ಹಳೆ ಫೋನ್‌ನಲ್ಲಿರುವ ಕಂಟ್ಯಾಕ್ಟ್‌ಗಳನ್ನು ಹೊಸ ಫೋನ್‌ಗೆ ವರ್ಗಾಯಿಸಲು ಹೀಗೆ ಮಾಡಿ!

|

ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಹಳೆ ಫೋನ್‌ನಲ್ಲಿರುವ ಕಂಟ್ಯಾಕ್ಟ್‌ ವರ್ಗಾಯಿಸಿಕೊಳ್ಳುವುದರ ಬಗ್ಗೆ ಸಾಕಷ್ಟು ಮಂದಿಗೆ ಗೊಂದಲವಿದೆ. ಕೆಲವರು ಹಳೆ ಫೋನ್‌ನಲ್ಲಿರುವ ತಮ್ಮ ಎಲ್ಲಾ ಕಂಟ್ಯಾಕ್ಟ್‌ಗಳನ್ನು ಹೊಸ ಫೋನ್‌ ವರ್ಗಾಯಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರಿಗೆ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸಿಕೊಳ್ಳುವುದು ಹೇಗೆ ಅನ್ನೊ ಗೊಂದಲ ಇರುತ್ತದೆ. ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಆಂಡ್ರಾಯ್ಡ್‌ ಟು ಆಂಡ್ರಾಯ್ಡ್‌ ಹಾಗೂ ಐಫೋನ್‌ ಟು ಐಫೋನ್‌ಗೆ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸಿಕೊಳ್ಳುವುದು ತುಂಬಾ ಸುಲಭವಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಹಳೆ ಫೋನ್‌ನಲ್ಲಿರುವ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದಕ್ಕೆ ಹಲವು ಆಯ್ಕೆಗಳಿವೆ. ಇದರ ಮೂಲಕ ನೀವು ನಿಮ್ಮ ಕಂಟ್ಯಾಕ್ಟ್‌ಗಳನ್ನು ಯಶಸ್ವಿಯಾಗಿ ವರ್ಗಾಯಿಸಿಕೊಳ್ಳಬಹುದಾಗಿದೆ. ಕಂಟ್ಯಾಕ್ಟ್‌ಗಳು ಮಾತ್ರವಲ್ಲ ಹಳೆ ಫೋನ್‌ನಲ್ಲಿರುವ ನಿಮ್ಮ ಚಾಟ್‌ಗಳು, ಡಾಕ್ಯುಮೆಂಟ್‌ಗಳನ್ನು ಕೂಡ ವರ್ಗಾಯಿಸಿಕೊಳ್ಳಬಹುದು. ಹಾಗಾದ್ರೆ ಹೊಸ ಸ್ಮಾರ್ಟ್‌ಫೋನ್‌ ತೆಗೆದುಕೊಂಡಾಗ ಹಳೆ ಫೋನ್‌ನಲ್ಲಿರುವ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ ಫೋನ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಹಳೆ ಫೋನ್‌ನಿಂದ ಹೊಸ ಸ್ಮಾರ್ಟ್‌ಫೋನ್‌ಗೆ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಸರಳವಾಗಿದೆ. ಇದಕ್ಕಾಗಿ ನೀವು ಆಂಡ್ರಾಯ್ಡ್‌ನಲ್ಲಿ ಎರಡು ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಇದರಲ್ಲಿ ಮೊದಲನೇ ವಿಧಾನ ನೀವು ನಿಮ್ಮ ಗೂಗಲ್‌ ಅಕೌಂಟ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಾಗಿದೆ. ಗೂಗಲ್‌ ಡ್ರೈವ್‌ನಲ್ಲಿಯೂ ಸಹ ನಿಮ್ಮ ಫೈಲ್‌ಗಳನ್ನು ಬ್ಯಾಕಪ್ ಮಾಡುವುದಕ್ಕೆ ಅವಕಾಶವಿರುವುದರಿಂದ ಹೊಸ ಫೋನ್‌ ತೆಗೆದುಕೊಂಡು ಗೂಗಲ್‌ ಅಕೌಂಟ್‌ ತೆರೆದರೆ ನಿಮ್ಮೆಲ್ಲಾ ಡೇಟಾ ದೊರೆಯಲಿದೆ.

VCF

ಎರಡನೇ ವಿಧಾನದಲ್ಲಿ ನೀವು VCF ಅಥವಾ ವರ್ಚುವಲ್ ಕಾರ್ಡ್ ರೀಡರ್ ಅನ್ನು ಬಳಸಬಹುದಾಗಿದೆ. VCF ನಲ್ಲಿ ಬ್ಯಾಕಪ್ ಮಾಡಲು, ಕಂಟ್ಯಾಕ್ಟ್‌ ಅಪ್ಲಿಕೇಶನ್> ಫಿಕ್ಸ್ ಮತ್ತು ಮ್ಯಾನೇಜ್ ಆಯ್ಕೆಗೆ ಹೋಗಿ> ಎಕ್ಸ್‌ಪೋರ್ಟ್‌ ಟು ಫೈಲ್‌ ಆಯ್ಕೆ ಮಾಡಿ> ಫೈಲ್‌ಗೆ ಹೆಸರನ್ನು ನೀಡುವ ಮೂಲಕ ಸೇವ್‌ ಮಾಡಿ. ನಂತರ, ಫೈಲ್‌ ಅಪ್ಲಿಕೇಶನ್‌ ತೆರೆಯಿರಿ ಇದರಲ್ಲಿ ನೀವು ಸೇವ್‌ ಮಾಡಿದ VCF ಫೈಲ್‌ ಅನ್ನು ಇಮೇಲ್‌ ಮೂಲಕ ಶೇರ್‌ ಮಾಡಿಕೊಳ್ಳುವುದು. ಹೊಸ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ VCF ಫೈಲ್ ಡೌನ್‌ಲೋಡ್‌ ಆದರೆ ಸಾಕು ನಿಮ್ಮ ಎಲ್ಲಾ ಕಂಟ್ಯಾಕ್ಟ್‌ ಲಿಸ್ಟ್‌ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಾಗಲಿದೆ.

ಐಫೋನ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಹೇಗೆ?

ಐಫೋನ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸುವುದು ಹೇಗೆ?

ಇನ್ನು ಐಫೋನ್ ಬಳಕೆದಾರರು ಕೂಡ ಹೊಸ ಐಫೋನ್‌ ತೆಗೆದುಕೊಂಡಾಗ ಹಳೆ ಐಫೋನ್‌ನಲ್ಲಿರುವ ಕಂಟ್ಯಾಕ್ಟ್‌ಗಳನ್ನು ವರ್ಗಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು Apple ID ಕ್ವೌಡ್‌ ಸಿಂಕ್‌ ಮಾಡುವಿಕೆಯನ್ನು ಸಕ್ರಿಯಗೊಳಿಸಲಾಗಿದೆ ಅನ್ನೊದನ್ನ ಖಚಿತಪಡಿಸಿಕೊಂಡಿರಬೇಕು. ಇದಕ್ಕಾಗಿ ನೀವು ಐಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ> ನಿಮ್ಮ ಹೆಸರನ್ನು ಆಯ್ಕೆ ಮಾಡಿ > ಐಕ್ಲೌಡ್ > ಸಂಪರ್ಕಗಳ ಮೇಲೆ ಕ್ಲಿಕ್ ಮಾಡಿ.
ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಹಳೆ ಫೋನ್‌ನಲ್ಲಿನ ಕಂಟ್ಯಾಕ್ಟ್‌ಗಳನ್ನು ಹೊಸ ಫೋನ್‌ಗೆ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್‌

ಇದಲ್ಲದೆ ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಿಂದ ಐಫೋನ್‌ಗೆ ಬದಲಾದರೆ ನಿಮ್ಮ ಫೋಟೋಸ್‌ ಮತ್ತು ಡೇಟಾವನ್ನು ವರ್ಗಾಯಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ಐಫೋನ್‌ನಿಂದ ನಿಮ್ಮ ಆಂಡ್ರಾಯ್ಡ್‌ಗೆ ಇಲ್ಲವೇ ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಬದಲಾಯಿಸಬಹುದಾಗಿದೆ.

ಐಫೋನ್‌ನಿಂದ ಆಂಡ್ರಾಯ್ಡ್‌ಗೆ ಫೋಟೋ ವರ್ಗಾಯಿಸುವುದು ಹೇಗೆ?

ಐಫೋನ್‌ನಿಂದ ಆಂಡ್ರಾಯ್ಡ್‌ಗೆ ಫೋಟೋ ವರ್ಗಾಯಿಸುವುದು ಹೇಗೆ?

ಹಂತ:1 ನಿಮ್ಮ ಐಫೋನ್‌ನಲ್ಲಿ ಗೂಗಲ್‌ ಡ್ರೈವ್‌ ಅಪ್ಲಿಕೇಶನ್ ಅನ್ನು ತೆರೆಯಿರಿ.
ಹಂತ:2 ಇದೀಗ ಆಡ್‌ ಬಟನ್ > ಅಪ್‌ಲೋಡ್ ಟ್ಯಾಪ್ ಮಾಡಿ.
ಹಂತ:3 ನಂತರ ಫೋಟೋಸ್‌ ಮತ್ತು ವೀಡಿಯೊಗಳಿಗೆ ಹೋಗಿ.
ಹಂತ:4 ಇದರಲ್ಲಿ ನೀವು ವರ್ಗಾಯಿಸಲು ಬಯಸುವ ಫೋಟೋಸ್‌ಗಳನ್ನು ಆಯ್ಕೆಮಾಡಿ ಮತ್ತು ನಂತರ ಅಪ್‌ಲೋಡ್ ಬಟನ್‌ ಪ್ರೆಸ್‌ ಮಾಡಿ.
ಹಂತ:5 ನಂತರ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ, ಗೂಗಲ್‌ ಡ್ರೈವ್‌ ತೆರೆಯಿರಿ ಮತ್ತು ನಿಮ್ಮ ಗೂಗಲ್‌ ಖಾತೆಗೆ ಲಾಗ್ ಇನ್ ಮಾಡಿ.
ಹಂತ:6 ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಹುಡುಕಿ ಮತ್ತು ಆಯ್ಕೆಮಾಡಿ.
ಹಂತ:7 ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿ ಗೋಚರಿಸುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:8 ಇದೀಗ ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ.

Best Mobiles in India

English summary
How to transfer contacts between Android to android or iPhone to iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X