ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ನಿಷ್ಕ್ರಿಯಗೊಳಿಸುವುದು ಹೇಗೆ?

By Tejaswini P G
|

ನೀವು ಹೊಸದಾಗಿ ಇನ್ಸ್ಟಾಲ್ ಮಾಡಿರುವ ವಿಂಡೋಸ್ 10 ಗೆ ಮೊದಲ ಬಾರಿಗೆ ಲಾಗಿನ್ ಮಾಡಿದಾಗ ಕ್ಯಾಂಡಿ ಕ್ರಶ್ ಸೋಡಾ ಮೊದಲಾದ ಖ್ಯಾತ ಆಪ್ಗಳು ಮೊದಲೇ ಇನ್ಸ್ಟಾಲ್ ಆಗಿರುತ್ತದೆ. ಅಲ್ಲದೆ ವಿಂಡೋಸ್ 10 ಸ್ಟಾರ್ಟ್ ಮೆನು ಮತ್ತು ಸ್ಕ್ರೀನ್ ನ ಬಲಬದಿಯಲ್ಲಿ ಲೈವ್ ಟೈಲ್ಸ್ ಮಾದರಿಯಲ್ಲಿ ವಿಂಡೋಸ್ ಸ್ಟೋರ್ ನಿಂದ "ಸಜೆಸ್ಟೆಡ್ ಆಪ್ಸ್" ಅನ್ನು ತೋರಿಸುತ್ತದೆ.

ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ನಿಷ್ಕ್ರಿಯಗೊಳಿಸುವುದು ಹೇಗೆ?

ಈ 'ಸಜೆಸ್ಟೆಡ್ ಆಪ್' ಗಳು ನಿಮ್ಮ ಸ್ಟಾರ್ಟ್ ಮೆನುವನ್ನು ಅಸ್ತವ್ಯಸ್ತವಾಗಿಸುತ್ತದೆ. ನಿಮಗೆ ಚೊಕ್ಕವಾದ ಸ್ಟಾರ್ಟ್ ಮೆನು ಬೇಕಾಗಿದ್ದಲ್ಲಿ, ನೀವು ಈ 'ಸಜೆಸ್ಟೆಡ್ ಆಪ್' ಅನ್ನು ನಿಷ್ಕ್ರಿಯಗೊಳಿಸಬೇಕು ಮತ್ತು ನಿಮ್ಮ ಅನುಮತಿ ಇಲ್ಲದೆ ಇನ್ಸ್ಟಾಲ್ ಆಗಿರುವ ಆಪ್ ಗಳನ್ನು ನಿಮ್ಮ ಕಂಪ್ಯೂಟರ್ನಿಂದ ಅನಿನ್ಸ್ಟಾಲ್ ಮಾಡಬೇಕು. ಅಲ್ಲದೆ 'ಸಜೆಸ್ಟೆಡ್ ಆಪ್' ಗಳನ್ನು ನಿಷ್ಕ್ರಿಯಗೊಳಿಸುವ ಆಯ್ಕೆ ನಮಗೆ ಲಭ್ಯವಿದ್ದು, ಸರಳವಾದ ವಿಧಾನದಿಂದ ಇದನ್ನು ಸಾಧಿಸಬಹದಾಗಿದೆ.

ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ನಿಷ್ಕ್ರಿಯಗೊಳಿಸುವುದು ಹೇಗೆ?

ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ನಿಷ್ಕ್ರಿಯಗೊಳಿಸುವುದು ಹೇಗೆ?

ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ಅನ್ನು ನಿಷ್ಕ್ರಿಯಗೊಳಿಸಲು ಈ ಸೂಚನೆಗಳನ್ನು ಪಾಲಿಸಿ

ಹಂತ 1: ವಿಂಡೋಸ್ 10 ನಲ್ಲಿ 'ಸೆಟ್ಟಿಂಗ್ಸ್' ವಿಭಾಗವನ್ನು ತೆರೆಯಿರಿ

ಹಂತ 2: 'ಪರ್ಸನಲೈಸೇಶನ್' ಮೇಲೆ ಕ್ಲಿಕ್ ಮಾಡಿ 'ಸ್ಟಾರ್ಟ್' ಆಯ್ಕೆ ಮಾಡಿ

ಹಂತ 3: 'ಒಕೇಶನಲಿ ಶೋ ಸಜೆಶನ್ಸ್ ಇನ್ ಸ್ಟಾರ್ಟ್' ಎನ್ನುವ ಟಾಗಲ್ ಬಟನ್ 'ಆಫ್' ಮಾಡಿ

ಈ ಸೂಚನೆಗಳ ಮೂಲಕ ನೀವು ಯಶಸ್ವಿಯಾಗಿ ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ಅನ್ನು ನಿಷ್ಕ್ರಿಯಗೊಳಿಸಬಹುದು. ಮುಂದೆ ಸ್ಟಾರ್ಟ್ ಮೆನುವಿನಲ್ಲಿ ಈ ಸಲಹೆಗಳು ನಿಮಗೆ ಕಿರಿಕಿರಿಯುಂಟುಮಾಡುವುದಿಲ್ಲ. ಆದರೆ ಈಗಾಗಲೇ ನಿಮ್ಮ ಅನುಮತಿಯಿಲ್ಲದೆ ಇನ್ಸ್ಟಾಲ್ ಆಗಿರುವ ಆಪ್ಗಳನ್ನು ಏನು ಮಾಡುವುದು ? ಅವುಗಳನ್ನು ಅನಿನ್ಸ್ಟಾಲ್ ಮಾಡಿದರೆ ಮುಗಿಯಿತು!

ವಿಂಡೋಸ್ 10 ನಲ್ಲಿ ಆಪ್ ಗಳನ್ನು ಅನಿನ್ಸ್ಟಾಲ್ ಮಾಡುವುದು ಹೇಗೆ?

ವಿಂಡೋಸ್ 10 ನಲ್ಲಿ ಆಪ್ ಗಳನ್ನು ಅನಿನ್ಸ್ಟಾಲ್ ಮಾಡುವುದು ಹೇಗೆ?

ವಿಂಡೋಸ್ 10 ನಲ್ಲಿ ತನ್ನಿಂತಾನೆ ಇನ್ಸ್ಟಾಲ್ ಆಗಿರುವ ಆಪ್ಗಳನ್ನು ನೀವು ನಿಮ್ಮ ಕೈಯಾರೆ ಅನಿನ್ಸ್ಟಾಲ್ ಮಾಡಬೇಕಾಗುತ್ತದೆ. ಅನಿನ್ಸ್ಟಾಲೇಶನ್ ಪ್ರಕ್ರಿಯೆ ಸರಳವಾಗಿರುವುದರಿಂದ ಅದೇನೂ ಅಂತಹ ತೊಂದರೆಯೆನಿಸುವುದಿಲ್ಲ. ಇದಕ್ಕಾಗಿ ನೀವು 'ಸೆಟ್ಟಿಂಗ್ಸ್' ವಿಭಾಗಕ್ಕೂ ಹೋಗಬೇಕಾಗಿಲ್ಲ.

ಹಂತ 1: 'ಸ್ಟಾರ್ಟ್' ಮೆನು ತೆರೆಯಿರಿ

ಹಂತ 2: ನೀವು ಅನಿನ್ಸ್ಟಾಲ್ ಮಾಡಬೇಕೆಂದಿರುವ ಆಪ್ ನ ಟೈಲ್ ಮೇಲೆ ರೈಟ್-ಕ್ಲಿಕ್ ಮಾಡಿ

ಹಂತ 3: 'ಅನಿನ್ಸ್ಟಾಲ್' ಮೇಲೆ ಕ್ಲಿಕ್ ಮಾಡಿ

ಹೀಗೆ ಮಾಡಿದ ತಕ್ಷಣ ನಿಮ್ಮ ಆಯ್ಕೆಯ ಆಪ್ ನಿಮ್ಮ ಕಂಪ್ಯೂಟರ್ ನಿಂದ ಅನಿನ್ಸಸ್ಟಾಲ್ ಆಗುತ್ತದೆ. ಒಂದು ವೇಳೆ ನಿಮಗೆ ಅನಿನ್ಸ್ಟಾಲ್ ಆಯ್ಕೆ ಸಿಗದಿದ್ದಲ್ಲಿ 'ಅನ್ಪಿನ್ ಫ್ರಮ್ ಸ್ಟಾರ್ಟ್' ಮೇಲೆ ಕ್ಲಿಕ್ ಮಾಡಿ ನಂತರ ಅದನ್ನು ಅನಿನ್ಸ್ಟಾಲ್ ಮಾಡಲು ಪ್ರಯತ್ನಿಸಿ.

Do you know what all u can do by Downloading Hike Messenger app.?
ಸಾರಾಂಶ

ಸಾರಾಂಶ

ಈಗ ನಿಮಗೆ ವಿಂಡೋಸ್ 10 ನಲ್ಲಿ 'ಸಜೆಸ್ಟೆಡ್ ಆಪ್ಸ್' ನಿಂದ ಬಿಡುಗಡೆ ಪಡೆಯುವುದು ಹೇಗೆಂದು ತಿಳಿದೇ ಇದೆ. ನೀವು ಬೇರೆಯಾವುದಾದರೂ ಆಪ್ ಅನ್ನು ಅನಿನ್ಸ್ಟಾಲ್ ಮಾಡಬಯಸಿದರೆ, ನಿಮ್ಮ ಪಿಸಿ ಯಿಂದ ಸಾಫ್ಟ್ವೇರ್ ಅನಿನ್ಸ್ಟಾಲ್ ಮಾಡುವ ಪ್ರಮಾಣಿತ ವಿಧಾನವನ್ನು ಅನುಸರಿಸಿ. ಮೈಕ್ರೋಸಾಫ್ಟ್ ತನ್ನ ಉತ್ಪನ್ನಗಳನ್ನು ಸ್ಟಾರ್ಟ್ ಮೆನುವಿನಲ್ಲಿ ಪ್ರದರ್ಶಿಸುವ ಮೂಲಕ ಅದನ್ನು ಮಾರಾಟಮಾಡಲು ಪ್ರಯತ್ನಿಸುತ್ತದಾದರೂ , ಈ ಮಾರ್ಕೆಟಿಂಗ್ ತಂತ್ರಗಳಿಂದ ತಪ್ಪಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡಿದೆ. ಹೀಗಾಗಿ ನೀವೀಗ ಯಾವುದೇ ತೊಂದರೆಯಿಲ್ಲದೆ ಚೊಕ್ಕವಾದ ಸ್ಟಾರ್ಟ್ ಮೆನುವಿನ ಅನುಭವ ಪಡೆಯಬಹುದು.

ಬ್ಯಾಂಕ್ ನೊಂದಿಗೆ ವಾಟ್ಸ್‌ಆಪ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ..!ಬ್ಯಾಂಕ್ ನೊಂದಿಗೆ ವಾಟ್ಸ್‌ಆಪ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ..!

Best Mobiles in India

English summary
A new thing Microsoft is doing with Windows 10 is displaying suggested apps in the Start menu. While it may get messy, you can follow this tip to stop seeing “Suggested Apps” in Windows 10.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X