ಫೋಟೋ ಮೂಲಕವೇ ಸರ್ಚ್ ಮಾಡಲು ಈ ಆಪ್‌ಗಳು ಬೆಸ್ಟ್..!

By Gizbot Bureau
|

ಒಂದು ಫೋಟೋ ಸಾವಿರ ಪದಗಳಿಗೆ ಸಮ ಎಂಬುದನ್ನು ಕೇಳೇ ಇರ್ತಿರಿ. ಫೋಟೋ ಇದ್ರೆ ಏನ್‌ ಬೇಕಾದರೂ ಹುಡುಕಬಹುದು ಎಂಬುದು ನಿಮಗೆಲ್ಲಾ ಗೊತ್ತೆ ಇದೆ. ಅದರಂತೆ ತಂತ್ರಜ್ಞಾನ ಬೆಳೆದಂತೆಲ್ಲಾ ಸರ್ಚಿಂಗ್ ಕ್ರಮವೂ ಬದಲಾಗಿದ್ದು, ಚಿತ್ರಗಳ ಸಹಾಯದಿಂದ ಏನಾದರೂ ಸರ್ಚ್‌ ಮಾಡಬಹುದೆಂಬ ಕಾಲ ಬಂದಿದೆ. ಇದಕ್ಕಾಗಿ ನಿಮಗೆ ಹಲವು ಆಪ್‌ಗಳು ಸಹಾಯ ಮಾಡುತ್ತವೆ.

ಫೋಟೋ ಮೂಲಕವೇ ಸರ್ಚ್ ಮಾಡಲು ಈ ಆಪ್‌ಗಳು ಬೆಸ್ಟ್..!

ನೀವು ಖರೀದಿಸುವ ಉತ್ಪನ್ನದ ಡೀಲ್‌ಗಳು, ನಿಮ್ಮ ಸುತ್ತಮುತ್ತಲಿನ ಜಾಗಗಳ ಬಗ್ಗೆ ಮಾಹಿತಿ ಮತ್ತಿತರ ವಿವರಗಳನ್ನು ಹುಡುಕಲೆಂದೆ ಆಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನೀವು ಹುಡುಕಬೇಕಾದ ಜಾಗದ ಫೋಟೋವನ್ನು ಈ ಕೆಳಗಿನ ಆಪ್‌ಗಳಲ್ಲಿ ಸ್ನ್ಯಾಪ್ ಮಾಡಿದ್ರೆ ಸಾಕು ನಿಮಗೆ ಅದರ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಂತೆಯೇ ಲೆಕ್ಕ. ಹಾಗಿದ್ರೆ, ಆ ಆಪ್‌ಗಳು ಯಾವುವು ಅಂತೀರಾ..? ಮುಂದೆ ನೋಡಿ..

ಗೂಗಲ್‌ ಲೆನ್ಸ್‌

ಗೂಗಲ್‌ ಲೆನ್ಸ್‌

ಗೂಗಲ್‌ ಲೆನ್ಸ್, ಈ ಆಪ್‌ ಮೂಲಕ ಏನಾದರೂ, ಯಾವುದನ್ನಾದರೂ ಹುಡುಕಬಹುದಾಗಿದೆ. ಯಾವುದೇ ಆಬ್ಜೆಕ್ಟ್ ಶೂಟ್‌ ಮಾಡಿ, ಅದರ ಬಗ್ಗೆ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ. ಹೂ, ಪಕ್ಷಿ, ಪ್ರಾಣಿಗಳ ವಿಧಗಳನ್ನು ಗೂಗಲ್‌ ಲೆನ್ಸ್‌ನಿಂದ ತಿಳಿದುಕೊಳ್ಳಬಹುದು. ಇಷ್ಟೇ ಅಲ್ಲದೇ ನೀವು ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಬೇಕೆಂದರೂ ಗೂಗಲ್‌ ಲೆನ್ಸ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕಲಿಕೆಗೆ ಈ ಆಪ್ ಅತ್ಯಮೂಲ್ಯ ಎಂದರೆ ತಪ್ಪಾಗಲ್ಲ. ಗೂಗಲ್‌ ಲೆನ್ಸ್‌ನ್ನು ಗೂಗಲ್‌ನ ಸರ್ಚ್, ಡಿಸ್ಕವರ್, ನ್ಯೂಸ್‌ ಆಪ್ ಅಥವಾ ಗೂಗಲ್‌ ಫೋಟೋಸ್ ಆಪ್‌ ಮೂಲಕ ಆಪಲ್‌ ಬಳಕೆದಾರರು ಬಳಸಬಹುದು. ಆಂಡ್ರಾಯ್ಡ್‌ ಬಳಕೆದಾರರು ಗೂಗಲ್ ಕ್ಯಾಮೆರಾ ಮತ್ತು ಗೂಗಲ್‌ ಫೋಟೋಸ್ ಆಪ್‌ ಮೂಲಕ ಬಳಸಬಹುದು.

ಇಬೇ

ಇಬೇ

ನೀವು ಚಂದ ಕಾಣುವ ಪರಿಪೂರ್ಣ ಜೋಡಿ ಶೂಗಳಿಗಾಗಿ ಅಥವಾ ಹಳೇ ಶೈಲಿಯ ಟ್ರಕ್ ಅಥವಾ ಹೂದಾನಿಗಳನ್ನು ಹುಡುಕುತ್ತಿದ್ದರೆ ನಿಮಗೆ ಇಬೇ ಆಪ್‌ ಖಂಡಿತ ಉಪಯೋಗಕ್ಕೆ ಬರುತ್ತದೆ. ಇಮೇಜ್ ಸರ್ಚ್ ಸ್ಟ್ಯಾಂಡರ್ಡ್ ಸರ್ಚ್ ಬಾಕ್ಸ್‌ನ ಪ್ರಮುಖ ಆಯ್ಕೆಯಾಗಿದೆ. ಇಲ್ಲಿ ಫೋಟೋ ಸ್ನ್ಯಾಪ್ ಮಾಡಲು ಅಥವಾ ಕ್ಯಾಮೆರಾ ರೋಲ್‌ನಿಂದ ಫೋಟೋ ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಉತ್ಪನ್ನದ ಫೋಟೋದ ಹೋಲಿಕೆಯ ಆಧಾರದಲ್ಲಿ ಇಬೇ ಬಿಲಿಯನ್‌ಗೂ ಹೆಚ್ಚು ವಸ್ತುಗಳನ್ನು ಹುಡುಕುತ್ತದೆ.

ಅಮೆಜಾನ್ ಮೊಬೈಲ್

ಅಮೆಜಾನ್ ಮೊಬೈಲ್

ಶಾಪಿಂಗ್‌ನಲ್ಲಿ ನಿಮಗೆ ಆಸಕ್ತಿ ಇದ್ದರೆ, ಅಮೆಜಾನ್ ಮೊಬೈಲ್ ನಿಮ್ಮ ಹುಡುಕಾಟವನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾದ ಮೂಲಕ ಸುಲಭವಾಗಿಸುತ್ತದೆ. ಅಮೆಜಾನ್ ಆಪ್‌ನಲ್ಲಿ ಸರ್ಚ್ ಬಾರ್ ಪಕ್ಕವಿರುವ ಕ್ಯಾಮೆರಾದ ಮೇಲೆ ಕ್ಲಿಕ್ ಮಾಡಿ. ಕ್ಯಾಮೆರಾ ಆನ್ ಆಗುತ್ತದೆ ಮತ್ತು ನೀವು ಏನನ್ನು ಹುಡುಕಬೇಕೆಂದುಕೊಂಡಿದ್ದಿರೋ ಅದರ ಮೇಲೆ ಕ್ಯಾಮೆರಾ ಫೋಕಸ್ ಮಾಡಿ. ಅಲ್ಲಿನ ಉತ್ಪನ್ನ ಹುಡುಕಲು ಅಮೆಜಾನ್‌ ಆಪ್‌ನ ಸಣ್ಣ ಚುಕ್ಕೆಗಳು ಪ್ರಯತ್ನಿಸುತ್ತವೆ, ನಂತರ ಸಲಹೆಗಳನ್ನು ನೀಡುತ್ತವೆ. ಸ್ಟೈಲ್‌ಸ್ನ್ಯಾಪ್ ಎಂಬ ನಿರ್ದಿಷ್ಟ ಫ್ಯಾಷನ್ ಹುಡುಕಾಟ ಆಯ್ಕೆಯೂ ನಿಮಗೆ ಲಭ್ಯವಿದೆ. ಇದೆ. ಇಲ್ಲಿ ನಿಮ್ಮ ಫೋನ್‌ನ ಕ್ಯಾಮೆರಾ ರೋಲ್‌ನಿಂದ ನೀವು ಫೋಟೋ ಅಪ್‌ಲೋಡ್‌ ಮಾಡಬಹುದು ಅಥವಾ ಬ್ರೌಸ್ ಮಾಡುವಾಗ ನೀವು ಸೇವ್‌ ಮಾಡಿದ ಫೋಟೋಗಳಿಗೆ ಸುಲಭವಾಗಿ ಪ್ರವೇಶಿಸಲು "ಇತ್ತೀಚಿನ ಸ್ಕ್ರೀನ್‌ಶಾಟ್‌ಗಳನ್ನು ಆಯ್ಕೆಮಾಡಿ" ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ.

ರಿಲೇಟರ್ ಡಾಟ್‌ ಕಾಂ

ರಿಲೇಟರ್ ಡಾಟ್‌ ಕಾಂ

ನೀವು ಪರಿಪೂರ್ಣ ಮನೆಗಾಗಿ ಹುಡುಕುತ್ತಿದ್ದೀರಾ..? ಹಾಗಾದ್ರೆ ನಿಮಗೆ Realtor.com ಆಪ್‌ ನೆರವಿಗೆ ಬರುವುದು ಖಂಡಿತ. ನೀವು ಮನೆಗಳನ್ನು ಹುಡುಕುತ್ತಿರುವಾಗ ಮಾರಾಟಕ್ಕಿದೆ ಎಂಬ ಬೋರ್ಡ್‌ ಕಂಡರೆ ರಿಲೇಟರ್ ಡಾಟ್‌ ಕಾಂನಲ್ಲೊ ಬೋರ್ಡ್‌ ಜೊತೆ ಮನೆ ಫೋಟೋ ತೆಗೆದುಕೊಳ್ಳಿ. ಆಗ ನಿಮಗೆ ಮನೆಯ ಸಂಪೂರ್ಣ ರಿಯಲ್ ಎಸ್ಟೇಟ್ ಪಟ್ಟಿ ದೊರೆಯುತ್ತದೆ. ಈ ಮಾಹಿತಿಯಿಂದ ನೀವು ಆಸ್ತಿಯ ಪೂರ್ಣ ವಿವರಗಳು ಮತ್ತು ಫೋಟೋಗಳನ್ನು ಕಾರಿನಲ್ಲಿಯೇ ಕುಳಿತು ಪಡೆಯಬಹುದು.

ಸ್ನಿಪ್‌ಸ್ನ್ಯಾಪ್‌

ಸ್ನಿಪ್‌ಸ್ನ್ಯಾಪ್‌

ನೀವು ಕೂಪನ್‌ಗಳನ್ನು ಕಲೆಹಾಕುವ ಆಸಕ್ತಿ ಹೊಂದಿದ್ದರೆ, ಉತ್ಪನ್ನವನ್ನು ಎಲ್ಲಿ ಖರೀದಿಸಬೇಕೆಂಬುದರ ಬಗ್ಗೆ ಬಹಳಷ್ಟು ಪ್ಲಾನ್ ಹಾಕಿಕೊಂಡಿರುತ್ತೀರಿ. ಎಷ್ಟೇ ಪ್ಲಾನ್‌ಗಳಿದ್ದರೂ ಕಡಿಮೆ ಬೆಲೆಗೆ ಉತ್ಪನ್ನದ ಹುಡುಕಾಟದಲ್ಲಿ ನಿಮಗೆ ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ನಿಭಾಯಿಸಲು ಸ್ನಿಪ್‌ಸ್ನ್ಯಾಪ್ ಸೂಕ್ತವಾಗಿದೆ. ಸ್ನಿಪ್‌ಸ್ನ್ಯಾಪ್‌ ಆಪ್‌ನಲ್ಲಿ ಯಾವುದೇ ಪೇಪರ್ ಕೂಪನ್‌ನ ಫೋಟೋ ತೆಗೆಯಿರಿ ಮತ್ತು ಆಪ್‌ ಆ ಫೋಟೋವನ್ನು ಸ್ಕ್ಯಾನ್ ಮಾಡಿ ಮೊಬೈಲ್ ಕೊಡುಗೆಯಾಗಿ ಪರಿವರ್ತಿಸುತ್ತದೆ. ಇದಷ್ಟೇ ಅಲ್ಲದೇ, ನೀವು ಉತ್ಪನ್ನದ ಫೋಟೋ ತೆಗೆದುಕೊಂಡು ಸ್ನಿಪ್‌ಸ್ನ್ಯಾಪ್‌ ಅದನ್ನು ಗುರುತಿಸುತ್ತದೆ. ದೊಡ್ಡ ಡೇಟಾಬೇಸ್‌ಗಳಲ್ಲಿ ವಸ್ತುವಿನ ಬೆಲೆಗಳು, ಮಳಿಗೆಗಳು ಮತ್ತು ಕೂಪನ್‌ಗಳನ್ನು ಕಂಡುಹಿಡಿಯುತ್ತೀರಿ. ಸ್ನಿಪ್‌ಸ್ನ್ಯಾಪ್‌ ಮೂಲಕ ನೀವು ಯಾವಾಗಲೂ ಉತ್ತಮ ಬೆಲೆ ಪಡೆಯುತ್ತೀರಿ.

ಪಿನ್‌ಟರೆಸ್ಟ್

ಪಿನ್‌ಟರೆಸ್ಟ್

ಪಿನ್‌ಟರೆಸ್ಟ್‌ ಮೂಲಕವು ನೀವು ಸರ್ಚ್‌ ಮಾಡಬಹುದು. ಪಿನ್‌ಟರೆಸ್ಟ್‌ನ ದೃಶ್ಯ ಹುಡುಕಾಟ ಸಾಧನವು ನಿಜವಾಗಿಯೂ ಬಳಸಲು ಸುಲಭವಾಗಿದೆ. ನೀವು ಇಷ್ಟಪಡುವ ಐಟಂನೊಂದಿಗೆ ಪಿನ್ ಮೇಲೆ ಕ್ಲಿಕ್ ಮಾಡಿ, ನಂತರ ಮೂಲೆಯಲ್ಲಿರುವ ಸರ್ಚ್ ಐಕಾನ್ ಟ್ಯಾಪ್ ಮಾಡಿ. ಪಿನ್‌ಟರೆಸ್ಟ್ ನಂತರ ನೀವು ಆಯ್ಕೆ ಮಾಡಿದ ಚಿತ್ರಕ್ಕೆ ಹೋಲುವ ಪಿನ್‌ಗಳ ಗುಂಪನ್ನು ನಿಮಗೆ ನೀಡುತ್ತದೆ. ಇದರಿಂದ ನೀವು ಐಟಂ ಅನ್ನು ಎಲ್ಲಿ ಪಡೆಯಬೇಕೆಂದನ್ನು ಕಂಡುಹಿಡಿಯಬಹುದು.

Best Mobiles in India

English summary
How To Search Using Your Smartphone Camera

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X