ಸಿಮ್‌ ಕಾರ್ಡ್‌ ಇಲ್ಲದೆ ಹೋದ್ರು ಟೆಲಿಗ್ರಾಮ್‌ ಆ್ಯಪ್‌ ಬಳಸೋದು ಹೇಗೆ?

|

ಜನಪ್ರಿಯ ಮೆಸೇಜಿಂಗ್‌ ಆಫ್‌ಗಳ ಸಾಲಿನಲ್ಲಿ ಟೆಲಿಗ್ರಾಮ್‌ ಕೂಡ ಸೇರಿದೆ. ಟೆಲಿಗ್ರಾಮ್‌ ಆ್ಯಪ್‌ ತನ್ನ ಭಿನ್ನ ಮಾದರಿಯ ಫೀಚರ್ಸ್‌ಗಳ ಮೂಲಕ ವಾಟ್ಸಾಪ್‌ಗೆ ಪ್ರಬಲ ಪೈಪೋಟಿ ನೀಡುತ್ತಾ ಸಾಗಿದೆ. ಅದರಂತೆ ವಾಟ್ಸಾಪ್‌ಗೂ ಮೀರಿದ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಬಂದಿದೆ. ಸದ್ಯ ಟೆಲಿಗ್ರಾಮ್‌ ಹೊಂದಿರುವ ಕೆಲವು ಫೀಚರ್ಸ್‌ಗಳು ನಿಮಗೆ ಇನ್ಯಾವ ಮೆಸೇಜಿಂಗ್‌ ಆ್ಯಪ್‌ನಲ್ಲಿ ದೊರೆಯುವುದಿಲ್ಲ. ಇದರಲ್ಲಿ ಸಿಮ್‌ ಇಲ್ಲದೆ ಟೆಲಿಗ್ರಾಮ್‌ ಆ್ಯಪ್‌ ಸೈನ್‌ ಇನ್‌ ಆಗುವ ಆಯ್ಕೆಯು ಕೂಡ ಒಂದಾಗಿದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿ ನೀವು ಸಿಮ್‌ ಇಲ್ಲದೆ ಹೋದರೂ ಸೈನ್‌ ಇನ್‌ ಆಗುವ ಆಯ್ಕೆ ಲಭ್ಯವಿದೆ. ಇದಕ್ಕಾಗಿಯೇ ನೋ ಸಿಮ್‌ ಸೈನ್‌ ಇನ್ ಫೀಚರ್ಸ್‌ ಅನ್ನು ಟೆಲಿಗ್ರಾಮ್‌ ಹೊಂದಿದೆ. ಇದರಲ್ಲಿ ನೀವು ಸಿಮ್‌ ಕಾರ್ಡ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಕನೆಕ್ಟ್ ಮಾಡದೇ ಟೆಲಿಗ್ರಾಮ್‌ ಅಕೌಂಟ್‌ ತೆರೆಯಲು ಅವಕಾಶ ಸಿಗಲಿದೆ. ಹಾಗಾದ್ರೆ ನಿಮ್ಮ ಬಳಿ ಸಿಮ್‌ ಇಲ್ಲದೆ ಹೋದರೂ ಕೂಡ ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಸೈನ್‌ ಆಗೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌

ಸಾಮಾನ್ಯವಾಗಿ ಟೆಲಿಗ್ರಾಮ್‌ ಅಪ್ಲಿಕೇಶನ್‌ ತನ್ನ ಬಳಕೆದಾರರ ಮೊಬೈಲ್‌ ಸಂಖ್ಯೆಯನ್ನು ಅಪರಿಚಿತರಿಗೆ ತೋರಿಸುವುದಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಮಂದಿಗೆ ಟೆಲಿಗ್ರಾಮ್‌ ನೆಚ್ಚಿನ ಆಯ್ಕೆಯ ಮೆಸೇಜಿಂಗ್‌ ಆಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಇದರಲ್ಲಿರುವ 'ನೋ-ಸಿಮ್ ಸೈನ್-ಇನ್' ಫೀಚರ್ಸ್‌ ನೀವು ಸಿಮ್‌ ಕಾರ್ಡ್‌ ಇಲ್ಲದೆ ಹೋದರೂ ಟೆಲಿಗ್ರಾಮ್‌ ಸೈನ್‌ ಇನ್‌ ಮಾಡುವ ಅವಕಾಶ ನೀಡಲಿದೆ. ಇದರಿಂದ ನಿಮ್ಮ ಪ್ರೈವೆಸಿಯನ್ನು ಇನ್ನಷ್ಟು ಕಾಪಾಡುವ ಭರವಸೆಯನ್ನು ಇದು ನೀಡಲಿದೆ.

ಟೆಲಿಗ್ರಾಮ್‌ನಲ್ಲಿ

ಆದರೆ ಟೆಲಿಗ್ರಾಮ್‌ನಲ್ಲಿ ನೋ ಸಿಮ್‌ ಸೈನ್‌ ಇನ್‌ ಫೀಚರ್ಸ್‌ ಬಳಸಬೇಕಾದರೆ ಫ್ರಾಗ್ಮೆಂಟ್ ಬ್ಲಾಕ್‌ಚೈನ್ ಅನ್ನು ಬಳಸಬೇಕಾಗುತ್ತದೆ. ಫ್ರಾಗ್ಮೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಬ್ಲಾಕ್‌ಚೈನ್-ಚಾಲಿತ ಅನಾಮಧೇಯ ಸಂಖ್ಯೆಗಳನ್ನು ಬಳಸುವುದಕ್ಕೆ ನೀವು ಆಯ್ಕೆ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದಾದರೂ ಸಂಖ್ಯೆಯನ್ನು ಆಯ್ಕೆ ಮಾಡುವ ಮೂಲಕ ಟೆಲಿಗ್ರಾಮ್‌ ಅನ್ನು ಲಾಗ್ ಇನ್ ಮಾಡಬಹುದು. ಇದರ ಮೂಲಕ ಟೆಲಿಗ್ರಾಮ್‌ನಲ್ಲಿ ಸಿಮ್‌ ಇಲ್ಲದೆ ಸೈನ್‌ ಇನ್‌ ಆಗಲು ಈ ಕ್ರಮಗಳನ್ನು ಅನುಸರಿಸಿ.

ಮೊಬೈಲ್ ಸಂಖ್ಯೆಯನ್ನು ಬಳಸದೆಯೇ ಟೆಲಿಗ್ರಾಮ್‌ಗೆ ಸೈನ್ ಅಪ್ ಮಾಡಲು ಹೀಗೆ ಮಾಡಿ?

ಮೊಬೈಲ್ ಸಂಖ್ಯೆಯನ್ನು ಬಳಸದೆಯೇ ಟೆಲಿಗ್ರಾಮ್‌ಗೆ ಸೈನ್ ಅಪ್ ಮಾಡಲು ಹೀಗೆ ಮಾಡಿ?

ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಇತ್ತೀಚಿನ ಆವೃತ್ತಿಯ ಟೆಲಿಗ್ರಾಮ್‌ ಆ್ಯಪ್‌ ತೆರೆಯಿರಿ.
ಹಂತ:2 ಇದರಲ್ಲಿ ನೀವು ಫ್ರಾಗ್‌ಮೆಂಟ್‌ನಿಂದ ಖರೀದಿಸಿದ ಬ್ಲಾಕ್‌ಚೈನ್ ಆಧಾರಿತ ಫೋನ್ ಸಂಖ್ಯೆಯನ್ನು ನಮೂದಿಸಿ.
ಹಂತ:3 ನೀವು ತುಣುಕು ಆಧಾರಿತ ಫೋನ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
ನಿಮ್ಮ ಖಾತೆಯನ್ನು ನೀವು ಪ್ರಮಾಣೀಕರಿಸಿದ ನಂತರ ಮೊಬೈಲ್ ಸಂಖ್ಯೆಯನ್ನು ಬಳಸದೆಯೇ ನಿಮ್ಮ Android ಸ್ಮಾರ್ಟ್‌ಫೋನ್ ಅಥವಾ iPhone ನಲ್ಲಿ ಟೆಲಿಗ್ರಾಮ್ ಅನ್ನು ಬಳಸಬಹುದು.

ಫ್ರಾಗ್‌ಮೆಂಟ್‌ನಲ್ಲಿ ಅನಾಮದೇಯ ಫೋನ್ ಸಂಖ್ಯೆಯನ್ನು ಖರೀದಿಸುವುದು ಹೇಗೆ?

ಫ್ರಾಗ್‌ಮೆಂಟ್‌ನಲ್ಲಿ ಅನಾಮದೇಯ ಫೋನ್ ಸಂಖ್ಯೆಯನ್ನು ಖರೀದಿಸುವುದು ಹೇಗೆ?

ಹಂತ:1 ಮೊದಲಿಗೆ ಫ್ರಾಗ್‌ಮೆಂಟ್‌ಗೆ ಹೋಗಿ.
ಹಂತ:2 ಸರ್ಚ್‌ ಬಾರ್‌ನಲ್ಲಿ ನೀವು ಬಳಸಲು ಬಯಸುವ ಯಾವುದೇ ಫೋನ್ ಸಂಖ್ಯೆಯನ್ನು ಸೇರಿಸಿ.
ಹಂತ:3 ಅದರ ಕೆಳಗಿರುವ '26 ಟನ್‌ಗಳಿಗೆ ಈ ಸಂಖ್ಯೆಯನ್ನು ಅನ್‌ಲಾಕ್ ಮಾಡಿ' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಿಮ್ಮ ಆಯ್ಕೆಯನ್ನು ದೃಢೀಕರಿಸಿ.
ಹಂತ:5 ನಿಮ್ಮ ಫೋನ್‌ನ ಕ್ಯಾಮರಾ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಹಂತ:6 ಇದೀಗ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್‌ ಮತ್ತು ಟೊನ್‌ಕೀಪರ್ ಖಾತೆಗೆ ಲಾಗಿನ್ ಮಾಡಿ.
ಹಂತ:7 ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆನ್-ಸ್ಕ್ರೀನ್ ಪ್ರಾಂಪ್ಟ್‌ಗಳನ್ನು ಅನುಸರಿಸಿ.

ಈ ಮೂಲಕ ನೀವು ಫ್ರಾಗ್‌ಮೆಂಟ್‌ನಲ್ಲಿ ಅನಾಮದೇಯ ಫೋನ್‌ ಸಂಖ್ಯೆಯನ್ನು ಖರೀದಿಸಲು ಸಾಧ್ಯವಾಗಲಿದೆ.

Best Mobiles in India

English summary
How to sign up for Telegram without using a SIM card?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X