ಗೂಗಲ್ ಫೋಟೋಸ್‌ ಇಮೇಜ್‌ಗಳನ್ನು ಲೈವ್ ವಾಲ್‌ಪೇಪರ್‌ನಂತೆ ಸೆಟ್‌ ಮಾಡುವುದು ಹೇಗೆ ?

|

ಸರ್ಚ್‌ ಇಂಜಿನ್‌ ದೈತ್ಯ ಈಗಾಗಲೇ ಹಲವು ಸೇವೆಗಳನ್ನ ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಪೋಟೋಸ್‌ ಕೂಡ ಒಂದು. ಇನ್ನು ಗೂಗಲ್‌ ಫೋಟೋಸ್‌ ನಲ್ಲಿ ನಿಮ್ಮ ಇಮೇಜ್‌ಗಳನ್ನ ಸ್ಟೋರೇಜ್‌ ಮಾಡಬಹುದಾಗಿದ್ದು, ಇದಕ್ಕಾಗಿ ಉಚಿತ ಸ್ಟೊರೇಜ್‌ ಅವಕಾಶವನ್ನು ಸಹ ನೀಡಿದೆ. ಸದ್ಯ Google ಫೋಟೋಸ್‌ ಇಮೇಜ್‌ಗಳನ್ನು ಈಗಾಗಲೇ ಗೂಗಲ್ ನೆಸ್ಟ್ ಹಬ್‌ನಂತಹ ಕೆಲವು ಸ್ಮಾರ್ಟ್ ಡಿವೈಸ್‌ಗಳಲ್ಲಿ ವೈಯಕ್ತಿಕಗೊಳಿಸಿದ ಸ್ಕ್ರೀನ್‌ ಸೇವರ್‌ಗಳಾಗಿ ಅಥವಾ ಚಿತ್ರ ಏರಿಳಿಕೆಗಳಾಗಿ ಬಳಸಬಹುದು. ಈಗ, ನೀವು ಆ ಫೋಟೋಗಳನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೋಮ್ ಸ್ಕ್ರೀನ್‌ನಲ್ಲಿ ಲೈವ್ ವಾಲ್‌ಪೇಪರ್‌ನಂತೆ ಬಳಸಬಹುದು.

ಗೂಗಲ್

ಹೌದು, ಗೂಗಲ್ ಇದೀಗ ತನ್ನ ಗೂಗಲ್‌ ಫೋಟೋಸ್‌ನಲ್ಲಿ ಹೊಸ ಆಪ್ಡೇಟ್‌ ಮಾಡಿದೆ. ಇತ್ತೀಚಿನ ಅಪ್‌ಡೇಟ್, ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತಿರುವ ಲೈವ್ ವಾಲ್‌ಪೇಪರ್ ಕ್ರಿಯೆಟ್‌ ಮಾಡಲು ಸ್ಟೋರೇಜ್‌ನ ‘ಮೆಮೊರೀಸ್' ವಿಭಾಗದಿಂದ ಲೈವ್ ವಾಲ್‌ಪೇಪರ್‌ಗಳನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಇದನ್ನು ಬಳಸಲು, ನೀವು Google ಫೋಟೋಗಳ ಆವೃತ್ತಿ 5.22 ಅನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ಇನ್ನೂ ಈ ಆವೃತ್ತಿಯನ್ನು ಹೊಂದಿಲ್ಲದಿದ್ದರೆ, ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಅದನ್ನು ನವೀಕರಿಸಬೇಕಾಗುತ್ತದೆ. ಹಾಗಾದ್ರೆ ಆಂಡ್ರಾಯ್ಡ್‌ ನಲ್ಲಿ ಲೈವ್‌ ವಾಲ್‌ಪೇಪರ್‌ನಂತೆ ಗೂಗಲ್‌ ಫೋಟೋಸ್‌ ಇಮೇಜ್‌ಗಳನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಫೋಟೋಸ್‌

ಗೂಗಲ್‌ ಫೋಟೋಸ್‌ ಇದೀಗ ಆಟೋಮ್ಯಾಟಿಕ್‌ ಆಗಿ ಆಪ್ಡೇಟ್‌ ಆಗುವ ಲೈವ್ ವಾಲ್‌ಪೇಪರ್ ಕ್ರಿಯೆಟ್‌ ಮಾಡಲು ಸ್ಟೋರೇಜ್‌ನ ‘ಮೆಮೊರೀಸ್' ವಿಭಾಗದಿಂದ ಲೈವ್ ವಾಲ್‌ಪೇಪರ್‌ಗಳನ್ನು ಸೆಟ್‌ ಮಾಡಲು ಅವಕಾಶ ನೀಡಿದೆ. ಇದಕ್ಕಾಗಿ Google ಫೋಟೋಸ್‌ ನ ಹೊಸ ಆವೃತ್ತಿ 5.22 ಅನ್ನು ಆಪ್ಡೇಟ್‌ ಮಾಡಬೇಕಿದೆ. ಇದಾದ ನಂತರ ಆಂಡ್ರಾಯ್ಡ್‌ ನಲ್ಲಿ ಲೈವ್‌ ವಾಲ್‌ಪೇಪರ್‌ನಂತೆ ಗೂಗಲ್‌ ಫೋಟೋಸ್‌ ಸೆಟ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್ ಫೋಟೋಸ್‌ ಇಮೇಜ್‌ಗಳನ್ನು ಲೈವ್ ವಾಲ್‌ಪೇಪರ್‌ನಂತೆ ಸೆಟ್‌ ಮಾಡುವುದು ಹೇಗೆ ?

ಗೂಗಲ್ ಫೋಟೋಸ್‌ ಇಮೇಜ್‌ಗಳನ್ನು ಲೈವ್ ವಾಲ್‌ಪೇಪರ್‌ನಂತೆ ಸೆಟ್‌ ಮಾಡುವುದು ಹೇಗೆ ?

ಹಂತ:1 ನಿಮ್ಮ ಹೋಮ್‌ ಸ್ಕ್ರೀನ್‌ನಲ್ಲಿ ಹೋಗಿ ಮತ್ತು ಸ್ಕ್ರೀನ್‌ ಮೇಲಿನ ಯಾವುದೇ ಖಾಲಿ ಜಾಗದಲ್ಲಿ ಲಾಂಗ್‌ ಪ್ರೆಸ್‌ ಮಾಡಿ.

ಹಂತ:2 ಇದು ‘ಹೋಮ್ ಸೆಟ್ಟಿಂಗ್ಸ್', ‘ವಿಜೆಟ್ಸ್' ಮತ್ತು ‘ಸ್ಟೈಲ್ಸ್ & ವಾಲ್‌ಪೇಪರ್ಸ್' ಅನ್ನು ಪುಲ್‌ ಮಾಡಲಿದೆ.

ಹಂತ:3 ‘ಸ್ಟೈಲ್ಸ್ ಮತ್ತು ವಾಲ್‌ಪೇಪರ್‌ಗಳು' ಕ್ಲಿಕ್ ಮಾಡಿ ಮತ್ತು ಲೈವ್ ವಾಲ್‌ಪೇಪರ್‌ಗಳಿಗೆ ಸ್ಕ್ರಾಲ್ ಮಾಡಿ.

ಹಂತ:4 Google ಫೋಟೋಸ್‌ನಿಂದ ಇಮೇಜ್‌ಗಳನ್ನು ಲೈವ್ ವಾಲ್‌ಪೇಪರ್‌ನಂತೆ ಹೊಂದಿಸಲು ‘ಮೆಮೊರೀಸ್' ಆಯ್ಕೆಮಾಡಿ.

ಗೂಗಲ್

ಇದು ಪ್ರತಿದಿನವೂ ಆಪ್ಡೇಟ್‌ ಆಗುತ್ತಲೇ ಇರುತ್ತದೆ, ಆದಾಗ್ಯೂ, ಈ ಆಯ್ಕೆಯನ್ನು ಕಸ್ಟಮೈಸ್ ಮಾಡಲು ಯಾವುದೇ ಮಾರ್ಗವಿಲ್ಲ ಎಂಬುದನ್ನು ತಿಳಿಯಲೇಬೇಕು. ಮೆಷಿನ್‌ ಲರ್ನಿಂಗ್‌ ಆಧಾರದ ಮೇಲೆ ಗೂಗಲ್ ಫೋಟೋಸ್‌ಗಳನ್ನು ಪುಲ್‌ ಮಾಡಲಿದೆ. ಆದ್ದರಿಂದ, ನೀವು Google ಫೋಟೋಸ್‌ಗಳಲ್ಲಿ ಮುಜುಗರದ ಅಥವಾ ಕೆಟ್ಟದಾಗಿ ತೆಗೆದ ಫೋಟೋಸ್‌ಗಳ ಗುಂಪನ್ನು ಹೊಂದಿದ್ದರೆ, ಇವುಗಳು ಸಹ ತೋರಿಸಲ್ಪಡುತ್ತವೆ. ಆದ್ದರಿಂದ ನೀವು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Best Mobiles in India

English summary
Now you can also use images from Google Photos on your Android smartphone home screen like a live wallpaper. Here's how you can set it up.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X