ಲಿ ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

By Shwetha
|

ಸ್ಮಾರ್ಟ್‌ಫೋನ್ ಎಷ್ಟೇ ದುಬಾರಿಯಾಗಿದ್ದರೂ ಅದರಲ್ಲಿರುವ ಕ್ಯಾಮೆರಾ ಗುಣಮಟ್ಟ ಅತ್ಯುತ್ತಮ ಎಂದೆನಿಸಿದ್ದರೂ ನೀವು ಒಮ್ಮೆ ತೆಗೆದ ಫೋಟೋಗಳು ನಷ್ಟವಾಯಿತು ಎಂದಾದಲ್ಲಿ ಅದನ್ನು ತುಂಬಲಾಗದು. ಎಷ್ಟೋ ನೆನಪುಗಳನ್ನು ಈ ಫೋಟೋಗಳು ಹೊತ್ತು ತರುತ್ತವೆ ಮತ್ತು ಅವುಗಳು ಹಠಾತ್ತಾಗಿ ನಷ್ಟವಾಗುವುದು ಎಂದರೆ ನಿಜಕ್ಕೂ ಖೇದಕರ.

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಫೋಟೋ ಡಿಲೀಟ್ ಆದಲ್ಲಿ ಅದನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಸರಳ ಪರಿಹಾರಗಳನ್ನು ಅನುಸರಿಸುವ ಮೂಲಕ ಡಿಲೀಟ್ ಆದ ಫೋಟೋಗಳನ್ನು ಮರುಪಡೆದುಕೊಳ್ಳಬಹುದಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

#1

#1

ಆಂಡ್ರಾಯ್ಡ್ ಡೇಟಾ ರಿಕವರಿಯ ಫ್ರಿ ಟ್ರಯಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಕಳೆದು ಹೋದ ಫೋಟೋಗಳನ್ನು ಮರಳಿ ಪಡೆದುಕೊಳ್ಳಲು ಇದು ಸಹಾಯಕವಾಗಲಿದೆ.

#2

#2

ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಬ್ಯಾಟರಿ ಇದೆ ಎಂಬದನ್ನು ಕಂಡುಕೊಳ್ಳಿ. ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಿಮ್ಮ ಡಿವೈಸ್‌ನಲ್ಲಿ 20% ದಷ್ಟು ಬ್ಯಾಟರಿ ಇರಬೇಕು.

#3

#3

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ನಂತರ, ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿ ಮತ್ತು ಚಾಲನೆ ಮಾಡಿ. ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸಿ

#4

#4

ಕಂಪ್ಯೂಟರ್‌ ಡ್ರೈವರ್ ಅಪ್ಲಿಕೇಶನ್ ಚಾಲನೆ ಮಾಡಲು ನಿಮ್ಮ ಕಂಪ್ಯೂಟರ್‌ನಲ್ಲಿ ಡ್ರೈವರ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಇದು ಫೋನ್ ಅನ್ನು ಪತ್ತೆಹಚ್ಚುವುದಿಲ್ಲ.

#5

#5

ನಿಮ್ಮ ಫೋನ್ ಸಾಫ್ಟ್‌ವೇರ್ ಅನ್ನು ಪತ್ತೆಹಚ್ಚಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವ ಫೈಲ್ ಅನ್ನು ಆರಿಸಿ. ಗ್ಯಾಲರಿ ಆಪ್ಶನ್‌ಗೆ ಕ್ಲಿಕ್ ಮಾಡಿ. ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್‌ಡ್ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಫೋನ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಫೋನ್‌ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ, ನಿಮ್ಮ ಫೋನ್ ಕಳೆದು ಹೋದ ಡೇಟಾವನ್ನು ಸ್ಕ್ಯಾನ್ ಮಾಡಲು ಪ್ರೊಗ್ರಾಮ್‌ಗೆ ಅನುಮತಿಯನ್ನು ನೀಡಿ.

#6

#6

ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸಿದ ನಂತರ, ರಿಕವರಿ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಮತ್ತು ಕಳೆದು ಹೋದ ಡೇಟಾವನ್ನು ರೀಸ್ಟೋರ್ ಮಾಡಬಹುದಾಗಿದೆ.

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಲೇಖನಗಳು

ವಿಶ್ವದಲ್ಲೇ ಹೆಚ್ಚು ಅಪಾಯಕಾರಿಯಂತೆ! ಈ ಫೋನ್ ಚಾರ್ಜಿಂಗ್ ವಿಧಾನ</a><br /><a href=ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?" title="ವಿಶ್ವದಲ್ಲೇ ಹೆಚ್ಚು ಅಪಾಯಕಾರಿಯಂತೆ! ಈ ಫೋನ್ ಚಾರ್ಜಿಂಗ್ ವಿಧಾನ
ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?" loading="lazy" width="100" height="56" />ವಿಶ್ವದಲ್ಲೇ ಹೆಚ್ಚು ಅಪಾಯಕಾರಿಯಂತೆ! ಈ ಫೋನ್ ಚಾರ್ಜಿಂಗ್ ವಿಧಾನ
ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

Best Mobiles in India

English summary
Android Data Recovery lets you restore lost pictures from Android devices, as well as messages, contacts and video. Now, download the free trial version of Android Data Recovery on your computer and try to recover your photos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X