Just In
Don't Miss
- Sports
ಭಾರತ vs ಆಸ್ಟ್ರೇಲಿಯಾ: ಶಾರ್ದೂಲ್- ಸುಂದರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ
- News
ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!
- Movies
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಫೋನ್‌ನಿಂದ ಆಂಡ್ರಾಯ್ಡ್‌ಗೆ ವಾಟ್ಸಾಪ್ ಚಾಟ್ ಟ್ರಾನ್ಸ್‌ಫರ್ ಮಾಡುವುದು ಹೇಗೆ?
ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದೆ. ಫೋನಿನಲ್ಲಿ ಪ್ರಮುಖ ಮಾಹಿತಿ ದಾಖಲೆಗಳನ್ನು ಸ್ಟೋರ್ ಮಾಡಿಕೊಂಡಿರುತ್ತಾರೆ. ಇನ್ನೂ ಒಂದು ವೇಳೆ ಸ್ಮಾರ್ಟ್‌ಫೋನ್ ಬದಲಾಯಿಸುವುದು ಬಂದರೇ ಬಹುತೇಕರಿಗೆ ಫೋನಿನಲ್ಲಿರುವ ಡಾಟಾ ಟ್ರಾನ್ಸ್‌ಫರ್ ಮಾಡುವುದು ತಲೆನೋವಿನ ಸಂಗತಿ. ಅದರಲ್ಲಿಯೂ ಐಫೋನ್‌ನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಚಾಟ್ ಡಾಟಾ ಟ್ರಾನ್ಸ್‌ಫರ್ ಮಾಡುವುದು ಇನ್ನು ಗೊಂದಲವೇ ಸರಿ.

ಹೌದು, ಐಫೋನ್‌ನಿಂದ ಆಂಡ್ರಾಯ್ಡ್ ಓಎಸ್ ಫೋನ್‌ಗಳಿಗೆ ಚಾಟ್ ಸೇರಿದಂತೆ ಪ್ರಮುಖ ಡಾಟಾ ಟ್ರಾನ್ಸ್‌ಫರ್ ಮಾಡುವುದು ಬಹುತೇಕರಿಗೆ ತಿಳಿದಿಲ್ಲ. ಏಕೆಂದರೇ ಐಫೋನ್ ಮತ್ತು ಆಂಡ್ರಾಯ್ಡ್ ಓಎಸ್(ಆಪರೇಟಿಂಗ್ ಸಿಸ್ಟಂ) ಬೇರೆ ಬೇರೆ ಆಗಿವೆ. ಆದರೆ ಐಫೋನ್ ಹಾಗೂ ಆಂಡ್ರಾಯ್ಡ್ ಓಎಸ್ ಎರಡರಲ್ಲಿಯೂ ಡಾಟಾ ಬ್ಯಾಕ್‌ಅಪ್ ಹಾಗೂ ಟ್ರಾನ್ಸ್‌ಫರ್‌ಗೆ ಆಯ್ಕೆಗಳಿವೆ. ಐಫೋನ್ ವಾಟ್ಸಾಪ್ ಚಾಟ್‌ನ ಆಂಡ್ರಾಯ್ಡ್ ಫೋನ್‌ಗೆ ಟ್ರಾನ್ಸ್‌ಫರ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಐಫೋನ್‌ನಿಂದ ವಾಟ್ಸಾಪ್ ಚಾಟ್‌ಗಳನ್ನು ಟ್ರಾನ್ಸ್‌ಫರ್ ಮಾಡಲು ಹೀಗೆ ಮಾಡಿರಿ:
* ನಿಮ್ಮ ಹೊಸ ಆಂಡ್ರಾಯ್ಡ್ ಫೋನ್‌ನಲ್ಲಿ ಬ್ಯಾಕ್‌ಅಪ್ ಪಡೆಯಬೇಕಿರುವ ವಾಟ್ಸಾಪ್ ಚಾಟ್ ತೆರೆಯಿರಿ.
* ನಂತರ More ಬಟನ್ ಟ್ಯಾಪ್ ಮಾಡಿ ಮತ್ತು Export Chat ಆಯ್ಕೆಯನ್ನು ಆರಿಸಿ.
* ಈಗ ಮೇಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಮೇಲ್ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ.
* ನಿಮ್ಮ ಹೊಸ Android ಫೋನ್‌ಗೆ ವರ್ಗಾಯಿಸಲು ನೀವು ಬಯಸುವ ಎಲ್ಲಾ ಚಾಟ್‌ಗಳಿಗಾಗಿ ಈ ಪ್ರಕ್ರಿಯೆಯನ್ನು ಬಳಸಿ.

ಆಂಡ್ರಾಯ್ಡ್ ಫೋನಿನಲ್ಲಿ ಐಫೋನ್ ವಾಟ್ಸಾಪ್ ಚಾಟ್ ಬ್ಯಾಕ್‌ಅಪ್‌ಗಾಗಿ ಹೀಗೆ ಮಾಡಿರಿ:
* ನಿಮ್ಮ ಮೇಲ್‌ನಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ಗೆ ಎಲ್ಲಾ ವಾಟ್ಸಾಪ್ ಎಕ್ಸ್‌ಪೋರ್ಟ್ ಅನ್ನು ಡೌನ್‌ಲೋಡ್ ಮಾಡಿ.
* ಪ್ಲೇ ಸ್ಟೋರ್‌ನಿಂದ ನಿಮ್ಮ ಫೋನ್‌ಗೆ ವಾಟ್ಸಾಪ್ ಅನ್ನು ಹೊಸದಾಗಿ ಇನ್‌ಸ್ಟಾಲ್ ಮಾಡಿರಿ.
* ವಾಟ್ಸಾಪ್ ತೆರೆಯಿರಿ ಮತ್ತು ಸೆಟ್‌ಅಪ್ ಪ್ರಕ್ರಿಯೆಯ ಮೂಲಕ ಹೋಗಿ.
* ಸೆಟ್‌ಅಪ್ ಪ್ರಕ್ರಿಯೆಯಲ್ಲಿ, ನೀವು ಹಳೆಯ ಚಾಟ್‌ಗಳನ್ನು Restore ಬಯಸುತ್ತೀರಾ ಎಂದು ಕೇಳಲಾಗುತ್ತದೆ, ಆಗ Restore ಟ್ಯಾಪ್ ಮಾಡಿ.
* Restore ಪೂರ್ಣಗೊಂಡ ನಂತರ, ನೆಕ್ಸ್ಟ್ ಬಟನ್ ಒತ್ತಿ ಮತ್ತು ನಿಮ್ಮ ವಾಟ್ಸಾಪ್ ಅನ್ನು ಬಳಸಲು ಪ್ರಾರಂಭಿಸಿ.

ಆಂಡ್ರಾಯ್ಡ್‌ನಲ್ಲಿ ಆಟೋಮ್ಯಾಟಿಕ್ ಬ್ಯಾಕ್‌ಅಪ್‌ಗಾಗಿ ಈ ಕ್ರಮ ಅನುಸರಿಸಿ:
* ವಾಟ್ಸಾಪ್ ತೆರೆಯಿರಿ ಮತ್ತು ಬಲ ಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.
* ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ ನಂತರ ‘ಚಾಟ್‌ಗಳು' ಟ್ಯಾಪ್ ಮಾಡಿ.
* ಚಾಟ್‌ಗಳ ವಿಭಾಗದಲ್ಲಿ ‘ಚಾಟ್ ಬ್ಯಾಕಪ್' ಆಯ್ಕೆಯನ್ನು ಆರಿಸಿ ಮತ್ತು ‘ಬ್ಯಾಕ್‌ಅಪ್ ಟು ಗೂಗಲ್ ಡ್ರೈವ್' ಆಯ್ಕೆಯನ್ನು ಟ್ಯಾಪ್ ಮಾಡಿ.

* ಬ್ಯಾಕಪ್ ಆವರ್ತನ ಮತ್ತು ಸಮಯವನ್ನು ಆಯ್ಕೆಮಾಡಿ.
* ನಿಮ್ಮ ಚಾಟ್‌ಗಳನ್ನು ಬ್ಯಾಕಪ್ ಮಾಡಲು ನೀವು ಬಯಸುವ Google ಖಾತೆಯನ್ನು ಆರಿಸಿ.
* ನಿಮ್ಮ ಬ್ಯಾಕಪ್‌ಗಳಲ್ಲಿ ವೀಡಿಯೊಗಳನ್ನು ಸೇರಿಸಲು ನೀವು ಬಯಸುತ್ತೀರೋ ಇಲ್ಲವೋ ಆಯ್ಕೆಮಾಡಿ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190