ಆಂಡ್ರಾಯ್ಡ್ 11 ನಲ್ಲಿ ಸ್ಕ್ರೀನ್ ರೆಕಾರ್ಡರ್ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಆಂಡ್ರಾಯ್ಡ್‌ ಆಧಾರಿತ ಡಿವೈಸ್‌ಗಳ ಬಳಕೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಗೂಗಲ್‌ನ ಆಂಡ್ರಾಯ್ಡ್‌ ಸಿಸ್ಟಮ್‌ ಸ್ಮಾರ್ಟ್‌ಫೋನ್‌ಗಳಿಗೆ ಬಲತುಂಬಿದೆ. ಇನ್ನು ಗೂಗಲ್‌ನ ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಈಗಾಗಲೇ ಹಲವು ಆವೃತ್ತಿಗಳಲ್ಲಿ ಬಿಡುಗಡೆ ಆಗಿದೆ. ಪ್ರಸ್ತುತ ಆಂಡ್ರಾಯ್ಡ್‌ 10 ಆಪರೇಟಿಂಗ್ ಸಿಸ್ಟಂ ಚಾಲ್ತಿಯಿದೆ. ಆದರೆ ಗೂಗಲ್ ಇತ್ತೀಚಿಗಷ್ಟೇ ತನ್ನ ಹೊಸ ಅಪ್‌ಡೇಟ್ ಆಂಡ್ರಾಯ್ಡ್‌ 11 ಓಎಸ್‌ ಆವೃತ್ತಿ ಪರಿಚಯ ಮಾಡಿದೆ. ಈ ಅವೃತ್ತಿಯಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನ ನೀಡಲಾಗಿದ್ದು, ಇದರಲ್ಲಿ ಸ್ಕ್ರೀನ್ ರೆಕಾರ್ಡರ್ ಕೂಡ ಒಂದಾಗಿದೆ.

ಆಂಡ್ರಾಯ್ಡ್ 11

ಹೌದು, ಆಂಡ್ರಾಯ್ಡ್ 11 ಅಪ್‌ಡೇಟ್‌ನಲ್ಲಿ ಗೂಗಲ್ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದು ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೆಚ್ಚು ಶಕ್ತಿಯುತ ಮತ್ತು ಉಪಯುಕ್ತವಾಗಿಸಿದೆ. ಹೊಸದಾಗಿ ಪರಿಚಯಿಸಲಾದ ಫೀಚರ್ಸ್‌ಗಳಲ್ಲಿ ಸ್ಕ್ರೀನ್ ರೆಕಾರ್ಡರ್ ಕೂಡ ಒಂದಾಗಿದೆ. ಇನ್ನು ಸ್ಕ್ರೀನ್ ರೇಕಾರ್ಡಿಂಗ್ ಆಂಡ್ರಾಯ್ಡ್‌ 11 ಓಎಸ್‌ನಲ್ಲಿ ಬಿಲ್ಟ್‌ ಇನ್ ಸ್ಕ್ರೀನ್ ರೇಕಾರ್ಡಿಂಗ್ ಫೀಚರ್ಸ್‌ ಹೊಸ ಅನುಭವವನ್ನು ನೀಡಲಿದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ 11 ಒಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ರೇಕಾರ್ಡಿಂಗ್ ಬಳಸುವುದು ಹೇಗೆ ಅನ್ನೊದನ್ನ ತಿಳಿಯಲು ಮುಂದೆ ಓದಿರಿ.

ಸ್ಕ್ರೀನ್ ರೇಕಾರ್ಡಿಂಗ್

ನಿಮ್ಮ ಫೋನ್ ಪರದೆಯಲ್ಲಿ ಏನಾಗುತ್ತಿದೆ ಎಂಬುದನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಸ್ಕ್ರೀನ್ ರೇಕಾರ್ಡಿಂಗ್‌ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಮೈಕ್, ಡಿವೈಸ್‌ ಅಥವಾ ಎರಡರಿಂದಲೂ ಧ್ವನಿ ಮೂಲಕ ರೆಕಾರ್ಡ್ ಮಾಡಬಹುದಾಗಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಅಪ್ಲಿಕೇಶನ್ ಅಗತ್ಯವಿಲ್ಲ. ಇನ್ನು ಹೆಸರೇ ಸೂಚಿಸುವಂತೆ, ಈ ಫೀಚರ್ಸ್‌ ಸ್ಕ್ರೀನ್ ರೇಕಾರ್ಡಿಂಗ್‌ ಮಾಡುವುದರಿಂದ ತಾಂತ್ರಿಕ ಸಲಹೆಗಳು, ದೋಷನಿವಾರಣೆ ಮತ್ತು ಹೆಚ್ಚಿನವುಗಳಿಗಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಇನ್ನು ಸ್ಕ್ರೀನ್ ರೆಕಾರ್ಡರ್ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ 11 ಓಎಸ್‌ ಆಧಾರಿತ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಯಿರಿ.

ಆಂಡ್ರಾಯ್ಡ್ 11 ನಲ್ಲಿ ಸ್ಕ್ರೀನ್ ರೆಕಾರ್ಡರ್ ಅನ್ನು ಬಳಸುವುದು ಹೇಗೆ?

ಆಂಡ್ರಾಯ್ಡ್ 11 ನಲ್ಲಿ ಸ್ಕ್ರೀನ್ ರೆಕಾರ್ಡರ್ ಅನ್ನು ಬಳಸುವುದು ಹೇಗೆ?

ಹಂತ 1: ನಿಮ್ಮ ಆಂಡ್ರಾಯ್ಡ್ 11 ಸ್ಮಾರ್ಟ್‌ಫೋನ್‌ನಲ್ಲಿ, ನೋಟಿಫಿಕೇಶನ್ ಪ್ಯಾನೆಲ್ ಕೆಳಗೆ ಸ್ವೈಪ್ ಮಾಡಿ ಮತ್ತು ತ್ವರಿತ ಸೆಟ್ಟಿಂಗ್‌ಗಳ ವಿಭಾಗದಿಂದ, ಸ್ಕ್ರೀನ್ ರೆಕಾರ್ಡರ್ ಐಕಾನ್ ಟ್ಯಾಪ್ ಮಾಡಿ.

ಹಂತ 2: ಈಗ, ಸ್ಕ್ರೀನ್ ರೆಕಾರ್ಡರ್ ಪರದೆಯಲ್ಲಿ, ನೀವು ಆಡಿಯೊ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಲು ಮತ್ತು ಅದನ್ನು ಪರದೆಯ ಮೇಲೆ ತೋರಿಸಲು ಬಯಸಿದರೆ ಆಯ್ಕೆಗಳನ್ನು ಟಾಗಲ್ ಮಾಡಿ.

ಹಂತ 3: ನಿಮ್ಮ ಆದ್ಯತೆಗಳನ್ನು ನೀವು ಪೂರ್ಣಗೊಳಿಸಿದ ನಂತರ, ಸ್ಟಾರ್ಟ್‌ ಬಟನ್ ಟ್ಯಾಪ್ ಮಾಡಿ. ಈಗ ಸ್ಕ್ರೀನ್ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ.

ಹಂತ 4: ಸ್ಕ್ರೀನ್ ರೆಕಾರ್ಡಿಂಗ್ ಮುಗಿದ ನಂತರ, ಮತ್ತೆ ನೋಟಿಫಿಕೇಶನ್ ಪ್ಯಾನೆಲ್ ಕೆಳಗೆ ಸ್ವೈಪ್ ಮಾಡಿ ಮತ್ತು ರೆಕಾರ್ಡಿಂಗ್ ನಿಲ್ಲಿಸಲು ರೆಡ್‌ ಬ್ಯಾನರ್ ಮೇಲೆ ಟ್ಯಾಪ್ ಮಾಡಿ.

ಆಂಡ್ರಾಯ್ಡ್ 11

ಈ ಮೂಲಕ ನೀವು ನಿಮ್ಮ ಆಂಡ್ರಾಯ್ಡ್ 11 ಚಾಲಿತ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಬಹುದು. ಅಲ್ಲದೆ ರೆಕಾರ್ಡಿಂಗ್ ನಡೆಯುತ್ತಿರುವಾಗ, ರೆಕಾರ್ಡಿಂಗ್ ಲೈವ್ ಆಗಿದೆ ಎಂದು ಸೂಚಿಸುವ ನಿಮ್ಮ ಸ್ಮಾರ್ಟ್‌ಫೋನ್‌ನ ಪರದೆಯ ಮೇಲಿನ ಬಲ ಮೂಲೆಯಲ್ಲಿ ಸಣ್ಣ ಕೆಂಪು ಬಣ್ಣದ ಐಕಾನ್ ಅನ್ನು ಸಹ ನೀವು ಕಣಬಹುದಾಗಿದೆ. ಸದ್ಯ ಸ್ಕ್ರೀನ್ ರೇಕಾರ್ಡಿಂಗ್‌ ಮಾಡುವುದರಿಂದ ತಾಂತ್ರಿಕ ಸಲಹೆಗಳು, ದೋಷನಿವಾರಣೆ ಮತ್ತು ಹೆಚ್ಚಿನವುಗಳಿಗಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಇದು ಉತ್ತಮ ಮಾರ್ಗ ಎಂದು ಎನಿಸಿಕೊಂಡಿದೆ.

Most Read Articles
Best Mobiles in India

English summary
Google has added several new features in the Android 11 update making the mobile operating system more powerful and useful. One of the newly introduced features is the Screen Recorder.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X