ಆಪಲ್‌ನ macOS ವೆಂಚುರಾ ವಿಶೇಷತೆ ಏನು? ಯಾವೆಲ್ಲಾ ಡಿವೈಸ್‌ಗಳನ್ನು ಬೆಂಬಲಿಸಲಿದೆ?

|

ಆಪಲ್‌ ಕಂಪೆನಿ ಮ್ಯಾಕ್‌ಬುಕ್ಸ್‌ ಮತ್ತು ಐಮ್ಯಾಕ್ಸ್‌ಗಾಗಿ ಹೊಸ ಸಾಫ್ಟ್‌ವೆರ್‌ ಮ್ಯಾಕ್‌ಒಎಸ್‌ ವೆಂಚುರಾವನ್ನು ಪರಿಚಯಿಸಿದೆ. ಇನ್ನು ಈ ಹೊಸ ಮ್ಯಾಕೋಸ್ ವೆಂಚುರಾ ಅಪ್‌ಡೇಟ್ ಕ್ಯಾಮೆರಾ ನಿರಂತರತೆ ಮತ್ತು ಸ್ಟೇಜ್ ಮ್ಯಾನೇಜರ್, ಜನಪ್ರಿಯ ಸ್ಟೇಜ್ ಮ್ಯಾನೇಜರ್‌ನಂತಹ ಫೀಚರ್ಸ್‌ಗಳನ್ನು ನೀಡಲಿದೆ. ಇದರಿಂದ ಮ್ಯಾಕ್‌ಬುಕ್‌ ಬಳಕೆದಾರರು ಹೊಸ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಮ್ಯಾಕ್‌ಒಎಸ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಮೂಲಕ ಉತ್ತಮ ಗುಣಮಟ್ಟದ ಚಿತ್ರದ ಅಗತ್ಯವಿರುವವರಿಗೆ ಇದು ಉಪಯುಕ್ತವಾಗಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿ ಹೊಸ ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ಬಿಡುಗಡೆ ಮಾಡಿದೆ. ಹೊಸ ಮ್ಯಾಕೋಸ್ ವೆಂಚುರಾ ಅಪ್‌ಡೇಟ್ ಮ್ಯಾಕ್‌ಬುಕ್‌ ಬಳಕೆದಾರರಿಗೆ ವೆಬ್‌ಕ್ಯಾಮ್‌ನಲ್ಲಿ ಉತ್ತಮ ಅನುಭವ ನೀಡಲಿದೆ. ಇದು ಡೆಸ್ಕ್ ವ್ಯೂ, ರಿ ಡಿಸೈನ್‌ ಮಾಡಲಾದ ಗೇಮ್ ಸೆಂಟರ್ ಡ್ಯಾಶ್‌ಬೋರ್ಡ್, ಹವಾಮಾನ ಅಪ್ಲಿಕೇಶನ್ ಮತ್ತು ಹೊಸ ಗೇಮಿಂಗ್ API ಗಳು ಸೇರಿವೆ. ಹಾಗಾದ್ರೆ ಹೊಸ ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯಾಕ್‌ಒಎಸ್‌ ವೆಂಚುರಾ ವಿಶೇಷತೆ ಏನು?

ಮ್ಯಾಕ್‌ಒಎಸ್‌ ವೆಂಚುರಾ ವಿಶೇಷತೆ ಏನು?

ಮ್ಯಾಕ್‌ಒಎಸ್‌ ವೆಂಚುರಾ ಮ್ಯಾಕ್‌ಬುಕ್‌ಗಳಿಗಾಗಿ ಆಪಲ್‌ ಪರಿಚಯಿಸಿರುವ ಹೊಸ ಸಾಫ್ಟ್‌ವೇರ್‌ ಅಪ್ಡೇಟ್‌ ಆಗಿದೆ. ಇದು ನಿಮ್ಮ ಐಫೋನ್ ಅನ್ನು ಈಗ ವೆಬ್‌ಕ್ಯಾಮ್ ಆಗಿ ಬಳಸಲು ಅನುಮತಿಸಲಿದೆ. ಅಲ್ಲದೆ ಮ್ಯಾಕೋಸ್ ಮತ್ತು ಐಫೋನ್‌ಗಳ ನಡುವೆ ಮ್ಯಾಕೋಸ್ 13 ನಡುವೆ ತಡೆರಹಿತ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ವೀಡಿಯೊ ಕರೆಗಳ ಸಮಯದಲ್ಲಿ ಉತ್ತಮ ಗುಣಮಟ್ಟದ ಚಿತ್ರದ ಅಗತ್ಯವಿರುವವರಿಗೆ ಇದು ಉಪಯುಕ್ತವಾಗಿದೆ.

ಹೊಸ

ಇನ್ನು ಬಳಕೆದಾರರು ಹೊಸ ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ಮೂಲಕ ಫೇಸ್‌ಟೈಂ ಕರೆಯನ್ನು iPhone ನಿಂದ Mac ಗೆ ಟ್ರಾನ್ಸಫರ್‌ ಮಾಡಬಹುದು. ಐಮೆಸೇಜ್‌ ಬಳಕೆದಾರರು ಐಒಎಸ್‌ನಲ್ಲಿರುವಂತೆ ಮ್ಯಾಕೋಸ್‌ನಲ್ಲಿ ಕೂಡ ಸಂದೇಶಗಳನ್ನು ಕಳುಹಿಸಬಹುದು. ಅಲ್ಲದೆ ಸಂದೇಶಗಳು ಮೇಲ್‌ಗೆ ಹೋಗುವುದರಿಂದ ಮೇಲ್‌ಗಳನ್ನು ಕಳುಹಿಸದಿರುವ ಆಯ್ಕೆಗಳೊಂದಿಗೆ ಅಪ್ಡೇಟ್‌ ಮಾಡಲಾಗಿದೆ. ಜೊತೆಗೆ ಸಫಾರಿ ಬ್ರೌಸರ್ ಪಾಸ್‌ಕೀಗಳನ್ನು ಸಹ ಬೆಂಬಲಿಸುತ್ತದೆ.

ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ಮಾಡುವುದು ಹೇಗೆ?

ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ಮಾಡುವುದು ಹೇಗೆ?

ಮ್ಯಾಪ್‌ ಆಪ್‌ ಸ್ಟೋರ್‌ನಲ್ಲಿ ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ ಅನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ಇನ್‌ಸ್ಟಾಲ್‌ ಮಾಡಬಹುದು. ಇದನ್ನು ಸಿಸ್ಟಮ್ ಪ್ರಿಫರೆನ್ಸಸ್‌> ಸಾಫ್ಟ್‌ವೇರ್ ಅಪ್ಡೇಟ್‌ ಮೂಲಕ ನ್ಯಾವಿಗೇಟ್ ಮಾಡಬಹುದು.

ಮ್ಯಾಕ್‌ಒಎಸ್‌ ವೆಂಚುರಾ ಯಾವೆಲ್ಲಾ ಡಿವೈಸ್‌ಗಳನ್ನು ಬೆಂಬಲಿಸಲಿದೆ?

ಮ್ಯಾಕ್‌ಒಎಸ್‌ ವೆಂಚುರಾ ಯಾವೆಲ್ಲಾ ಡಿವೈಸ್‌ಗಳನ್ನು ಬೆಂಬಲಿಸಲಿದೆ?

ಮ್ಯಾಕ್‌ಒಎಸ್‌ ವೆಂಚುರಾ ಅಪ್ಡೇಟ್‌ 2017 ರಲ್ಲಿ ಅಥವಾ ನಂತರ ಬಿಡುಗಡೆಯಾದ ಮ್ಯಾಕ್‌ಬುಕ್ ಮಾಡೆಲ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ 2018 ಅಥವಾ ನಂತರದ ಮ್ಯಾಕ್‌ಬುಕ್ ಏರ್ ಮಾದರಿಗಳನ್ನು ಕೂಡ ಬೆಂಬಲಿಸಲಿದೆ. ಹಾಗೆಯೇ 2018ರ ನಂತರ ಬಿಡುಗಡೆ ಆಗಿರುವ ಮ್ಯಾಕ್‌ ಮಿನಿ ಮಾಡೆಲ್‌ಗಳು ಕೂಡ ಮ್ಯಾಕ್‌ಒಎಸ್‌ ಅಪ್ಡೇಟ್‌ ಅನ್ನು ಬೆಂಬಲಿಸಲಿವೆ. ಇನ್ನು 2019 ರಲ್ಲಿ ಹಾಗೂ ನಂತರ ಬಿಡುಗಡೆ ಮಾಡಲಾದ ಮ್ಯಾಕ್‌ ಪ್ರೊ ರೂಪಾಂತರಗಳನ್ನು ಕೂಡ ಬೆಂಬಲಿಸಲಿದೆ ಎಂದು ವರದಿಯಾಗಿದೆ.

ಆಪಲ್‌

ಇದಲ್ಲದೆ ಆಪಲ್‌ ಕಂಪೆನಿ ಇದೀಗ ತನ್ನ ಹೊಸ ಮ್ಯಾಕ್‌ಬುಕ್‌ ಪ್ರೊ ಸರಣಿ ಮತ್ತು ಮ್ಯಾಕ್‌ಮಿನಿ ಸರಣಿಯ ಪಿಸಿಗಳನ್ನು ಪರಿಚಯಿಸಲು ತಯಾರಿ ನಡೆಸಿದೆ. ಇದರಲ್ಲಿ ಮ್ಯಾಕ್‌ಮಿನಿ ಮಾಡೆಲ್‌ ಕೂಡ ಬರಲಿದೆ ಎಂದು ವರದಿಯಾಗಿದೆ. ಅದರಂತೆ ಆಪಲ್‌ ಕಂಪೆನಿ ಸಿಲಿಕಾನ್ ಅನ್ನು ಒಳಗೊಂಡಿರುವ ಮೊದಲ ಮ್ಯಾಕ್ ಪ್ರೊ ಮೋಡ್‌ನಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದು "M2 ಅಲ್ಟ್ರಾ" ಮತ್ತು "M2 ಎಕ್ಸ್‌ಟ್ರೀಮ್" ಚಿಪ್‌ಸೆಟ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.

ಮ್ಯಾಕ್‌ಬುಕ್‌

ಆಪಲ್‌ ಮ್ಯಾಕ್‌ಬುಕ್‌ ಪ್ರೊ 14-ಇಂಚಿನ ಮತ್ತು 16-ಇಂಚಿನ ಡಿಸ್‌ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಈ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳು ಎರಡು CPU ರೂಪಾಂತರಗಳನ್ನು ಹೊಂದಿರಬಹುದು. ಇನ್ನು ಮ್ಯಾಕ್‌ಬುಕ್ ಪ್ರೊ ಮತ್ತು ಮ್ಯಾಕ್‌ಬುಕ್ ಏರ್ ಎರಡೂ ಕೂಡ M2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮ್ಯಾಕ್ ಮಿನಿ ಎರಡರಿಂದ ನಾಲ್ಕು ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಇನ್ನು ಮ್ಯಾಕ್‌ಬುಕ್‌ ಪ್ರೊ ಮಾದರಿಯು 256GB RAM ಅನ್ನು ಹೊಂದಿರಲಿದೆ ಎನ್ನಲಾಗಿದೆ.

Best Mobiles in India

English summary
How to update macOS Ventura: What’s new?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X