Subscribe to Gizbot

ಐಫೋನ್ ಮತ್ತು ಐಪ್ಯಾಡ್ ಆಪ್ ಗಳು ರೇಟಿಂಗ್ ಕೇಳದಂತೆ ಮಾಡುವುದು ಹೇಗೆ?

Posted By: Tejaswini P G

ಸದಾ ರೇಟಿಂಗ್ ಮತ್ತು ವಿಮರ್ಶೆ ನೀಡುವಂತೆ ಪೀಡಿಸುವ ಆಪ್ಗಳು ಬಹಳ ಕಿರಿಕಿರಿಯುಂಟು ಮಾಡುತ್ತದೆ. ನೀವು ಐಪ್ಯಾಡ್ ಮತ್ತು ಐಫೋನ್ ನಲ್ಲಿ ಇನ್ಸ್ಟಾಲ್ ಮಾಡುವ ಪ್ರತಿಯೊಂದು ಆಪ್ ನದ್ದೂ ಇದೇ ತೊಂದರೆಯಾಗಿದೆ. iOS ಆಪ್ಗಳು ಆಗಾಗ್ಗೆ ಇಂತಹ ವಿನಂತಿ ಮಾಡುವುದನ್ನು ಕಡಿಮೆ ಮಾಡಲು ಹಲವು ಸುಧಾರಣೆಗಳನ್ನು ತಂದಿದ್ದು ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ನಿವಾರಿಸಿದೆ.

ಐಫೋನ್ ಮತ್ತು ಐಪ್ಯಾಡ್ ಆಪ್ ಗಳು ರೇಟಿಂಗ್ ಕೇಳದಂತೆ ಮಾಡುವುದು ಹೇಗೆ?

ನಾವು ಈಗ ನಿಮಗೆ ತಂದಿರುವ ಸಂತೋಷದ ಸುದ್ದಿಯೇನಂದರೆ ನಿಮ್ಮ ಸ್ಮಾರ್ಟ್ಫೋನ್ ನ ಸೆಟ್ಟಿಂಗ್ಸ್ ನಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ನೀವು ಇಂತಹ ವಿನಂತಿಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
iOS 11 ಕ್ಕೆ ಏಕೆ ಅಪ್ಗ್ರೇಡ್ ಮಾಡಬೇಕು?

iOS 11 ಕ್ಕೆ ಏಕೆ ಅಪ್ಗ್ರೇಡ್ ಮಾಡಬೇಕು?

iOS 11 ಕ್ಕೆ ಅಪ್ಗ್ರೇಡ್ ಮಾಡುವ ಮೂಲಕ ನೀವು ಹಲವಾರು ಲಾಭಗಳನ್ನು ಪಡೆಯಬಹುದಾಗಿದೆ. ಸೆಟ್ಟಿಂಗ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ ಆಪ್ ನ ಕುರಿತು ರೇಟಿಂಗ್ ಮತ್ತು ವಿಮರ್ಶೆಗಳನ್ನು ನೀಡುವಂತೆ ನಿಮಗೆ ವರ್ಷಕ್ಕೆ ಮೂರು ಬಾರಿ ಮಾತ್ರ ಸೂಚಿಸಲಾಗುವುದು.

ತಮ್ಮದೇ ಸ್ವಂತ ರೇಟಿಂಗ್ ವಿನಂತಿಯೊಂದಿಗೆ ಬರುವ ಆಪ್ ಗಳನ್ನು ತಿರಸ್ಕರಿಸುವುದಾಗಿ ಆಪಲ್ ಸಂಸ್ಥೆಯು ಅಧಿಕೃತವಾಗಿ ತಿಳಿಸಿದೆ. ಇನ್ನು ಮುಂದೆ ನೀವು ನಿರ್ದಿಷ್ಟ ಆಪ್ ಅನ್ನು ಅಪ್ಡೇಟ್ ಮಾಡಿದರೂ ಆ ಆಪ್ ನ ಡೆವೆಲಪರ್ಗಳು ಒಂದು ವರ್ಷದಲ್ಲಿ ಮೂರಕ್ಕಿಂತ ಅಧಿಕ ಬಾರಿ ಆಪ್ ಗೆ ರೇಟಿಂಗ್ ನೀಡುವಂತೆ ನಿಮ್ಮನ್ನು ವಿನಂತಿಸುವಂತಿಲ್ಲ.

ಆಪ್ ಗಳು ರೇಟಿಂಗ್ ಕೇಳುವುದನ್ನು ಸಂಪೂರ್ಣವಾಗಿ ತಡೆಗಟ್ಟುವುದು ಹೇಗೆ?

ಆಪ್ ಗಳು ರೇಟಿಂಗ್ ಕೇಳುವುದನ್ನು ಸಂಪೂರ್ಣವಾಗಿ ತಡೆಗಟ್ಟುವುದು ಹೇಗೆ?

ಆಪಲ್ ಸಂಸ್ಥೆಯು iOS 11 ರಲ್ಲಿ ಸೆಟ್ಟಿಂಗ್ಸ್ ನಲ್ಲಿ ಕೆಲವು ಸುಧಾರಣೆಗಳನ್ನು ತಂದಿದ್ದು, ಈ ಮೂಲಕ ಬಳಕೆದಾರರಿಗೆ ಆಪ್ ಗಳು ರೇಟಿಂಗ್ ಕೇಳುವುದನ್ನು ಸಂಪೂರ್ಣವಾಗಿ ತಡೆಗಟ್ಟುವ ಸಾಮರ್ಥ್ಯವನ್ನು ನೀಡಿದೆ. ಪೂರ್ವನಿಯೋಜಿತವಾಗಿ ಆಪ್ಗಳಿಗೆ ಬಳಕೆದಾರರ ಬಳಿ ತಮ್ಮ ಆಪ್ ಅನ್ನು ವಿಮರ್ಶಿಸುವಂತೆ ವಿನಂತಿಸುವ ಹಕ್ಕು ಇರುತ್ತದೆ.

ಆದರೆ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನೀವು ಯಾವುದೇ ಆಪ್ ನಿಮ್ಮ ಬಳಿ ರೇಟಿಂಗ್ ಕೇಳದಂತೆ ಮಾಡಬಹುದಾಗಿದೆ. ಸದಾ ಕಾಡುವ ಈ ರೇಟಿಂಗ್ ಮತ್ತು ವಿಮರ್ಶೆಗಳ ತೊಂದರೆಯನ್ನು ನಿವಾರಿಸಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ಹಂತ 1: ನಿಮ್ಮ ಸ್ಮಾರ್ಟ್ಫೋನ್ ನಲ್ಲಿ "ಸೆಟ್ಟಿಂಗ್ಸ್" ವಿಭಾಗಕ್ಕೆ ಹೋಗಿ

ಹಂತ 2: ಅಲ್ಲಿ "ಐಟ್ಯೂನ್ಸ್ ಆಂಡ್ ಆಪ್ ಸ್ಟೋರ್" ತೆರೆಯಿರಿ

ಹಂತ 3: ಕೆಳಗೆ ಸ್ಕ್ರೋಲ್ ಮಾಡುತ್ತಾ "ಇನ್-ಆಪ್ಸ್ ರೇಟಿಂಗ್ಸ್ & ರಿವ್ಯೂಸ್" ಆಯ್ಕೆಯನ್ನು ಹುಡುಕಿ. ಅದನ್ನು 'ಆಫ್' ಗೆ ಟಾಗಲ್ ಮಾಡಿ.

ಆಭಿನಂದನೆಗಳು!! ನಿಮ್ಮ ಐಪ್ಯಾಡ್ ಅಥವಾ ಐಫೋನ್ ನಲ್ಲಿ ಯಾವುದೇ ಆಪ್ಗಳು ಇನ್ನೆಂದೂ ರೇಟಿಂಗ್ಸ್ ಕೇಳದಂತೆ ಮಾಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ!

ಸಾರಾಂಶ

ಸಾರಾಂಶ

"ಇನ್-ಆಪ್ಸ್ ರೇಟಿಂಗ್ಸ್ & ರಿವ್ಯೂಸ್" ಆಯ್ಕೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ನೀವೆಂದೂ ಆಪ್ ಅನ್ನು ರೇಟ್ ಅಥವಾ ರಿವ್ಯೂ ಮಾಡಲಾರಿರಿ ಎಂದು ಭಾವಿಸಬೇಡಿ.

ನೇರವಾಗಿ ಆಪ್ ಸ್ಟೋರ್ ಅನ್ನು ತೆರೆಯುವ ಮೂಲಕ ನೀವು ನಿಮಗೆ ಬೇಕಾದ ಆಪ್ ಅನ್ನು ರೇಟ್ ಮತ್ತು ರಿವ್ಯೂ ಮಾಡಬಹುದು. ವ್ಯತ್ಯಾಸವೇನೆಂದರೆ ಒಂದು ಆಪ್ ಅನ್ನು ಯಾವಾಗ ರೇಟ್ ಮಾಡಬೇಕೆಂಬುದು ಈಗ ನಿಮ್ಮ ಹಿಡಿತದಲ್ಲಿರುತ್ತದೆ. ಈಗ ನೀವು ಆಪ್ ಅನ್ನು ರಿವ್ಯೂ ಅಥವಾ ರೇಟ್ ಮಾಡಬಯಸಿದಾಗ ನೇರವಾಗಿ ಆಪ್ ಸ್ಟೋರ್ ಗೆ ಹೋಗಿ ರೇಟ್ ಮಾಡಬಹುದಾಗಿದೆ!

ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Using an app that just can't stop asking to leave a review is quite irritating. The most annoying thing is that you encounter this problem with each and every app that you install on your iPhone and iPad.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot