ಟ್ವಿಟ್ಟರ್ ಖಾತೆಯನ್ನು ಲಾಗ್‌ಔಟ್ ಮಾಡದೇ ಮಲ್ಟಿ ಅಕೌಂಟ್ ಬಳಕೆ ಮಾಡುವುದು ಹೇಗೆ?

|

ಪ್ರಸ್ತುತ ಲೀಡಿಂಗ್‌ನಲ್ಲಿರುವ ಸಾಮಾಜಿಕ ಜಾಲತಾಣಗಳ ಪೈಕಿ 'ಟ್ವಿಟ್ಟರ್' ಕೂಡಾ ಒಂದಾಗಿದೆ. ಒಂದು ಮಾಹಿತಿಯನ್ನು ಬಹುಬೇಗನೆ ವೈರಲ್ ಮಾಡಲು ಟ್ವಿಟ್ಟರ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನಿನಲ್ಲಿ ಟ್ವಿಟ್ಟರ್ ಆಪ್‌ ಅನ್ನು ಹೊಂದಿರುತ್ತಾರೆ. ಒಂದೇ ಟ್ವಿಟ್ಟರ್ ಆಪ್‌ನಲ್ಲಿ ಲಾಗ್‌ಔಟ್ ಆಗದೇ ಮಲ್ಟಿಪಲ್ ಟ್ವಿಟ್ಟರ್ ಅಕೌಂಟ್ ತೆರೆಯುವ ಅವಕಾಶ ಲಭ್ಯವಿದೆ. ಅದು ಹೇಗೆ ಅಂತೀರಾ?.

ಟ್ವಿಟ್ಟರ್ ಅಪ್ಲಿಕೇಶನ್

ಹೌದು, ಜನಪ್ರಿಯ ಟ್ವಿಟ್ಟರ್ ಅಪ್ಲಿಕೇಶನ್ ಇದೀಗ ತನ್ನ ಬಳಕೆದಾರರಿಗೆ ಮಲ್ಟಿ ಅಕೌಂಟ್ ಬಳಕೆ ಮಾಡುವ ಸೌಲಭ್ಯವನ್ನು ಪರಿಚಯಿಸಿದ್ದು, ಲಾಗ್‌ಔಟ್ ಮಾಡದೆ ಮಲ್ಟಿ ಅಕೌಂಟ್ ಬಳಕೆಮಾಡಬಹುದು. ಅದಕ್ಕಾಗಿ ಬಳಕೆದಾರರು ಪ್ರತ್ಯೇಕವಾಗಿ ಟ್ವಿಟ್ಟರ್ ಆಪ್ ಅಥವಾ ಥರ್ಡ್‌ಪಾರ್ಟಿ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಈಗಾಗಲೇ ಬಳಕೆಮಾಡುತ್ತಿರುವ ಟ್ವಿಟ್ಟರ್ ಆಪ್‌ನಲ್ಲಿಯೇ ಚಂದಾದಾರರು ಅವರ ಇನ್ನೊಂದು ಟ್ವಿಟ್ಟರ್ ಖಾತೆ ತೆರೆಯಬಹುದು.

ಐದು ಖಾತೆಗೆ ಅವಕಾಶ

ಐದು ಖಾತೆಗೆ ಅವಕಾಶ

ಟ್ವಿಟ್ಟರ್ ಪರಿಚಯಿಸಿರುವ ಮಲ್ಟಿ ಅಕೌಂಟ್ ಸೌಲಭ್ಯದಲ್ಲಿ ಬಳಕೆದಾರರು ಒಂದು ಟ್ವಿಟ್ಟರ್ ಆಪ್‌ನಲ್ಲಿ ಒಟ್ಟು ಐದು ಅಕೌಂಟ್ ಬಳಕೆ ಮಾಡುವ ಅವಕಾಶ ಮಾಡಿದೆ. ಕೆಲವು ಬಳಕೆದಾರರು ಎರಡು, ಮೂರು ಟ್ವಿಟ್ಟರ್ ಖಾತೆ ಹೊಂದಿರುತ್ತಾರೆ. ಅಂಥವರು ಟ್ವಿಟ್ಟರ್ ಆಪ್‌ ಮೂಲಕವೇ ಆ ಖಾತೆಗಳನ್ನು ಒಂದು ಪಾಯಿಂಟ್‌ನಲ್ಲಿ ತರಬಹುದು. ಸ್ವಿಚ್ ಆಯ್ಕೆ ಮೂಲಕ ಬೇಕಾದ ಟ್ವಿಟ್ಟರ್ ಖಾತೆ ಬಳಕೆ ಮಾಡಬಹುದಾಗಿದೆ.

ಆಂಡ್ರಾಯ್ಡ್‌ ಫೋನಿನಲ್ಲಿ ಹೀಗೆ ಮಾಡಿ

ಆಂಡ್ರಾಯ್ಡ್‌ ಫೋನಿನಲ್ಲಿ ಹೀಗೆ ಮಾಡಿ

* ಟ್ವಿಟ್ಟರ್ ಅಪ್ಲಿಕೇಶನ್ ತೆರೆಯಿರಿ.
* ಎಡ ಬದಿ ಕಾಣಿಸುವ ನಿಮ್ಮ ಖಾತೆಯ ಐಕಾನ್‌ ಕ್ಲಿಕ್ಕ ಮಾಡಿ.
* ಆಗ ಸೈಡ್ ಮೆನು ತೆರೆದುಕೊಳ್ಳುತ್ತದೆ. ನಿಮ್ಮ ಹೆಸರಿನ ಹತ್ತಿರದ ಡೌನ್‌ ಆರೋ ಕ್ಲಿಕ್ಕ್ ಮಾಡಿ.
* ನಂತರ ಎಕ್ಸಿಸ್ಟಿಂಗ್ ಅಕೌಂಟ್ ಆಯ್ಕೆಯನ್ನು ಒತ್ತಿರಿ.
* ಯುಸರ್ ನೇಮ್, ಮೊಬೈಲ್ ನಂಬರ್, ಇಮೇಲ್ ಐಡಿ ಮೂಲಕ ಲಾಗ್‌ ಇನ್ ಆಗಬಹುದು.

ಐಫೋನ್‌ ಬಳಕೆದಾರರು ಈ ಕ್ರಮ ಅನುಸರಿಸಿ

ಐಫೋನ್‌ ಬಳಕೆದಾರರು ಈ ಕ್ರಮ ಅನುಸರಿಸಿ

* ಟ್ವಿಟ್ಟರ್ ಆಪ್ ತೆರೆಯಿರಿ.
* ಎಡ ಭಾಗದಲ್ಲಿ ಕಾಣುವ ಖಾತೆಯ ಐಕಾನ್ ಒತ್ತಿರಿ.
* ಸೈಡ್ ಮೆನು ತೆರೆಯುತ್ತೆ, ನಂತರ ಮೂರು ಡಾಟ್ ಐಕಾನ್ ಸೆಲೆಕ್ಟ್ ಮಾಡಿರಿ.
* ಎಕ್ಸಿಸ್ಟಿಂಗ್ ಖಾತೆ ತೆರೆಯುವ ಆಯ್ಕೆ ಹಾಗೂ ಹೊಸ ಖಾತೆ ತೆರೆಯುವ ಆಯ್ಕೆ ಕಾಣಿಸುತ್ತದೆ.
* ಬಳಕೆದಾರರು ಯುಸರ್ ನೇಮ್, ಮೊಬೈಲ್ ನಂಬರ್, ಇಮೇಲ್ ಐಡಿ ಮೂಲಕ ಲಾಗ್‌ ಇನ್ ಆಗಬಹುದು.

ವೆಬ್‌ನಲ್ಲಿ ಟ್ವಿಟ್ಟರ್ ಬಳಕೆ ಮಾಡಿದ್ರೆ ಈ ಕ್ರಮ ಅನುಸರಿಸಿ

ವೆಬ್‌ನಲ್ಲಿ ಟ್ವಿಟ್ಟರ್ ಬಳಕೆ ಮಾಡಿದ್ರೆ ಈ ಕ್ರಮ ಅನುಸರಿಸಿ

* ಟ್ವಿಟ್ಟರ್ ತೆರೆಯಿರಿ.
* ಎಡ್ ಭಾಗದಲ್ಲಿ ಕಾಣುವ ಮೂರು ಡಾಟಗಳ ಮೆನು ಕ್ಲಿಕ್ಕ್ ಮಾಡಿ.
* ನಂತರ ಪ್ರೊಫೈಲ್ ಹತ್ತಿರ ಕಾಣುವ ಪ್ಲಸ್ ಐಕಾನ್ ಸೆಲೆಕ್ಟ್ ಮಾಡಿ.
* ಎಕ್ಸಿಸ್ಟಿಂಗ್ ಖಾತೆ ಸೆರಿಸುವ ಐಕಾನ್ ಕಾಣಿಸುತ್ತದೆ.
* ನಿಮ್ಮ ಖಾತೆಗೆ ಮಾಹಿತಿ ತುಂಬಿ ಲಾಗ್ ಇನ್ ಆಗಬಹುದು.

Best Mobiles in India

English summary
Twitter users are now better equipped to handle multiple accounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X