ವೆಬ್‌ಪೇಜ್‌ ಅನ್ನು PDF ರೂಪದಲ್ಲಿ ಸೇವ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ ಫೈಲ್‌ನಲ್ಲಿಡಲು ಬಯಸುತ್ತಾರೆ. ಇದಲ್ಲದೆ ವೆಬ್‌ಪೇಜ್‌ ಅನ್ನು ಕೂಡ ಪಿಡಿಎಫ್‌ ಫೈಲ್‌ ರೂಪದಲ್ಲಿಡುವುದಕ್ಕೆ ಕೂಡ ಅವಕಾಶವಿದೆ. ನೀವು ಆನ್‌ಲೈನ್‌ ನೋಡಿದ ಲೇಖನವನ್ನು ಪಿಡಿಎಫ್‌ ರೂಪದಲ್ಲಿ ಸೇವ್‌ ಮಾಡಬಹುದು. ಹೀಗೆ ಸೇವ್‌ ಮಾಡಿದ ಪೇಜ್‌ ಅನ್ನು ನಿಮಗೆ ಬೇಕಿನಿಸಿದಾಗ ಓದಬಹುದು. ಇನ್ನು ನೀವು ವೆಬ್‌ಪೇಜ್‌ ಅನ್ನು ಪಿಡಿಎಫ್‌ ಫೈಲ್‌ನಲ್ಲಿ ಸೇವ್‌ ಮಾಡಬೇಕಾದರೆ ಕೆಲವು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ.

ವೆಬ್‌ಪೇಜ್‌

ಹೌದು, ವೆಬ್‌ಪೇಜ್‌ ಅನ್ನು ಕೂಡ ನೀವು ಪಿಡಿಎಫ್‌ ರೂಪದಲ್ಲಿ ಸೇವ್‌ ಮಾಡಬಹುದು. ಇದರಿಂದ ಇಂಟರ್‌ನೆಟ್‌ ಇಲ್ಲದ ಸಂದರ್ಭದಲ್ಲಿಯೂ ವೆಬ್‌ಪೇಜ್‌ನಲ್ಲಿದ್ದ ಲೇಖನವನ್ನು ಓದಬಹುದು. ಪಿಡಿಎಫ್‌ ರೂಪದಲ್ಲಿರುವ ಫೈಲ್‌ ಅನ್ನು ಯಾವಾಗ ಬೇಕಾದರೂ ತೆರೆಯಬಹುದು. ಸುಲಭವಾಗಿ ಬೇರೆಯವರಿಗೆ ಶೇರ್‌ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ವೆಬ್ ಬ್ರೌಸರ್‌ನಲ್ಲಿ ನೀವು ನೋಡುವ ಯಾವುದೇ ವೆಬ್‌ಪೇಜ್‌ ಅನ್ನು PDF ರೂಪದಲ್ಲಿ ಸೇವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ ಮತ್ತು ಆಂಡ್ರಾಯ್ಡ್‌ನಲ್ಲಿ ವೆಬ್‌ಪೇಜ್‌ ಅನ್ನು PDF ರೂಪದಲ್ಲಿ ಸೇವ್‌ ಮಾಡುವುದು ಹೇಗೆ?

ಐಫೋನ್‌ ಮತ್ತು ಆಂಡ್ರಾಯ್ಡ್‌ನಲ್ಲಿ ವೆಬ್‌ಪೇಜ್‌ ಅನ್ನು PDF ರೂಪದಲ್ಲಿ ಸೇವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ಪಿಡಿಎಫ್‌ ನಲ್ಲಿ ಸೇವ್‌ ಮಾಡಲು ಬಯಸುವ ವೆಬ್‌ಪೇಜ್‌ ಅನ್ನು ತೆರೆಯಿರಿ.
ಹಂತ:2 ನಂತರ ಕೆಳಭಾಗದಲ್ಲಿರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ, ನೀವು ಶೇರ್‌ ಪಾಪ್-ಅಪ್ ವಿಂಡೋದ ಮೇಲ್ಭಾಗದಲ್ಲಿ "ಆಯ್ಕೆಗಳು" ಬಟನ್ ಅನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ PDF ಅನ್ನು ಆಯ್ಕೆ ಮಾಡಿ ಮತ್ತು ಡನ್‌ ಬಟನ್ ಕ್ಲಿಕ್‌ ಮಾಡಿರಿ.
ಹಂತ:5 ಇದೀಗ "Save it to Files" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈ ವಿಧಾನದಿಂದ, ನೀವು ಸಂಪೂರ್ಣ ವೆಬ್‌ಪೇಜ್‌ ಅನ್ನು ಪಿಡಿಎಫ್‌ ರೂಪದಲ್ಲಿ ಸೇವ್‌ ಮಾಡಬಹುದು.

ವೆಬ್‌ಪೇಜ್‌

ಒಂದು ವೇಳೆ ನೀವು ಲೇಖನದ ಕೆಲವು ಪುಟಗಳನ್ನು ಅಥವಾ ವೆಬ್‌ಪೇಜ್‌ ಅನ್ನು PDF ಗೆ ಉಳಿಸಲು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ನೀವು ಶೇರ್‌ ಪಾಪ್-ಅಪ್ ವಿಂಡೋದಲ್ಲಿದ್ದಾಗ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಪ್ರಿಂಟ್" ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:2 ಇದರಲ್ಲಿ, ನೀವು ವಿವಿಧ ಆಯ್ಕೆಗಳನ್ನು ನೋಡುತ್ತೀರಿ. ನೀವು ಪ್ರತ್ಯೇಕ ಪುಟಗಳನ್ನು ಆಯ್ಕೆ ಮಾಡಬಹುದು, ಅನೇಕ ಪೇಜ್‌ಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಕ್ಲಿಕ್‌ ಮಾಡಿ
ಹಂತ:3 ಎಲ್ಲಾ ವಿವರಗಳನ್ನು ಆಯ್ಕೆ ಮಾಡಿದ ನಂತರ, ಪ್ರಿಂಟ್ > ಸೇವ್‌ ಡ್ರಾಫ್ಟ್‌ ಕ್ಲಿಕ್ ಮಾಡಿ.

ಆಂಡ್ರಾಯ್ಡ್‌ನಲ್ಲಿ ವೆಬ್‌ಪೇಜ್‌ ಅನ್ನು ಪಿಡಿಎಫ್‌ ರೂಪದಲ್ಲಿ ಸೇವ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ವೆಬ್‌ಪೇಜ್‌ ಅನ್ನು ಪಿಡಿಎಫ್‌ ರೂಪದಲ್ಲಿ ಸೇವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನೀವು ಪಿಡಿಎಫ್‌ನಲ್ಲಿ ಸೇವ್‌ ಮಾಡಲು ಬಯಸುವ ವೆಬ್‌ಪೇಜ್‌ ಅನ್ನು ತೆರೆಯಿರಿ.
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು ಲಂಬ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ, ಶೇರ್‌ ಬಟನ್ ಒತ್ತಿರಿ.
ಹಂತ:4 ಇದೀಗ, ಪ್ರಿಂಟ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ವಿವರಗಳನ್ನು ಸೇರಿಸಿ.
ಹಂತ:5 ನಂತರ PDF ನಲ್ಲಿ ಸೇವ್‌ ಮಾಡಿ.

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಪಿಡಿಎಫ್‌ ನಿಂದ ಪಾಸ್‌ವರ್ಡ್‌ ಅನ್ನು ತೆಗೆದುಹಾಕುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಪಾಸ್‌ವರ್ಡ್‌ ಸೆಟ್‌ ಮಾಡಿರುವ ಪಿಡಿಎಫ್‌ ಫೈಲ್‌ ಅನ್ನು ತೆರೆಯಬೇಕು.
ಹಂತ:2 ನೀವು ಪಿಡಿಎಫ್‌ ಫೈಲ್‌ ಅನ್ನು ಮೊದಲು ತೆರೆಯುವಾಗ ಪಾಸ್‌ವರ್ಡ್‌ ಎಂಟ್ರಿ ಮಾಡಬೇಕು.
ಹಂತ:3 ಪಾಸ್‌ವರ್ಡ್‌ ಮೂಲಕ ತೆರೆದ ಪಿಡಿಎಫ್‌ ಫೈಲ್‌ ಅನ್ನು ಪ್ರಿಂಟ್‌ ಮಾಡಲು ಮುಂದಾಗಿ.
ಹಂತ:4 ಪ್ರಿಂಟ್‌ ಮಾಡಲು ಒಕೆ ಮಾಡಿದಾಗ ನಿಮಗೆ ಅದರಲ್ಲಿ 'ಸೇವ್‌ ಪಿಡಿಎಫ್‌' ಆಯ್ಕೆಯನ್ನು ಕಾಣಬಹುದು.
ಹಂತ:5 ಇದರ ಸಹಾಯದಿಂದ, ನಿಮ್ಮ ಡಿವೈಸ್‌ನಲ್ಲಿ ಪಿಡಿಎಫ್‌ ನಕಲಿ ಫೈಲ್ ಅನ್ನು ನೀವು ಸೇವ್‌ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ಸೇವ್‌ ಮಾಡಿದ ಪಿಡಿಎಫ್‌ ಫೈಲ್‌ ಅನ್ನು ಪಾಸ್‌ವರ್ಡ್ ಇಲ್ಲದೆ ತೆರೆಯಲು ಸಾಧ್ಯವಾಗಲಿದೆ.

Best Mobiles in India

Read more about:
English summary
how to save a web page as a PDF on android and iOS devices in 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X