ಜಿಯೋ ಪೋಸ್ಟ್‌ಪೇಯ್ಡ್‌ನಿಂದ ಜಿಯೋ ಪ್ರಿಪೇಯ್ಡ್‌ಗೆ ಬದಲಾಯಿಸುವುದು ಹೇಗೆ?

|

ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಗುಡುತಿಸಿಕೊಂಡಿದ್ದು, ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಜಿಯೋ ಟೆಲಿಕಾಂ ಚಂದಾದಾರರಿಗೆ ಹಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡಿದೆ. ಅಲ್ಲದೆ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳು ಸೇರಿವೆ. ಇನ್ನು ನೀವು ಪೋಸ್ಟ್‌ಪೇಯ್ಡ್ ಬಳಕೆದಾರರಾಗಿದ್ದರೆ ಮತ್ತು ಪ್ರಿಪೇಯ್ಡ್‌ಗೆ ಬದಲಾಯಿಸಲು ಬಯಸಿದರೆ, ನೀವು ಆನ್‌ಲೈನ್‌ನಲ್ಲಿ ಸ್ವಿಚ್‌ಗಾಗಿ ಅರ್ಜಿ ಸಲ್ಲಿಸಬಹುದು ಅಥವಾ ಜಿಯೋ ಸ್ಟೋರ್‌ಗೆ ಭೇಟಿ ನೀಡಬಹುದು.

ರಿಲಯನ್ಸ್ ಜಿಯೋ

ಹೌದು, ರಿಲಯನ್ಸ್ ಜಿಯೋ ಭಾರತದಲ್ಲಿನ ತನ್ನ ಚಂದಾದಾರರಿಗೆ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ಜಿಯೋ ಇತ್ತೀಚೆಗೆ ತನ್ನ ಪೋಸ್ಟ್‌ಪೇಯ್ಡ್ ಕೊಡುಗೆಗಳನ್ನು ಪರಿಷ್ಕರಿಸಿದೆ. ಅದರ ಯೋಜನೆಗಳು ಈಗ ರೂ. 199. ಮೂಲಕ ಶುರವಾಗಲಿದೆ. ಅಲ್ಲದೆ ಪೋಸ್ಟ್‌ಪೇಯ್ಡ್ ಬಳಕೆದಾರರು ಪ್ರತಿ ತಿಂಗಳ ಕೊನೆಯಲ್ಲಿ ಬಿಲ್ ಪಡೆದರೆ, ಪ್ರಿಪೇಯ್ಡ್ ಬಳಕೆದಾರರು ಪ್ರಯೋಜನಗಳನ್ನು ಪಡೆಯಲು ಮೊದಲೇ ರೀಚಾರ್ಜ್ ಮಾಡಬೇಕಾಗುತ್ತದೆ. ಹಾಗೆಯೇ ನೀವು ಪೋಸ್ಟ್‌ಪೇಯ್ಡ್ ನಿಂದ ಪ್ರಿಪೇಯ್ಡ್‌ಗೆ ಬದಲಾಗುವುದು ಕೂಡ ಸುಲಭವಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಜಿಯೋ ತನ್ನ ಚಂದಾದಾರರಿಗೆ ಪೋಸ್ಟ್‌ಪೇಯ್ಡ್‌ ನಿಂದ ಪ್ರಿಪೇಯ್ಡ್‌ ಬದಲಾಯಿಸುವುದು ಸುಲಭವಾಗಿಸಿದೆ. ಇನ್ನು ಪ್ರಿಪೇಯ್ಡ್ ಯೋಜನೆಗಳು ಮುಕ್ತಾಯ ದಿನಾಂಕದೊಂದಿಗೆ ಬರುತ್ತವೆ ಮತ್ತು ಜಿಯೋ ಚಂದಾದಾರರು ಮಾನ್ಯತೆ ಮುಗಿದ ಪ್ರತಿ ಬಾರಿಯೂ ರೀಚಾರ್ಜ್ ಮಾಡಬೇಕಾಗುತ್ತದೆ. ಜಿಯೋ ಪ್ರಿಪೇಯ್ಡ್ ಯೋಜನೆಗಳು 10 ರೂ. ನಿಂದ ಶುರುವಾಗಲಿವೆ. ಆದರೆ ವಾರ್ಷಿಕ ಯೋಜನೆಗಳು 4,999 ರೂ. ಹೊಂದಿವೆ. ಇದೇ ಕಾರಣಕ್ಕೆ ನೀವು ಜಿಯೋ ಪೋಸ್ಟ್‌ಪೇಯ್ಡ್‌ನಿಂದ ಪ್ರಿಪೇಯ್ಡ್‌ಗೆ ಬದಲಾಯಿಸಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಜಿಯೋ ಪೋಸ್ಟ್‌ಪೇಯ್ಡ್‌ನಿಂದ ಜಿಯೋ ಪ್ರಿಪೇಯ್ಡ್‌ಗೆ ಬದಲಾಯಿಸುವುದು ಹೇಗೆ?

ಜಿಯೋ ಪೋಸ್ಟ್‌ಪೇಯ್ಡ್‌ನಿಂದ ಜಿಯೋ ಪ್ರಿಪೇಯ್ಡ್‌ಗೆ ಬದಲಾಯಿಸುವುದು ಹೇಗೆ?

ಹಂತ: 1 ಜಿಯೋ ವೆಬ್‌ಸೈಟ್‌ ತೆರೆಯಿರಿ. ಇದರಲ್ಲಿ ತೆರೆಯುವ ಅಗತ್ಯ ಪೇಜ್‌ನಲ್ಲಿ ನಿಮ್ಮ ಹೆಸರು ಮತ್ತು ನೋಂದಾಯಿತ ಜಿಯೋ ಪೋಸ್ಟ್‌ಪೇಯ್ಡ್ ಸಂಖ್ಯೆಯನ್ನು ನಮೂದಿಸಿ.
ಹಂತ: 2 ಜನರೇಟ್ ಒಟಿಪಿ ಕ್ಲಿಕ್ ಮಾಡಿ. ನಿಮ್ಮ ಫೋನ್‌ನಲ್ಲಿ ನಿಮಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ, ಮೌಲ್ಯೀಕರಿಸಿ ಕ್ಲಿಕ್ ಮಾಡಿ.
ಹಂತ: 3 ಪ್ರಿಪೇಯ್ಡ್ ಆಯ್ಕೆಯಲ್ಲಿ ನನಗೆ ಆಸಕ್ತಿ ಇದೆ ಎಂದು ಆಯ್ಕೆಮಾಡಿ ಮತ್ತು ‘ಪೋರ್ಟ್ ಟು ಜಿಯೋ' ಕ್ಲಿಕ್ ಮಾಡಿ.
ಹಂತ: 4 ಸಿಮ್ ವಿತರಣೆಗಾಗಿ ನಿಮ್ಮ ವಿತರಣಾ ವಿಳಾಸವನ್ನು ಭರ್ತಿ ಮಾಡಿ ಮತ್ತು ‘ಸಬ್‌ಮಿಟ್ ಪೋರ್ಟ್ ಟು ಜಿಯೋ ವಿನಂತಿಯನ್ನು' ಕ್ಲಿಕ್ ಮಾಡಿ.

ಜಿಯೋ

ಹಂತ: 5 ಜಿಯೋ ಕಸ್ಟಮರ್‌ ಕೇರ್‌ ಎಕ್ಸಿಕ್ಯುಟೀವ್‌ 3-4 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಬರಲಿದ್ದಾರೆ. ನಂತರ ನಿಮ್ಮ ಪ್ರೂಫ್ ಆಫ್ ಐಡೆಂಟಿಟಿ (ಪಿಒಐ) ಮತ್ತು ಪ್ರೂಫ್ ಆಫ್ ಅಡ್ರೆಸ್ (ಪಿಒಎ) ನಂತಹ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಅವರು ಮನೆಯಲ್ಲಿಯೇ ಕೆವೈಸಿ ನಡೆಸಲಿದ್ದಾರೆ. ಸ್ವೀಕಾರಾರ್ಹ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ದಾಖಲೆಗಳನ್ನು ನೀಡಬಹುದು.
ಹಂತ: 6 ಇದಲ್ಲದೆ ಬಳಕೆದಾರರು ಪರ್ಯಾಯವಾಗಿ ಹತ್ತಿರದ ಜಿಯೋ ಅಂಗಡಿಗೆ ಭೇಟಿ ನೀಡಬಹುದು, ಮೈಗ್ರೇಶನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು ಮತ್ತು ಹೊಸ ಪ್ರಿಪೇಯ್ಡ್ ಸಂಪರ್ಕವನ್ನು ಪಡೆಯಲು ಕೆವೈಸಿ ದಾಖಲೆಗಳನ್ನು ಸಲ್ಲಿಸಬಹುದು.

Best Mobiles in India

English summary
How to switch from Jio postpaid to prepaid, follow the steps below.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X