ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌

Written By:

ಯೂಟ್ಯೂಬ್‌ನಲ್ಲಿ ಇಂದು ಅಸಂಖ್ಯಾತ ವೀಡಿಯೋಗಳನ್ನ ನೋಡಬಹುದಾಗಿದೆ. ಅಲ್ಲದೇ ಡೌನ್‌ಲೋಡ್‌ ಮ್ಯಾನೇಜರ್‌ ಮೂಲಕ ನಿಮ್ಮ ಡಿವೈಸ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆದ್ರೆ ಸಮಸ್ಯೆ ಅಂದ್ರೆ ನಿಮ್ಮ ನೆಚ್ಚಿನ ವೀಡಿಯೋಗಳನ್ನ ಅದೆಷ್ಟು ಅಂತ ಡಿವೈಸ್‌ನಲ್ಲಿ ಸೇವ್‌ ಮಾಡಲು ಆಗುತ್ತೇ ಹೇಳಿ. ಶೇಖರಣ ಸಾಮರ್ಥ್ಯ ಕಡಿಮೆ ಆಗುತ್ತಲೇ ಹೊಗುತ್ತೆ. ಆದ್ದರಿಂದ ಇಂದಿನ ಲೇಖನದಲ್ಲಿ ನಿಮ್ಮ ನೆಚ್ಚಿನ ವೀಡಿಯೋಗಳನ್ನ ನೇರವಾಗಿ ಗೂಗಲ್‌ ಡ್ರೈವ್‌ಗೆ ಸೇವ್‌(Save) ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಈ ಟಿಪ್ಸ್‌ನಿಂದ ನಿಮ್ಮ ಡಿವೈಸ್‌ಗಳಲ್ಲಿ ಸ್ಪೇಸ್‌ ಸಹ ಉಳಿಯುತ್ತೆ. ಹಾಗೆ ನಿಮಗೆ ಇಷ್ಟವಾದ ನೆಚ್ಚಿನ ಎಲ್ಲಾ ವೀಡಿಯೋಗಳನ್ನ ಒಂದೇ ಲಿಸ್ಟ್‌ನಲ್ಲಿ ಶೇಖರಿಸಿದಂತೆಯೂ ಆಗುತ್ತೆ. ಲೇಖನದ ಸ್ಲೈಡರ್‌ನಲ್ಲಿ ನಿಮ್ಮ ನೆಚ್ಚಿನ ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಮಾಡುವುದು ಹೇಗೆ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

#1

ಯೂಟ್ಯೂಬ್‌ನಲ್ಲಿನ ನಿಮ್ಮ ನೆಚ್ಚಿನ ವೀಡಿಯೋಗಳನ್ನ ಯಾವುದೇ ಚಿಪ್‌, ಪೆನ್‌ಡ್ರೈವ್‌, ಹಾರ್ಡ್‌ಡಿಸ್ಕ್‌ಗಳ ಸಹಾಯವಿಲ್ಲದೇ ಗೂಗಲ್‌ ಡ್ರೈವ್‌ನಲ್ಲಿ ಸೇವ್(Save) ಮಾಡಿಕೊಳ್ಳಲು ಮೊದಲಿಗೆ ನೀವು http://www.google.com/settings/takeout/custom/youtube ಈ ಲಿಂಕ್‌ ಅನ್ನು ನಿಮ್ಮ ಬ್ರೌಸರ್‌ನಲ್ಲಿ ಓಪನ್‌ ಮಾಡಿ.

ಹಂತ 2

ಹಂತ 2

#2

ನೆನಪಿಡಬೇಕಾದ ಅಂಶವೆಂದರೆ ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಲಿಂಕ್‌ನೊಂದಿಗೆ ನೀವು ಯೂಟ್ಯೂಬ್‌ ಚಾನೆಲ್‌ಗೆ ನಿಮ್ಮ ID ನೀಡಿ ಲಾಗಿನ್‌ ಆಗಬೇಕು.

ಹಂತ 3

ಹಂತ 3

#3

ಈ ಹಂತದಲ್ಲಿ ನೀವು '‘Customize Download format' ಎಂದು ಕಾಣುವ ಪೇಜ್‌ ಅನ್ನು ಪಡೆಯುತ್ತೀರಿ. ಈ ಆಯ್ಕೆ ಕಾಣದಿದ್ದರೆ ನಿಮಗೆ ಮೊದಲು ಕಾಣುವ "Next" ಬಟನ್‌ ಅನ್ನು ಕ್ಲಿಕ್‌ ಮಾಡಿ. ನಂತರ '‘Customize Download format' ಪ್ರದರ್ಶಿತವಾಗುತ್ತದೆ. ಅದರ ಕೆಳಗೆ 'Delievery method' ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ 'Add to Drive' ಎಂಬುದನ್ನ ಸೆಲೆಕ್ಟ್ ಮಾಡಿ. ಮುಂದೆ ಓದಿ..

 ಹಂತ 4

ಹಂತ 4

#4

ಈ ಹಂತದಲ್ಲಿ 'Creative archive' ಬಟನ್‌ ಅನ್ನು ಕ್ಲಿಕ್ ಮಾಡಿ. ಇದು ನೀಲಿ ಬಟನ್‌ ಆಗಿದ್ದು ಸರಳವಾಗಿ ನಿಮಗೆ ತಿಳಿಯುತ್ತದೆ. ನಂತರದಲ್ಲಿ ವೀಡಿಯೋ ಜಿಪ್ಪಿಂಗ್‌ ಪ್ರಾರಂಭವಾಗುತ್ತದೆ. ನೀಮ್ಮ ನೆಚ್ಚಿನ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ನೇರವಾಗಿ ಸೇವ್‌ ಆಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Save YouTube Videos On Google Drive. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot