Subscribe to Gizbot

ಒಂದೇ ಡಿವೈಸ್‌ನಲ್ಲಿ 2 ವಾಟ್ಸಾಪ್ ಖಾತೆಯ ಬಳಕೆ ಹೇಗೆ?

Written By:

ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ವಾಟ್ಸಾಪ್ ಮೆಸೆಂಜರ್‌ನ ಮೋಡೆಡ್ ಆವೃತ್ತಿಯನ್ನು ಓಜಿ ವಾಟ್ಸಾಪ್ ಎಂದು ಕರೆಯಲಾಗುತ್ತದೆ. ಒಂದು ಡಿವೈಸ್ ಅನ್ನು ಬಳಸಿಕೊಂಡು 2 ವಾಟ್ಸಾಪ್ ಖಾತೆಗಳನ್ನು ಬಳಸಲು ಓಜಿ ವಾಟ್ಸಾಪ್ ಅನ್ನು ಬಳಸಲಾಗುತ್ತದೆ. ಓಜಿ ವಾಟ್ಸಾಪ್ ಅನ್ನು ಬಳಸಲು ನಿಮ್ಮ ಆಂಡ್ರಾಯ್ಡ್ ಅನ್ನು ರೂಟ್ ಮಾಡಬೇಕಾದ ಅವಶ್ಯಕತೆ ಇಲ್ಲ.

ಒಂದೇ ಡಿವೈಸ್‌ನಲ್ಲಿ 2 ವಾಟ್ಸಾಪ್ ಖಾತೆಯ ಬಳಕೆ ಹೇಗೆ?

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಓಜಿವಾಟ್ಸಾಪ್ ಅನ್ನು ಬಳಸುವುದು ಹೇಗೆ?
1. ಓಜಿ ವಾಟ್ಸಾಪ್‌ಗೆ ಹೋಗುವ ಮುನ್ನ ನಿಮ್ಮ ಸಂದೇಶಗಳು ಮತ್ತು ಡೇಟಾದ ಪೂರ್ಣ ಬ್ಯಾಕಪ್ ಅನ್ನು ತೆಗೆದಿರಿಸಿಕೊಳ್ಳಿ.

2. ವಾಟ್ಸಾಪ್ ಡೇಟಾವನ್ನು ತೆರವುಗೊಳಿಸಿ

3. ಎಸ್‌ಡಿ ಕಾರ್ಡ್/ವಾಟ್ಸಾಪ್ ಫೋಲ್ಡರ್‌ಗೆ ಹೋಗಿ ಮತ್ತು ಎಸ್‌ಡಿ ಕಾರ್ಡ್/ಓಜಿವಾಟ್ಸಾಪ್‌ಗೆ ಮರುಹೆಸರಿಸಿ

4. ಅಧಿಕೃತ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ

5.ಓಜಿ ವಾಟ್ಸಾಪ್ ಅನ್ನು ಇನ್‌ಸ್ಟಾಲ್ ಮಾಡಿ

6. ಇದು ನಿಮ್ಮ ಸಂಖ್ಯೆಯನ್ನು ಕೇಳಬಹುದು. ಅಧಿಕೃತ ವಾಟ್ಸಾಪ್‌ನಲ್ಲಿ ಹಿಂದೆ ನೀವು ಇನ್‌ಸ್ಟಾಲ್ ಮಾಡಿಕೊಂಡಿರುವ ಹಳೆ ಸಂಖ್ಯೆಯನ್ನು ನೀಡಿ.

7. ಓಕೆ ಕ್ಲಿಕ್ ಮಾಡಿ

8. ಇದೀಗ ನಿಮ್ಮ ಓಜಿ ವಾಟ್ಸಾಪ್ ಹಳೆ ಸಂಖ್ಯೆಗಾಗಿ ಸಿದ್ಧವಾಗಿದೆ

9.ಎರಡನೇ ಸಂಖ್ಯೆಗೆ ಬಳಸಲು, ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

10. ಇದು ನಿಮ್ಮ ಸಂಖ್ಯೆಗಾಗಿ ಕೇಳುತ್ತದೆ. ಹೊಸ ಎರಡನೇ ಸಂಖ್ಯೆಯನ್ನು ನೀಡಿ.

English summary
Whatsapp is now a days a big source of sending and receiving messages. It becomes a trend to chat with the friends.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot