ಫೋನ್ ಸಂಖ್ಯೆ, ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

By Shwetha
|

ಫೋನ್ ಸಂಖ್ಯೆ ಅಥವಾ ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸಲು ಸಾಧ್ಯವೇ? ಖಂಡಿತ ಇಲ್ಲ. ಆದರೆ ಇಂದಿನ ಲೇಖನದಲ್ಲಿ ಫೋನ್ ಸಂಖ್ಯೆ ಮತ್ತು ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಆಂಡ್ರಾಯ್ಡ್ ಟ್ಯಾಬ್ಲೆಟ್, ಐಪ್ಯಾಡ್, ಪಿಸಿ ಮತ್ತು ಸಿಮ್ ಕಾರ್ಡ್ ಇಲ್ಲದೇ ಇರುವ ಮೊಬೈಲ್ ಫೋನ್‌ನಲ್ಲಿ ಕೂಡ ಇದನ್ನು ಅನುಸರಿಸಬಹುದಾಗಿದೆ.

ಎರಡು ವಿಧಾನದಲ್ಲಿ ಈ ಪದ್ಧತಿಯನ್ನು ನಿಮಗೆ ಅನುಸರಿಸಬಹುದಾಗಿದ್ದು ಅದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಬನ್ನಿ ಇಂದಿನ ಲೇಖನದಲ್ಲಿ ಆ ವಿಧಾನಗಳೇನು ಎಂಬುದನ್ನು ನಾವು ಅರಿಯೋಣ.

#1

#1

ಮೊದಲಿಗೆ ನಿಮ್ಮ ಟ್ಯಾಬ್ಲೆಟ್, ಪೋನ್ ಅಥವಾ ಪಿಸಿನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮಾಡಿ

#2

#2

ನಿಮ್ಮ ಡಿವೈಸ್‌ಗೆ ವಾಟ್ಸಾಪ್ ಅನ್ನು ನೀವು ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿದ್ದೀರಿ ಎಂದಾದಲ್ಲಿ, ವಾಟ್ಸಾಪ್ ಪರಿಶೀಲನೆಯನ್ನು ನೀವು ಮಾಡಿದ್ದೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳಿ.

#3

#3

ವಾಟ್ಸಾಪ್ ಪರಿಶೀಲನೆ ಮಾಡಿದ್ದೀರಿ ಎಂದಾದಲ್ಲಿ, ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ನಿಮ್ಮ ಪ್ರಸ್ತುತ ಸಂಖ್ಯೆಯನ್ನು ಡಿಲೀಟ್ ಮಾಡಿ ಮತ್ತು ಅದನ್ನು ರಿಇನ್‌ಸ್ಟಾಲ್ ಮಾಡಿ.

ಟೆಕ್ಸ್ಟ್ ಟು ನೌ

ಟೆಕ್ಸ್ಟ್ ಟು ನೌ

ಟೆಕ್ಸ್ಟ್ ಟು ನೌ ಅಪ್ಲಿಕೇಶನ್ ಅನ್ನು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಈ ಮೆಸೇಜಿಂಗ್ ಅಪ್ಲಿಕೇಶನ್ ಅನನ್ಯ ಫೋನ್ ಸಂಖ್ಯೆಯನ್ನು ನಿಮಗೆ ನೀಡುವುದರಿಂದ ವಾಟ್ಸಾಪ್‌ಗೆ ಇದನ್ನು ನಮೂದಿಸಿ ಖಾತೆ ಪರಿಶೀಲಿಸಲು ಬಳಸಬಹುದಾಗಿದೆ.

#5

#5

ಗೂಗಲ್ ಪ್ಲೇ ಸ್ಟೋರ್, ಐಟ್ಯೂನ್ಸ್ ಅಪ್ಲಿಕೇಶನ್ ಸ್ಟೋರ್‌ನಿಂದ, ವಿಂಡೋಸ್ ಫೋನ್ ಸ್ಟೋರ್‌ನಿಂದ ಟೆಕ್ಸ್ಟ್ ನೌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.

#6

#6

ನಿಮ್ಮ ಡಿವೈಸ್‌ನಲ್ಲಿ ಇದು ಒಮ್ಮೆ ಡೌನ್‌ಲೋಡ್ ಆದ ನಂತರ, ಇದನ್ನು ತೆರೆಯಿರಿ ಮತ್ತು ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಅಪ್ಲಿಕೇಶನ್ ಹೊಂದಿಸಿದ ನಂತರ ಸಂಖ್ಯೆ ಬರೆದಿಟ್ಟುಕೊಳ್ಳಿ.
*ಆಂಡ್ರಾಯ್ಡ್: ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ತೆರೆದ ಒಡನೆ 3 ಲೈನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ನಿಮ್ಮ ಫೋನ್ ಸಂಖ್ಯೆ ದೊರೆಯುತ್ತದೆ.
*ಐಫೋನ್: ನಿಮ್ಮ ಐಫೋನ್‌ನ ಮೇಲ್ಭಾಗದ ಎಡಮೂಲೆಯಲ್ಲಿರುವ 3 ಲೈನ್ ಐಕಾನ್ ಅನ್ನು ಕ್ಲಿಕ್ ಮಾಡಿ, ಒಮ್ಮೆ ನೀವು ಇದನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಫೋನ್ ಸಂಖ್ಯೆ ದೊರೆಯುತ್ತದೆ.
*ವಿಂಡೋಸ್ ಫೋನ್:
ಅಪ್ಲಿಕೇಶನ್ ತೆರೆದು ಅದನ್ನು ಪೀಪಲ್ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿದಲ್ಲಿ ಕೂಡ ನಿಮ್ಮ ಫೋನ್ ಸಂಖ್ಯೆ ನಿಮಗೆ ದೊರೆಯುತ್ತದೆ.

#7

#7

ನಿಮ್ಮ ಟೆಕ್ಸ್ಟ್ ನೌ ಸಂಖ್ಯೆಯನ್ನು ನೋಟ್ ಮಾಡಿಕೊಂಡ ನಂತರ, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ ನಂತರ ಟೆಕ್ಸ್ಟ್ ನೌ ಸಂಖ್ಯೆಯನ್ನು ನಮೂದಿಸಿ

#8

#8

ಎಸ್ಎಮ್‌ಎಸ್ ವಿಫಲವಾಗಲು ಐದು ನಿಮಿಷಗಳವರೆಗೆ ಕಾಯಿರಿ. ಎಸ್‌ಎಮ್‌ಎಸ್ ಪರಿಶೀಲನೆ ವಿಫಲಗೊಂಡ ನಂತರ ನಿಮ್ಮ ಸಂಖ್ಯೆಗೆ ಕರೆಮಾಡುವಂತೆ ನಿಮ್ಮನ್ನು ಸೂಚಿಸಲಾಗುತ್ತದೆ. ಕಾಲ್ ಮಿ ಬಟನ್ ಕ್ಲಿಕ್ ಮಾಡಿ. ವಾಟ್ಸಾಪ್‌ನಿಂದ ಸ್ವಯಂಚಾಲಿತ ಕರೆ ನೀವು ಸ್ವೀಕರಿಸುತ್ತೀರಿ.

#9

#9

ನಿಮ್ಮ ವೆರಿಫಿಕೇಶನ್ ಸಂಖ್ಯೆಯನ್ನು ನೋಟ್ ಮಾಡಿ

#10

#10

ಈಗ ನಿಮ್ಮ ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಿ.

#11

#11

ನಿಮ್ಮ ವೆರಿಫಿಕೇಶನ್ ಕೋಡ್ ನಮೂದಿಸಿದ ನಂತರ ಸೆಟಪ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ. ಫೋನ್ ಸಂಖ್ಯೆ ಇಲ್ಲದೆ ವಾಟ್ಸಾಪ್ ಖಾತೆಯನ್ನು ಯಶಸ್ವಿಯಾಗಿ ರಚಿಸಲು ಆಗುವುದಿಲ್ಲ.

#12

#12

ಲ್ಯಾಂಡ್‌ಲೈನ್ ಬಳಸಿ ವಾಟ್ಸಾಪ್ ಪರಿಶೀಲನೆ

#13

#13

ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಪಿಸಿಯಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.

#14

#14

ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಿಕೊಂಡಾಗ ದೇಶವನ್ನು ಆಯ್ಕೆಮಾಡಿ ಮತ್ತು ಮನೆಯ ಲ್ಯಾಂಡ್ ಲೈನ್ ಸಂಖ್ಯೆ ನಮೂದಿಸಿ.

#15

#15

ಎಸ್‌ಎಮ್‌ಎಸ್ ಮೂಲಕ 5 ನಿಮಿಷಗಳ ವೆರಿಫಿಕೇಶನ್ ವಿಫಲತೆಯ ನಂತರ ಕಾಲ್ ಮಿ ಆಯ್ಕೆ ನಿಮಗೆ ಬರುತ್ತದೆ. ವಾಟ್ಸಾಪ್‌ನಿಂದ ಕರೆ ಬರಲು ಕಾಲ್ ಮಿ ಆಪ್ಶನ್ ಕ್ಲಿಕ್ಕಿಸಿ.

#16

#16

ನಿಮ್ಮ ಲ್ಯಾಂಡ್ ಲೈನ್ ಸಂಖ್ಯೆಗೆ ವಾಟ್ಸಾಪ್‌ನಿಂದ ಸ್ವಯಂಚಾಲಿತ ಕರೆಯನ್ನು ನೀವೀಗ ಪಡೆದುಕೊಳ್ಳುವಿರಿ. ಆರು ಸಂಖ್ಯೆಗಳ ವೆರಿಫಿಕೇಶನ್ ಕೋಡ್ ನಿಮಗೆ ದೊರೆಯುವುದು. ಈ ಕೋಡ್ ನಮೂದಿಸಿ ನಂತರ ವಾಟ್ಸಾಪ್‌ಗೆ ಅದನ್ನು ದಾಖಲಿಸಿ.

#17

#17

ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್ ಪರಿಶೀಲನೆ ಮುಗಿದ ನಂತರ ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಈಗ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಲು ನಿಮಗೆ ಸಾಧ್ಯವಾಗುತ್ತದೆ ಅದೂ ಕೂಡ ಮೊಬೈಲ್ ಫೋನ್ ಸಂಖ್ಯೆ ಮತ್ತು ಸಿಮ್ ಕಾರ್ಡ್ ಇಲ್ಲದೆಯೇ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!! </a><br /><a href=ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?
ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ
ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ! " title="ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!
ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?
ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ
ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ! " />ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!
ಅಳಿಸಿ ಹೋದ ವಾಟ್ಸಾಪ್ ಸಂದೇಶಗಳನ್ನು ಮರುಪಡೆದುಕೊಳ್ಳುವುದು ಹೇಗೆ?
ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ
ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
In this article we are guiding you on How to use whatsapp without phone number or sim.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X