ಮೊಬೈಲ್‌ ಡೇಟಾ ಮೂಲಕ ವೇಗದ ವೈ-ಫೈ ಹಾಟ್‌ಸ್ಪಾಟ್ ಪಡೆಯುವುದು ಹೇಗೆ ಗೊತ್ತಾ?

|

ಪ್ರಸ್ತುತ ಎಲ್ಲ ಆನ್‌ಲೈನ್‌ ಕೆಲಸಗಳಿಗೂ ಇಂಟರ್ನೆಟ್‌ ಬಳಕೆ ಅಗತ್ಯವಾಗಿದೆ. ಇನ್ನು ಮನೆಯಿಂದ ಕೆಲಸ ಮಾಡುವ ನೌಕರರಿಗೆ ವೇಗದ ಇಂಟರ್ನೆಟ್ ಸಂಪರ್ಕ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬಹುತೇಕರು ವೈ-ಫೈ (Wi-Fi) ಸಂಪರ್ಕವನ್ನು ಬಯಸುತ್ತಾರೆ. ಇನ್ನು ಮತ್ತೆ ಕೆಲವರು ಮೊಬೈಲ್‌ ಇಂಟರ್ನೆಟ್‌ ಮೂಲಕವೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಮೊಬೈಲ್‌ ಡೇಟಾ ವನ್ನು ವೈ-ಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಬಹುದು.

Wi-Fi

ಹೌದು, ಬಳಕೆದಾರರು ಮೊಬೈಲ್ ಡೇಟಾವನ್ನು ವೈ-ಫೈ (Wi-Fi) ಹಾಟ್‌ಸ್ಪಾಟ್ ಆಗಿ ಬಳಸಲು ಬಯಸಬಹುದು. ಆದರೆ ಸಂಪರ್ಕಿತ ಡಿವೈಸ್‌ನಲ್ಲಿ ಉತ್ತಮ ವೇಗವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಹೆಚ್ಚಿನ ಬಳಕೆದಾರರಿಗೆ ತಿಳಿದಿರುವುದಿಲ್ಲ. ಕೆಲವು ಕ್ರಮಗಳನ್ನು ಅನುಸರಿಸುವ ಮೊಬೈಲ್ ಡೇಟಾವನ್ನು ವೈ-ಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುವ ಮೂಲಕ ಉತ್ತಮ ವೇಗದ ಸಂಪರ್ಕ ಪಡೆಯಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ ಫೋನ್‌ನಲ್ಲಿ ವೈ-ಫೈ ಹಾಟ್‌ಸ್ಪಾಟ್ ಹೀಗೆ ಸೆಟ್‌ ಮಾಡಿ

ಆಂಡ್ರಾಯ್ಡ್‌ ಫೋನ್‌ನಲ್ಲಿ ವೈ-ಫೈ ಹಾಟ್‌ಸ್ಪಾಟ್ ಹೀಗೆ ಸೆಟ್‌ ಮಾಡಿ

ಮೊಬೈಲ್ ಹಾಟ್‌ಸ್ಪಾಟ್ ಅನ್ನು ಸುಲಭವಾಗಿ ಸೆಟ್ ಮಾಡಬಹುದಾಗಿದೆ. ಅದಕ್ಕಾಗಿ ಸೆಟ್ಟಿಂಗ್‌ಗಳು > ವೈ-ಫೈ ಮತ್ತು ನೆಟ್‌ವರ್ಕ್ > ಹಾಟ್‌ಸ್ಪಾಟ್ ಮತ್ತು ಟೆಥರಿಂಗ್‌ ಆಯ್ಕೆಗೆ ಭೇಟಿ ನೀಡಿ. ಬಳಿಕ ವೈ-ಫೈ ಹಾಟ್‌ಸ್ಪಾಟ್ ಅನ್ನು ಟ್ಯಾಪ್ ಮಾಡಿ ಮತ್ತು ಅದನ್ನು ಸಕ್ರಿಯಗೊಳಿಸಿ. ಹಾಟ್‌ಸ್ಪಾಟ್ ಪಾಸ್‌ವರ್ಡ್ ಅನ್ನು ಸೇರಿಸಲು ಬಳಕೆದಾರರಿಗೆ ಸಲಹೆ ನೀಡಲಾಗುತ್ತದೆ.

ಹಾಟ್‌ಸ್ಪಾಟ್

ಈ ಫೀಚರ್‌ ಅನ್ನು ಸಕ್ರಿಯಗೊಳಿಸಲು ಸುಲಭವಾದ ಮಾರ್ಗವೆಂದರೆ ಹಾಟ್‌ಸ್ಪಾಟ್ ಐಕಾನ್ ಅನ್ನು ಟ್ಯಾಪ್ ಮಾಡುವುದು. ನೀವು ನೋಟಿಫಿಕೇಶನ್‌ ಕೆಳಗೆ ಎಳೆದಾಗ ನಿಮ್ಮ ಫೋನ್‌ನ ಮೇಲ್ಭಾಗದಲ್ಲಿ ನೀವು ಕಾಣುವಿರಿ. ಅದನ್ನು ಆಫ್ ಮಾಡಲು, ನೀವು ಅದನ್ನು ಮತ್ತೆ ಟ್ಯಾಪ್ ಮಾಡಬಹುದು.

ಉತ್ತಮ ವೈ-ಫೈ ಹಾಟ್‌ಸ್ಪಾಟ್ ವೇಗವನ್ನು ಹೇಗೆ ಪಡೆಯುವುದು?

ಉತ್ತಮ ವೈ-ಫೈ ಹಾಟ್‌ಸ್ಪಾಟ್ ವೇಗವನ್ನು ಹೇಗೆ ಪಡೆಯುವುದು?

ಯುಎಸ್‌ಬಿ ಕೇಬಲ್‌ನೊಂದಿಗೆ ಜನರು ಉತ್ತಮ ಮತ್ತು ವೇಗದ ವೇಗವನ್ನು ಪಡೆಯುತ್ತಾರೆ. ಇದು ಯಾವ USB-C ಚಾರ್ಜರ್ ಅನ್ನು ಬಳಸುತ್ತಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಲವು ಸ್ಮಾರ್ಟ್‌ಫೋನ್‌ಗಳು 480Mbps ವರೆಗಿನ ವೇಗವನ್ನು ಒದಗಿಸುವ ಹಳೆಯ USB 2.0 ಕೇಬಲ್‌ನೊಂದಿಗೆ ರವಾನಿಸುತ್ತವೆ. ಹೊಸ USB 3.0 ಮತ್ತು USB 3.1 Gen 1 5Gbps ಅನ್ನು ನೀಡುತ್ತದೆ ಮತ್ತು USB 3.1 Gen 2 10Gbps ಅನ್ನು ನೀಡುತ್ತದೆ.

ಏನಿದು ವೈ-ಫೈ ಬೂಸ್ಟರ್‌

ಏನಿದು ವೈ-ಫೈ ಬೂಸ್ಟರ್‌

ಮನೆಗಳಲ್ಲಿ ಮತ್ತು ಆಫೀಸ್‌ಗಳಲ್ಲಿ ವೇಗದ ಇಂಟರ್ನೆಟ್ ಸೇವೆ ಪಡೆಯಲು ವೈ ಫೈ ನೆಟವರ್ಕ್‌ ಬಳಸುತ್ತಾರೆ. ಆ ವೈ ಫೈ ನೆಟವರ್ಕ್‌ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ವೈ ಫೈ ಸಿಗ್ನಲ್‌ಗಳಿಗೆ ಬಲ ಒದಗಿಸುವ ಕೆಲಸವನ್ನು ವೈ-ಫೈ ಬೂಸ್ಟರ್ ಮಾಡಲಿದೆ. ಇರುವ ಇಂಟರ್ನೆಟ್‌ನಲ್ಲೇ ಸೌಲಭ್ಯವನ್ನು ವೇಗವಾಗಿ ಪಡೆಯಲು ಇವು ನೆರವಾಗಲಿವೆ.

ವೈ-ಫೈ ಬೂಸ್ಟರ್ ಏಕೆ ಅಗತ್ಯ

ವೈ-ಫೈ ಬೂಸ್ಟರ್ ಏಕೆ ಅಗತ್ಯ

ವೈ ಫೈ ಕವರೇಜ್‌ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ವೈ-ಫೈ ಬೂಸ್ಟರ್ ಸಾಧನ ಉಪಯುಕ್ತವಾಗಿದೆ. ಇಂಟರ್ನೆಟ್ ಕವರೇಜ್ ಹೆಚ್ಚಿಸುವುದಕ್ಕಾಗಿ ಎಕ್ಟ್ರಾ ಕೇಬಲ್‌, ಹಬ್‌ ಮತ್ತಿತ್ತರ ಡಿವೈಸ್‌ಗಳನ್ನು ಖರೀದಿಸುವುದನ್ನು ಉಳಿಸುತ್ತದೆ. ಹೆಚ್ಚು ಹೆಚ್ಚ ಡಿವೈಸ್‌ಗಳನ್ನು ಕನೆಕ್ಟ ಮಾಡಿದರೂ ವೈ ಫೈ ವೇಗದಲ್ಲಿ ಬದಲಾವಣೆ ಆಗುವುದಿಲ್ಲ.

ಬಳಕೆ ಏಲ್ಲಿ ಮತ್ತು ಹೇಗೆ?

ಬಳಕೆ ಏಲ್ಲಿ ಮತ್ತು ಹೇಗೆ?

ವೈ ಫೈ ಬೂಸ್ಟರ್ ಸಾಧನಗಳು ವಿವಿಧ ಆಕಾರಗಳಲ್ಲಿ ಲಭ್ಯವಿದ್ದು, ಅವುಗಳನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಗೋಡೆಗೆ ತೂಗುಹಾಕಬಹುದು. ಈ ಡಿವೈಸ್‌ಗಳ ಸಂಪರ್ಕ್‌ ಮಾಡಲು ಯಾವುದೇ ಕೇಬಲ್‌ ಕನೆಕ್ಷನ್ ಮಾಡುವ ಅಗತ್ಯ ಇರುವುದಿಲ್ಲ. ವಾಯರ್‌ಲೆಸ್‌ ಟ್ರಾನ್ಸ್‌ಮಿಷನ್‌ ಮಾದರಿಯ ಡಿವೈಸ್‌ಗಳಾಗಿವೆ.

Best Mobiles in India

English summary
How to set up mobile Wi-Fi hotspot and get better internet speed: Here's Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X