ಮೋಬೈಲ್‌ನಲ್ಲಿ ಟ್ವಿಟ್ಟರ್‌ ಬಳಸುವುದು ಹೇಗೆ?

Posted By: Staff
ಮೋಬೈಲ್‌ನಲ್ಲಿ ಟ್ವಿಟ್ಟರ್‌ ಬಳಸುವುದು ಹೇಗೆ?

ನಿಮ್ಮ ಅನಿಸಿಕೆಗಳನ್ನು ಹೊರ ಹಾಕಲು ಟ್ವಿಟ್ಟರ್‌ ಅಂತರ್ಜಾಲದಲ್ಲಿ ಒಂದು ಬಹುದೊಡ್ಡ ವೇದಿಕೆ ಯಾಗಿಹೋಗಿದೆ. ನಾಯಕರುಗಳಾಗಲೀ ನಾಯಕ ನಟರುಗಳಾಗಲಿ ಇಂದು ಟ್ವಿಟ್ಟರ್‌ನಲ್ಲಿಯೇ ಮೊದಲಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕುವ ಪ್ರವೃತ್ತಿ ಇಂದು ಬೆಳೆದು ನಿಂತಿದೆ. ಅಂದಹಾಗೆ ಇಂದು ಮಾರುಕಟ್ಟೆಯಲ್ಲಿನ ಬಹುತೇಕ ಎಲ್ಲಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಟ್ವಟ್ಟರ್‌ ಅಕೌಂಟ್‌ನ ಡೀಫಾಲ್ಟ್‌ ಅಪ್ಲಿಕೇಷನ್ಸ್‌ ಲಭ್ಯವಿದೆ. ಆದರೂ ಕೂಡ ಕೆಲ ಬಳಕೆದಾರರು ಇದರಲ್ಲಿ ಅಕೌಂಟ್‌ ಕ್ರೀಯೇಟ್‌ ಮಾಡಲು ಮುಂದಾಗಿವುದಿಲ್ಲಾ. ಏಕೆಂದರೆ ಮೊಬೈಲ್‌ನಲ್ಲಿ ಟ್ವಿಟ್ಟರ್‌ ಬಳಸುವುದು ಹೇಗೆ ಎಂಬುದರ ಕುರಿತಾಗಿ ಇರುವ ಕೆಲ ಗೊಂದಲಗಳ ಕಾರಣ ಬಳಕೆಗೆ ಹಿಂದೇಟು ಹಾಕುತ್ತಾರೆ.

ಅದಕ್ಕಾಗಿಯೇ ಇಂದು ಗಿಜ್ಬಾಟ್‌ ಮೊಬೈಲ್‌ನಲ್ಲಿ ಟ್ವಿಟ್ಟರ್‌ ಬಳಕೆ ಮಾಡುವುದರ ಕುರಿತಾಗಿ ಸುಲಭ ರೀತಿಯ ಸಲಹೆಗಳನ್ನು ತಂದಿದೆ. ನೀವೂ ಕೂಡ ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಟ್ವಿಟ್ಟರ್‌ ಬಳಕೆ ಮಾಡಬೇಕೆಂದಿದ್ದಲ್ಲಿ ಈ ಸುಲಭ ಮಾರ್ಗಗಳನ್ನು ಅನುಸರಿಸಿ.

ಸ್ಟೆಪ್‌ 1: ಮೊದಲಿಗೆ ಗೋಗಲ್‌ ಪ್ಲೇ ಮೀಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಟ್ವಿಟ್ಟರ್‌ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳಿ. ಇಲ್ಲವಾದಲ್ಲಿ ಪಿಸಿ ಮೂಲಕ ಟ್ವಿಟ್ಟರ್‌ ಪೇಜ್‌ ಓಪನನ ಮಾಡಿ Join For Free ಲಿಂಕ್‌ಕ್ಲಿಕ್‌ ಮಾಡಿ ನಿಮ್ಮ ಫೋನ್‌ ನಂಬರ್‌ ಧಾಖಲಿಸಿ.

ಸ್ಟೆಪ್‌ 2: ಫೋನ್‌ ನಂಬರ್‌ ಧಾಖಲಿಸಿದ ನಂತರ ಏರಿಯಾ ಕೋಡ್‌ ಹಾಕಿ ಸೇವ್‌ ಮಮಾಡಿ. ಎಲ್ಲಾ ವವರಗಳನ್ನು ಸೇವ್‌ ಮಾಡಿದ ಬಳಿಕ ನಿಮ್ಮ ಮೊಬೈಲ್‌ಗೆ ಟ್ವಿಟ್ಟರ್‌ ಮೂಲಕ ಒಂದು ಲಿಂಕ್‌ ಬರುತ್ತದೆ.

ಸ್ಟೆಪ್‌ 3: ಟ್ವಿಟ್ಟರ್‌ ಮೂಲಕ ಕಳುಹಿಸಲಾದ ಲಿಂಕ್‌ ಮೇಲೆ ಕ್ಲೀಕ್‌ ಮಾಡಿ ನಿಮ್ಮ ಹೊಸ ಅಕೌಂಟ್‌ ಕ್ರಿಯೇಟ್‌ ಮಾಡಿಕೊಳ್ಳಿ. ಅಕೌಂಟ್‌ ಕ್ರಿಯೇಟ್‌ ಮಾಡಲು ಸೈನ್‌ ಇನ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿದಾಕ್ಷಣ ನಿಮ್ಮ ಮುಂದೆ ಒಂದು ಫಾರ್ಮ್‌ ಓಪನ್‌ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರು ಹಾಗೂ ಯೂಸರ್‌ ನೇಮ್‌ ಇ-ಮೇಲ್‌ ಆಕ್ಸೆಸ್‌ ಹಾಗೂ ಪಾಸ್ವರ್ಡ್‌ ಎಂಟರ್‌ ಮಾಡಬೇಕಾಗುತ್ತದೆ.

ಸ್ಟೆಪ್‌ 4: ಫಾರ್ಮ್‌ ಸಂಪೂರ್ಣವಾಗಿ ಫೀಲ್‌ ಮಾಡಿದ ಬಳಿಕ ಸಬ್ಮಿಟ್‌ ಮಾಡಿ. ಸಬ್ಮಿಟ್‌ ಮಾಡಿದ ಬಳಿಕ ನಿಮ್ಮ ಮೇಲ್‌ ಗೆ ಒಂದು ಕಂನ್ಫರ್‌ಮೇಷನ್‌ ಮೇಲ್‌ ಬರುತ್ತದೆ ಅದನ್ನು ಅಪ್ರೋವ್‌ ಮಾಡಿದ ನಂತರ ನೀವು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಟ್ವಿಟ್ಟರ್‌ ಅಕೌಂಟ್‌ ಬಳಸಬಹುದಾಗಿದೆ.

ಟ್ವೀಟ್‌ ಮಾಡುವುದು ಹೇಗೆ.

  • ಮೊದಲಿಗೆ ಟ್ವೀಟ್‌ ಆಪ್ಷನ್‌ ಮೀಲೆ ಕ್ಲಿಕ್‌ ಮಾಡಿ.

  • ನೆನಪಿರಲಿ ನೀವು ಟ್ವಿಟ್ಟರ್‌ ನಲ್ಲಿ ಕೇವಲ 140 ಅಕ್ಷರಗಳನ್ನು ಮಾತ್ರವಷ್ಟೇ ಟೈಪ್‌ ಮಾಡಲು ಸಾಧ್ಯ.

  • ನಿಮ್ಮ ಅಕ್ಷರಗಳು 140 ಕ್ಕಿಂತ ಜಾಸ್ತಿಯಾದಲ್ಲಿ ಕೆಳಗೆ ನೀಡಲಾಗುವ ನಂಬರ್‌ ಒಂದಕ್ಕಿಂತ ಅಧಿಕವಾಗುತ್ತದೆ.

  • ಅಲ್ಲದೆ ಕೆಳಗೆ ನೀಡಲಾಗಿರುವ ಚಿಕ್ಕದಾದ ಕ್ಯಾಮೆರಾ ಆಪ್ಷನ್‌ ಕ್ಲಿಕ್‌ ಮಾಡುವ ಮೂಲಕ ನಿಮ್ಮ ಟ್ವೀಟ್‌ ನಲ್ಲಿ ಮೇಸೆಜ್‌ ಕೂಡ ಸೇರಿಸ ಬಹುದಾಗಿದೆ.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot