ವಾಟ್ಸ್ ಆಪ್ ನಲ್ಲಿ ಬ್ಲಾಕ್ ಆಗಿರುವವರಿಗೆ ಮೆಸೇಜ್ ಮಾಡುವುದು ಹೇಗೆ?

By Gizbot Bureau
|

ಈಗಿನ ಜಗತ್ತಿನಲ್ಲಿ ಸಂವಹನಕ್ಕಾಗಿ ಅತೀ ಹೆಚ್ಚು ಬಳಕೆ ಮಾಡುವುದು ವಾಟ್ಸ್ ಆಪ್ ನ್ನೇ ಆಗಿದೆ. ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಗಿಂತಲೂ ಹೆಚ್ಚು ಇದನ್ನು ಬಳಕೆ ಮಾಡಲಾಗುತ್ತದೆ. ಮಲ್ಟಿಮೀಡಿಯಾ, ವೀಡಿಯೋ ಮತ್ತು ಆಡಿಯೋ, ಸ್ಟಿಕ್ಕರ್ಸ್ ಮತ್ತು ಡಾಕ್ಯುಮೆಂಟ್ ಗಳಾದ ವರ್ಡ್, ಪಿಡಿಎಫ್, ಮತ್ತು ಇತ್ಯಾದಿಗಳ ಹಂಚಿಕೆಗೂ ಕೂಡ ಇದು ನೆರವು ನೀಡುತ್ತದೆ.

ವಾಟ್ಸ್ ಆಪ್ ನಲ್ಲಿ ಬ್ಲಾಕ್ ಆಗಿರುವವರಿಗೆ ಮೆಸೇಜ್ ಮಾಡುವುದು ಹೇಗೆ?

ಫೋನ್ ಕರೆಗಳನ್ನು ಕೂಡ ಇದೀಗ ವಿಶ್ವದ ಪ್ರಸಿದ್ಧ ಮೆಸೇಜಿಂಗ್ ಆಪ್ ರಿಪ್ಲೇಸ್ ಮಾಡಿದ್ದು ವಾಟ್ಸ್ ಆಪ್ ಕಾಲಿಂಗ್ ಫೀಚರ್ ನ್ನು ಕೂಡ ಒದಗಿಸಿದೆ. ಪಿಕ್ಚರ್ ಗಳನ್ನು ಡಿಸ್ಪ್ಲೇ ಮಾಡುವುದಕ್ಕೆ, ಡಿಪಿ ಮತ್ತು ಸ್ಟೇಟಸ್ ಹಾಕುವುದಕ್ಕೂ ಕೂಡ ಇದು ನೆರವು ನೀಡುತ್ತದೆ.

ಅಷ್ಟೇ ಅಲ್ಲದೆ ವಾಟ್ಸ್ ಆಪ್ ನಲ್ಲಿ ಕಿರಿಕಿರಿ ಮಾಡುವ ಕಾಂಟ್ಯಾಕ್ಟ್ ಗಳನ್ನು ಬ್ಲಾಕ್ ಮಾಡುವುದಕ್ಕೂ ಕೂಡ ಇದು ಸಹಕರಿಸುತ್ತದೆ. ಅಷ್ಟೇ ಅಲ್ಲ ಅವರನ್ನು ಬ್ಲಾಕ್ ಮಾಡಲಾಗಿದೆ ಎಂಬ ಬಗ್ಗೆ ಅವರಿಗೆ ತಿಳಿಯುವುದೇ ಇಲ್ಲ. ಅಂತಹ ಆಕ್ಷನ್ ಗಳ ಬಗ್ಗೆ ವಾಟ್ಸ್ ಆಪ್ ಅವರಿಗೆ ನೋಟಿಫಿಕೇಷನ್ ನ್ನು ನೀಡುವುದೇ ಇಲ್ಲ. ನೀವು ಬ್ಲಾಕ್ ಆಗಿದ್ದೀರೋ ಇಲ್ಲವೋ ಎಂಬುದನ್ನು ಕೆಲವು ಇಂಡಿಕೇಷನ್ ಗಳಿಂದ ತಿಳಿದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ನೀವು ಬ್ಲಾಕ್ ಆಗಿದ್ದೀರೋ ಇಲ್ಲವೋ ತಿಳಿಯುವುದು ಹೇಗೆ?

ನೀವು ಬ್ಲಾಕ್ ಆಗಿದ್ದೀರೋ ಇಲ್ಲವೋ ತಿಳಿಯುವುದು ಹೇಗೆ?

ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ನೀವು ಯಾವುದೇ ಕಾಂಟ್ಯಾಕ್ಟ್ ನಿಂದ ಬ್ಲಾಕ್ ಆಗಿದ್ದೀರೋ ಇಲ್ಲವೋ ಎಂದು ತಿಳಿಯುವುದಕ್ಕೆ ಸಾಧ್ಯವಿದೆ.

• ನೀವು ಲಾಸ್ಟ್ ಸೀನ್ ನ್ನು ನೋಡುವುದಕ್ಕೆ ಸಾಧ್ಯವಿಲ್ಲ ಅಥವಾ ಬ್ಲಾಕ್ ಮಾಡಿರುವ ವ್ಯಕ್ತಿಯ ಆನ್ ಲೈನ್ ಸ್ಟೇಟಸ್ ನ್ನು ನೋಡುವುದಕ್ಕೆ ಸಾಧ್ಯವಿಲ್ಲ. (ಅವರು ಕೂಡ ನಿಮ್ಮ ಸ್ಟೇಟಸ್ ನೋಡಲು ಸಾಧ್ಯವಿಲ್ಲ)

• ಬ್ಲಾಕ್ ಮಾಡಿದ ವ್ಯಕ್ತಿಯ ಡಿಪಿ ನೋಡುವುದಕ್ಕೆ ಆಗುವುದಿಲ್ಲ

• ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದ ವ್ಯಕ್ತಿಗೆ ಕರೆ ಮಾಡಲು ಸಾಧ್ಯವಿಲ್ಲ ಮತ್ತು ಆ ವ್ಯಕ್ತಿಯೂ ನಿಮಗೆ ಕರೆ ಮಾಡಲು ಸಾಧ್ಯವಿಲ್ಲ

• ಆ ವ್ಯಕ್ತಿಗೆ ಕಳುಹಿಸಿದ ಮೆಸೇಜ್ ಕೇವಲ ಒಂದೇ ಒಂದು ಬೂದು ಬಣ್ಣದ ಚೆಕ್ ಮಾರ್ಕ್ ನಿಂದ ಕಾಣಿಸುತ್ತದೆ. ಎರಡು ಚೆಕ್ ಮಾರ್ಕ್ ಗಳು ಮೆಸೇಜ್ ತಲುಪಿರುವ ಬಗ್ಗೆ ಮತ್ತು ಅವರು ಓದಿರುವ ಬಗ್ಗೆ ತಿಳಿಸುತ್ತದೆ.

ಇದು ಬ್ಲಾಕ್ ಆಗಿರುವ ವ್ಯಕ್ತಿಯ ಬಗೆಗಿನ ಕೆಲವು ಇಂಡಿಕೇಷನ್ ಅಥವಾ ಸೂಚಕಗಳು. ಆದರೆ ನೀವು ಯಾರಿಂದಲೋ ಬ್ಲಾಕ್ ಆಗಿದ್ದರೆ ಮತ್ತು ಅವರಿಗೆ ಮೆಸೇಜ್ ಕಳುಹಿಸಬೇಕಾಗಿದ್ದಲ್ಲಿ ಅಥವಾ ಅನ್ ಬ್ಲಾಕ್ ಆಗಬೇಕು ಎಂದು ಇಚ್ಛಿಸುತ್ತಿದ್ದರೆ ಕೆಳಗಿನ ಕೆಲವು ಕೆಲಸಗಳನ್ನು ಮಾಡಿದರೆ ಸಾಧ್ಯವಾಗುತ್ತದೆ.

ನಿಮ್ಮನ್ನು ನೀವು ಅನ್ ಬ್ಲಾಕ್ ಮಾಡಿಕೊಳ್ಳಲು ಕೆಲವು ಸರಳ ಹಂತಗಳು:

ನಿಮ್ಮನ್ನು ನೀವು ಅನ್ ಬ್ಲಾಕ್ ಮಾಡಿಕೊಳ್ಳಲು ಕೆಲವು ಸರಳ ಹಂತಗಳು:

• ವಾಟ್ಸ್ ಆಪ್ ನಲ್ಲಿ ವಿಭಿನ್ನ ನಂಬರ್ ಬಳಸಿ ಗ್ರೂಪ್ ನ್ನು ಕ್ರಿಯೇಟ್ ಮಾಡಿ ಮತ್ತು ಆ ಗ್ರೂಪಿಗೆ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಯನ್ನು ಸೇರಿಸಿ.

• ಅಥವಾ ನಿಮ್ಮ ಫ್ರೆಂಡ್ ಬಳಿ ಹೊಸ ಗ್ರೂಪ್ ನಿರ್ಮಿಸಲು ಕೇಳಿಕೊಳ್ಳಬಹುದು ಮತ್ತು ನಿಮ್ಮ ನಂಬರ್ ನ್ನು ಸೇರಿಸುವಂತೆ ಮತ್ತು ನಿಮ್ಮ ಬ್ಲಾಕ್ ಮಾಡಿದ ವ್ಯಕ್ತಿಯನ್ನು ಆ ಗ್ರೂಪಿಗೆ ಸೇರಿಸುವಂತೆ ಕೇಳಿಕೊಳ್ಳಬಹುದು. ಈ ರೀತಿ ನೀವು ಗ್ರೂಪ್ ನಲ್ಲಿ ಮೆಸೇಜ್ ಕಳುಹಿಸಬಹುದು ಮತ್ತು ನಿಮ್ಮ ಬ್ಲಾಕ್ ಮಾಡಿದ ವ್ಯಕ್ತಿಯೂ ಕೂಡ ಈ ಮೆಸೇಜ್ ಗಳನ್ನು ನೋಡುವುದಕ್ಕೆ ಸಾಧ್ಯವಿದೆ.

ಈ ಮೇಲಿನ ವಿಧಾನ ಕೆಲಸ ಮಾಡದೇ ಇದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಈ ಮೇಲಿನ ವಿಧಾನ ಕೆಲಸ ಮಾಡದೇ ಇದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ವಾಟ್ಸ್ ಆಪ್ ಗೆ ತೆರಳಿ. ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ ಮತ್ತು ಅಕೌಂಟ್ ಆಯ್ಕೆಯನ್ನು ತೆರೆಯಿರಿ.

2. ಡಿಲೀಟ್ ಮೈ ಅಕೌಂಟ್ ನ್ನು ಸೆಲೆಕ್ಟ್ ಮಾಡಿ.

3.ನಿಮ್ಮ ವಾಟ್ಸ್ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿ.

4. ನಿಮ್ಮ ಫೋನ್ ನ್ನು ರೀಸ್ಟಾರ್ಟ್ ಮಾಡಿ.

5.ಗೂಗಲ್ ಪ್ಲೇ ಸ್ಟೋರ್ ನಿಂದ ವಾಟ್ಸ್ ಆಪ್ ನ್ನು ರಿ ಇನ್ಸ್ಟಾಲ್ ಮಾಡಿ.

6. ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡುವುದು, ಓಟಿಪಿ ಎಂಟರ್ ಮಾಡುವುದು ಇತ್ಯಾದಿ ಪ್ರೊಸೀಜರ್ ಗಳನ್ನು ಫಾಲೋ ಮಾಡಿ. ಆದರೆ ಬ್ಯಾಕ್ ಅಪ್ ಗಳನ್ನು ಮಾತ್ರ ರಿಸ್ಟೋರ್ ಮಾಡಬೇಡಿ. 7. ಇದೀಗ ನಿಮ್ಮ ನಂಬರ್ ಅನ್ ಬ್ಲಾಕ್ ಆಗಿರುತ್ತದೆ ಮತ್ತು ಯಾವುದೇ ಸಮಯದಲ್ಲಿ ನೀವು ಮೆಸೇಜ್ ಗಳನ್ನು ಇತರರಿಗೆ ಕಳುಹಿಸಬಹುದು. ಇದೀಗ ನಿಮ್ಮನ್ನ ಬ್ಲಾಕ್ ಮಾಡಿದ ವ್ಯಕ್ತಿಗೂ ಮೆಸೇಜ್ ಕಳುಹಿಸಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಯಾವಾಗ ನೀವು ನಿಮ್ಮ ವಾಟ್ಸ್ ಆಪ್ ಅಕೌಂಟ್ ನ್ನು ಡಿಲೀಟ್ ಮಾಡುತ್ತೀರೋ ಮತ್ತು ಪುನಃ ಇನ್ಸ್ಟಾಲ್ ಮಾಡುತ್ತೀರೋ ಆಗ ನೀವು ಆರಂಭದಿಂದ ವಾಟ್ಸ್ ಆಪ್ ನಲ್ಲಿ ಚಾಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಒಂದೇ ಒಂದು ಅನಾನುಕೂಲವೆಂದರೆ ನೀವು ವಾಟ್ಸ್ ಆಪ್ ಗ್ರೂಪ್ ಗಳಿಂದ ರಿಮೂವ್ ಆಗಿರುತ್ತೀರಿ. ಪುನಃ ಗ್ರೂಪಿಗೆ ಸೇರಿಕೊಳ್ಳುವುದಕ್ಕಾಗಿ ಗ್ರೂಪ್ ಅಡ್ಮಿನ್ ಬಳಿ ಮನವಿ ಮಾಡಿಕೊಳ್ಳಬೇಕಾಗುತ್ತದೆ.

ನಾವು ನಮ್ಮ ಜೀವನವನ್ನು ಸಾಮಾಜಿಕ ಜಾಲಗಳಲ್ಲೇ ಕಳೆಯುವುದು ಅಧಿಕಗೊಂಡಿರುವ ಈ ಸಂದರ್ಬದಲ್ಲಿ ಯಾರಾದರೂ ನಮ್ಮನ್ನ ಬ್ಲಾಕ್ ಮಾಡಿದರೆ ಅಥವಾ ದೂರವಿಡಲು ಪ್ರಯತ್ನಿಸಿದರೆ ಬೇಸರವಾಗುತ್ತದೆ. ಆದರೆ ಜೀವನವನ್ನು ಸರಳವಾಗಿಸಿಕೊಳ್ಳಿ ಮತ್ತು ಆರಾಮಾಗಿಸಿಕೊಳ್ಳಲು ಪ್ರಯತ್ನಿಸಿ.

Best Mobiles in India

English summary
How to send messages to a blocked WhatsApp contact

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X